ಬಟಾಣಿ ಫ್ಯಾಬೇಸೀ ಕುಟುಂಬಕ್ಕೆ ಪ್ಯಾಪಿಲಿಯೊನೇಸೀ ಉಪಕುಟುಂಬಕ್ಕೆ ಸೇರಿದೆ. ಬಟಾಣಿ ಬೀಜಕೋಶಗಳು ಸಸ್ಯಶಾಸ್ತ್ರೀಯವಾಗಿ ಹಣ್ಣು ಏಕೆಂದರೆ ಅವು ಬೀಜಗಳನ್ನು ಹೊಂದಿರುತ್ತವೆ ಮತ್ತು ಒಂದು ಹೂವಿನ ಅಂಡಾಶಯದಿಂದ ಅಭಿವೃದ್ಧಿ ಹೊಂದುತ್ತವೆ. ಸಾಕಷ್ಟು ಜನ ಹಸಿ ಬಟಾಣಿ ಹಾಗೆಯೇ ತಿನ್ನುತ್ತಾರೆ ಆದರೆ ಕೆಲವೊಂದು ಕಾಳುಗಳನ್ನೂ ಬೇಯಿಸದೆ ತಿಂದರೆ ಅದು ಆರೋಗ್ಯ ಸಮಸ್ಯೆ ಉಂಟು ಮಾಡುತ್ತದೆ ಅಂತಹ ಕಾಳುಗಳಲ್ಲಿ ಬಟಾಣಿ ಸಹ ಒಂದು. ನೀವು ಎಂದಿಗೂ ಸಹ ಹಸಿ ಬಟಾಣಿ ಸೇವನೆ ಮಾಡುವುದು ಯೋಗ್ಯವೇ ಅಲ್ಲ ಅದನ್ನ ಬೇಯಿಸಿ ತಿನ್ನುವ ಅಭ್ಯಾಸ ಇಟ್ಟುಕೊಳ್ಳಿ.
ನಮ್ಮ ದೈನಂದಿನ ಆಹಾರದಲ್ಲಿ ಮೊಳಕೆ ಬರಿಸಿದ ಹಸಿರು ಬಟಾಣಿ ಕಾಳುಗಳನ್ನು ಸೇರಿಸಿಕೊಳ್ಳುವುದರಿಂದ ಅತ್ಯಧಿಕವಾಗಿ ಪ್ರೊಟೀನ್ ದೇಹಕ್ಕೆ ಸಿಗುತ್ತದೆ ಜೊತೆಗೆ ರೋಗ ನಿರೋಧಕ ಶಕ್ತಿಯನ್ನು ವರ್ಧಿಸಬಲ್ಲ ಬಿ1 ಬಿ2 ಬಿ6 ಬಿ9 ಜೀವಸತ್ವಗಳಿರುವ ಅದು ದಿನವೂ ನಮ್ಮ ದೇಹವನ್ನು ಸೇರುವುದರಿಂದ ಹಲವು ವಿಧದ ಬ್ಯಾಕ್ಟೀರಿಯಾಗಳ ಸೋಂಕಿನ ವಿರುದ್ಧ ಹೊರಡಲು ಸಹಾಯ ಮಾಡುತ್ತದೆ ಜೊತೆಗೆ 81 ಕ್ಯಾಲೊರಿಗಳಿದ್ದು ಅದನ್ನು ಶಕ್ತಿದಾಯಕವೆಂದು ಸಾಬೀತುಪಡಿಸಿವೆ. ಜೊತೆಗೆ ಇದರಲ್ಲಿ ಫೈಟೋ ನ್ಯೂಟ್ರಿಯಂಟ್ಸ್. ಪ್ರೊಟೀನ್.ನಾರಿನಅಂಶ ಇದರಲ್ಲಿ ಇದೆ.

ಹಾಗಾದರೆ ಈ ಬಟಾಣಿಯನ್ನು ಸೇವಿಸುವುದರಿಂದ ಏನೆಲ್ಲ ಲಾಭ ಆಗುತ್ತದೆ ಎಂದು ತಿಳಿಯೋಣ ಬನ್ನಿ. ಬಟಾಣಿಯನ್ನು ಸೇವಿಸುವುದರಿಂದ ಇದರಲ್ಲಿರುವ ಪೌಷ್ಟಿಕಾಂಶಗಳು ಮಂಡಿ ನೋವು ಹಾಗೂ ಸ್ನಾಯು ಸೆಳೆತವನ್ನು ಕಡಿಮೆ ಮಾಡುತ್ತದೆ. ಬಟಾಣಿಯಲ್ಲಿ ವಿಟಮಿನ್ ಎ ವಿಟಮಿನ್ ಸಿ ವಿಟಮಿನ್ ಇ ಮಿನ್ರಲ್ ಜಿಂಕ್ ಒಮೆಗಾ 3 ಫ್ಯಾಟಿ ಆಸಿಡ್ ಇವುಗಳು ಇರುವುದರಿಂದ ಮಧುಮೇಹ ಹೃದಯದ ತೊಂದರೆ ಕಡಿಮೆ ಆಗುತ್ತದೆ. ಬಟಾಣಿಯನ್ನು ಸೇವಿಸುವುದರಿಂದ ರಕ್ತದಲ್ಲಿರೋ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡತ್ತದೇ.
