ಮನೆಯಲ್ಲೇ ಈ ರೀತಿ ಲಕ್ಷ್ಮಿ ಪೂಜೆ ಮಾಡುವುದರಿಂದ ನಿಮ್ಮ ಎಲ್ಲ ಸಮಸ್ಯೆಗಳು ದೂರ ಆಗುತ್ತದೆ

0
789

ಜೀವನ ಅಂದಮೇಲೆ ಪ್ರತಿ ಒಬ್ಬರಿಗೂ ಸಾಕಷ್ಟು ಸಮಸ್ಯೆಗಳು ಬಂದೇ ಬರುತ್ತದೆ. ಆದರೆ ನಮಗೆ ಕಾಡುವ ಆರ್ಥಿಕ ಸಮಸ್ಯೆ ಮತ್ತು ಆರೋಗ್ಯ ಸಮಸ್ಯೆಗೆ ಕೆಲವೊಮ್ಮೆ ಪರಿಹಾರವೇ ಸಿಗುವುದಿಲ್ಲ ಸಾಕಷ್ಟು ಜ್ಯೋತಿಷ್ಯರ ಬಳಿ ಸುತ್ತಿದ್ದರು ಅದಕ್ಕೆ ಒಳ್ಳೆ ಫಲಿತಾಂಶ ಸಿಕ್ಕಿರುವುದಿಲ್ಲ ಆದರೆ ನಾವು ಇಂದು ನಿಮಗೆ ಮನೆಯಲ್ಲೇ ಖರ್ಚು ಇಲ್ಲದೆ ಹೆಚ್ಚಿನ ಫಲ ಸಿಗುವ ಒಂದು ವಿಶೇಷ ಪೂಜೆ ಬಗ್ಗೆ ತಿಳಿಸುತ್ತಾ ಇದ್ದೇವೆ ಇದನ್ನು ಮಾಡುವುದು ಬಿಡುವುದು ನಿಮ್ಮ ನಿಮ್ಮ ವಯಕ್ತಿಕಕ್ಕೆ ಬಿಟ್ಟಿದ್ದು.

ಪೂಜೆಯನ್ನು ಇಷ್ಟಾರ್ಥ ಸಿದ್ದಿಗಾಗಿ 48 ದಿನಗಳು ಶ್ರೀ ಗೊರವನಹಳ್ಳಿ ಲಕ್ಷ್ಮೀ ಪೂಜೆ ಮಾಡುವುದು ಸಂಪ್ರದಾಯವಾಗಿದೆ. ಈ ಪೂಜೆಯನ್ನು ಯಾವ ದಿನವಾದರೂ ಕೂಡ ಪ್ರಾರಂಭಿಸ ಬಹುದು ಆದರೆ ಮಂಗಳವಾರ ಹಾಗೂ ಶುಕ್ರವಾರ ಮತ್ತು ಹುಣ್ಣಿಮೆಯ ದಿನ ತುಂಬಾ ಒಳ್ಳೆಯದು. ಈ ಪೂಜೆಗೆ ಸಿದ್ಧತೆ ಹೇಗೆ ಮಾಡಿಕೊಳ್ಳಬೇಕು ಎಂದು ನೋಡೋಣ ಬನ್ನಿ.ಒಂದು ಮರದ ಮಣೆಯ ಮೇಲೆ ಗೊರವನಹಳ್ಳಿಯ ಶ್ರೀ ಮಹಾಲಕ್ಷ್ಮೀ ಫೋಟೋವನ್ನು ಇಟ್ಟು ಅದರ ಮೇಲೆ ಕಳಸವನ್ನು ಸ್ಥಾಪನೆ ಮಾಡಬೇಕು ಆ ಕಳಸದ ತುಂಬಾ ನೀರು ಹಾಕಿ ಅದರಲ್ಲಿ ಅರಿಶಿಣ ಕುಂಕುಮ ಅಕ್ಷತೆ ಒಂದು ರೂಪಾಯಿ ನಾಣ್ಯ.

