ಶ್ರೀ ಗುರು ರಾಘವೇಂದ್ರರು ಮಾಡಿದ ಪವಾಡ

0
789

ಶ್ರೀ ಗುರು ರಾಘವೇಂದ್ರ ಸ್ವಾಮಿ ಅವರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಅವರ ಹೆಸರು ಕೇಳಿದರೆ ಸಾಕು ಎಲ್ಲೇ ಇದ್ದರೂ ಭಕ್ತಿಯಿಂದ ಸ್ಮರಿಸುತ್ತಾರೆ. ಶ್ರೀ ಗುರು ರಾಘವೇಂದ್ರ ಸ್ವಾಮಿಯು ಈಗ ನೆಲೆಸಿರುವುದು ಮಂತ್ರಾಲಯದಲ್ಲಿ ಎಂದು ಲಕ್ಷಾಂತರ ಜನರು ಅಲ್ಲಿಗೆ ಆಗಮಿಸಿ ಶ್ರೀ ಗುರು ರಾಘವೇಂದ್ರ ಸ್ವಾಮಿಯ ದರ್ಶನ ಮಾಡಿ ಬರುತ್ತಾರೆ. ಶ್ರೀ ಗುರು ರಾಘವೇಂದ್ರ ಸ್ವಾಮಿಗಳನ್ನು ಭಕ್ತರು ರಾಯರು ಗುರುರಾಯರು ಗುರುರಾಜರು ಎಂದು ಭಕ್ತಿಯಿಂದ ಕರೆಯುತ್ತಾರೆ.

ನಮ್ಮ ಹಿಂದು ಧರ್ಮದ ದೇವರುಗಳಲ್ಲಿ ಶ್ರೀ ಪ್ರಹ್ಲಾದ ರಾಯರ ಮೂರನೇ ಅವತಾರವೇ ಶ್ರೀ ರಾಘವೇಂದ್ರರು ಎರಡನೆಯ ಅವತಾರವು ಶ್ರೀ ವ್ಯಾಸರಾಯರು ಎನ್ನುತ್ತಾರೆ. ಶ್ರೀ ಗುರು ರಾಘವೇಂದ್ರ ಸ್ವಾಮಿಗಳು ಮೂಲ ಬೃಂದಾವನವು ಈಗಿನ ಆಂಧ್ರ ಪ್ರದೇಶದ ತುಂಗಭದ್ರಾ ನದಿ ತಟದಲ್ಲಿರುವ ಮಂತ್ರಾಲಯದಲ್ಲಿದೆ. ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಪೂರ್ವಾಶ್ರಮದ ಹೆಸರು ವೆಂಕಟನಾಥ. ಇವರ ತಂದೆಯ ಹೆಸರು ತಿಮ್ಮಣ್ಣ ಭಟ್ಟ. ತಾಯಿಯ ಹೆಸರು ಗೋಪಿಕಾಂಬ. ಮಂತ್ರಾಲಯಕ್ಕೆ ಹೋಗಿ ರಾಯರನ್ನು ದರ್ಶನ ಮಾಡಿ ಅಲ್ಲಿ ನೀಡುವ ರಾಯರ ಅಕ್ಷತೆ ಕಾಳುಗಳನ್ನೂ ತಂದು ಮನೆಯಲ್ಲಿ ಇಟ್ಟುಕೊಂಡರೆ ಸಾಕು ಎಲ್ಲವೂ ಒಳ್ಳೆಯದಾಗುತ್ತದೆ.ಜೊತೆಗೆ ಏನೇ ಸಮಸ್ಯೆ ಇದ್ದರು ಕೂಡ ಒಮ್ಮೆ ಶ್ರೀ ಗುರು ರಾಘವೇಂದ್ರ ಸ್ವಾಮಿಗಳನ್ನು ನೆನೆದರೆ ಎಲ್ಲ ಸಮಸ್ಯೆಗಳು ಪರಿಹಾರ ಆಗುತ್ತದೆ.

ಇಂತಹ ರಾಯರು ಮಾಡಿದ ಪವಾಡಗಳು ಏನು ಗೊತ್ತೇ. ಶ್ರೀ ಗುರು ರಾಘವೇಂದ್ರ ಸ್ವಾಮಿಗಳಲ್ಲಿ ಅನೇಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದರು. ಅವರಲ್ಲಿ ಒಬ್ಬ ಬಡ ವಿದ್ಯಾರ್ಥಿ ತನ್ನ ವಿದ್ಯಾಭ್ಯಾಸ ಮುಗಿಸಿಕೊಂಡು ಹೊರಡುವಾಗ ರಾಯರ ಹತ್ತಿರ ಬಂದು ತನ್ನ ಬಡತನದ ಕಷ್ಟಗಳನ್ನು ಹೇಳಿಕೊಂಡು ನನಗೆ ಏನಾದರೂ ಸಹಾಯ ಮಾಡಿ ಎಂದು ಕೇಳಿಕೊಂಡನು ಆಗ ರಾಯರ ಸ್ನಾನದ ಸಮಯದಲ್ಲಿದ್ದ ಕಾರಣ ಅವರ ಬಳಿ ಕೊಡಲು ಏನೂ ಕೂಡ ಇಲ್ಲವೆಂದರು. ಆಗ ಆ ಹುಡುಗ ತಾವು ಏನು ಕೊಟ್ಟರು ನನಗೆ ಅದು ಮಹಾ ಪ್ರಸಾದವೆಂದು ಒಂದು ಹಿಡಿ ಮಂತ್ರಾಕ್ಷತೆಯನ್ನದರು ತಮ್ಮ ಕೈಯಿಂದ ದಯಪಾಲಿಸಬೇಕೆಂದು ಭಕ್ತಿಯಿಂದ ಬೇಡಿ ಕೊಂಡನು. ಅದಕ್ಕೆ ರಾಯರು ಅ ಹುಡುಗನಿಗೆ ಮಂತ್ರಾಕ್ಷತೆ ಕೊಟ್ಟರು.

