ಕೆಮ್ಮು ನೆಗಡಿ ಅಸ್ತಮಾ ಪಾರ್ಶುವಾಯು ಬೊಜ್ಜು ಇನ್ನು ಹತ್ತಾರು ಸಮಸ್ಯೆಗಳಿಗೆ ಇದುವೇ ಮನೆ ಮದ್ದು

0
748

ನಮ್ಮ ಸುತ್ತ ಮುತ್ತ ಎಷ್ಟೋ ರೀತಿಯ ಗಿಡ ಮರಗಳು ಇವೆ ಹಿಂದಿನ ಕಾಲದಲ್ಲಿ ನಮ್ಮ ಹಿರಿಯರು ಏನೇ ಸಣ್ಣ ಪುಟ್ಟ ಸಮಸ್ಯೆಗಳು ಬಂದರು ಕೂಡ ಅವುಗಳಿಗೆ ಅವರು ಯಾವುದೇ ಔಷಧಿ ತೆಗೆದು ಕೊಳ್ಳುತ್ತಿರಲಿಲ್ಲ ಅವರ ಸುತ್ತ ಇರುವ ಸಸ್ಯಗಳು. ಬೇರುಗಳು ಕಾಂಡಗಳು ಇವುಗಳನ್ನು ಬಳಸಿಕೊಂಡು ಔಷಧಿಯ ರೂಪದಲ್ಲಿ ತೆಗೆದುಕೊಳ್ಳುತ್ತಿದ್ದರು. ಅಂತಹ ಗಿಡವಾದ ಹುತ್ತತ್ತಿ ಗಿಡವು ಕೂಡ ಒಂದು ಆಯುರ್ವೇದದ ಗಿಡವಾಗಿದೆ ಜೊತೆಗೆ ಇದು ಹಲವಾರು ರೀತಿಯ ಔಷಧಿಯ ಗುಣಗಳನ್ನು ಒಳಗೊಂಡಿದೆ. ಸಾಮಾನ್ಯವಾಗಿ ನಮಗೆ ಕಾಡುವ ಹತ್ತಾರು ಸಮಸ್ಯೆಗಳಿಗೆ ಮಾತ್ರೆಗಳೇ ಪರಿಹಾರ ಅಲ್ಲ. ಮನೆ ಮದ್ದು ಉಪಯೋಗ ಮಾಡಿದ್ರೆ ಆರೋಗ್ಯವು ಸೂಪರ್ ಆಗಿರುತ್ತದೆ. ಹುತ್ತತ್ತಿ ಗಿಡವು ಪೊದೆಯ ರೂಪದಲ್ಲಿ ಬೆಳೆಯುತ್ತದೆ ನಕ್ಷತ್ರದಂತಿರುವ ಸೂಕ್ಷ್ಮ ರೋಮಗಳು ಗಿಡದ ಎಲ್ಲಾ ಭಾಗದಲ್ಲೂ ಇರುತ್ತದೆ ಇದರ ಎಲೆಯು 3 ರಿಂದ 5 ಸೆಂ.ಮೀ. ಉದ್ದವಾಗಿದ್ದು ಅಂಡಾಕಾರ ಅಥವಾ ದುಂಡಗಿನ ಆಕಾರದಲ್ಲಿ ಇರುತ್ತದೆ. ಎಲೆಯ ಅಂಚು ಹಲ್ಲಿನಂತೆ ಇರುತ್ತದೆ.

ಹುತ್ತತ್ತಿ ಗಿಡದ ಹೂವು ಹಳದಿ ಬಣ್ಣದ್ದಾಗಿದ್ದು, ಸಣ್ಣದಾಗಿರುತ್ತದೆ. ಇದು ಸಾಮಾನ್ಯವಾಗಿ ಭಾರತದ ಎಲ್ಲಾ ಭಾಗಗಳಲ್ಲೂ ಕೂಡ ಕಾಣಸಿಗುತ್ತದೆ. ಹುತ್ತತ್ತಿ ಗಿಡದ ಉಪಯೋಗಗಳನ್ನು ನೋಡುವುದಾದರೆ. ಹುತ್ತತ್ತಿ ಗಿಡದ ಎಲ್ಲಾ ಭಾಗವನ್ನು ಔಷಧವಾಗಿ ಉಪಯೋಗಿಸಬಹುದಾಗಿದೆ. ಇದರ ಬೇರಿನ ಕಷಾಯವನ್ನು ಹಲವು ಬಗೆಯ ಜ್ವರ ನಿವಾರಕವಾಗಿ ಬಳಸಲಾಗುತ್ತದೆ. ಅಸ್ಥಮಾ ಶೀತ ಕೆಮ್ಮು ಮುಂತಾದವುಗಳನ್ನು ನಿವಾರಿಸಲು ಹುತ್ತತ್ತಿ ಗಿಡವು ಸಹಾಯಕವಾಗಿದೆ. ಹುತ್ತತ್ತಿ ಗಿಡದ ಚೂರ್ಣವು ಅನೇಕ ಸ್ತ್ರೀರೋಗಗಳನ್ನು ನರದೌರ್ಬಲ್ಯವನ್ನು ನಿವಾರಿಸುತ್ತದೆ.

