ಬೆಳಿಗ್ಗೆ ಸಮಯ ಈ ಮೂರು ಕೆಲಸಗಳು ಮಾಡಿದ್ರೆ ಜೀವನ ಸುಖವಾಗಿ ಇರುತ್ತದೆ

0
798

ಬೆಳಿಗ್ಗೆ ನಿದ್ದೆಯಿಂದ ಎದ್ದಗಿನಿಂದ ಆ ದಿನ ಮುಗಿಯುವ ತನಕ ಸಂತೋಷವಾಗಿ ಇರಬೇಕು ಯಾವುದೇ ಸಮಸ್ಯೆಗಳು ಆಗಬಾರದು ಎಂದು ಆಸೆಯಿಂದ ಎದ್ದೆಳುತ್ತೇವೆ ಆದರೆ ಏನೋ ಮನಸ್ಸು ಸರಿ ಕೆಲವು ಸಮಯದಲ್ಲಿ ಹೋಗುವುದಿಲ್ಲ ಏನೋ ಒಂದು ರೀತಿಯ ಕಿರಿಕಿರಿಯಿಂದ ಮನಸ್ಸು ಕೆಡುತ್ತದೆ. ಏನೋ ಒಂದು ಸಮಸ್ಯೆ ನಮ್ಮನು ಆವರಿಸುತ್ತದೆ ಜೀವನವೇ ಬೇಡ ಎನ್ನುವಷ್ಟು ಮಾನಸಿಕ ಖಿನ್ನತೆಗೆ ಗುರಿ ಆಗುತ್ತೇವೆ. ದಿನನಿತ್ಯದ ಜೀವನದಲ್ಲಿ ನಾವು ಮಾಡುವ ಅಭ್ಯಾಸಗಳಿಗಿಂತಲು ಬಹಳ ಮುಖ್ಯವಾದವು ಕೆಲವು ಕೆಲಸಗಳು ಇವೆ ಇವುಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಅತೀ ಬೇಗನೆ ಯಶಸ್ಸನ್ನು ಕಾಣಬಹುದು ಹಾಗಾದರೆ ಅದು ಏನು ಎಂದು ತಿಳಿಯೋಣ. ನಾವು ನೀಡಿರುವ ಈ ಟಿಪ್ಸ್ ಫಾಲೋ ಮಾಡಿರಿ ಸಾಕಷ್ಟು ಒಳ್ಳೇದು ಆಗಲಿದೆ ನಿಮಗೆ.

ನಾವು ಬೆಳಿಗ್ಗೆ ಎದ್ದು ಮನೆಯಿಂದ ಹೊರಗೆ ಹೋಗುವ ಮೊದಲು ಸ್ವಲ್ಪ ಬೆಲ್ಲವನ್ನು ತಿಂದು ನೀರನ್ನು ಕುಡಿಯಬೇಕು ಹೀಗೆ ಮಾಡಿದರೆ ನಮ್ಮ ದೇಹದಲ್ಲಿ ಆಗುವ ರಕ್ತ ಸಂಚಾರ ಸುಗಮವಾಗುತ್ತದೆ ಬೆಲ್ಲದಲ್ಲಿ ಮುಖ್ಯವಾಗಿ ಸುಕ್ರೋಸ್ ಅಂಶವು ಹೆಚ್ಚಿಗೆ ಇದೆ. ಬೆಲ್ಲವನ್ನು ನೀರಿನ ಜೊತೆ ತಿಂದರೆ ನಮ್ಮ ಶಕ್ತಿಯ ಮಟ್ಟದಲ್ಲಿ ಹೆಚ್ಚಳವಾಗುತ್ತದೆ ಮತ್ತು ಆ ದಿನ ಪೂರ್ತಿ ನಾವು ಕ್ರಿಯಾಶೀಲರಾಗಿ ಕೆಲಸ ಮಾಡಲು ಪ್ರೇರೇಪಿಸುತ್ತದೆ.

