ದೈತ್ಯ ರಾಕ್ಷಸ ಕುಂಭಕರ್ಣನ ಬಗ್ಗೆ ನಿಮಗೆ ಗೊತ್ತಿಲ್ಲದೇ ಇರೋ 8 ನಿಜ ಸಂಗತಿಗಳನ್ನು ತಿಳಿಯೋಣ ಬನ್ನಿ.

0
745

ಕುಂಭಕರ್ಣ ಎಂದರೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಹಿಂದೆ ಇದು ಚಿಕ್ಕ ಮಕ್ಕಳಿಗೆ ಪಠ್ಯಕ್ರಮದಲ್ಲೂ ಕೂಡ ಕುಂಭಕರ್ಣನ ವಿಷಯವನ್ನು ಇಟ್ಟಿದ್ದರು. ನಾವು ಮನೆಯಲ್ಲಿ ಹೆಚ್ಚು ನಿದ್ರೆಯನ್ನು ಮಾಡುತ್ತಿದ್ದಾಗ ನಮ್ಮ ತಂದೆ ತಾಯಿ ಅಥವಾ ಮನೆಯಲ್ಲಿರುವ ದೊಡ್ಡವರು ನಮಗೆ ಬಯ್ಯುತ್ತಿರುತ್ತಾರೆ ಏನು ಕುಂಭಕರ್ಣನ ತರ ಯಾವಾಗ್ಲೂ ಬರೀ ನಿದ್ದೇನೆ ಮಾಡ್ತಿಯ ಎಷ್ಟೊತ್ತು ಮಲಗೋದು ಅಂತ ಅಲ್ಲವೇ. ಅಂದರೆ ಕುಂಭಕರ್ಣ ಸತತವಾಗಿ 6 ತಿಂಗಳು ಮಲಗಿ ನಿದ್ರೆ ಮಾಡುತ್ತಿದ್ದ ಮತ್ತು ಒಂದು ದಿನ ಎಚ್ಚರ ಇರುತ್ತಿದ್ದ ಅಷ್ಟೇ.

ಕುಂಭಕರ್ಣ ಯಾಕೆ ಹೀಗೆ 6 ತಿಂಗಳ ತನಕ ನಿದ್ದೆ ಮಾಡ್ತಿದ್ದ ? ಅವನಿಗೆ ಹಸಿವಾಗುವುದಿಲ್ಲವೆ? ಬನ್ನಿ ಕುಂಭಕರ್ಣನ ಬಗ್ಗೆ ತಿಳಿದುಕೊಳ್ಳೋಣ.. ಕುಂಭಕರ್ಣನು 6 ತಿಂಗಳು ನಿದ್ರಿಸಲು ಅವನು ವರಗಳನ್ನು ಕೇಳಿದ್ದೆ ಕಾರಣ. ಕುಂಭಕರ್ಣನು ಒಂಟಿಕಾಲಿನಲ್ಲಿ ನಿಂತು ತಪ್ಪಸ್ಸನ್ನಾಚರಿಸುತ್ತಿದ್ದನು.ಆಗ ಬ್ರಹ್ಮನು ಕುಂಭಕರ್ಣನ ಕಡೆ ಸಾಗಿದಾಗ ದೇವತೆಗಳು ಬ್ರಹ್ಮದೇವ,ಈಗಾಗಲೇ ಕುಂಭಕರ್ಣನು ಅನೇಕ ಋಷಿಮುನಿಗಳನ್ನು ತಿಂದು ಹಾಕಿದ್ದಾನೆ ಆದ್ದರಿಂದ ಅವನಿಗೆ ಇನ್ನೂ ಹೆಚ್ಚಿನ ಶಕ್ತಿಯನ್ನು ಕೊಡಬೇಡಿ ಎಂದರು.ಆಗ ಬ್ರಹ್ಮದೇವನು ಸರಸ್ವತಿ ದೇವಿಗೆ ದೇವತೆಗಳ ಇಚ್ಛೆಯನ್ನು ಈಡೇರಿಸುವಂತೆ ಹೇಳಿದನು. ಕುಂಭಕರ್ಣನು ವರ ಕೇಳುವ ಸಮಯದಲ್ಲಿ ಸರಸ್ವತಿಯು ಅವನಲ್ಲಿ ಸೇರಿ ಬುದ್ಧಿಯನ್ನು ಬದಲಾಯಿಸಿದಳು. ಆಗ ಕುಂಭಕರ್ಣನು ಇಂದ್ರಾಸನ ಕೇಳುವ ಬದಲು ನಿದ್ರಾಸನ ಕೇಳಿದನು. ಆಗ ಬ್ರಹ್ಮನು ಅನುಗ್ರಹಿಸಿ ಹೋದನು.ಹೀಗೆ ಕುಂಭಕರ್ಣನು ಆರು ತಿಂಗಳು ನಿದ್ದೆ ಹಾಗೂ ಒಂದು ದಿನ ಎಚ್ಚರವಿರುವ ವಿಚಿತ್ರ ವರವನ್ನು ಪಡೆದನು.ಆದರೆ ಮುಂದೆ ತಾನೇನು ವರ ಪಡೆದೆ ಎಂದು ಅಲೋಚಿಸಿದಾಗ ದೇವತೆಗಳಿಂದ ತನಗೆ ಮೋಸವಾಯಿತೆಂದು ತಿಳಿದನು.

ಇವನ ಶಕ್ತಿಯನ್ನು ಕಂಡು ದೇವರಾಜ ಇಂದ್ರನಿಗೂ ಕೂಡ ಅಸೂಯೇ. ಇಡೀ ಇಂದ್ರಲೋಕದಲ್ಲೇ ಕುಂಬಕರ್ಣನನ್ನು ಸೋಲಿಸುವವರು ಯಾರೂ ಇರಲಿಲ್ಲ. ಆದ್ದರಿಂದ ಇವನ ಶಕ್ತಿ ಬಲವನ್ನು ಕಂಡು ಇಂದ್ರನೂ ಕೂಡ ಅಸೂಯೇ ಪಡುತ್ತಿದ್ದನು.ಕುಂಭಕರ್ಣನ ಶಕ್ತಿಯೂ ಇಡೀ ವಿಶ್ವದಲ್ಲಿಯೇ ಪ್ರಬಲವಾದದ್ದು ಎಂದು ಪರಿಗಣಿಸಲಾಗಿತ್ತು. ಕುಂಭಕರ್ಣನು ಇಡೀ ವಿಶ್ವವನ್ನೇ ತಿಂದು ಬಿಡುತ್ತಿದ್ದನು. ಕುಂಭಕರ್ಣನು ತಿನ್ನುವುದರಲ್ಲಿ ಬೃಹತ್ ಸಾಮರ್ಥ್ಯವನ್ನು ಹೊಂದಿದ್ದನು.ಅವನು ಎಚ್ಚರವಿದ್ದ ಆ ಒಂದು ದಿನ ಎಲ್ಲವನ್ನೂ ತಿಂದು ಬಿಡುತ್ತಿದ್ದ. ಬ್ರಹ್ಮನು ವರ ಕೊಡುವುದಕ್ಕಿಂತ ಮುಂಚೆ ಕೂಡ ಟನ್ ಗಟ್ಟಲೆ ತ್ತಿನ್ನುತ್ತಿದ್ದ. ಅದಕ್ಕಾಗಿ ಬ್ರಹ್ಮದೇವನು ಸರಸ್ವತಿ ದೇವಿಯು ಸೇರಿ ಇವನ ಹಸಿವು ಇಡೀ ವಿಶ್ವವನ್ನೇ ತಿಂದು ಮುಗಿಸಿಬಿಡಬಹುದು ಎಂದು ಈ ರೀತಿ ಮಾಡಿದರು.