ಅಡಿಕೆಯನ್ನು ಹಾಕಿ ಕಲಶದ ನಾಲ್ಕು ಕಡೆ ಗಂಧ ಕುಂಕುಮವನ್ನು ಹಚ್ಚಿ ಐದು ವೀಳ್ಯದೆಲೆಯನ್ನು ಅಥವಾ ಮಾವಿನ ಎಲೆಯನ್ನು ಕಳಸದಲ್ಲಿ ಇಡಬೇಕು. ಒಂದು ಅರಿಶಿಣದ ಕೊಂಬನ್ನು ಮೂರು ಎಳೆಯ ದಾರದಿಂದ ಕಳಸಕ್ಕೆ ಸುತ್ತಿ ಕಟ್ಟಬೇಕು ಹರಿಶಿಣ ಕುಂಕುಮ ಹಚ್ಚಿದ ತೆಂಗಿನ ಕಾಯಿಯನ್ನು ಕಳಸದ ಮೇಲೆ ಇಟ್ಟು ಕಳಸ ಸ್ಥಾಪನೆ ಮಾಡಬೇಕು ಆ ಕಲಶವನ್ನು ಒಂದು ತಟ್ಟೆಯಲ್ಲಿಟ್ಟು ಸ್ವಲ್ಪ ಅಕ್ಕಿಯನ್ನು ಹಾಕಿ ಓಂಕಾರ ಹಾಗೂ ಶ್ರೀ ಕಾರವನ್ನು ಬರೆದು ಕಲಶವನ್ನು ಸ್ಥಾಪಿಸಬೇಕು.ಪ್ರತಿ ಶುಕ್ರವಾರ ಕಲಶವನ್ನು ಬದಲಾಯಿಸುವಾಗ ಕಳಸದಲ್ಲಿರುವ ಪದಾರ್ಥಗಳನ್ನು ನೈವೇದ್ಯಕ್ಕೆ ಬಳಸಬೇಕು

ಗೊರವನಹಳ್ಳಿ ಶ್ರೀ ಮಹಾಲಕ್ಷ್ಮೀ ಫೋಟೋ ಮತ್ತು ಕಲಶವನ್ನು ಪೂರ್ವ ಅಥವಾ ಉತ್ತರ ಮುಖವಾಗಿ ಇಡಬೇಕು ಪೂಜೆ ಮಾಡಲು ಒಂದು ಚಿಕ್ಕ ಲಕ್ಷ್ಮೀ ವಿಗ್ರಹವನ್ನು ಇಲ್ಲದಿದ್ದರೆ ಲಕ್ಷ್ಮೀ ನಾರಾಯಣ ಸ್ವಾಮಿ ವಿಗ್ರಹವನ್ನು ಪೂಜೆಗೆ ಇಟ್ಟುಕೊಳ್ಳಬೇಕು. ಈ ರೀತಿ ಗೊರವನಹಳ್ಳಿ ಮಹಾಲಕ್ಷ್ಮೀಯ ಪೂಜೆಯನ್ನು ಒಂದು ಮಂಡಲ ಅಂದರೆ 40 ದಿವಸ ಹಾಗೂ ಶ್ರೀ ಹರಿಗಾಗಿ ಎಂಟು ದಿವಸ ಹೀಗೆ ಒಟ್ಟಿಗೆ 48 ದಿನಗಳು ಪೂಜೆ ಮಾಡಿ ನಂತರ ಶ್ರೀ ಗೊರವನಹಳ್ಳಿಯ ಮಹಾಲಕ್ಷ್ಮೀ ಪುಸ್ತಕವನ್ನು ತಮ್ಮ ಶಕ್ತಿಯನುಸಾರ ಐದು ಏಳು ಒಬ್ಬಂತ್ತು ಜನ ಸುಮಂಗಲಿಯರನ್ನು ