ಗಾಯ ಆದ್ರೆ ತಕ್ಷಣ ಈ ಸೊಪ್ಪು ಹಚ್ಚಿರಿ ಸಾಕು

0
740

ಯಾರಿಗೆ ಗಾಯಗಳು ಆಗಿಲ್ಲ ಹೇಳಿ ಗಾಯ ಅಂದ ತಕ್ಷಣ ಅದು ದೊಡ್ಡ ಗಾಯ ಆಗಲೇ ಬೇಕು ಎಂದೇನಿಲ್ಲ ನಮ್ಮ ಸಣ್ಣ ವಯಸ್ಸಿನಲ್ಲಿ ಆಟ ಆಡುವಾಗ ಬಿದ್ದು ಅಥವ ಅಚಾನಕ್ಕಾಗಿ ಅದು ಹೇಗೋ ಒಂದು ಆಗಬಹುದು ಚಿಕ್ಕದಾದರೂ ಆಗಬಹುದು ಗಾಯ ಗಾಯನೆ ಅಲ್ಲವೇ. ಆದರೆ ಕೆಲವು ಗಾಯಗಳು ಬೇಗ ಗುಣವಾಗುತ್ತವೆ ಆದರೆ ಕೆಲವು ಗಾಯಗಳು ಒಂದು ವಾರ ಒಂದು ತಿಂಗಳು ಆದರೂ ಹೋಗುವುದಿಲ್ಲ. ಆದರೆ ಗಾಯ ಅದ ತಕ್ಷಣ ಎಲ್ಲರೂ ಏನಾದರೂ ಔಷಧಿ ಹಚ್ಚುತ್ತಾರೆ ಇಲ್ಲ ಎಂದರೆ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾರೆ. ಅಲ್ಲಿ ಚಿಕ್ಕ ಪುಟ್ಟ ಗಾಯಗಳಿಗೆಲ್ಲ ಸಾವಿರಾರು ರೂಪಾಯಿ ಖರ್ಚು ಮಾಡುತ್ತರೆ. ಆದರೆ ಗಾಯಗಳನ್ನು ಸುಲಭವಾಗಿ ಮನೆಯಲ್ಲೇ ಗುಣ ಪಡಿಸಿಕೊಳ್ಳುವುದು ಅದು ಸೊಪ್ಪುಗಳನ್ನು ಬಳಕೆ ಮಾಡಿ ಹಾಗಾದರೆ ಅದು ಹೇಗೆ ಅದು ಯಾವ ಸೊಪ್ಪು ಎಂದು ತಿಳಿದುಕೊಳ್ಳೋಣ ಬನ್ನಿ.

ಜಾಜಿ ಸೊಪ್ಪು ಇದನ್ನು ನುಣ್ಣಗೆ ಅರೆದು ರಸ ತೆಗೆದು ಶುದ್ಧವಾದ ಬೆಣ್ಣೆಯೊಡನೆ ಕಲಸಿ ರಾತ್ರಿ ಹಾಗೆ ಇಟ್ಟು ಬೆಳಗ್ಗೆ ಆ ಬೆಣ್ಣೆಯನ್ನು ಕಾಯಿಸಿ ತುಪ್ಪ ಮಾಡಿ ಆ ತುಪ್ಪವನ್ನು ಹಚ್ಚಿದರೆ ಗಾಯಗಳು ಬೇಗ ಗುಣವಾಗುತ್ತವೆ ಇದು ಅಜ್ಜಿಯ ಮನೆ ಮದ್ದು ಸಹ ಆಗಿದೆ. ಅಡಿಕೆಯನ್ನು ಚೆನ್ನಾಗಿ ಕುಟ್ಟಿ ಪುಡಿ ಮಾಡಿ ಗಾಯಕ್ಕೆ ಹಾಕಿದರೆ ಗಾಯ ಬೇಗ ಹೋಗುತ್ತದೆ. ಕರಿ ಎಳ್ಳನ್ನು ನೀರಿನಲ್ಲಿ ಸ್ವಲ್ಪ ಸಮಯ ನೆನೆಹಾಕಿ ಅದನ್ನು ನುಣ್ಣಗೆ ಅರೆದು ಅದರಲ್ಲಿ ಶುದ್ಧವಾದ ಜೇನುತುಪ್ಪವನ್ನು ಸೇರಿಸಿ ಮುಲಾಮು ರೀತಿ ಮಾಡಿ ಗಾಯಗಳಿಗೆ ಹಚ್ಚಿದರೆ ಬೇಗ ಗುಣವಾಗುತ್ತದೆ. ಸಾಂಬಾರ ಪದಾರ್ಥವಾದ ಚಕ್ಕೆ ಮತ್ತು ಅರಿಶಿನದ ಕೊಂಬನ್ನು ಸಮಪ್ರಮಾಣದಲ್ಲಿ ಕುಟ್ಟಿ ಪುಡಿ ಮಾಡಿಕೊಂಡು ಇದನ್ನು ಬೆಣ್ಣೆ ತುಪ್ಪ ಅಥವಾ ಜೇನಿನಲ್ಲಿ ಕಲಸಿ ಗಾಯಕ್ಕೆ ಹಚ್ಚಿದರೆ ಗಾಯ ಬೇಗ ಮಾಯುತ್ತದೆ. ಜಾಜಿ ಮಲ್ಲಿಗೆಯ ಸೊಪ್ಪು ಮತ್ತು ಮದರಂಗಿ ಸೊಪ್ಪುಗಳನ್ನು ನುಣ್ಣಗೆ ಅರೆದು ಗಾಯಕ್ಕೆ ಲೇಪಿಸಿದರೆ ಗಾಯ ಬೇಗನೆ ಮಾಯುತ್ತವೆ. ಬೆಳ್ಳುಳ್ಳಿಯನ್ನು ನಯವಾಗಿ ಅರೆದು ಹಚ್ಚುವುದರಿಂದ ಗಾಯ ದಲ್ಲಿನ ಹುಳುಗಳೆಲ್ಲ ಸತ್ತು ಬಿದ್ದು ಹೋಗುತ್ತವೆ, ಗಾಯ ಆಳವಾಗಿದ್ದರೆ ಅದಕ್ಕೆ ಅರೆದ ಬೆಳ್ಳುಳ್ಳಿಯ ರಸವನ್ನು ತುಂಬಬೇಕು ನಯವಾಗಿ ಅರೆದ ಬೆಳ್ಳುಳ್ಳಿ ಮೆತ್ತುವುದರಿಂದ ಗಾಯವು ಬೇಗನೆ ಗುಣವಾಗುತ್ತದೆ.

