ನಾವು ಹೇಳುವ ಈ ಕೆಲವೇ ಕೆಲವು ವಿಷಯಗಳನ್ನು ನೀವು ಪಾಲಿಸಿದಲ್ಲಿ ನಿಮ್ಮ ಆರೋಗ್ಯ ಬಹಳ ಚೆನ್ನಾಗಿರುತ್ತದೆ.

0
541

ಪ್ರತಿನಿತ್ಯ ನಾವು ಮಲಗುತ್ತೇವೆ. ಆದರೆ ನಿಮಗೆ ಹೇಗೆ ಬೇಕೋ ಹಾಗೆ ಮಲಗುವಂತಿಲ್ಲ ಒಂದೇ ಕಡೆ ಮಲಗುವುದು ಅಥವಾ ಹೊಟ್ಟೆಯ ಮೇಲೆ ಮಲಗುವುದು ಹೀಗೆ ಮಾಡುವುದರಿಂದ ಬೆನ್ನು ಮೂಳೆಗೆ ಹಾನಿ ಉಂಟಾಗುತ್ತದೆ. ಮತ್ತು ಒಂದೇ ಮಗ್ಗಲಿನಲ್ಲಿ ಮಲಗುವುದರಿಂದ ನಿಮ್ಮ ಧ್ವನಿ ಪೆಟ್ಟಿಗೆ ಯು ಸರಿಯಾಗಿ ಕೆಲಸ ಮಾಡದಿರಬಹುದು. ಹಾಗೂ ಹೊಟ್ಟೆಯನ್ನು ಕೆಳಮುಖವಾಗಿ ಮಾಡಿ ಮಲಗುವುದರಿಂದ ನಿಮಗೆ ಶ್ವಾಸ ಸಂಬಂಧಿ ಕಾಯಿಲೆಗಳು ಮತ್ತು ಹೃದಯ ಸಂಬಂಧಿ ಕಾಯಿಲೆಗಳು ಬರಬಹುದು. ಅಂದರೆ ಉಸಿರಾಟದ ತೊಂದರೆ ಮತ್ತು ರಕ್ತದ ಪರಿಚಲನೆಗೆ ಅಡ್ಡಿ ಉಂಟಾಗಬಹುದು. ಹಾಗಾಗಿ ನಾವು ಮೊಟ್ಟೆಯನ್ನು ಮೇಲ್ಮುಖವಾಗಿ ಮಾಡಿ ಮಲಗಬೇಕು. ಮತ್ತು ಎತ್ತರದ ದಿಂಬುಗಳನ್ನು ಬಳಸಬಹುದು.

ಕುಳಿತುಕೊಳ್ಳುವಾಗ ನಾವು ಸರಿಯಾದ ಕ್ರಮದಲ್ಲಿ ಕುಳಿತುಕೊಳ್ಳಬೇಕು ಇಲ್ಲವಾದಲ್ಲಿ ಬೆನ್ನುಮೂಳೆಯ ಸಮಸ್ಯೆ ಬರಬಹುದು. ಯಾವಾಗಲೂ ನಾವು ಬೆನ್ನು ಮೂಳೆ ನೇರವಾಗಿರುವಂತೆ ಕುಳಿತುಕೊಳ್ಳಬೇಕು. ಇದರಿಂದ ಬೆನ್ನು ಗೂನು ಆಗುವುದು ಮತ್ತು ಬೆನ್ನುಮೂಳೆಯ ನೋವು ಆಗುವುದಿಲ್ಲ. ಪ್ರತಿನಿತ್ಯ ನಾವು ಕಾಫಿ ಟೀ ಮತ್ತು ಹಾಲನ್ನು ಕುಡಿಯುತ್ತವೆ. ಹೊರಗಡೆ ಸಿಗುವ ಪಾಕೆಟ್ ಹಾಲಿನಲ್ಲಿ ಕೊಬ್ಬಿನ ಅಂಶವನ್ನು ತಿಳಿದಿರುತ್ತಾರೆ ಹಾಗೂ ಅದರಲ್ಲಿ ಕೆಲವು ಸಿಂಥೆಟಿಕ್ ಪದಾರ್ಥಗಳನ್ನು ಸೇರಿಸುತ್ತಾರೆ ಇಂತಹ ಹಾಲನ್ನು ನಾವು ಕುಡಿದರೆ ಹೃದಯ ಸಂಬಂಧಿ ಕಾಯಿಲೆಗಳು ಅಂದರೆ ಹಾರ್ಟ್ ಅಟ್ಯಾಕ್ ನಂತಹ ಸಮಸ್ಯೆ ಉಂಟಾಗಬಹುದು. ಆದ್ದರಿಂದ ಇಂತಹ ಹಾಲನ್ನು ಕುಡಿಯುವುದನ್ನು ಕಡಿಮೆ ಮಾಡಿರಿ.

ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಬ್ಯುಸಿಯಾಗಿರುತ್ತಾರೆ. ಊಟ ಮಾಡಲು ಕೂಡ ಸಮಯವಿರುವುದಿಲ್ಲ ಅಷ್ಟು ಕೆಲಸ ಮಾಡುತ್ತಿರುತ್ತಾರೆ. ಆದರೆ ಕೆಲಸ ಮಾಡಿಕೊಂಡು ಊಟ ಮಾಡುವುದರಿಂದ ಆರೋಗ್ಯ ಹಾಳಾಗುತ್ತದೆ. ಆದ್ದರಿಂದ ಊಟ ಮಾಡುವಾಗ ಕೆಲಸ ಮಾಡುವುದು ಅಥವಾ ಮೊಬೈಲ್ ಹಾಗೂ ಕಂಪ್ಯೂಟರ್ಗಳನ್ನು ನೋಡುವುದು ಮಾಡಬೇಡಿ. ಮೈಕ್ರೋವೇವ್ ನಿಂದ ತಯಾರಿಸಿದ ಆಹಾರವನ್ನು ಹೆಚ್ಚಾಗಿ ಸೇವಿಸಬೇಡಿ. ಮೈಕ್ರೋವೇವ್ ನಲ್ಲಿ ಡೈಯ ಸೈಟಲ್ ಎಂಬ ರಾಸಾಯನಿಕವನ್ನು ಬಳಸಿರುತ್ತಾರೆ. ಮೈಕ್ರೋವೇವ್ ನಲ್ಲಿ ಆಹಾರ ವನ್ನು ತಯಾರಿಸಿದಾಗ ಈ ರಾಸಾಯನಿಕವು ಆಹಾರದಲ್ಲಿ ಮಿಶ್ರಣವಾಗಿ ನಂತರ ನಮ್ಮ ದೇಹವನ್ನು ಸೇರುತ್ತದೆ ಇದು ನಮ್ಮ ದೇಹಕ್ಕೆ ಬಹಳ ಅಪಾಯಕಾರಿ.

ನಮ್ಮ ದೇಹಕ್ಕೆ ನೀರು ಬಹಳ ಅತ್ಯವಶ್ಯಕ. ಆದರೆ ಅತಿಯಾದರೆ ಅಮೃತವೂ ವಿಷ ಎನ್ನುತ್ತಾರೆ ಹಾಗೆ ನಮ್ಮ ದೇಹಕ್ಕೆ ಎಷ್ಟು ನೀರಿನ ಅಗತ್ಯ ಇದೆಯೋ ಅಷ್ಟು ನೀರನ್ನು ಮಾತ್ರ ಕುಡಿಯಬೇಕು. ಸುಮ್ಮಸುಮ್ಮನೆ ಅಗತ್ಯಕ್ಕಿಂತ ಹೆಚ್ಚು ನೀರು ಕುಡಿಯುವುದರಿಂದ ಮೂತ್ರಪಿಂಡದ ಮೇಲೆ ಅಧಿಕ ಒತ್ತಡ ಬೀಳುತ್ತದೆ. ನಂತರದ ದಿನಗಳಲ್ಲಿ ಮೂತ್ರಪಿಂಡದ ಸಮಸ್ಯೆ ಉಂಟಾಗುವುದು. ಇತ್ತೀಚಿನ ದಿನಗಳಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ಎಲ್ಲರೂ ಕನ್ನಡಕವನ್ನು ಬಳಸುತ್ತಾರೆ. ಕಣ್ಣಿನ ಸಮಸ್ಯೆ ಇದ್ದವರು ಕನ್ನಡಕವನ್ನು ಹಾಕುವುದು ಒಳ್ಳೆಯದು ಹಾಗಂತ ಕಳಪೆ ಗುಣಮಟ್ಟದ ಅಥವಾ ಕಡಿಮೆ ಬೆಲೆಯ ಕನ್ನಡಕಗಳನ್ನು ಬಳಸಬೇಡಿ. ಇಂತಹ ಕನ್ನಡಕಗಳನ್ನು ಕಡಿಮೆ ಗುಣಮಟ್ಟದ ಪ್ಲಾಸ್ಟಿಕ್ ಬಳಸಿ ತಯಾರಿಸಿರುತ್ತಾರೆ. ಇಂತಹ ಕನ್ನಡಕಗಳನ್ನು ಬಳಸುವುದರಿಂದ ನಿಮ್ಮ ಕಣ್ಣುಗಳಿಗೆ ತೊಂದರೆ ಉಂಟಾಗುತ್ತದೆ.

LEAVE A REPLY

Please enter your comment!
Please enter your name here