ನಿಮಗೆ ಈ ಸಮಸ್ಯೆಗಳು ಇದ್ರೆ ಬಾಳೆ ಹಣ್ಣು ತಿನ್ನಬೇಡಿ

0
703

ಪ್ರತಿ ನಿತ್ಯ ನಾವು ತಿನ್ನುವ ಹಣ್ಣುಗಳಲ್ಲಿ ಪ್ರಮುಖವಾದ ಹಣ್ಣು ಅಂದ್ರೆ ಅದು ಬಾಳೆಹಣ್ಣು ಸಣ್ಣ ಮಕ್ಕಳಿನಿಂದ ಹಿಡಿದು ವ್ರುದ್ದರವರೆಗೂ ಈ ಹಣ್ಣನು ಇಷ್ಟ ಪಟ್ಟು ತಿನ್ನುತ್ತಾರೆ. ಈ ಹಣ್ಣಿನಲ್ಲಿ ಅತೀಯಾದ ಪೌಷ್ಟಿಕಾಂಶ ಇರುವುದು ಸತ್ಯ ಆದರೆ ಕೆಲವು ಸಮಸ್ಯೆ ಇರುವವರು ಬಾಳೆಹಣ್ಣು ಸೇವನೆ ಮಾಡುವುದು ಒಳ್ಳೇದು ಅಲ್ಲ. ಏಕೆ ಅಂದ್ರೆ ನಾವು ತಿನ್ನುವ ಕೆಲವು ಆಹಾರ ಕ್ರಮ ನಮಗೆ ಸಮಸ್ಯೆ ಉಂಟು ಮಾಡುತ್ತದೆ. ಮೊದಲು ನಾವು ಬಾಳೆ ಹಣ್ಣಿನ ಉಪಯೋಗ ತಿಳಿಯೋಣ ನಂತರ್ ನಾವು ಈ ಹಣ್ಣು ಯಾವ ಸಮಸ್ಯೆ ಇರುವವರು ತಿನ್ನಬಾರದು ಎಂದು ಸಂಪೂರ್ಣ ತಿಳಿಯೋಣ.

ಬಾಳೆ ಹಣ್ಣು ಆರೋಗ್ಯಕ್ಕೆ ತುಂಬಾ ಒಳ್ಳೆಯದು ನಿತ್ಯ ಒಂದು ಬಾಳೆ ಹಣ್ಣು ತಿನ್ನುತ್ತ ಬಂದರೆ ಹಲವಾರು ಆರೋಗ್ಯದ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಬಹುದು ಏಕೆಂದರೆ ಬಾಳೆ ಹಣ್ಣಿನಲ್ಲಿ ಹಲವಾರು ರೀತಿಯ ಪೋಷಕಾಂಶಗಳು ಇರುತ್ತವೆ. ಬಾಳೆಹಣ್ಣನ್ನು ಪ್ರೋಟಿನ್ ಕಾರ್ಬೊ ಹೈಡ್ರೇಟ್ ಫಾಸ್ಫರಸ್ ವಿಟಮಿನ್ ಎ ಕಬ್ಬಿಣಾಂಶ ಹಾಗೂ ವಿಟಮಿನ್ ಖನಿಜಗಳು. ಪೊಟಾಷಿಯಮ್ ಅಂಶಗಳು ಇದರಲ್ಲಿ ಸಮೃದ್ಧವಾಗಿದೆ. ಈ ಎಲ್ಲ ಅಂಶಗಳನ್ನು ಒಳಗೊಂಡಿರುವ ಬಾಳೆಹಣ್ಣನ್ನು ಸೇವನೆ ಮಾಡಿದರೆ ಯಾವುದೇ ರೀತಿಯ ಆರೋಗ್ಯದ ಸಮಸ್ಯೆ ಎಂಬುದು ಮನುಷ್ಯನ ಹತ್ತಿರ ಸುಳಿಯುವುದಿಲ್ಲ.

ಆದರೆ ಕೆಲವು ಸಮಸ್ಯೆ ಇಂದ ಒದ್ದಾಡುತ್ತಿರುವವರು ಬಾಳೆಹಣ್ಣನ್ನು ಸೇವಿಸಬಾರದು ಹಾಗಾದರೆ ಯಾರು ಯಾರು ಸೇವಿಸಬಾರದು ಎಂದು ತಿಳಿದುಕೊಳ್ಳೋಣ ಬನ್ನಿ. ಮಧುಮೇಹ ಸಮಸ್ಯೆ ಇಂದ ಒದ್ದಾಡುತ್ತಿರುವವರು ಬಾಳೆಹಣ್ಣು ಸೇವಿಸಬಾರದು. ಏಕೆಂದರೆ ಈ ಹಣ್ಣಿನ ಸೇವನೆಯಿಂದ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಉಂಟಾಗುತ್ತದೆ. ಹೆಚ್ಚು ತಲೆ ನೋವು ಅರ್ಧ ತಲೆ ನೋವಿನ ಸಮಸ್ಯೆ ಇಂದ ಒದ್ದಾಡುತ್ತಿರುವವರು ಕೂಡ ಬಾಳೆ ಹಣ್ಣನ್ನು ಸೇವಿಸಬಾರದು. ಆದರೆ ವೈದ್ಯರ ಸಲಹೆ ಪಡೆದುಕೊಂಡು ನಿಯಮಿತ ಸೇವನೆ ಮಾಡಬಹದು.

