ಶಕ್ತಿಶಾಲಿ ಆಂಜನೇಯ ಸ್ವಾಮಿಗೆ ನಮಿಸುತ್ತಾ ನಿಮ್ಮ ರಾಶಿ ಭವಿಷ್ಯ ತಿಳಿಯಿರಿ

0
397

ಪಂಡಿತ್ ಕೃಷ್ಣ ಭಟ್ ದೈವತಜ್ಞ ಜ್ಯೋತಿಷ್ಯರು ಆದ್ಯಾತ್ಮಿಕ ಚಿಂತಕರು ನಿಮ್ಮ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗು ನಿಮ್ಮ ಮನಸಿನಲ್ಲಿ ಅಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದ್ದಲ್ಲಿ ಅದರ ಉತ್ತರ ತಿಳಿಯಲು ಪ್ರಯತ್ನ ಪಡೆಯುತ್ತೀರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗು ಆತಂಕಗಳನ್ನೂ ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರ ಸಿಗಬಹುದು ನಿಮ್ಮ ಎಲ್ಲ ರೀತಿಯ ಸಮಸ್ಯೆಗಳಿಗೆ ಕೇವಲ ಒಂಬತ್ತು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು. 95 35156490

ಮೇಷ: ಈ ದಿನ ನೀವು ಸುಮ್ಮನೆ ಇದ್ದರು ಮನೆ ಜನರ ಮೇಲೆ ಹೆಚ್ಚಿನ ಕೋಪವನ್ನು ತೂರಿಸುತ್ತೀರಿ. ನೀವು ಮಾಡುವ ತಪ್ಪಿನಿಂದ ನಿಮ್ಮ ಕುಟುಂಬ ಸದಸ್ಯರುಗಳು ನಿಮ್ಮ ಮೇಲೆ ಅತೃಪ್ತಿ ತೋರಿಸುವರು. ಆದಷ್ಟು ನೀವು ಈ ದಿನ ಒಂದಿಷ್ಟು ಶಾಂತ ಚಿತ್ತರಗಿ ಇರುವುದು ನಿಮಗೆ ಒಳ್ಳೆಯದು. ಹನುಮಂತನ ಹೆಚ್ಚು ಧಾನ್ಯಮಾಡಿರಿ. ನಿಮಗೆ ಶುಭ ಆಗುತ್ತದೆ.
ವೃಷಭ: ಜೀವನದಲ್ಲಿ ಅದರಲ್ಲೂ ಈ ದಿನ ನಿಮ್ಮ ಒಂದಿಷ್ಟು ಚಿಂತನೆ ಮತ್ತು ಜೀವನದ ಕ್ರಮಗಳನ್ನು ಬದಲು ಮಾಡಿಕೊಳ್ಳುವುದು ಸೂಕ್ತವಾಗಿದೆ. ನಿಮ್ಮ ಜೀವನದ ಮುಂದಿನ ಪ್ರಗತಿಗಾಗಿ ಸಾಕಷ್ಟು ಹರ ಸಾಹಸ ಪಡಬೇಕಿದೆ. ಆದರೆ ಕಷ್ಟದ ಪಡದೆ ಯಾವುದೇ ಕೆಲಸಗಳು ಮುಂದೆ ಸಾಗುವುದಿಲ್ಲ. ಶನಿಯನ್ನು ಸಂತೈಸಿರಿ ನಿಮಗೆ ಶುಭ ಫಲವೇ ದೊರೆಯುತ್ತದೆ.

