ನೀವು ಈ ಸಮಸ್ಯೆಗಳಿಂದ ಇದ್ದರೆ ಅದು ಜಠರದ ಕ್ಯಾನ್ಸರ್ ಆಗಿರಬಹುದು

0
530

ಇತ್ತೀಚಿನ ದಿನಗಳಲ್ಲಿ ನಾವು ನಮ್ಮ ಆರೋಗ್ಯದ ಬಗ್ಗೆ ಎಷ್ಟು ಕಾಳಜಿ ವಹಿಸಿದರು ನಮ್ಮ ಆರೋಗ್ಯ ಹಾಳಾಗುತ್ತದೆ ನಮ್ಮ ದೈನಂದಿನ ಚಟುವಟಿಕೆಗಳು ಹಾಗೂ ಪರಿಸರ ಮಾಲಿನ್ಯ ಹಾಗುತ್ತಿರುವ ಕಾರಣ ನಮ್ಮ ಆರೋಗ್ಯವನ್ನು ಉತ್ತಮ ರೀತಿಯಲ್ಲಿ ಕಾಪಾಡಿಕೊಳ್ಳಲು ನಾವು ವಿಫಲರಾಗುತ್ತಿದ್ದೇವೆ. ಇತ್ತೀಚಿನ ದಿನಗಳಲ್ಲಿ ಬರುತ್ತಿರುವ ರೋಗಗಳು ಬಹಳ ಅಪಾಯಕಾರಿ ರೋಗಗಳಾಗಿವೆ. ಅವುಗಳಲ್ಲಿ ಉದರ ಅಥವಾ ಜಠರ ಕ್ಯಾನ್ಸರ್ ಕೂಡ ಒಂದು. ಜಠರದ ಕ್ಯಾನ್ಸರ್ ಬಂದರೆ ಇದು ಜಠರದ ಒಳ ಭಾಗದಲ್ಲಿ ಇರುವ ಕೋಶಗಳಲ್ಲಿ ಬರುತ್ತದೆ. ಈ ರೋಗದ ಲಕ್ಷಣಗಳನ್ನು ನೋಡುವುದಾದರೆ ಉದರದ ಕ್ಯಾನ್ಸರ್ ಬಂದರೆ ವಾಂತಿ ಅತಿಸಾರ ಬೇದಿ ಬಹಳ ಬೇಗ ದಣಿವಾಗುವುದು. ಇದ್ದಕ್ಕೆ ಇದ್ದಹಾಗೆ ದೇಹದ ತೂಕ ಕಡಿಮೆಯಾಗುವುದು. ಹೊಟ್ಟೆ ಉಬ್ಬರಿಸುವುದು ಮಲದಲ್ಲಿ ರಕ್ತ ಬರುವುದು ಮತ್ತು ಹಸಿವು ಕಡಿಮೆಯಾಗುವುದು ಹೀಗೆ ಹಲವಾರು ಲಕ್ಷಣಗಳನ್ನು ನೋಡಬಹುದು.

ಕ್ಯಾನ್ಸರ್ ಸಂಬಂಧಿ ಕಾಯಿಲೆಗಳಲ್ಲಿ ಅಥವಾ ಜಠರದ ಕ್ಯಾನ್ಸರ್ ನಾಲ್ಕನೇ ಸ್ಥಾನ ಪಡೆದಿದೆ. ಮತ್ತು ಕಳೆದ ವರ್ಷದಿಂದ ಇಲ್ಲಿಯವರೆಗೆ ಸರಿ ಸುಮಾರು 10 ಲಕ್ಷಕ್ಕೂ ಹೆಚ್ಚು ಉದರ ಸಂಬಂಧಿ ಕ್ಯಾನ್ಸರ್ ಪ್ರಕರಣಗಳು ಕಂಡು ಬಂದಿದೆ ಮತ್ತು ಜಠರದ ಕ್ಯಾನ್ಸರ್ ವ್ಯಾಪಕವಾಗಿ ಹರಡುತ್ತಿದೆ. ಈ ರೋಗವು ಎಷ್ಟು ಹೆಚ್ಚಾಗಿ ಹರಡುತ್ತಿರುವುದಕ್ಕೆ ಕಾರಣಗಳನ್ನು ಗಮನಿಸುವುದಾದರೆ. ಈ ರೋಗವು ಬರುವುದಕ್ಕೆ ಬಹಳ ಮುಖ್ಯವಾಗಿ ನಾವೇ ಕಾರಣ ಗಳಾಗಿರುತ್ತವೆ ಅಂದರೆ ಇದು ನಾವು ಅಳವಡಿಸಿಕೊಂಡಿರುವ ಜೀವನ ಶೈಲಿಯಿಂದಲೇ ಬಹಳ ಹೆಚ್ಚಾಗಿ ಬರುತ್ತದೆ. ನಮ್ಮ ದೈನಂದಿನ ಅಭ್ಯಾಸಗಳು ಜಠರದ ಕ್ಯಾನ್ಸರ್ ಗೆ ಬಹಳ ಮುಖ್ಯ ಕಾರಣಗಳಾಗುತ್ತವೆ ಅವುಗಳನ್ನು ನೋಡುವುದಾದರೆ. ಬಹಳ ಮುಖ್ಯವಾಗಿ ಧೂಮಪಾನ ಹಾಗೂ ಮಧ್ಯಪಾನ ಇವುಗಳಿಂದ ನಮ್ಮ ದೇಹದ ಆರೋಗ್ಯ ಸ್ಥಿತಿಯೂ ಹಾಳಾಗುತ್ತದೆ ಮತ್ತು ರೋಗನಿರೋಧಕ ಶಕ್ತಿಯು ಕ್ಷೀಣಿಸುತ್ತದೆ. ಧೂಮಪಾನ ಹಾಗೂ ಮಧ್ಯಪಾನ ವನ್ನು ಮಾಡುವುದರಿಂದ ಇದು ನಮ್ಮ ದೇಹದ ಒಳಗೆ ಹೋಗಿ ಜಠರದ ಒಳಭಾಗದಲ್ಲಿರುವ ಗ್ರಂಥಿ ಕೋಶಗಳನ್ನು ಹಾಳು ಮಾಡುತ್ತದೆ. ಇದರಿಂದ ಆಡಿಟರ್ ಆಧಾರ್ ಕ್ಯಾನ್ಸರ್ ಬರುತ್ತದೆ.