ನೇರಳೆಯ ಎಲೆಯನ್ನು ನೀರಿನಲ್ಲಿ ನುಣ್ಣಗೆ ಅರೆದು ಹಚ್ಚುವುದರಿಂದ ಸುಟ್ಟ ಗಾಯದ ಕಲೆ ಪರಿಹಾರವಾಗುತ್ತದೆ. ಅರಳಿ ಮರದ ಒಣಗಿದ ಎಲೆಗಳನ್ನು ಸುಟ್ಟು ಬಸ್ಮ ಮಾಡಿಟ್ಟುಕೊಂಡು ಈ ಬಸ್ಮವನ್ನು ಗಾಯದ ಮೇಲೆ ಉದುರಿಸುತ್ತಿದ್ದಾರೆ ಗಾಯ ಬಹು ಬೇಗನೆ ಮಾಯುತ್ತವೆ. ಜೊತೆಗೆ ಈ ಭಸ್ಮವನ್ನು ಕೊಬ್ಬರಿ ಎಣ್ಣೆಯಲ್ಲಿ ಕಲಸಿ ಗಾಯಕ್ಕೆ ಹಚ್ಚಿದರು ಬೇಗ ಗುಣವಾಗುತ್ತದೆ. ಮಾವಿನ ಬೇರಿನ ರಸದೊಡನೆ ಸ್ವಲ್ಪ ಕರ್ಪೂರವನ್ನು ಮತ್ತು ಸ್ವಲ್ಪ ತುಪ್ಪವನ್ನು ಸೇರಿಸಿ ನುಣ್ಣಗೆ ಅರೆದು ಹಚ್ಚುವುದರಿಂದ ಗಾಯ ಬೇಗ ಗುಣವಾಗುತ್ತದೆ. ಶ್ರೀಗಂಧವನ್ನು ಶುದ್ಧವಾದ ಹಸುವಿನ ಹಾಲಿನಲ್ಲಿ ಬೆರೆಸಿ ಚೆನ್ನಾಗಿ ಕಲಕಿ ಪ್ರತಿನಿತ್ಯ ಬೆಳಗ್ಗೆ ಕುಡಿಯುವುದರಿಂದ ಎಲ್ಲ ಬಗೆಯ ಸಾಮಾನ್ಯ ಗಾಯಗಳು ಬಹು ಬೇಗನೆ ಮಾಯುತ್ತವೆ. ದಾಳಿಂಬೆ ಚಕ್ಕೆ ಚೂರ್ಣದ ಲೇಪನವನ್ನು ಗಾಯಕ್ಕೆ ಉತ್ತಮ ಮದ್ದು. ನೋಡಿದರಲ್ಲ ಗಾಯಗಳನ್ನು ಸುಲಭವಾಗಿ ಗುಣಪಡಿಸಿಕೊಳ್ಳುವ ಮದ್ದುಗಳನ್ನು ಹಾಗಾಗಿ ಈ ಮದ್ದುಗಳನ್ನು ಮಾಡಿ ಗಾಯಗಳನ್ನು ಗುಣಪಡಿಸಿಕೊಳ್ಳಿ. ತಿಳಿಯಿರಿ ಆದರೆ ದೊಡ್ಡ ದೊಡ್ಡ ಗಾಯಗಳಿಗೆ ವೈದ್ಯರ ಬಳಿ ಹೋಗುವುದು ಮತ್ತು ನೋವಿಗೆ ತಕ್ಕಂತೆ ತಕ್ಷಣ ಮಾತ್ರೆಗಳ ಸೇವನೆ ಅತೀ ಮುಖ್ಯವಾಗಿದೆ. ಈ ಉಪಯುಕ್ತ ಮಾಹಿತಿ ತಪ್ಪದೇ ಶೇರ್ ಮಾಡಿರೆ ನಿಮ್ಮ ಸ್ನೇಹಿತರಿಗೂ ಸಹಾಯ ಆಗಲಿದೆ.

LEAVE A REPLY

Please enter your comment!
Please enter your name here