ಮಿಥುನ: ಈ ದಿನ ನೀವು ಬಾಂದವ್ಯಗಳಿಗೆ ಹೆಚ್ಚಿನ ಬೆಲೆ ಕೊಡುವುದು ಸೂಕ್ತ. ನಿಮ್ಮ ತಂಗಿ ಅಥವಾ ತಮ್ಮನ ಸಲುವಾಗಿ ಆರೋಗ್ಯದ ನಿಮಿತ್ತ ಆಸ್ಪತ್ರೆಗೆ ಹೆಚ್ಚಿನ ಹಣವನ್ನು ಖರ್ಚು ಮಾಡುತ್ತೀರಿ. ನಿಮ್ಮ ಹಲವು ದಿನಗಳ ಒಂದಿಷ್ಟು ಬೇಡಿಕೆ ಈ ದಿನ ನಿಮ್ಮ ಸ್ನೇಹಿತರಿಂದ ಪರಿಪೂರ್ಣಗೊಳ್ಳುತ್ತದೆ. ನಿಮ್ಮನು ಸಹಾಯ ಮಾಡುವ ಜನರನ್ನು ನೀವು ಇಂದಿಗೂ ಸಹ ಮರೆಯಬೇಡಿರಿ.
ಕಟಕ: ಈ ದಿನ ನೀವು ಆದ್ಯಾತ್ಮಿಕ ಚಿಂತನೆಯಲ್ಲಿ ಹೆಚ್ಚು ಸಮಯ ಕಳೆಯುವುದರಿಂದ ನಿಮಗೆ ಸಾಕಷ್ಟು ಲಾಭಗಳು ದೊರೆಯುತ್ತದೆ. ಆರೋಗ್ಯ ಕಾಳಜಿ ಇರಲಿ ಇಲ್ಲವಾದಲ್ಲಿ ನೀವು ಹೆಚ್ಚಿನ ಖರ್ಚು ಆಸ್ಪತ್ರೆಗೆ ನೀಡಬೇಕಾಗುವ ಪರಿಸ್ಥಿತಿ ಬರುತ್ತದೆ. ಆಕರ್ಷಣ ಶಕ್ತಿ ಎಲ್ಲರಲ್ಲಿಯೂ ಇರುತ್ತದೆ.

ಸಿಂಹ: ಈ ದಿನ ಹೊಸ ವಿಚಾರಗಳು ನಿಮ್ಮ ದಾರಿಗೆ ಅಡ್ಡಿ ಉಂಟು ಮಾಡುತ್ತದೆ. ಕೆಲವೊಂದು ವಿಷ್ಯದಲ್ಲಿ ನೀವು ಈ ಹಿಂದಿನ ದಿನಕ್ಕಿಂತ ಹೆಚ್ಚು ಜಾಗ್ರತೆ ಇರುವುದು ಸೂಕ್ತವಾಗಿದೆ. ಆರೋಗ್ಯದಲ್ಲಿ ಸುಧಾರಣೆ ಬರಲಿದ್ದು ಸ್ನೇಹಿತರೊಂದಿಗೆ ಪ್ರವಾಸ ಕೈಗೊಳ್ಳುವ ಸಾಧ್ಯತೆ ಇರುತ್ತದೆ. ಶನಿ ದೇವರ ದರ್ಶನ ಪಡೆಯಿರೀ.
ಕನ್ಯಾ: ನಿಮ್ಮ ನಿರೀಕ್ಷೆಗೆ ಮೀರಿ ಹೆಚ್ಚಿನ ಕಾರ್ಯಗಳು ನಡೆಯುತ್ತದೆ. ಈ ದಿನ ತಪ್ಪದೆ ಹಸುವಿಗೆ ತೊಗರಿ ಮತ್ತು ಬೆಲ್ಲವನ್ನು ತಿನ್ನಿಸಿರಿ. ನಿಮ್ಮ ಆರ್ಥಿಕ ಸಮಸ್ಯೆಗಳು ಸರಿ ಹೋಗಲು ಹನುಮಂತ ದೇವರ ಪ್ರಾರ್ಥನೆ ಮಾಡಿರಿ. ನೀವು ಧೈರ್ಯಶಾಲಿ ಆಗಿದ್ದರು ಕೆಲವೊಂದು ವಿಚಾರದಲ್ಲಿ ನಿಮಗೆ ಅನಾನುಕೂಲ ಆಗಲಿದೆ. ಶನಿಯ ಪ್ರಭಾವ ನಿಮ್ಮ ಮೇಲೆ ಬೀರಲು ತಪ್ಪದೆ ಎಳ್ಳೆಣ್ಣೆ ದೀಪ ಹಚ್ಚಿರಿ.