ನಾವು ಮನೆಯಿಂದ ಹೊರಗೆ ಹೋಗುವ ಮುನ್ನ ನಮ್ಮ ಮನೆಯಲ್ಲಿರುವ ಹಿರಿಯರು ಅಥವಾ ಅಪ್ಪ ಅಮ್ಮಂದಿರ ಪಾದಗಳನ್ನು ಸ್ಪರ್ಶಿಸಿ ಅವರ ಆಶೀರ್ವಾದವನ್ನು ಪಡೆಯಬೇಕು. ಏಕೆಂದರೆ ಮನುಷ್ಯನಲ್ಲಿ ಶಕ್ತಿಯ ಅಲೆಗಳು ತಲೆಯಿಂದ ಪಾದಗಳ ಕಡೆಗೆ ಹಿಮ್ಮುಖವಾಗಿ ಹರಿಯುತ್ತವೆ. ನಾವು ಪಾದಗಳನ್ನು ಸ್ಪರ್ಶಿಸಲು ಕೆಳಗೆ ಬಗ್ಗಿದ್ದಾಗ ರಕ್ತವು ಮೆದುಳಿನ ಕಡೆಗೆ ಹರಿಯುತ್ತದೆ. ಜೊತೆಗೆ ಇದನ್ನು ಸತತವಾಗಿ ಮಾಡಿದರೆ ಪಿತೃ ದೋಷದಿಂದ ಮುಕ್ತಿಯನ್ನು ಗಳಿಸಿ ನಮಗೆ ಅದೃಷ್ಟದಿಂದ ಲಾಭವನ್ನು ತಂದುಕೊಡುತ್ತದೆ. ಜೊತೆಗೆ ಹಿರಿಯರು ನೀಡುವ ಆಶಿರ್ವಾದ ನಮಗೆ ಶುಭ ಫಲ ತರಿಸುತ್ತದೆ.

ನಾವು ಬೆಳ್ಳಗೆ ನಿದ್ರೆಯಿಂದ ಎದ್ದ ತಕ್ಷಣ ನಮ್ಮ ಎರಡು ಅಂಗೈಯನ್ನು ಜೊತೆಗೆ ಕೂಡಿಸಿ ಮುಂದೆ ತಂದು ಅಂಗೈಯನ್ನೇ ನೋಡಿಕೊಂಡು ನಮ್ಮ ಕಣ್ಣುಗಳಿಗೆ ಒತ್ತಿಕೊಳ್ಳಬೇಕು. ನಮ್ಮ ಅಂಗೈಗಳನ್ನು ಬರೀ ಜೋಡಿಸುವುದಲ್ಲ ಅವುಗಳನ್ನು ನಾವು ನೀರು ಹಾಕಿದರೆ ನಿಂತುಕೊಳ್ಳುವ ಹಾಗೆ ಇಟ್ಟುಕೊಂಡು ಎರಡರಿಂದ ಮೂರು ಬಾರಿ ನೋಡಿಕೊಂಡು ಕಣ್ಣುಗಳಿಗೆ ಒತ್ತಿಕೊಳ್ಳಬೇಕು. ಹೀಗೆ ಏಕೆ ಮಾಡಬೇಕು ಎಂದರೆ ನಮ್ಮ ಅಂಗೈನ ಬೆರಳುಗಳ ತುದಿಯಲ್ಲಿ ಲಕ್ಷ್ಮಿ ದೇವಿಯು. ಅಂಗೈನ ಮಧ್ಯದಲ್ಲಿ ಸರಸ್ವತಿ ದೇವಿಯು. ನಾವು ಬಳೆಗಳನ್ನು ಧರಿಸುವ ಸ್ಥಳದಲ್ಲಿ ಬ್ರಹ್ಮ ದೇವರು ವಾಸವಾಗಿದ್ದರೆ. ಅದಕ್ಕೆ ಬೆಳಗ್ಗೆ ಎದ್ದ ಕೂಡಲೇ ನಮ್ಮ ಅಂಗೈಗಳನ್ನು ನೋಡಿದರೆ ನಮಗೆ ಅವರ ದರ್ಶನವಾಗಿ ಅನುಗ್ರಹ, ಆಶೀರ್ವಾದ ಲಭಿಸಿದಂತಾಗುತ್ತದೆ. ಈ ಮೂರು ಕೆಲಸಗಳನ್ನು ಪ್ರತಿನಿತ್ಯ ಮಾಡಿದರೆ ಸಾಕು ನಮಗೆ ಅದೃಷ್ಟ ಎಂಬುದು ಸಿಗುತ್ತದೆ ಮತ್ತು ವೈಜ್ಞಾನಿಕವಾಗಿ ಸಹ ಕಾರಣಗಳು ಇದೆ. ನಮ್ಮ ಎಲ್ಲ ಸಮಸ್ಯೆಗಳು ದೂರ ಆಗುತ್ತದೆ. ಈ ಉಪಯುಕ್ತ ಮಾಹಿತಿ ಶೇರ್ ಮಾಡಿ ನಿಮ್ಮ ಸ್ನೇಹಿತರಿಗೂ ತಿಳಿಸಿರಿ ಎಲ್ಲರಿಗು ಸಹಾಯ ಆಗುತ್ತದೆ.

LEAVE A REPLY

Please enter your comment!
Please enter your name here