ವಿಜ್ಞಾನಿ ಆಗಬೇಕಾದವರು ಸನ್ಯಾಸಿ ಆದ ಕಥೆ ಇದು

0
1236

ಆದಿ ಚುಂಚನಗಿರಿ ಮಠದ 72ನೇ ಪೀಠಾಧಿಕಾರಿಯಾದ ನಿರ್ಮಲಾನಂದನಾಥ ಸ್ವಾಮೀಜಿ ಪೂರ್ವಾಶ್ರಮದ ವೃತ್ತಾಂತ ಇದು. ನಿರ್ಮಲಾನಂದನಾಥ ಸ್ವಾಮೀಜಿ ಇವರ ಮೊದಲ ಹೆಸರು ನಾಗರಾಜ್ ಪೂರ್ವಾಶ್ರಮದ ಊರು ಗುಬ್ಬಿ ತಾಲ್ಲೂಕು ಮಾವಿನಹಳ್ಳಿ ಸಮೀಪದ ಚೀರನಹಳ್ಳಿಯಲ್ಲಿ 20 ಜುಲೈ 1969ರಲ್ಲಿ ಜನಿಸಿದರು. ಇವರ ತಂದೆ ನರಸೇಗೌಡ, ತಾಯಿ ನಂಜಮ್ಮ ಇವರ ಆರು ಮಕ್ಕಳಲ್ಲಿ ನಿರ್ಮಲಾನಾಂದ ಸ್ವಾಮೀಜಿ ನಾಲ್ಕನೇಯವರು. ಇವರು ಬಡತನದ ಮನೆಯಲ್ಲಿ ಜನಿಸಿದವರು ಕೂಲಿ ಮಾಡುತ್ತಲೇ ಪ್ರಾಥಮಿಕ ಶಿಕ್ಷಣ ಮಾವಿನಹಳ್ಳಿ ಸರ್ಕಾರಿ ಶಾಲೆಯಲ್ಲಿ, ಪ್ರೌಡ ಶಿಕ್ಷಣವನ್ನು ಮಾವಿನಹಳ್ಳಿ ಪ್ರಗತಿಪರ ವಿದ್ಯಾವರ್ಧಕ ಶಾಲೆಯಲ್ಲಿ ಪೂರ್ಣಗೊಳಿಸಿದರು.

ಬಡತನದ ಕಾರಣ ಡಿಪ್ಲೊಮಾ ಪಾಲಿಟೆಕ್ನಿಕ್ ಅಧ್ಯಯನವನ್ನು ಒಂದು ವರ್ಷ ನಿಲ್ಲಿಸಿದರು ಆಗ ಅವರ ತಾತ, ಗುಬ್ಬಿ ಮಾಜಿ ಶಾಸಕ ಎನ್.ವೀರಣ್ಣಗೌಡರ ಬಳಿ ಕರೆದುಕೊಂಡು ಬಂದರು. ಅವರ ನೆರವಿನಿಂದ ಶಿಕ್ಷಣ ಮುಂದುವರಿಸಿದರು. ತುಮಕೂರಿನಲ್ಲಿ ಡಿಪ್ಲೊಮಾ ಮುಗಿಸಿ ಬೆಂಗಳೂರಿನಲ್ಲಿ ಎಂಜಿನಿಯರಿಂಗ್ ಪದವಿಗೆ ಸೇರಿದರು ನಂತರ ಹಾಸ್ಟೆಲ್‌ಗೆ ಪ್ರವೇಶ ಗಿಟ್ಟಿಸಿಕೊಂಡರು. ಎಂಜಿನಿಯರಿಂಗ್ ಬಳಿಕ ಐಐಟಿಯಲ್ಲಿ ಎಂ.ಟೆಕ್ ಪದವಿ ಪಡೆದು ಅಮೆರಿಕದಲ್ಲಿ ಕೈತುಂಬ ಸಂಬಳದ ಉದ್ಯೋಗದ ನಿರೀಕ್ಷೆಯಲ್ಲಿದ್ದರು. ಅಮೆರಿಕಕ್ಕೆ ಹೋಗುವ ಮುನ್ನ ಹಳೆ ಸ್ನೇಹಿತರನ್ನು ಮಾತನಾಡಿಸಿಕೊಂಡು ಬರಲು ವಿಜಯನಗರದ ಮಠದ ಹಾಸ್ಟೆಲ್‌ಗೆ ಬಂದಿದ್ದರು.