ಹುತ್ತತ್ತಿ ಗಿಡದ ಬೇರಿನ ರಸವನ್ನು ಗಾಯಕ್ಕೆ ಉಪಯೋಗಿಸಬಹುದು. ಹುತ್ತತ್ತಿ ಬೇರಿನ ತೊಗಟೆಯನ್ನು ಎಳ್ಳೆಣ್ಣೆ ಮತ್ತು ಹಾಲಿನೊಂದಿಗೆ ಸೇವಿಸುವುದರಿಂದ ಪಾರ್ಶ್ವವಾಯು ಸಮಸ್ಯೆ ಗುಣವಾಗುತ್ತದೆ. ಸಣ್ಣ ಪುಟ್ಟ ಗಾಯಗಳು ಆಗಿದ್ದಾಗ ಈ ಹುತ್ತತ್ತಿ ಗಿಡದ ಎಲೆಗಳನ್ನು ಅರೆದು ಅದಕ್ಕೆ ಸ್ವಲ್ಪ ಅರಿಶಿನ ಹಾಕಿ ಪೇಸ್ಟ್ ಮಾಡಿಕೊಂಡು ಗಾಯಕ್ಕೆ ಹಚ್ಚಿಕೊಂಡರೆ ಗಾಯಗಳು ಬೇಗ ಗುಣವಾಗುತ್ತದೆ. ಹುತ್ತತ್ತಿ ಎಲೆಗಳ ಕಷಾಯವನ್ನು ಮಾಡಿಕೊಂಡು ಕುಡಿದರೆ ಬೊಜ್ಜು ಕೂಡ ಕಡಿಮೆ ಆಗುತ್ತದೆ.

ಹುತ್ತತ್ತಿ ಬೇರಿನಿಂದ ಕಷಾಯವನ್ನು ತಯಾರಿಸಿಕೊಂಡು ಕುಡಿದರೆ ಕಫ ಕೆಮ್ಮು ಕಡಿಮೆಯಾಗುತ್ತದೆ. ಹುತ್ತತ್ತಿ ಗಿಡದ ಎಲೆಗೆ ಸ್ವಲ್ಪ ಹರಳೆಣ್ಣೆ ಹಚ್ಚಿ ಎಲೆಯನ್ನು ಬಿಸಿ ಮಾಡಿ ಅದನ್ನು ತಲೆಯ ಮೇಲೆ ಇಟ್ಟುಕೊಂಡರೆ ಶೀತ ಕಡಿಮೆಯಾಗುತ್ತದೆ. ಜೊತೆಗೆ ದೇಹಕ್ಕೆ ತಂಪು ಕೂಡ ಆಗುತ್ತದೆ. ನೋಡಿದರಲ್ಲ ಹುತ್ತತ್ತಿ ಗಿಡದಿಂದ ಏನೆಲ್ಲ ಉಪಯೋಗ ಆಗುತ್ತದೆ ಎಂದು ಹಾಗಾಗಿ ಇನ್ನು ಮುಂದೆ ಹುತ್ತತ್ತಿ ಗಿಡ ಕಂಡರೆ ಅದರ ಪ್ರಯೋಜನ ಪಡೆದುಕೊಳ್ಳಿ. ಸಾಕಷ್ಟು ಲಾಭಗಳನ್ನು ಪಡೆಯಿರಿ. ಈ ಮಾಹಿತಿ ತಪ್ಪದೇ ನಿಮ್ಮ ಸ್ನೇಹಿತರ ಬಳಿ ಹಂಚಿಕೊಳ್ಳಿರಿ ಎಲ್ಲರಿಗು ಸಹಾಯ ಆಗಲಿ. ನಮ್ಮ ವೆಬ್ಸೈಟ್ ಎಲ್ಲ ಬರಹಗಳಿಗೆ ವಿಶೇಷ ಕಾಪಿರೈಟ್ಸ್ ಹೊಂದಿದ್ದು ನಮ್ಮ ಅನುಮತಿ ಇಲ್ಲದೆ ನಕಲು ಮಾಡಿದ್ರೆ ಕಾನೂನು ರೀತಿಯ ಕ್ರಮ ತೆಗೆದುಕೊಳ್ಳುತ್ತವೆ.

LEAVE A REPLY

Please enter your comment!
Please enter your name here