ಕುಂಭಕರ್ಣನು ತತ್ವಶಾಸ್ತ್ರಜ್ಞ ನಾಗಿದ್ದನು. ನಾರದ ಮುನಿಗಳು ಕುಂಭಕರ್ಣನಿಗೆ ತತ್ವಶಾಸ್ತ್ರಜ್ಞವನ್ನು ಬೋಧಿಸಿದ್ದರು.ಯಾಕೆಂದರೆ ಕುಂಭಕರ್ಣನು ಹಿಂಸಿಸುವುದು ಮತ್ತು ಪಾಪವನ್ನು ಮಾಡುವುದರಲ್ಲಿ ಯಾವ ಆಸಕ್ತಿಯನ್ನು ತೋರಿಸುತ್ತಿರಲ್ಲಿಲ್ಲ. ಯಾರು ಅವನನ್ನು ಎಚ್ಚರ ಗೊಳಿಸುವ ಧೈರ್ಯ ಕೂಡ ಮಾಡಲಿಲ್ಲ. ಕುಂಭಕರ್ಣನನ್ನು ನಿದ್ರೆಯಿಂದ ಎಚ್ಚರ ಗೊಳಿಸುವುದೇ ಒಂದು ದೊಡ್ಡ ಮಹತ್ತರ ಕಾರ್ಯವಾಗಿತ್ತು.ಅವನನ್ನು ಯುದ್ಧ ಮಾಡುವ ಸಲುವಾಗಿ ಎಚ್ಚರ ಗೊಳಿಸಲು ಇಡೀ ಸೈನ್ಯವನ್ನೇ ತೆಗೆದುಕೊಂಡರು.ಸೈನ್ಯವು ಶಬ್ದವನ್ನು ಮಾಡಲು ಡೋಲುಗಳನ್ನು ಬಡಿದರು, ಅನೇಕ ಪ್ರಾಣಿಗಳ ಜೊತೆ ಆನೆಯಂತಹ ದೈತ್ಯ ಪ್ರಾಣಿಗಳನ್ನು ಕರೆತಂದರು ಹೀಗೆ ಕುಂಭಕರ್ಣನನ್ನು ನಿದ್ರೆಯಿಂದ ಎಚ್ಚರಗೊಳಿಸಲು ತುಂಬಾ ಕಷ್ಟ ಪಡಬೇಕಾಯಿತು. ಕುಂಭಕರ್ಣನು ರಾವಣನಿಗೆ ಹೇಳಿದನು ಜಗತ್ ಜನನಿಯಾದ ಸೀತೆಯನ್ನು ಅಪಹರಿಸಿರುವುದು ಸಂತೋಷ ಪಡುವಂತಹ ವಿಷಯವಲ್ಲ.ಸೀತೆಯನ್ನು ರಾಮನಿಗೆ ಒಪ್ಪಿಸಿ ನಿನ್ನ ತಪ್ಪುಗಳನ್ನು ಕುರಿತು ರಾಮನ ಬಳಿ ಹೋಗಿ ಕ್ಷಮೆ ಕೇಳು ಎಂದು ರಾವಣನಿಗೆ ಕುಂಭಕರ್ಣ ಹೇಳಿದ ಆದರೆ ರಾವಣನು ನಿರಾಕರಿಸಿದನು

ಯುದ್ಧ ಭೂಮಿಯಲ್ಲಿ ಯುದ್ಧ ಮಾಡುವಾಗ ಕುಂಭಕರ್ಣನು ವಾನರ ಸೇನೆಯಲ್ಲಿ ಅನೇಕ ವಾನರರನ್ನು ಸಾಯಿಸಿದ. ಕೊನೆಗೆ ರಾಮನೇ ಕುಂಭಕರ್ಣನನ್ನು ಸಾಯಿಸಿದನು.ಕುಂಭಕರ್ಣನು ಸಾಯುವ ಮುನ್ನ ಜೈ ಶ್ರೀ ರಾಮ ಎಂದು ಉಚ್ಚರಿಸುತ್ತಿದ್ದ ಕೊನೆಗೆ ಅವನಿಗೆ ಮೋಕ್ಷವೂ ಪ್ರಾಪ್ತಿಯಾಯಿತು.ಇದು ಕುಂಭಕರ್ಣನ ಕತೆಯಾಗಿದೆ.

LEAVE A REPLY

Please enter your comment!
Please enter your name here