ಅಸಿಡಿಟಿ ಸಮಸ್ಯೆ ಇರುವವರು ಕೂಡ ಬಾಳೆಹಣ್ಣನ್ನು ಸೇವಿಸುವುದು ಒಳ್ಳೆಯದಲ್ಲ. ಹೃದಯಕ್ಕೆ ಸಂಬಂಧಿತ ಖಾಯಿಲೆಗಳು ಇರುವವರು ಕೂಡ ಬಾಳೆಹಣ್ಣನ್ನು ಕಡಿಮೆ ಸೇವನೆ ಮಾಡುವುದು ಸೂಕ್ತ ಅದರದಲ್ಲೂ ರಾತ್ರಿ ಸಮಯ ತಿನ್ನಲೇಬಾರದು. ಕಿಡ್ನಿ ಸಮಸ್ಯೆ ಇಂದ ನರಳುತ್ತಿರುವವರು. ಹಾಗೂ ಇತರ ಅಲರ್ಜಿ ಸಮಸ್ಯೆ ಇದ್ದವರು ಕೂಡ ಬಾಳೆಹಣ್ಣು ತಿನ್ನಬಾರದು. ಹೆಚ್ಚು ಕೆಮ್ಮು ಕಫದ ಸಮಸ್ಯೆ ಇರುವಾಗ ಕೂಡ ಬಾಳೆಹಣ್ಣು ಸೇವಿಸಬಾರದು ಸಮಸ್ಯೆ ಕಡಿಮೆ ಆದ ನಂತರ ನೀವು ಎಷ್ಟು ಬೇಕಾದರೂ ಸೇವನೆ ಮಾಡಿ ಸಮಸ್ಯೆ ಆಗೋದಿಲ್ಲ.

ಕೆಲವರಿಗೆ ಪಚ್ಚೆ ಬಾಳೆಹಣ್ಣು ತಿಂದರೆ ಅಲರ್ಜಿ ಉಂಟಾಗುತ್ತದೆ ಇಂತಹವರು ಕೂಡ ಬಾಳೆಹಣ್ಣನ್ನು ಸೇವಿಸಬಾರದು. ಬಾಳೆ ಹಣ್ಣು ಆರೋಗ್ಯಕ್ಕೆ ಒಳ್ಳೆಯದು ಆದರೆ ಇದು ಕೆಲವು ಸಮಸ್ಯೆಗೆ ತೊಂದರೆ ಅಷ್ಟೇ ಆದರೆ ಮಿತಿಯಾಗಿ ಸೇವಿಸಿದರೆ ಯಾವುದೇ ರೀತಿಯ ಸಮಸ್ಯೆ ಉಂಟಾಗುವುದಿಲ್ಲ. ಹಾಗಾಗಿ ಬಾಳೆ ಹಣ್ಣನ್ನು ದಿನಕ್ಕೆ ಒಂದು ಆದರೂ ತಿನ್ನುವುದಕ್ಕೆ ಅಭ್ಯಾಸ ಮಾಡಿಕೊಂಡರೆ ನಮ್ಮಲ್ಲಿನ ಎಷ್ಟೋ ಆರೋಗ್ಯದ ಸಮಸ್ಯೆಗಳನ್ನು ನಾವು ದೂರ ಮಾಡಿಕೊಳ್ಳಬಹುದು.ಮನುಷ್ಯನಿಗೆ ಬಾಳೆಹಣ್ಣಿನಿಂದ ಹೆಚ್ಚು ಉಪಯೋಗವೇ ಹೊರತು ಅದರಿಂದ ಹೆಚ್ಚು ತೊಂದರೆ ಇಲ್ಲ ಆದರೆ ಅತಿಯಾಗಿ ಸೇವಿಸುವುದರಿಂದ ಕೆಲವು ಸಮಸ್ಯೆಗೆ ತೊಂದರೆ ಆಗಬಹುದು ಆದರೆ ಬಾಳೆಹಣ್ಣು ಆರೋಗ್ಯವನ್ನು ಕೆಡಿಸುವುದಿಲ್ಲ.

LEAVE A REPLY

Please enter your comment!
Please enter your name here