ನಿಮ್ಮ ಮನೆಯಲ್ಲಿರುವ ವಸ್ತುಗಳು ಹೀಗೆ ಇದ್ರೆ ನಿಮಗೆ ಯಾವುದೇ ಸಮಸ್ಯೆ ಬರೋದಿಲ್ಲ

0
1098

ಯಾರೇ ಆಗಲಿ ಒಂದು ಮನೆಗೆ ಪ್ರವೇಶ ಪಡೆಯಬೇಕು ಎಂದರೆ ಆ ಮನೆಯ ವಾಸ್ತು ಸ್ಥಿತಿಯನ್ನು ನೋಡಿ ನಂತರ ಮನೆಗೆ ಹೋಗುತ್ತಾರೆ. ವಾತಾವರಣದಲ್ಲಿನ ಅನಿಷ್ಟಶಕ್ತಿಗಳಿಂದ ಮಾನವನ ಶರೀರ ಮತ್ತು ಶರೀರದಲ್ಲಿ ನಡೆಯುವ ಜೀವ ರಾಸಾಯನಿಕ ಕ್ರಿಯೆಗಳ ಸಂರಕ್ಷಣೆಯಾಗಬೇಕೆಂದು ಪ್ರಾಚೀನ ಭಾರತೀಯ ಋಷಿ ಮುನಿಗಳು ಕಠೋರ ಪರಿಶ್ರಮದಿಂದ ವಾಸ್ತುಶಾಸ್ತ್ರದ ಸಂಶೋಧನೆ ಮಾಡಿದ್ದಾರೆ. ಅದನ್ನು ಇಂದು ಕೆಲವರು ದುಡ್ಡಿನ ಆಸೆಗಾಗೆ ದಂಧೆ ಸಹ ಮಾಡಿಕೊಂಡಿದ್ದಾರೆ ಇದರಿಂದ ಎಲ್ಲರನ್ನು ಅನುಮಾನಿಸುವ ರೀತಿಗೆ ಬಂದಿದ್ದೇವೆ.

ವಾಸ್ತುಶಾಸ್ತ್ರ ಎಂದರೆ ನಮ್ಮ ಸುತ್ತ ಮುತ್ತಲಿನ ವಾತಾವರಣ ನಿಸರ್ಗ ಸೌರಮಂಡಲ ಮತ್ತು ವಿವಿಧ ಗ್ರಹಗಳಿಂದ ಬರುವ ಆಯಸ್ಕಾಂತ ಲಹರಿಗಳ ಮೇಲೆ ಆಧಾರಿತ ವಾಸ್ತುವಿನ ರಚನೆ ಮತ್ತು ನಿರ್ಮಾಣಕ್ಕೆ ಸಂಬಂಧಿಸಿದ ಶಾಸ್ತ್ರ. ಮಾನವನು ನೂತನ ವಾಸ್ತುವನ್ನು ಕಟ್ಟುವಾಗ ಸಾಧ್ಯವಾದಷ್ಟು ಮಟ್ಟಿಗೆ ವಾಸ್ತುಶಾಸ್ತ್ರದ ನಿಯಮಗಳನ್ನು ಪಾಲಿಸಿದರೆ ನಿಶ್ಚಿತವಾಗಿಯೂ ಅವನಿಗೆ ಮನಃಶಾಂತಿ ಸಿಗುವುದು ಮತ್ತು ಸುಖ ಸಮೃದ್ಧಿಯು ಪ್ರಾಪ್ತವಾಗುವುದು. ಹಾಗಾದರೆ ಒಂದು ಮನೆಯ ವಾಸ್ತು ಹೇಗಿರಬೇಕು ಎಂದು ತಿಳಿಯೋಣ.

ಮನೆಯ ಮುಖ್ಯ ದ್ವಾರ ಪೂರ್ವ ಅಥವಾ ಉತ್ತರ ದಿಕ್ಕಿನ ಕಡೆಗೆ ಇರಬೇಕು. ಮನೆಯ ಮಹಿಳೆಯರ ಮುಖ್ಯ ಪಾತ್ರ ಇರುವ ಅಡುಗೆ ಮನೆಯಲ್ಲಿ ಪೂರ್ವ ಮತ್ತು ಉತ್ತರ ದಿಕ್ಕಿಗೆ ನಿಂತುಕೊಂಡು ಅಡುಗೆ ಮಾಡುವ ರೀತಿ ಇರಬೇಕು. ದಕ್ಷಿಣ ದಿಕ್ಕಿಗೆ ಮುಖವಾಗಿ ಪಾತ್ರೆಯನ್ನು ತೊಳೆಯಬೇಕು. ಮನೆಯ ಮಕ್ಕಳು ಮಲಗುವ ಕೋಣೆ ಉತ್ತರ ಹಾಗೂ ಪೂರ್ವ ದಿಕ್ಕಿನ ಕಡೆಗೆ ಇರಬೇಕು. ಮನೆಯ ಯಜಮಾನ ಹಾಗೂ ಯಜಮಾನಿ ಮಲಗುವ ಕೋಣೆ ದಕ್ಷಿಣ ಪಶ್ಚಿಮ ದಿಕ್ಕಿಗೆ ಇರಬೇಕು. ಹೀಗೆ ಇರುವುದರಿಂದ ಆರೋಗ್ಯ ಅಭಿವೃದ್ದಿ ಆಗುತ್ತದೆ ಎಂದು ಶಸ್ತ್ರದಲ್ಲಿ ಉಲ್ಲೇಖ್ಯ ಇದೆ.