ತುಲಾ: ವ್ಯವಹಾರದಲ್ಲಿ ನಿಮಗೆ ಹೊಸ ರೀತಿಯ ಜನರು ಭೇಟಿ ಆಗುತ್ತಾರೆ ಇದರಿಂದ ನಿಮಗೆ ಹೆಚ್ಚಿನ ರೀತಿಯ ಅವಕಾಶಯಗಳು ದೊರೆಯುತ್ತದೆ. ನಿಮಗೆ ಸಾಲ ತೀರುವಳಿ ಮಾಡಿಕೊಳ್ಳಲು ಒಳ್ಳೆಯ ಸಮಯ ಬಂದಿದೆ ಅನವಶ್ಯಕ ಖರ್ಚುಗಳಿಗೆ ಕಡಿವಾಣ ಹಾಕಿ. ಆದರೆ ಆಪ್ತ ಸ್ನೇಹಿತರಿಂದ ಈ ದಿನ ಏನು ಸಹ ನಿರೀಕ್ಷೆ ಮಾಡಲು ಹೋಗಬೇಡಿ. ಆಂಜನೇಯ ಸ್ವಾಮಿಯ ಕೃಪೆ ಸಿಗಲು ಕರ್ಪೂರ ದೀಪ ಹಚ್ಚಿರಿ.
ವೃಶ್ಚಿಕ: ನಿಮ್ಮ ಕೆಲಸ ಕಾರ್ಯಗಳಿಗೆ ಈ ದಿನ ಮನೆ ಅಥವಾ ಆಫೀಸಿನಲ್ಲಿ ಹಲವು ಜನ ಬೇಸರ ವ್ಯಕ್ತ ಪಡಿಸುವ ಸಾಧ್ಯತೆ ಇರುತ್ತದೆ. ನಿಮಗೆ ವಿವಿಧ ಮೂಲಗಳಿಂದ ಬರಬೇಕಾದ ಹಣ ಕೈ ತಪ್ಪುತ್ತದೆ. ಆದರೆ ಆರೋಗ್ಯದ ಕಡೆಗೂ ಹೆಚ್ಚಿನ ಮಹತ್ವ ನೀಡುವುದು ಸೂಕ್ತ. ಕಪ್ಪು ನಾಯಿಗೆ ರೊಟ್ಟಿಯನ್ನು ಹಾಕುವುದರಿಂದ ಸಕಷ್ಟು ಸಮಸ್ಯೆಗಳಿಂದ ಹೊರ ಬರುತ್ತೀರಿ.

