ತಡವಾಗಿ ಮದ್ವೆ ಮಾಡ್ಕೊಂಡು ತಡವಾಗಿ ಮಕ್ಕಳು ಆದ್ರೆ ಈ ಸಮಸ್ಯೆ ಬರುತ್ತೆ

0
1006

ಇತ್ತೀಚೆಗೆ ಹೆಣ್ಣು ಅಥವಾ ಗಂಡಾಗಲಿ ತಾವು ಒಂದು ಹಂತಕ್ಕೆ ಬರಬೇಕು ಸ್ವಾಭಿಮಾನಿಗಳಗಿ ಬದುಕಬೇಕು ಎಂದು ಆಸೆ ಪಟ್ಟು ಒಂದು ಹಂತಕ್ಕೆ ಬರುವ ತನಕ ಎಷ್ಟೋ ಯುವಕರು ಮದುವೆ ಆಗುವುದಲ್ಲ. ಇನ್ನು ಕೆಲವು ಗಂಡು ಅಥವಾ ಹೆಣ್ಣಿಗೆ ತಾವು ಆಸೆ ಪಟ್ಟಿರುವ ರೀತಿಯ ಸಂಗಾತಿ ಸಿಕ್ಕಿಲ್ಲ ಎಂದು ಮದುವೆ ಆಗುವುದನ್ನು ನಿಧಾನ ಮಾಡುತ್ತಾರೆ. ಇನ್ನು ಕೆಲವರಿಗೆ ಎಷ್ಟೇ ಗಂಡು ಹೆಣ್ಣು ಹುಡುಕಿದರೂ ಸಿಗುವುದಿಲ್ಲ ಹಾಗಾಗಿ ಮದುವೆ ಆಗುವುದು ನಿಧಾನವಾಗುತ್ತದೆ. ಮತ್ತಷ್ಟು ನಮ್ಮ ಜನರು ಆಸ್ತಿ ಅಂತಸ್ತು ತಕ್ಕ ಹಾಗಿ ಸಿಗಲಿಲ್ಲ ಮತ್ತು ಹುಡುಗಿ ಅಥವ ಹುಡುಗನ ಜಾತಕ ಸಿಗಲಿಲ್ಲ ಎಂದು ಮದುವೆ ಆಗೋದಿಲ್ಲ ವಯಸ್ಸು ಮಾತ್ರ ಏರುತ್ತಲೇ ಇರುತ್ತದೆ.

ಮದುವೆ ಎಂಬುದು ವಯಸ್ಸಿಗೆ ಸರಿಯಾಗಿ ಆಗಬೇಕು. ನಮ್ಮಲ್ಲಿ ಎಷ್ಟೋ ಮದ್ವೆ ಆಗುವ ಜೋಡಿಗಳು ಕೆಲಸದಲ್ಲಿ ಇರುತ್ತಾರೆ ಮತ್ತಷ್ಟು ಹಣ ಮಾಡಿದ ನಂತರ ಮಕ್ಕಳು ಮಾಡಿಕೊಳ್ಳೋಣ ಎಂದು ಕೆಲವು ಜನರು ಆದ್ರೆ ಮತ್ತಷ್ಟು ಜನರು ಸಾಲಗಳು ತೀರಿಸಿದ ನಂತರ ಮಕ್ಕಳು ಆಗಲಿ ಹೀಗೆ ನಾನಾ ರೀತಿಯ ಯೋಜನೆಗಳೊಂದಿಗೆ ಇರುತ್ತಾರೆ. ಮದುವೆಯ ನಂತರ ಮಕ್ಕಳು ಕೂಡ ಸರಿಯಾದ ಸಮಯಕ್ಕೆ ಆದರೆ ಮಾತ್ರ ಎಲ್ಲರೂ ಕೂಡ ಆರೋಗ್ಯವಾಗಿ ಇರಲು ಸಾಧ್ಯವಾಗುತ್ತದೆ