ಮಲಗುವ ಕೋಣೆಯಲ್ಲಿ ಯಾವುದೇ ಕಾರಣಕ್ಕೂ ಕನ್ನಡಿ ಇಡಬಾರದು ಯಾಕೆಂದರೆ ಬೆಳಗ್ಗೆ ನಿದ್ರೆಯಿಂದ ಎದ್ದ ನಂತರ ನಮ್ಮ ಮುಖವನ್ನು ನಾವೇ ನೋಡಿಕೊಳ್ಳಬಾರದು. ಊಟದ ಕೋಣೆಯಲ್ಲಿ ಕನ್ನಡಿ ಇದ್ದರೆ ತುಂಬಾ ಒಳ್ಳೆಯದು ಜೊತೆಗೆ ಆರೋಗ್ಯ ಕೂಡ ವೃದ್ಧಿಸುತ್ತದೆ. ಊಟ ಮಾಡುವಾಗ ಪೂರ್ವ ಅಥವಾ ಉತ್ತರ ದಿಕ್ಕಿಗೆ ಕುಳಿತು ಊಟ ಮಾಡಬೇಕು. ಅನ್ನ ಮಾಡಿದ ಪಾತ್ರೆ ಮತ್ತು ಅಡುಗೆಯನ್ನು ಮಾಡಲು ಬಳಸಿದ ಪಾತ್ರೆಗಳನ್ನು ತೊಳೆದ ನಂತರ ಯಾವುದೇ ಕಾರಣಕ್ಕೂ ಮಗುಚಿ ಇಡಬಾರದು. ಅದೇ ರೀತಿ ಊಟ ಮಾಡಲು ಬಳಸುವ ತಟ್ಟೆ ಹಾಗೂ ಲೋಟಗಳನ್ನು ಮಗುಚಿ ಇಡಬಾರದು. ಅಡುಗೆ ಕೋಣೆಯಲ್ಲಿ ದೇವರ ಚಿತ್ರಗಳನ್ನ ಇಡಬಾರದು ಹಾಗೂ ದೇವರ ಕೋಣೆಯ ಪಕ್ಕದಲ್ಲಿಯೇ ಅಡುಗೆ ಅಥವಾ ಸ್ನಾನ ಮತ್ತು ಶೌಚಾಲಯದ ಕೋಣೆಗಳು ಇರಬಾರದು. ಯಾವುದೇ ರೀತಿಯ ಔಷಧಿಗಳೂ ಮಾತ್ರೆಗಳನ್ನು ಆಡುಗೆ ಕೋಣೆಯಲ್ಲಿ ಇಡಬಾರದು. ದೇವರ ಫೋಟೋಗಳನ್ನು ಪೂರ್ವ ಹಾಗೂ ಉತ್ತರ ದಿಕ್ಕಿನಲ್ಲಿ ಇಡಬೇಕು ಮತ್ತು ಪೂಜೆಯನ್ನು ಪೂರ್ವ ಹಾಗೂ ಉತ್ತರ ದಿಕ್ಕಿನ ಕಡೆಗೆ ಮುಖ ಮಾಡಿ ಮಾಡಬೇಕು. ಗಣೇಶ ಹನುಮಂತ ದುರ್ಗಾ ದೇವಿಯ ಫೋಟೋಗಳನ್ನು ದಕ್ಷಿಣ ದಿಕ್ಕಿನ ಕಡೆಗೆ ಇಡಬೇಕು.

ಆಮೆ ಹಾಗೂ ಗರುಡವನ್ನು ಬೆಳ್ಳಿಯಿಂದ ಮಾಡಿಸಿ ಅಥವ ಕಂಚಿನದು ಮನೆಯ ಪೂಜಾ ಸ್ಥಳದಲ್ಲಿ ಇಟ್ಟರೆ ಒಳ್ಳೆಯದು. ಹಸುವಿನ ಚಿತ್ರಪಟ ಅಥವಾ ಗೋಮಾತೆಯನ್ನು ಬೆಳ್ಳಿಯಿಂದ ಮಾಡಿಸಿ ಪೂಜಾ ಸ್ಥಳದಲ್ಲಿ ಸ್ಥಾಪನೆ ಮಾಡಿ ಪೂಜಿಸಿದರೆ ಒಳ್ಳೆಯದು. ಮನೆಯ ಒಳಗೆ ಮುಖ್ಯ ದ್ವಾರದ ಮೇಲಕ್ಕೆ ಒಂದು ಕನ್ನಡಿಯನ್ನು ನೇತು ಹಾಕಿದರೆ ತುಂಬಾ ಒಳ್ಳೆಯದು. ಇವುಗಳನ್ನು ಪಾಲಿಸಿದರೆ ಮನೆಯಲ್ಲಿ ಸದಾ ಶಾಂತಿ ನೆಮ್ಮದಿ ಆರೋಗ್ಯ ಅಭಿವೃದ್ದಿ ಎಂಬುದು ನೆಲೆಸಿರುತ್ತದೆ.

LEAVE A REPLY

Please enter your comment!
Please enter your name here