ಭಯಾನಕ ಹೆಪಟೈಟಿಸ್ ಬಿ ಖಾಯಿಲೆ ಯಾರಿಗೆ ಮತ್ತು ಏಕೆ ಬರುತ್ತೆ ಗೊತ್ತ

0
615

ಭಾರತ ದೇಶದಲ್ಲಿ ಹೆಪಟೈಟಿಸ್ ಬಿ ಒಂದು ಭಯಾನಕ ಕಾಯಿಲೆಯಾಗಿದೆ. ಈ ಕಾಯಿಲೆಯ ಬಗ್ಗೆ ಮತ್ತು ಅದರ ಲಕ್ಷಣಗಳ ಬಗ್ಗೆ ಜನಗಳಲ್ಲಿ ಅರಿವು ಕಡಿಮೆ. ಹೆಪಟೈಟಿಸ್ ಬಿ ಕಾಯಿಲೆಯ ಲಕ್ಷಣಗಳು ಅದಕ್ಕೆ ಕಾರಣಗಳು ಮತ್ತು ಈ ಕಾಯಿಲೆಯನ್ನು ತಡೆಗಟ್ಟಲು ಅನುಸರಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ತಿಳಿದುಕೊಳ್ಳೋಣ. ಪ್ರಮುಖವಾಗಿ ಹೆಪಟೈಟಿಸ್ ಬಿ ರೋಗದ ಲಕ್ಷಣಗಳ ಬಗ್ಗೆ ತಿಳಿಯುವುದಾದರೆ. ಹೆಪಟೈಟಿಸ್ ಬಿ ಸೋಂಕು ಬಂದರೆ ಮೊದಲಿಗೆ ಯಾವುದೇ ಲಕ್ಷಣಗಳು ಗೊತ್ತಾಗುವುದಿಲ್ಲ ನಿಧಾನವಾಗಿ ಒಂದೊಂದೇ ಲಕ್ಷಣಗಳು ಕಾಣಿಸುತ್ತ ಹೋಗುತ್ತದೆ ಸ್ನಾಯುಗಳು ಮತ್ತು ಸಂದುಗಳಲ್ಲಿ ನೋವುಗಳು ಕಾಣಿಸಿಕೊಳ್ಳುತ್ತದೆ ನಂತರದ ದಿನಗಳಲ್ಲಿ ಹಳದಿ ಬಣ್ಣದಲ್ಲಿ ಮೂತ್ರ ಹೆಚ್ಚು ಹೊರಹೋಗುತ್ತದೆ. ಹೆಚ್ಚು ಹಸಿವಾಗುವುದಿಲ್ಲ ಜ್ವರ ಬರುವುದು ಹೊಟ್ಟೆ ನೋವು ಉಂಟಾಗುವುದು ನಿಶಕ್ತಿ ಕಣ್ಣುಗಳು ಹಳದಿ ಬಣ್ಣಕ್ಕೆ ತಿರುಗುವುದು. ಏನೇ ಕೆಲಸ ಮಾಡಿದರು ಬಹಳ ಬೇಗ ಸುಸ್ತಾಗುವುದು ವಾಕಲಿಕೆ ಬರುವುದು ಈ ರೀತಿಯ ಲಕ್ಷಣಗಳು ಕಂಡು ಬಂದರೆ ಇದು ಹೆಪಟೈಟಿಸ್ ಬಿ ಲಕ್ಷಣಗಳು. ಇದನ್ನು ನಿರ್ಲಕ್ಷ್ಯ ಮಾಡದೆ ವೈದ್ಯರ ಬಳಿ ಹೋಗಿ ತಪಾಸಣೆ ಮಾಡಿಸಿಕೊಳ್ಳುವುದು ಸೂಕ್ತ.

