ಆಂಜನೇಯ ಸ್ವಾಮಿ ತುಂಬಾ ಶಕ್ತಿ ಶಾಲಿ ಹೊಂದಿರುವ ಜೊತೆಗೆ ಅವನ ಭಕ್ತರ ಕಷ್ಟಗಳನ್ನು ಪರಿಹರಿಸುವ ದೇವ ಅದರಲ್ಲೂ ಗಾಳಿ ಆಂಜನೇಯ ಸ್ವಾಮಿ ದುಷ್ಟ ಶಕ್ತಿಯ ಸಂಹಾರಕ ಯಾವುದೇ ರೀತಿಯ ದುಷ್ಟ ಶಕ್ತಿಗಳ ಸಮಸ್ಯೆ ಇದ್ದವರು ಈ ದೇವಸ್ಥಾನಕ್ಕೆ ಹೋದರೆ ಎಲ್ಲ ಸಮಸ್ಯೆಗಳು ಕೂಡ ಮಾಯವಾಗುತ್ತವೆ. ಈ ದೇವಸ್ಥಾನದ ಬಗ್ಗೆ ನಿಮಗೆ ಗೊತ್ತಿರದ ವಿಷಯಗಳನ್ನು ತಿಳಿದುಕೊಳ್ಳೋಣ ಬನ್ನಿ. ನೂರಾರು ವರ್ಷಗಳ ಇತಿಹಾಸ ಹೊಂದಿರುವ ಶ್ರೀ ಗಾಳಿ ಆಂಜನೇಯ ಸ್ವಾಮಿ ದೇವಾಲಯಕ್ಕೆ ಸಹಸ್ರಾರು ಭಕ್ತರನ್ನು ಹೋಗುತ್ತಾರೆ. ಈ ದೇವಾಲಯವನ್ನು ಪ್ರವೇಶಿಸುತ್ತಲೇ ಎಡ ಭಾಗಕ್ಕೆ ಪೂರ್ವಾಭಿಮುಖವಾಗಿ ಸೀತಾ, ರಾಮ,ಲಕ್ಷ್ಮಣ ಸಮೇತ ಶ್ರೀ ರಾಮಚಂದ್ರ ಸ್ವಾಮಿ, ಬಲಬಾಗಕ್ಕೆ ಸತ್ಯನಾರಾಯಣ ಸ್ವಾಮಿ ಇದೆ.ಈ ಎರಡೂ ಗುಡಿಗಳ ಮಧ್ಯಭಾಗದಲ್ಲಿ ಪಶ್ಚಿಮಾಭಿಮುಖವಾಗಿ ಆಂಜನೇಯ ಸ್ವಾಮಿ ಇದೆ.
ಈ ದೇಗುಲವು ಸುಮಾರು 700 ವರ್ಷಗಳ ಪ್ರಾಚೀನ ದೇವಾಲಯವಾಗಿದೆ. ಈ ಸ್ವಾಮಿಯ ಮೂರ್ತಿ ಬಯಲಲ್ಲಿ ಇದ್ದ ಕಾರಣ ಗಾಳಿ ಆಂಜನೇಯ ಎಂಬ ಹೆಸರು ಬಂದಿದೆ. ಗಾಳಿ ಎಂದರೆ ದುಷ್ಟ ಶಕ್ತಿ ಎಂದರ್ಥ. ದುಷ್ಟ ಶಕ್ತಿಗಳ ಅಧಿಪತಿಯಾದ ರಾವಣನ ಪುತ್ರ ಅಕ್ಷಾಸುರನನ್ನು ಮೆಟ್ಟಿ ನಿಂತಿದ್ದರಿಂದ ಈ ಹೆಸರು ಬಂದಿದೆ. ವೃಷಭಾವತಿ ಉಪ ನದಿಯ ಸಂಗಮ ಸ್ಥಳದಲ್ಲಿ ಪಶ್ಚಿಮಾಭಿಮುಖವಾಗಿ ಮೂರ್ತಿ ಸ್ಥಾಪಿಸಲಾಗಿದೆ . ದುಷ್ಟಶಕ್ತಿಗಳಿಂದ ರಕ್ಷಿಸಲು ವೇದವ್ಯಾಸರು ದೇವರ ಮೂರ್ತಿಯನ್ನು ಸ್ಥಾಪಿಸಿದರು ಎಂಬ ಪ್ರತೀತಿ ಇದೆ. ದುಷ್ಟಶಕ್ತಿಯಿಂದ ಆತಂಕ ಹೊಂದಿರುವವರು ಈ ದೇಗುಲಕ್ಕೆ ಬಂದು ಸ್ವಾಮಿಯ ಸೇವೆ ಮಾಡಿ ಯಂತ್ರ ಕಟ್ಟಿಕೊಂಡರೆ ಎಲ್ಲ ಸಮಸ್ಯೆ ಪರಿಹಾರ ಆಗುತ್ತವೆ.

