ಹಣಕಾಸಿನ ಸಮಸ್ಯೆ ಮತ್ತು ಶತ್ರುಗಳ ಕಾಟಕ್ಕೆ ಈ ದೇಗುಲಕ್ಕೆ ಹೋಗಿ ಹರಕೆ ಕಟ್ಟಿಕೊಳ್ಳಿ

0
1967

ಯಾರಿಗೆ ಆದರೂ ಕಷ್ಟ ಬಂದ ತಕ್ಷಣ ಮೊದಲು ಸಮಸ್ಯೆ ಬಗೆಹರಿಸಲು ಸಾಕಷ್ಟು ಪ್ರಯತ್ನಗಳು ಮಾಡುತ್ತಾರೆ ಆದರು ಒಮ್ಮೆ ದೇವರ ಮೊರೆ ಹೋಗುತ್ತಾರೆ ಜನರು ದೇವರನ್ನು ನೆನೆಸಿಕೊಳ್ಳಲಿಲ್ಲ ಅಂದರು ಕಷ್ಟ ಬಂದಾಗ ಮಾತ್ರ ದೇವರ ಹತ್ತಿರ ಹೆಚ್ಚು ಹೋಗುವುದು ವಾಡಿಕೆ ಆಗೋಗಿದೆ. ಕೆಲವು ಜನರು ಪ್ರತಿ ನಿತ್ಯ ದೇವರ ದರ್ಶನ ಮಾಡುತ್ತಾರೆ ಮತ್ತೋ ಕೆಲವರು ವಾರಕ್ಕೆ ಒಮ್ಮೆ ಆದರು ತಮ್ಮ ಇಷ್ಟದ ದೇವರಿಗೆ ಹೋಗುತ್ತಾರೆ ಕೆಲವು ಜನರು ಮನೆಯಲ್ಲೇ ಕೈ ಮುಗಿಯುತ್ತಾರೆ ಹೀಗೆ ನಮ್ಮಲ್ಲಿ ಸಾಕಷ್ಟು ರೀತಿಯ ಬಗೆಯ ಜನಗಳು ಇರುತ್ತಾರೆ.

ಕೆಲವು ಸಂಕಷ್ಟಗಳು ಹೇಗೆ ಇರುತ್ತದೆ ಅಂದ್ರೆ ನಾವು ಮಾಡದ ತಪ್ಪಿಗೆ ಅನುಭವಿಸುವ ಪರಿಸ್ತಿತಿ ಬಂದಿರುತ್ತದೆ ನಮ್ಮ ಗ್ರಹದಲ್ಲಿ ದೋಷಗಳು ಉಂಟಾದಾಗ ಸಮಸ್ಯೆಗಳು ನಮ್ಮನು ಹುಡುಕಿಕೊಂಡು ಬರುವುದರಲ್ಲಿ ಆಶ್ಚರ್ಯ ಇಲ್ಲ ಬಿಡಿ. ಹೀಗೆ ನಮಗೆ ಬರುವ ಸಾಲು ಸಾಲು ಕಷ್ಟಗಳನ್ನು ದೂರ ಮಾಡಲು ಅತ್ಯಂತ ದಿವ್ಯ ಶಕ್ತಿಯನ್ನು ಹೊಂದಿರುವ ತಾಯಿಯೇ ದೇವಿ ಶ್ರೀ ಪುರದಮ್ಮ. ಶ್ರೀ ಪುರದಮ್ಮ ದೇವಿ ಎಂಥಾ ಕಷ್ಟ ಕಾರ್ಪಣ್ಯಗಳನ್ನು ಸಹ ಹೋಗಲಾಡಿಸುತ್ತಾಳೆ ಭಕ್ತರ ಎಂತಹ ಕಷ್ಟಗಳಿದ್ದರೂ ಈ ದೇವಿ ಪರಿಹರಿಸುತ್ತಾಳೆ ಇದಕ್ಕೆ ಸಾಕಷ್ಟು ಉದಾಹರಣೆಗಳು ಇದೆ.

ಹಾಸನ ಜಿಲ್ಲೆಯ ಸೊಪ್ಪಿನಹಳ್ಳಿ ತಾಲೂಕಿನ ಬಳಿ ಇರುವ ಪುರದಮ್ಮ ದೇವಾಲಯಕ್ಕೆ ನಿತ್ಯ ಸಾವಿರಾರು ಭಕ್ತರು ನಾಡಿನ ಎಲ್ಲೆಡೆಯಿಂದ ಇಲ್ಲಿಗೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತಾರೆ. ಹರಕೆ ಹೊತ್ತಿಕೊಳ್ಳುತ್ತಾರೆ. ಬೇಡಿದ ವರಗಳನ್ನು ನೀಡಿದ ಅಮ್ಮನಿಗೆ ಹರಕೆ ತೀರಿಸಲು ಎಂದು ದೇವಾಲಯ ಬಳಿಯೇ ಮಾಂಸದೂಟ ತಯಾರಿಸಿ ಎಡೆ ಇಡುವುದು ಮತ್ತು ಬಂಧು ಬಳಗವನ್ನು ಕರೆದು ಊಟ ಹಾಕುವುದು ಇಲ್ಲಿನ ಪ್ರತೀತಿ ಕೂಡ. ಹರಕೆ ತೀರಿಸಲು ಕೋಳಿ ಕುರಿ ಮತ್ತು ಹಂದಿಯನ್ನು ದೇವಿಗೆ ಬಲಿ ಕೊಟ್ಟು ಹರಕೆ ತೀರಿಸುತ್ತಾರೆ ಕೆಲವರು ಈ ದೇವಿಗೆ ಎರಡು ತಿಂಗಳಿಗೊಮ್ಮೆ ಪೂಜೆ ನೆರವೇರಿಸಿದರೆ ಮತ್ತೆ ಕೆಲವರು ಪ್ರತಿ ತಿಂಗಳು ಪೂಜೆ ಸಲ್ಲಿಸಿ ದೇವಿ ಕೃಪೆಗೆ ಪಾತ್ರರಾಗುತ್ತಾರೆ.