ಅಲ್ಲಿಯವರೆಗೂ ಬಾಲಗಂಗಾಧರನಾಥ ಸ್ವಾಮೀಜಿ ಜತೆ ಸಣ್ಣ ಸಂಪರ್ಕ ಕೂಡ ಇರಲಿಲ್ಲ. ಮಠದ ಹಾಸ್ಟೆಲ್ ರಸ್ತೆಯಲ್ಲಿ ಹೋಗುತ್ತಿದ್ದ ಹುಡುಗನ್ನು ಕಂಡ ಬಾಲಗಂಗಾಧರನಾಥ ಸ್ವಾಮೀಜಿ, ಆ ಹುಡುಗನನ್ನು ಚುಂಚನಗಿರಿಗೆ ಕರೆ ತರುವಂತೆ ಆದೇಶಿಸಿದ್ದರು. ಆದರೆ ಇವರು ತುಮಕೂರಿನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಡಿಪ್ಲೊಮಾ ಪದವಿ ಪಡೆದು, ಏಳನೇ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಕ್ಕಾಗಿ ಜಿಂದಾಲ್ ಸಂಸ್ಥೆ ನೀಡುವ ಸ್ಕಾಲರ್ ಶಿಪ್ ಪಡೆದುಕೊಂಡಿದ್ದರು.ಮುಂದೆ ಮೈಸೂರಿನ ಹಿಂದುಳಿದ ವರ್ಗದ ವಸತಿ ನಿಲಯದಲ್ಲಿದ್ದುಕೊಂಡು ಎಂಜಿನಿಯರಿಂಗ್ ಅಭ್ಯಾಸ ಮಾಡಿದರು. ಪುಣೆಯ ಭಾರತ ಸರ್ಕಾರದ ಸಂಶೋಧನಾ ಕೇಂದ್ರಕ್ಕೆ ವಿಜ್ಞಾನಿಯಾಗಿ ಆಯ್ಕೆಯಾಗಿದ್ದರು. ಜೊತೆಗೆ ಶ್ರೀಮಠದ ಸಂಸ್ಕೃತ ವೇದಾಗಮ ಮಹಾವಿದ್ಯಾಲಯದಲ್ಲಿ ಅದ್ವೈತ ವೇದಾಂತ ವಿದ್ವುದುತ್ತಮ ಮತ್ತು ಶೈವಾಗಮದಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡರು

ಸ್ವಾಮೀಜಿ ಬಳಿಗೆ ಇವರನ್ನು ಕರೆದುಕೊಂಡು ಹೋಗಲು ತುಂಬಾ ಹರ ಸಾಹಸ ಮಾಡಿದರು ಆದರೆ ನಾಗರಾಜ್ ಅವರೇ ಸ್ವಾಮೀಜಿ ಬಳಿ ಹೋಗಿ ನಿಂತರು.ಚುಂಚನಗಿರಿ ಮಠದಲ್ಲಿ ಸ್ವಾಮೀಜಿ ಎದುರು ನಾಗರಾಜ್ ಅವರನ್ನು ತಂದು ನಿಲ್ಲಿಸಿದಾಗ ನಾಳೆ ಗುರು ಪೂರ್ಣಿಮೆ, ನಿನಗೆ ದೀಕ್ಷೆ ಕೊಡುತ್ತೇನೆ ಎಂದು ಬಾಲಗಂಗಾಧರನಾಥ ಸ್ವಾಮೀಜಿ ಹೇಳಿದರು. ಸುಮ್ಮನೆ ತಲೆ ಅಲ್ಲಾಡಿಸಿದ ಅವರಿಗೆ ಮರುದಿನ ಇನ್ನಿತರರೊಂದಿಗೆ ದೀಕ್ಷೆ ನೀಡಿದ್ದು ಈಗಲೂ ಕಣ್ಣ ಮುಂದೆ ಕಟ್ಟಿದಂತಿದೆ’ ಎನ್ನುತ್ತಾರೆ ಸಿದ್ದಲಿಂಗೇಗೌಡ. ಆಗ ನಾಗರಾಜ್ ಎಂಬ ಅವರ ಹೆಸರು ನಿರ್ಮಲಾನಂದನಾಥ ಸ್ವಾಮೀಜಿ ಆಯಿತು ಮೊದಲಿಗೆ ಬಿಳಿ ಬಟ್ಟೆ ತೊಟ್ಟು ಸನ್ಯಾಸ ದೀಕ್ಷೆ ಸ್ವೀಕರಿಸಿದ ನಂತರ ಹೆಸರನ್ನು ನಿರ್ಮಲಾನಂದನಾಥ ಸ್ವಾಮೀಜಿ ಎಂದು ನಾಮಕರಣ ಮಾಡಲಾಯಿತು.