ತಂಬಾಕು ಸೇವನೆಯು ಕೂಡ ಜಠರದ ಕ್ಯಾನ್ಸರ್ ಗೆ ಬಹಳ ಮುಖ್ಯ ಕಾರಣವಾಗಿರುತ್ತದೆ. ತಂಬಾಕು ಸೇವನೆಯನ್ನು ಮಾಡುವುದರಿಂದ ಇದು ಅನ್ನ ನಾಳವನ್ನು ಹಾಳು ಮಾಡುತ್ತದೆ ಮತ್ತು ಜಠರದ ಒಳಭಾಗದಲ್ಲಿರುವ ಪ್ರಾಕ್ಸಿ ಮಲ್ ಎಂಬ ಭಾಗವನ್ನು ಹಾಳು ಮಾಡುತ್ತದೆ ಇದರಿಂದ ಜಠರದ ಕ್ಯಾನ್ಸರ್ ಬರುತ್ತದೆ. ಅತಿಯಾದ ಬಿಸಿ ಆಹಾರವನ್ನು ಸೇವಿಸುವುದರಿಂದ ಆಗುವ ಜಠರದ ಕ್ಯಾನ್ಸರ್ ಬರುತ್ತದೆ. ಮಾನವನ ದೇಹದಲ್ಲಿರುವ ಜಠರಕ್ಕೆ 50ರಿಂದ 60 ಡಿಗ್ರಿಯಷ್ಟು ಬಿಸಿಯನ್ನು ತಡೆಯುವ ಶಕ್ತಿ ಇರುವುದಿಲ್ಲ ಆದ್ದರಿಂದ ಅತಿಯಾದ ಬಿಸಿ ಆಹಾರವನ್ನು ಸೇವಿಸುವುದು ಒಳ್ಳೆಯದಲ್ಲ ಅನಿಯಮಿತವಾಗಿ ಆಹಾರವನ್ನು ಸೇವನೆ ಮಾಡುವುದರಿಂದ ಆಗುವ ಉದರದ ಕ್ಯಾನ್ಸರ್ ಬರುತ್ತದೆ. ಹೌದು ಅನಿಯಮಿತವಾಗಿ ಆಹಾರ ಸೇವನೆ ಮಾಡುವುದರಿಂದ ಜಠರದ ಮೇಲೆ ಹೆಚ್ಚು ಹೊರೆ ಬೀಳುತ್ತದೆ ಇದರಿಂದ ಕ್ಯಾನ್ಸರ್ ಬರುವ ಸಾಧ್ಯತೆಗಳಿವೆ. ಆದ್ದರಿಂದ ನಾವು ನಮ್ಮ ಆರೋಗ್ಯದ ಮೇಲೆ ಹೆಚ್ಚು ಕಾಳಜಿ ವಹಿಸಬೇಕು ಮತ್ತು ದುಶ್ಚಟಗಳನ್ನು ಬಿಡಬೇಕು ಇದರಿಂದ ಜಠರದ ಕ್ಯಾನ್ಸರ್ ಬರುವುದನ್ನು ತಡೆಯಬಹುದು.

LEAVE A REPLY

Please enter your comment!
Please enter your name here