ಬಟಾಣಿಯಲ್ಲಿ ಇರುವ ಪ್ರೋಟೀನ್ ಮತ್ತೆ ನಾರಿನ ಅಂಶ ಕಾರ್ಬೋಹೈಡ್ರೇಟ್ಸಗಳನ್ನು ಜೀರ್ಣಾಂಗವ್ಯೂಹದ ಕಡೆಗೆ ತಳ್ಳುತ್ತದೆ.ಈ ಕಾರ್ಬೋಹೈಡ್ರೇಟ್ಸಗಳು ರಕ್ತದಲ್ಲಿರೋ ಸಕ್ಕರೆಯ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಬಟಾಣಿಯಲ್ಲಿ ಇರುವ ಆಂಟಿ ಆಕ್ಸಿಡೆಂಟ್ಸ್ ಸಹಾಯದಿಂದ ಹೊಟ್ಟೆಯ ಕ್ಯಾನ್ಸರ್ ಬರುವುದನ್ನು ತಡೆಕಟ್ಟುತ್ತದೆ. ಬಟಾಣಿಯಲ್ಲಿ ಕ್ಯಾಲೋರಿ ಕಡಿಮೆ ಇರುವುದರಿಂದ ದೇಹದ ತೂಕವನ್ನು ಕಡಿಮೆ ಮಾಡುತ್ತದೆ. ಬಟಾಣಿಯಲ್ಲಿರೋ ವಿಟಮಿನ್ ಬಿ ಫೋಲೆಟ್ ವಿಟಮಿನ್ ಬಿ 6 ಕೂದಲು ಬೇರಿನಿಂದ ಗಟ್ಟಿಯಾಗೋ ಹಾಗೆ ನೋಡಿ ಕೊಳ್ಳುತ್ತದೆ.
ಬಟಾಣಿಯಲ್ಲಿರುವ ಉರಿಯೂತ ನಿವಾರಕ ಗುಣ ಮತ್ತು ಆಂಟಿ ಆಕ್ಸಿಡೆಂಟುಗಳು ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆಗೊಳಿಸಲು ನೆರವಾಗುತ್ತವೆ. ಬಟಾಣಿಯನ್ನು ಸೇವಿಸುವುದರಿಂದ ಸಂಧಿವಾತದ ಪರಿಣಾಮವಾಗಿ ಮೂಳೆಸಂದುಗಳಲ್ಲಿ ನೋವು ಅನುಭವಿಸುತ್ತಿರುವ ರೋಗಿಗಳಿಗೆ ಒಳ್ಳೆಯದು. ಬಟಾಣಿಯಲ್ಲಿ ಉತ್ತಮ ಪ್ರಮಾಣದ ಕರಗುವ ನಾರು ಇದೆ ಇದು ಜೀರ್ಣಕ್ರಿಯೆಯನ್ನು ಸರಳಗೊಳಿಸಿ ತ್ಯಾಜ್ಯಗಳು ಸುಲಭವಾಗಿ ಹೊರಹೋಗಲು ನೆರವಾಗುತ್ತವೆ. ಬಟಾಣಿಯನ್ನು ಸೇವಿಸುವುದರಿಂದ ಮಲಬದ್ಧತೆಯ ಸಮಸ್ಯೆ ಹೋಗುತ್ತದೆ. ಬಟಾಣಿಯಲ್ಲಿರುವ ವಿಟಾಮಿನ್ ಸಿ ಅಂಶ ಪಿಂಪಲ್ ನಿವಾರಣೆಯಾಗಲು ಸಹಾಯ ಮಾಡುತ್ತದೆ. ಬಟಾಣಿಯನ್ನು ಸೇವಿಸುವುದರಿಂದ ಕಣ್ಣಿನ ದೃಷ್ಟಿ ಚೆನ್ನಾಗಿ ಆಗುತ್ತದೆ. ಬಟಾಣಿ ಹೆಚ್ಚು ಸೇವಿಸುವದರಿಂದ ಮಲಬದ್ಧತೆ ಅಜೀರ್ಣ ಹೊಟ್ಟೆನೋವು ಜಠರ ಹಾಗೂ ಕರುಳು ವ್ಯಾಧಿಗಳ ಸಮಸ್ಯೆ ಬರುವುದಿಲ್ಲತಿಳಿದುಕೊಂಡಿರಲ್ಲ ಬಟಾಣಿಯನ್ನು ಸೇವಿಸುವುದರಿಂದ ಏನೆಲ್ಲ ಉಪಯೋಗ ಆಗುತ್ತದೆ ಎಂದು ಹಾಗಾಗಿ ಇನ್ನು ಮುಂದೆ ತಪ್ಪದೇ ನಿತ್ಯ ನಿಮ್ಮ ಆಹಾರದ ಜೊತೆಗೆ ಬಟಾಣಿಯನ್ನು ಸೇರಿಸಿಕೊಳ್ಳುವುದು ತುಂಬಾ ಒಳ್ಳೆಯದು.