ಪೂರ್ವಾಶ್ರಮ ತೊರೆದು ಮಠದ ದೀಕ್ಷೆ ತೊಟ್ಟ ನಿರ್ಮಲಾನಂದನಾಥ ಸ್ವಾಮೀಜಿ ಅವರನ್ನು ಮೊದಲಿಗೆ ರಾಮನಗರ ಬಳಿಯ ಬಾನಂದೂರು ಮಠಕ್ಕೆ ಕಳುಹಿಸಿಕೊಡಲಾಯಿತು. ಕೆಲ ವರ್ಷಗಳ ಸೇವೆ ಬಳಿಕ ನಿರ್ಮಲಾನಂದನಾಥರಿಗೆ ಕಾವಿ ಬಟ್ಟೆ ನೀಡಿ ಚಿಕ್ಕಬಳ್ಳಾಪುರ ಶಾಖಾ ಮಠಕ್ಕೆ ಬಾಲಗಂಗಾಧರನಾಥ ಸ್ವಾಮೀಜಿ ನೇಮಿಸಿದರು. ಚಿಕ್ಕಬಳ್ಳಾಪುರದ ಮಠವನ್ನು ಸಾಕಷ್ಟು ಅಭಿವೃದ್ಧಿಗೊಳಿಸಿದ ಜೊತೆ ಜೊತೆಯಲ್ಲೇ ಬಾಲಗಂಗಾಧರನಾಥ ಸ್ವಾಮೀಜಿಗೆ ಅವರು ಅಚ್ಚುಮೆಚ್ಚಿನ ಶಿಷ್ಯರಾದರು. ಅದೀಗ ಅವರನ್ನು ಅತಿ ದೊಡ್ಡ ಮಠದ ಪೀಠಾಧಿಪತಿಯಾಗಿ ಮಾಡಿದೆ.

ಅತ್ಯಂತ ಸರಳ ಮೃದು ಮಾತಿನಿಂದಾಗಿ ನಿರ್ಮಲಾನಂದನಾಥ ಸ್ವಾಮೀಜಿ ಭಕ್ತರ ಮೆಚ್ಚುಗೆ ಗಳಿಸಿರುವುದು ಕೂಡ ನಿಜ. ಮೃದು ಸ್ವಭಾವಿ ಮೆದು ಮಾತಿನವರಾಗಿದ್ದು ಅಧ್ಯಾತ್ಮದ ಚಿಂತನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡೇ ಮಠದ ಅಭಿವೃದ್ಧಿ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಧರ್ಮ ಮತ್ತು ವಿಜ್ಞಾನದ ನಡುವೆ ಅಂತರ ಇರಬಾರದು ಎಂಬುದು ಶ್ರೀಗಳ ನಿಲುವಾಗಿದೆ. ಹಾಗಾಗಿ ಭಕ್ತಾದಿಗಳಿಗೆಂದು ಮಠದ ಆವರಣದಲ್ಲಿ ಉಚಿತ ವೈ ಫೈ ಸೇವೆ ಒದಗಿಸುವ ಮೂಲಕ ಧರ್ಮ ಮತ್ತು ವಿಜ್ಞಾನದ ಸಂಯೋಜನೆ ಮಾಡುವುದರ ಮೂಲಕ ಉಚಿತ ಅಂತರ್ಜಾಲ ವ್ಯವಸ್ಥೆ ಮಾಡಿರುವ ಭಾರತದ ಮೊದಲ ಮಠ ಎಂಬ ಖ್ಯಾತಿಗೆ ಆದಿಚುಂಚನಗಿರಿ ಶ್ರೀಕ್ಷೇತ್ರ ಪಾತ್ರವಾಗಲು ಕಾರಣರಾಗಿದ್ದಾರೆ.

LEAVE A REPLY

Please enter your comment!
Please enter your name here