ಧನಸ್ಸು: ನಿಮ್ಮ ಹಠಮಾರಿ ಧೋರಣೆ ಹಲವು ಸಂಕಷ್ಟಕ್ಕೆ ಗುರಿ ಮಾಡಿಸುತ್ತದೆ. ಈಗಾಗಲೇ ನೀವು ಸಾಕಷ್ಟು ವಿಷ್ಯದಲ್ಲಿ ಸೋತಿರಬಹುದು ಅದನ್ನ ಮನಸಿಗೆ ತೆಗೆದುಕೊಂಡು ಛಲವಾಗಿ ಮುಂದೆ ನಿಮ್ಮ ಬಳಿ ಇರುವ ಅವಕಾಶಗಳನ್ನು ಉಪಯೋಗ ಮಾಡಿಕೊಳ್ಳಿರಿ. ಮನೆಯಲ್ಲಿ ಮಕ್ಕಳು ಇದ್ದಲ್ಲಿ ಅವರಿಂದ ಮನಸಿಗೆ ಹೆಚ್ಚಿನ ತೃಪ್ತಿ ಸಿಗುವುದು. ಶನಿಯು ನಿಮ್ಮ ಮೇಲೆ ಕೃಪೆ ತೂರಲಿದ್ದು ಎಲ್ಲವು ಒಳ್ಳೆಯದೇ ಆಗಲಿದೆ.
ಮಕರ: ಸತ್ಯದ ಮಾರ್ಗದಲ್ಲಿ ನಡೆದುಕೊಂಡರೆ ಮಾತ್ರ ನಿಮಗೆ ಒಳ್ಳೆಯದು ಆಗುತ್ತದೆ ಇಲ್ಲವಾದಲ್ಲಿ ಸಂಕಷ್ಟಗಳಿಗೆ ಸಿಲುಕುತ್ತೀರಿ. ಮನೆಯಲ್ಲಿರುವ ಸಣ್ಣ ಮಕ್ಕಳಿಗೆ ಆರೋಗ್ಯ ಸಮಸ್ಯೆ ಕಾಡಲಿದ್ದು ಅದು ನಿಮ್ಮನು ಹೆಚ್ಚಿನ ರೀತಿಯಲ್ಲಿ ಬಾದೆಗೆ ತಳ್ಳುತ್ತದೆ. ಆದಷ್ಟು ಧಾರ್ಮಿಕ ಕಾರ್ಯಕ್ರಮದಲ್ಲಿ ಹೆಚ್ಚಿನ ಸಮಯ ಕಳೆಯಿರಿ ಮಾನಸಿಕ ನೆಮ್ಮದಿ ಸಿಗುತ್ತದೆ. ಈ ದಿನ ನೀವು ಶನಿ ದೇವರ ದರ್ಶನ ಪಡೆಯುವುದು ಮರೆಯಬೇಡಿರಿ.

ಕುಂಭ: ಸತ್ಯದ ಮಾರ್ಗದಲಿ ನಡೆದರೆ ಮಾತ್ರ ನಿಮಗೆ ಯಶಸ್ಸು ಹುಡುಕಿಕೊಂಡು ಬರಲಿದೆ. ಹಸುವಿಗೆ ಕಡಲೇ ಮತ್ತು ಬೆಲ್ಲ ತಿನ್ನಿಸುವುದರಿಂದ ಈ ಹಿಂದೆ ಮಾಡಿದ ಒಂದಿಷ್ಟು ಪಾಪಗಳು ಕಳೆಯುತ್ತದೆ. ಸಮಾಜ ಸೇವೆಯಲ್ಲಿ ಹೆಚ್ಚಿನ ಸಮಯ ಕೆಳೆಯುವ ಅವಕಾಶ ನಿಮಗೆ ಸಿಗುತ್ತದೆ. ತಪ್ಪದೇ ಶನಿ ದೇವರ ದರ್ಶನ ಪಡೆಯಿರಿ.
ಮೀನ: ಈ ದಿನ ನಿಮ್ಮ ಸ್ನೇಹಿತರೊಂದಿಗೆ ಹೆಚ್ಚಿನ ಸಮಯ ಕಳೆಯುತ್ತೀರಿ. ನಿಮ್ಮ ಕುಟುಂಬದ ಜವಾಬ್ದಾರಿ ನಿಮ್ಮ ಮೇಲೆ ಇದ್ದು ಅದನ್ನು ಅರ್ಥಪೂರ್ಣವಾಗಿ ನಡೆಸಿಕೊಂಡು ಹೋಗುವುದು ನಿಮ್ಮ ಧರ್ಮ ಆಗಿದೆ. ಈ ದಿನ ನಿಮ್ಮ ತಂದೆಯು ನಿಮಗೆ ಹೆಚ್ಚಿನ ಸಲಹೆಗಳು ನೀಡಲಿದ್ದು ಅವುಗಳನ್ನು ಪಾಲಿಸಿವುದು ಸೂಕ್ತ.

LEAVE A REPLY

Please enter your comment!
Please enter your name here