ಈ ದೇವಿಯ ಮತ್ತೊಂದು ವಿಶೇಷ ಎಂದರೆ ಈ ದೇವಿಗೆ ಪೂಜೆ ಸಲ್ಲಿಸಲು ಪೂಜಾರಿಯೇ ಇಲ್ಲ ಬರುವ ಭಕ್ತರೇ ಪೂಜೆ ನೆರವೇರಿಸಿಕೊಂಡು ಬರುತ್ತಾರೆ. ಈ ಪುರದಮ್ಮನಿಗೆ ಮಾಂಸದೂಟ ಎಡೆ ಇಡಲಾಗುತ್ತದೆಯಾದರೂ ಸಸ್ಯಹಾರಿಗಳು ಕೂಡ ದೇವಾಲಯಕ್ಕೆ ಆಗಮಿಸಿ ಪೂಜೆ ಸಲ್ಲಿಸಿ ಇಷ್ಟಾರ್ಥ ಸಿದ್ದಿಗೆ ಹರಕೆ ಕಟ್ಟಿಕೊಳ್ಳುತ್ತಾರೆ. ಈ ದೇವಿಯ ಬಳಿ ಬಂದು ನಮ್ಮ ಕಷ್ಟಗಳನ್ನು ಹೇಳಿಕೊಂಡು ಹರಕೆ ಹೊತ್ತಿಕೊಂಡರೆ ಸಾಕು ನಮ್ಮ ಕಷ್ಟಗಳೆಲ್ಲ ನೆರವೇರಿಸುತ್ತಾಳೆ ಈ ತಾಯಿ ಎಂಬುದು ಹಿಂದಿನ ಕಾಲದಿಂದಲೂ ಹಿಟ್ಟಿರುವ ನಂಬಿಕೆ ಆಗಿದೆ.

ನಮ್ಮ ತಂಡದ ಜೊತೆಗೆ ದೇವಿಯ ವಿಶೇಷ ಶಕ್ತಿಗಳ ಬಗ್ಗೆ ತಮ್ಮ ಅನುಭವ ಹಂಚಿಕೊಂಡ ತಿಮ್ಮಣ್ಣ ಅವರು ಸಾಕಷ್ಟು ಒಳಿತನ್ನು ಕಂಡಿದ್ದಾರೆ ಈ ಹಿಂದೆ ಇವರಿಗೆ ಕೃಷಿಯಲ್ಲಿ ಸಾಕಷ್ಟು ನಷ್ಟ ಉಂಟಾಗಿ ಒಮ್ಮೆ ವಿಷವನ್ನು ಸಹ ಕುಡಿಯಲು ಪ್ರಯತ್ನ ಮಾಡಿದ್ದರಂತೆ ಕೊನೆಗೆ ತಮ್ಮ ಸ್ನೇಹಿತರಿಂದ ಮಾಹಿತಿ ಪಡೆದು ಹರಕೆ ಹೊತ್ತಿಕೊಂಡ ತಕ್ಷಣ ಕೆಲವೇ ತಿಂಗಳಿನಲ್ಲಿ ಇವರ ಕೃಷಿಯಲ್ಲಿ ಉತ್ತಮ ಫಸಲು ಬಂದು ಹೆಚ್ಚಿನ ಲಾಭ ಬಂದಿದೆ ಇವರು ಮಾಡಿಕೊಂಡ ನಾಲ್ಕೈದು ಲಕ್ಷ ಕೈ ಸಾಲ ತೀರಿಸಿದ್ದಾರೆ ಮಗಳ ಮದುವೆಯು ಮಾಡಿದ್ದೇನೆ ಈಗ ದೇವಿಯ ಆಶಿರ್ವಾದದಿಂದ ಸಂತೋಷ ದಿಂದ ಇದ್ದೇನೆ ಎಂದು ಕಣ್ಣೀರಿಡುತ್ತಾ ತಮ್ಮ ಅನುಭವ ಹಂಚಿಕೊಂಡರು. ಇಲ್ಲಿನ ದೇವಿಗೆ ಭಕ್ತಿ ಒಂದೇ ಮುಖ್ಯ ತಿಳಿದಿರಲಿ ನೀವೂ ಚಂಚಲ ಮನಸಿನ್ನಿಂದ ಬೇಡಿಕೊಂಡರೆ ಅದು ಕೆಲಸ ಆಗೋದಿಲ್ಲ. ದೇಗುಲ ವಿಳಾಸ ಸಂಪೂರ್ಣ ಮೇಲಿನ ಸಾಲಿನಲ್ಲೇ ಇದೆ. ಈ ದೇವಿಯ ಪವಾಡದ ಬಗ್ಗೆ ತಪ್ಪದೇ ಶೇರ್ ಮಾಡಿ ಎಲ್ಲರಿಗು ಸಹಾಯ ಆಗಲಿ ನಿಮಗೆ ದೇವಿಯ ಅನುಗ್ರಹ ಸಿಗುತ್ತದೆ.

LEAVE A REPLY

Please enter your comment!
Please enter your name here