ಹೆಪಟೈಟಿಸ್ ಬಿ ಬರಲು ಕಾರಣ ಗಳನ್ನು ನೋಡುವುದಾದರೆ ಹೆಪಟೈಟಿಸ್ ಬಿ ಎನ್ನುವುದು ಒಂದು ವೈರಸ್. ಈ ವೈರಸ್ ನಿಂದ ಈ ಸೋಂಕು ಬರುತ್ತದೆ. ಇದು ಒಂದು ಸಾಂಕ್ರಾಮಿಕ ಕಾಯಿಲೆಯಾಗಿದೆ. ಈ ರೋಗ ಹೊಂದಿರುವ ವ್ಯಕ್ತಿಯ ಜೊತೆ ಇರುವುದರಿಂದ ಕೂಡ ಈ ರೋಗ ನಮಗೆ ಬರುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಗರ್ಭಿಣಿಯರಲ್ಲಿ ಈ ರೋಗ ಕಾಣಿಸಿಕೊಂಡರೆ ಅದು ಹುಟ್ಟುವ ಮಗುವಿನ ಮೇಲೂ ಕೂಡಾ ಪರಿಣಾಮವನ್ನು ಬೀರಬಹುದು. ಈಗಾಗಲೇ ಈ ರೋಗ ಬಂದಿರುವ ವ್ಯಕ್ತಿಯ ಜೊತೆ ಇದ್ದಾಗ ಅವರ ಕಣೀರು ರಕ್ತದ ಜೊತೆ ಸಂಪರ್ಕ ಉಂಟಾದರೆ ಈ ರೋಗ ನಮಗೆ ಬರಬಹುದು. ಅವರು ಬಳಸುವ ವಸ್ತುಗಳು ಬಟ್ಟೆಗಳು ಊಟ ಮಾಡುವ ಪದಾರ್ಥಗಳನ್ನು ನಾವು ಬಳಕೆ ಮಾಡುವುದರಿಂದ ಈ ರೋಗ ನಮಗೆ ಹರಡುತ್ತದೆ. ಮತ್ತು ಹೆಪಟೈಟಿಸ್ ಬಿ ರೋಗ ಇರುವ ವ್ಯಕ್ತಿಯ ಜೊತೆ ಲೈಂಗಿಕ ಸಂಪರ್ಕ ಹೊಂದಿದರೆ ಕೂಡ ಈ ರೋಗ ಬರುತ್ತದೆ. ಸೋಂಕು ಪೀಡಿತ ವ್ಯಕ್ತಿಯ ರಕ್ತ ಪಡೆದರೆ ಮತ್ತು ರೋಗ ಪೀಡಿತ ವ್ಯಕ್ತಿಗೆ ಚುಚ್ಚಿದ್ದ ಸೂಜಿಯಿಂದ ಅಚ್ಚೆ ಹಾಕಿಸಿ ಕೊಳ್ಳುವುದರಿಂದ ಕೂಡ ಈ ರೀತಿಯ ಕಾಯಿಲೆಗಳು ಹರಡುತ್ತದೆ.

ಈ ರೋಗವನ್ನು ತಡೆಯಲು ಯಾವಾಗಲೂ ಕುದಿಸಿ ಆರಿಸಿದ ನೀರನ್ನೇ ಕುಡಿಯಿರಿ. ಸೋಂಕು ತಗಲಿರುವ ವ್ಯಕ್ತಿಯ ಜೊತೆ ಹೆಚ್ಚು ಮಾತನಾಡುವುದು ಅವರ ವಸ್ತುಗಳನ್ನು ಬಳಸುವುದು ಮಾಡಬೇಡಿ. ನಾವು ಉಪಯೋಗಿಸುವ ಬಟ್ಟೆಗಳು ಅಥವಾ ವಸ್ತುಗಳನ್ನು ಶುಭ್ರವಾಗಿಡಿ. ಟಾಯ್ಲೆಟ್ ಅನ್ನು ಸ್ವಚ್ಛ ದಿಂದ ಇರಿಸಿ ಊಟಕ್ಕಿಂತ ಮುಂಚೆ ಮತ್ತು ಊಟ ಆದ ನಂತರ ಕೈಗಳನ್ನು ಸಾಬೂನಿನಿಂದ ಚೆನ್ನಾಗಿ ಶುಭ್ರ ಮಾಡಿ. ಮತ್ತು 18 ವರ್ಷಕ್ಕಿಂತ ಕೆಳಗಿರುವ ವ್ಯಕ್ತಿಗಳಿಗೆ ಹೆಪಟೈಟಿಸ್ ಬಿ ಲಸಿಕೆಯನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ತಪ್ಪದೇ ತೆಗೆದುಕೊಳ್ಳಬೇಕು. ಮೇಲೆ ಹೇಳಿರುವ ಯಾವುದೇ ಲಕ್ಷಣಗಳು ಕಂಡುಬಂದಲ್ಲಿ ಬಹಳ ಬೇಗ ವೈದ್ಯರನ್ನು ಭೇಟಿಮಾಡಿ ಮತ್ತು ಸೂಕ್ತ ಚಿಕಿತ್ಸೆಯನ್ನು ಪಡೆಯಿರಿ. ಈ ಮಾಹಿತಿ ತಪ್ಪದೇ ಶೇರ್ ಮಾಡಿ ಎಲ್ಲರಿಗು ಜಾಗೃತಿ ಮೂಡಿಸಿ.

LEAVE A REPLY

Please enter your comment!
Please enter your name here