ಆದರೆ ವಯಸ್ಸಿಗೆ ಸರಿಯಾಗಿ ಮದುವೆ ಆಗಿ ಮಕ್ಕಳನ್ನು ತುಂಬಾ ಲೇಟಾಗಿ ಮಾಡಿಕೊಳ್ಳುತ್ತಾರೆ ಹೀಗೆ ಮಕ್ಕಳನ್ನು ಸರಿಯಾದ ವಯಸ್ಸಿಗೆ ಮಾಡಿಕೊಳ್ಳದೆ ನಿಧಾನವಾಗಿ ಮಕ್ಕಳು ಆಗುವ ಮಕ್ಕಳ ಆರೋಗ್ಯದಲ್ಲಿ ತುಂಬಾ ಏರು ಪೇರು ಉಂಟಾಗುತ್ತದೆ. ಹಾಗಾದರೆ ಆ ಮಕ್ಕಳಿಗೆ ಏನೆಲ್ಲ ಸಮಸ್ಯೆಗಳು ಆಗುತ್ತವೆ ಎಂದು ತಿಳಿದುಕೊಳ್ಳೋಣ ಬನ್ನಿ. ಜನನ ಸಂಬಂಧ ಸಮಸ್ಯೆಗಳು ಮತ್ತು ಸಂಕೀರ್ಣತೆಗಳು ಅಧಿಕವಾಗುತ್ತವೆ. ತಡವಾಗಿ ಮದುವೆಯಾಗುವುದರಿಂದ ಗರ್ಭ ಧರಿಸುವುದು ತಡವಾಗುತ್ತಿತ್ತು ಇದರಿಂದ ಅಕಾಲಿಕ ಅಂದರೆ ಅವಧಿಗೆ ಮುನ್ನವೇ ಮಕ್ಕಳು ಆಗುತ್ತದೆ ಇದರ ಜೊತೆಗೆ ತಡವಾಗಿ ಮದುವೆಯಾಗುವುದರಿಂದ ಗರ್ಭಧಾರಣೆ ಪ್ರಮಾಣ ಸಹ ಕಡಿಮೆಯಾಗುತ್ತದೇ.

ಪ್ರಸವ ಸಂಬಂಧಿತ ಸಮಸ್ಯೆಗಳು ಕಾಡುತ್ತವೆ. ಮಕ್ಕಳ ಬೆಳವಣಿಗೆಯಲ್ಲಿ ಕುಂಠಿತವಾಗುತ್ತದೆ. ಮಕ್ಕಳು ಅಂಗವಿಕಲರಾಗುವ ಸಾಧ್ಯತೆ ಹೆಚ್ಚಿರುತ್ತದೆ. ಮಕ್ಕಳ ಬುದ್ಧಿಶಕ್ತಿ ಕಡಿಮೆ ಆಗುವ ಸಾಧ್ಯತೆಯೂ ಇರುತ್ತದೆ. ವಯಸ್ಸು ಹೆಚ್ಚಾದಂತೆ ಗಂಡಸರಲ್ಲಿ ವೀರ್ಯಾಣು ಕಡಿಮೆ ಆಗುತ್ತಾ ಹೋಗುತ್ತದೆ ಇದು ಮುಂದೆ ನಿಮಗೆ ಮಕ್ಕಳೇ ಆಗದ ಪರಿಸ್ತಿತಿಗೆ ತಂದು ನಿಲ್ಲಿಸುತ್ತದೆ. ಇದಿಷ್ಟೇ ಅಲ್ಲದೆ ಇನ್ನು ಹಲವು ರೀತಿಯ ಸಮಸ್ಯೆಗಳು ನಿಮ್ಮ ಆವರಿಸುತ್ತದೆ. ಹಾಗಾಗಿ ಸರಿಯಾದ ವಯಸ್ಸಿಗೆ ಮದುವೆ ಆಗಿ ತುಂಬಾ ಲೇಟಾಗಿ ಅಥವಾ ತುಂಬಾ ತಡವಾಗಿ ಮದುವೆ ಆಗಿ ಮಕ್ಕಳನ್ನು ಮಾಡಿಕೊಳ್ಳುವವರು ಆದಷ್ಟು ನಿಲ್ಲಿಸಿ ವಯಸ್ಸು ಮೀರುವ ಒಳಗೆ ಮದ್ವೆ ಆಗಿರಿ. ನಿಮ್ಮಲ್ಲೂ ಇಂತಹ ಆಲೋಚನೆಗಳು ಇದ್ದಲ್ಲಿ ಕೊಡಲೇ ಅದನ್ನು ತೆಗೆದುಹಾಕಿ 25 ವರ್ಷದ ಕಳೆದ ಕೊಡಲೇ ವಿವಾಹ ಆಗಿರಿ ಮಕ್ಕಳನ್ನು ಪಡೆಯಿರಿ. ಈ ಉಪಯುಕ್ತ ಮಾಹಿತಿ ತಪ್ಪದೇ ಶೇರ್ ಮಾಡಿರಿ ಎಲ್ಲರಿಗು ಸಹಾಯ ಆಗುತ್ತೆ.

LEAVE A REPLY

Please enter your comment!
Please enter your name here