ಆ ಮಂತ್ರಾಕ್ಷತೆಯನ್ನೆ ವಿದ್ಯಾರ್ಥಿ ಮಹಾ ಪ್ರಸಾದವೆಂದು ಸ್ವೀಕರಿಸಿ ರಾಯರಿಗೆ ನಮಸ್ಕರಿಸಿ ತನ್ನ ಊರಿನ ಕಡೆಗೆ ಹೊರಟನು. ಆ ಹುಡುಗ ಹೋಗುವ ದಾರಿಯಲ್ಲಿ ತುಂಬಾ ಕತ್ತಲಾಗಿದ್ದರಿಂದ ಒಂದು ಮನೆಯ ಜಗಲಿಯ ಮೇಲೆ ಮನೆ ಮಾಲಿಕರಲ್ಲಿ ಅಪ್ಪಣೆ ಪಡೆದು ಮಲಗಿ ಕೊಂಡನು ಆ ಸಮಯದಲ್ಲಿ ಮನೆಯ ಮಾಲಿಕನ ಹೆಂಡತಿ ತುಂಬು ಗರ್ಭಿಣಿಯಾಗಿದ್ದಳು. ಮಧ್ಯರಾತ್ರಿಯಲ್ಲಿ ಒಂದು ಪಿಶಾಚಿಯು ಆ ಮನೆಯೊಳಗೆ ಹೋಗಿ, ಹುಟ್ಟಲಿರುವ ಮಗುವನ್ನು ಕೊಲ್ಲಬೇಕೆಂದು ಅಲ್ಲಿಗೆ ಬಂದಿತು. ಆದರೆ ಜಗಲಿಯಲ್ಲಿ ಮಲಗಿದ ಭಕ್ತನ ಬಳಿಯಿರುವ ಮಂತ್ರಾಕ್ಷತೆಯನ್ನು ದಾಟಲು ಪ್ರಯತ್ನಿಸಿದಾಗ ಮಂತ್ರಾಕ್ಷತೆ ಬೆಂಕಿಯಂತೆ ಕಂಡು ಬಂದಿತು. ಇದರಿಂದ ಗಾಬರಿಗೊಂಡ ಪಿಶಾಚಿಯು ಭಕ್ತನನ್ನು ನೋಡಿ ಮಂತ್ರಾಕ್ಷತೆ ದೂರ ಎಸೆಯಲು ಹೇಳಿತು. ಪಿಶಾಚಿಯನ್ನು ನೋಡಿ ಹೆದರಿದ ಭಕ್ತನು ಮಂತ್ರಾಕ್ಷತೆಯನ್ನು ಅದರ ಮೇಲೆ ಎಸೆದನು. ಮಂತ್ರಾಕ್ಷತೆಯ ಪ್ರಭಾವದಿಂದ ಪಿಶಾಚಿಯು ಚೀರುತ್ತಾ ಅಲ್ಲೆ ಸುಟ್ಟು ಬೂದಿಯಾಗಿ ಹೋಯಿತು. ಇದರ ಚಮತ್ಕಾರವನ್ನು ಕೇಳಿದ ಮನೆಯ ಮಂದಿಯಲ್ಲ ಹೊರಗೆ ಬಂದು ಬೆಚ್ಚಿದರು ಅಷ್ಟರಲ್ಲೆ ಮನೆಯೊಡತಿಗೆ ಮಗುವಾದ ಸಂತಸದ ಸುದ್ದಿ ಕೂಡ ತಿಳಿಯಿತು.

ರಾಯರು ಕೊಟ್ಟ ಮಂತ್ರಾಕ್ಷತೆಯ ಶಕ್ತಿಯಿಂದ ದುಷ್ಟ ಶಕ್ತಿಯ ನಾಶವಾಯಿತು. ರಾಯರ ಆ ಮಂತ್ರಾಕ್ಷತೆಯಲ್ಲಿ ತುಂಬಾ ಪ್ರಭಾವ ಇದೆ ಆ ಮಂತ್ರಾಕ್ಷತೆ ಕಾಳು ನಮ್ಮೆಲ್ಲ ಸಮಸ್ಯೆಗಳನ್ನು ದೂರ ಮಾಡುತ್ತದೆ. ನೋಡಿದರಲ್ಲ ರಾಯರ ಪವಾಡ ಹೇಗಿದೆ ಹಾಗಾಗಿ ರಾಯರನ್ನು ಭಕ್ತಿಯಿಂದ ಪೂಜಿಸಿ. ರಾಯರ ಪವಾಡ ಮರೆಯದೇ ಶೇರ್ ಮಾಡಿರಿ ನಿಮಗೂ ಶುಭ ಆಗಲಿದೆ. ನಮ್ಮ ವೆಬ್ಸೈಟ್ ಎಲ್ಲ ಬರಹಗಳಿಗೆ ಕಾಪಿರೈಟ್ಸ್ ಹೊಂದಿದ್ದು ಅನುಮತಿ ಇಲ್ಲದೆ ನಕಲು ಮಾಡಿದ್ರೆ ಕಾನೂನು ರೀತಿಯ ಕ್ರಮ ತೆಗೆದುಕೊಳ್ಳುತ್ತೇವೆ.

LEAVE A REPLY

Please enter your comment!
Please enter your name here