ಅಕ್ಷಾಸುರನ ಚಿತಾವಣೆಯಿಂದ ಭೂಲೋಕದಲ್ಲಿ ದೆವ್ವ, ಭೂತ ಚೇಷ್ಟೆಗಳು ಮಿತಿ ಮೀರಿದ್ದವಂತೆ. ಆಗ ಶ್ರೀ ರಾಮಚಂದ್ರನ ಅಣತಿಯಂತೆ ಹನುಮಂತ, ಅಕ್ಷಾಸುರನನ್ನು ಸೆದೆಬಡಿದು ಕಾಲಿನಡಿ ಮೆಟ್ಟಿ ನಿಂತ ಎಂದು ರಾಮಾಯಣ ದಲ್ಲಿ ಉಲ್ಲೇಖಿಸಲಾಗಿದೆ. ಉದ್ದಿನ ವಡೆ ಹಾಗೂ ತುಳಸಿಹಾರ ದೇವರಿಗೆ ಬಲು ಶ್ರೇಷ್ಠ. ದುಷ್ಟ ಶಕ್ತಿಗಳ ಪರಿಹಾರಕ್ಕೆ ಯಂತ್ರವನ್ನು ಕಟ್ಟುತ್ತರೆ ಜೊತೆಗೆ ಚಿಕ್ಕ ಮಕ್ಕಳ ಭಯವನ್ನು ಹೋಗಿಸುತ್ತಾರೆ. ಆಂಜನೇಯನ ಬಹುತೇಕ ವಿಗ್ರಹಗಳ ಕ್ಯೆಯಲ್ಲಿ ಗದೆ ಇರುತ್ತದೆ ಆದರೆ ಇಲ್ಲಿ ಪದ್ಮಕಮಲವಿರುವುದು ಮತ್ತೊಂದು ವಿಶೇಷವಾಗಿದೆ. 135 ವರ್ಷಗಳಿಂದ ಶ್ರೀ ರಾಮನವಮಿ ಸಂದರ್ಭದಲ್ಲಿ ಒಂಭತ್ತು ದಿನಗಳ ಕಾಲ ಶ್ರೀ ಪಾಂಚರಾತ್ರಗಮ ಬ್ರಹ್ಮ ರಥೋತ್ಸವ ವಿಜೃಂಭಣೆಯಿಂದ ನೆಡೆಯುತ್ತದೆ.
ಹನುಮ ಜಯಂತಿ ಹಾಗೂ ಭೀಮನ ಅಮಾವಾಸ್ಯೆ ಯಂದು ವಿಶೇಷ ಪೂಜೆ ನಡೆಯುತ್ತದೆ. ಪ್ರತಿ ಪೌರ್ಣಮಿಯಂದು ಶ್ರೀ ಸತ್ಯನಾರಾಯಣ ವಿಶೇಷ ಪೂಜೆ ನಡೆಯುತ್ತದೆ. ವರ್ಷಕ್ಕೊಮ್ಮೆ ಚೈತ್ರ ಶುದ್ದ ನವಮಿಯಲ್ಲಿ ಜಾತ್ರೆ ನಡೆಯುತ್ತದೆ. ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಒಂದು ತಿಂಗಳು ವಿಶೇಷ ಪೂಜೆ ನೆಡೆಯುತ್ತದೆ ಈ ವೇಳೆ ಭಕ್ತರು ಮಾಲೆ ಧರಿಸಿ ಭಜನೆ ಮಾಡುತ್ತಾರೆ. ಆಂಜನೇಯನ ಬಹುತೇಕ ದೇಗುಲದಲ್ಲಿ ಮೂರ್ತಿಯ ಮುಖಕ್ಕೆ ಮಾತ್ರ ಸಿಂಧೂರ(ಭಂಡಾರ) ಲೇಪಿಸಲಾಗಿರುತ್ತದೆ. ಆದರೆ ಇಲ್ಲಿ ಪ್ರತಿ ಗುರುವಾರ ಸ್ವಾಮಿಯ ಇಡೀ ಮೈಗೆ ಸಿಂಧೂರ ಲೇಪಿಸಿ ಪೂಜೆ ಮಾಡಲಾಗುತ್ತದೆ. ಶ್ರೀ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನ ಇರುವುದು ಬೆಂಗಳೂರಿನ ಮೈಸೂರು ರಸ್ತೆಯ ಬ್ಯಾಟರಾಯನಪುರದಲ್ಲಿ. ಬೆಂಗಳೂರಿನ ಸ್ಯಾಟ್ಲೆಟ್ ಬಸ್ ನಿಲ್ದಾಣದಿಂದ ಮೈಸೂರು ಕಡೆ ಬರುವಾಗ ಈ ದೇಗುಲ ಸಿಗುತ್ತದೆ.ಶ್ರೀ ಗಾಳಿ ಆಂಜನೇಯ ಸ್ವಾಮಿ ದೇವಾಲಯವು ಪ್ರತಿ ದಿನ ಬೆಳ್ಳಗೆ 7 ರಿಂದ ಮಧ್ಯಾಹ್ನ 2 ಹಾಗೂ ಸಂಜೆ 4 ರಿಂದ ರಾತ್ರಿ 9 ರವರೆಗೂ ಪೂಜೆ ಸಲ್ಲಿಸುತ್ತಾರೆ.