ಫುಡ್ ಪಾಯಿಸನ್ ಆದ್ರೆ ತಕ್ಷಣ ಹೀಗೆ ಮಾಡಿರಿ

0
656

ಫುಡ್ ಪಾಯಿಸನ್ ಎಂಬುದು ಈಗ ಸರ್ವೇ ಸಾಮಾನ್ಯವಾಗಿ ವ್ಯಾಪಿಸಿದೆ. ಸಣ್ಣ ಮಕ್ಕಳಿನಿಂದ ಹಿಡಿದು ವಯಸ್ಕರವರೆಗೂ ಈ ಸಮಸ್ಯೆ ಕಾಡುತ್ತಿದೆ. ಈ ಫುಡ್ ಪಾಯಿಸನ್ ಯಾವ ಕಾರಣಕ್ಕಾಗಿ ಬರುತ್ತದೆ ಮತ್ತು ಕೆಲವರಿಗೆ ಫುಡ್ ಪಾಸಿಯನ್ ಸಮಸ್ಯೆ ಹೆಚ್ಚು ಆದ್ರೆ ಸಾವು ಕೂಡ ತರುತ್ತದೆ. ಈಗಾಗಲೇ ನಿಮಗೆ ತಿಳಿದಿದೆ ದೇಗುಲದಲ್ಲಿ ಪ್ರಸಾದ ತಿಂದು ಒಮ್ಮೆಲೇ ನೂರಾರು ಜನ ಅಸ್ವಸ್ಥರಾಗಿ ಸಾವನ್ನಪಿರುವುದು ಇಂತಹ ಸಂಧರ್ಭದಲ್ಲಿ ವೈದ್ಯರು ಬರುವ ಮುಂಚೆ ತಕ್ಷಣ ಏನು ಮಾಡಿ ಜೀವ ಉಳಿಸಿಕೊಳ್ಳಬೇಕು ಅದಕ್ಕಾಗಿ ಯಾವ ರೀತಿಯ ಮನೆ ಮದ್ದು ಮಾಡಬೇಕು ಇಲ್ಲಿದೆ ಸಂಪೂರ್ಣ ಮಾಹಿತಿ ಜೊತೆಗೆ ಪುಡ್ ಪಾಯಿಸನ್ ವಿಷ ತಿಂದ ಮಾತ್ರಕ್ಕೆ ಬರುವಂತದ್ದು ಅಲ್ಲ. ಇದು ನಾವು ಸೇವಿಸುವ ಆರೋಗ್ಯದಲ್ಲಿ ಏರಿಳಿತವಾಗಿ ಬೇರೆ ಬೇರೆ ಸಮಸ್ಯೆಗಳಿಂದ ಸಹ ಬರುತ್ತದೆ. ಹಾಗಾದ್ರೆ ಎಲ್ಲ ಸಮಸ್ಯೆಗಳಿಗೆ ಏನು ಮಾಡಬೇಕು ಇಲ್ಲಿದೆ ಸಂಪೂರ್ಣ ಮಾಹಿತಿ.

ಎಲ್ಲರ ಮನೆಯಲ್ಲೂ ಅಡುಗೆಗೆ ಬೆಳ್ಳುಳ್ಳಿಯನ್ನು ಉಪಯೋಗಿಸುತ್ತಾರೆ. ಈ ಬೆಳ್ಳುಳ್ಳಿಯಲ್ಲಿ ಹಲವಾರು ರೀತಿಯ ಪೌಷ್ಟಿಕ ಅಂಶಗಳು ಇದ್ದು ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು.ಬೆಳ್ಳುಳ್ಳಿ ಮನುಷ್ಯನ ಹಲವಾರು ಕಾಯಿಲೆಗಳನ್ನು ಬೇಗ ಗುಣ ಪಡಿಸುವ ಔಷದಿಯು ಕೂಡ ಆಗಿದೆ. ಹಾಗೆಯೇ ಕೆಲವೊಮ್ಮೆ ನಾವು ಎಲ್ಲಾದರೂ ಹೊರಗಡೆ ಹೋಗಿ ಏನಾದರೂ ತಿಂದು ಬಂದಾಗ ಫುಡ್ ಪಾಯಿಷನ್ ಆಗುತ್ತದೆ ಇದರಿಂದ ತುಂಬಾ ಒದ್ದಾಡುತ್ತೇವೆ ಹಲವರು ರೀತಿಯ ಔಷಧಗಳನ್ನು ತೆಗೆದುಕೊಳ್ಳುತ್ತೇವೆ ಆದರೂ ಕೂಡ ಈ ಫುಡ್ ಪಾಯಿಷನ್ ಎಂಬುದು ಪೂರ್ಣವಾಗಿ ಗುಣವಾಗಲು ಒಂದು ದಿನ ಆದರೂ ಬೇಕು. ಆದರೆ ಫುಡ್ ಪಾಯಿಷನ್ ಅನ್ನು ಬೇಗ ಗುಣವಾಗುವಂತೆ ಮಾಡುವ ಗುಣ ಇರುವುದು ಬೆಳ್ಳುಳ್ಳಿಗೆ ಅದು ಹೇಗೆ ಎಂದು ತಿಳಿದುಕೊಳ್ಳೋಣ ಬನ್ನಿ.

ಬೆಳ್ಳುಳ್ಳಿಯಲ್ಲಿ ಆ್ಯಂಟಿವೈರಲ್ ಗುಣ ಇರುತ್ತದೆ ಈ ಆ್ಯಂಟಿಬ್ಯಾಕ್ಟೀರಿಯಲ್​ ಮತ್ತು ಆ್ಯಂಟಿಫಂಗಲ್​ ಗುಣ ದೇಹವನ್ನು ಸ್ವಚ್ಛಗೊಳಿಸುವಲ್ಲಿ ಉತ್ತಮವಾದದ್ದು. ಹಸಿ ಬೆಳ್ಳುಳ್ಳಿಯ ಎಸಳನ್ನು ನೀರಿನ ಜೊತೆ ಸೇವಿಸಿದರೆ ಹೊಟ್ಟೆ ಸಮಸ್ಯೆ ಮಾಯವಾಗುತ್ತದೆ. ನಿಂಬೆ ಹಣ್ಣಿನಲ್ಲೂ ಸಹ ಆ್ಯಂಟಿಆಕ್ಸಿಡೆಂಟ್ ಗುಣವಿದ್ದು, ದೇಹದ ಅರೋಗ್ಯ ಕಾಪಾಡುವಲ್ಲಿ ಉತ್ತಮ ಪಾತ್ರ ವಹಿಸುತ್ತದೆ. ಒಂದು ಲೋಟ ನೀರಿನಲ್ಲಿ ಅರ್ಧ ನಿಂಬೆರಸ ಕುಡಿದರೆ ಹೊಟ್ಟೆ ತೊಳಸುವಿಕೆ ಕಡಿಮೆಯಾಗುತ್ತದೆ. ಫುಡ್​ ಪಾಯಿಸ್ನಿಂಗ್​ ಸಮಸ್ಯೆಗೆ ಜೀರಿಗೆ ಕೂಡ ಉತ್ತಮ ಮದ್ದು.

ಒಂದು ಚಮಚ ಜೀರಿಗೆಯನ್ನು ನೀರಿಗೆ ಹಾಕಿ ಕುದಿಸಿ. ಇದಕ್ಕೆ ಕೊತ್ತಂಬರಿ ರಸ ಹಾಗು ಸ್ವಲ್ಪ ಉಪ್ಪು ಹಾಕಿ ಕುಡಿದರೆ ದೇಹ ಸ್ವಚ್ಛವಾಗುತ್ತದೆ. ಒಂದು ಲೋಟ ಮಜ್ಜಿಗೆಗೆ ಶುಂಠಿ. ಬೆಳ್ಳುಳ್ಳಿ. ಜೀರಿಗೆ ಹಾಕಿಕೊಂಡು ಕುಡಿದರೂ ಫುಡ್ ಪಾಯಿಷನ್ ಸಮಸ್ಯೆ ಹೋಗುತ್ತದೆ. ಹಾಗಾಗಿ ಫುಡ್ ಪಾಯಿಷನ್ ಸಮಸ್ಯೆ ಇಂದ ನರಳುವಾಗ ಮಾತ್ರೆ ಔಷಧಿ ತೆಗೆದುಕೊಳ್ಳುವುದನ್ನು ಬಿಟ್ಟು ಈ ಮನೆ ಮದ್ದು ತೆಗೆದುಕೊಂಡರೆ ಎಲ್ಲ ಸಮಸ್ಯೆಗಳು ಬೇಗ ಗುಣವಾಗುತ್ತದೆ. ಮಾಹಿತಿ ತಪ್ಪದೇ ಶೇರ್ ಮಾಡಿರಿ ಎಲ್ಲರಿಗು ಸಹಾಯ ಆಗಲಿ.

LEAVE A REPLY

Please enter your comment!
Please enter your name here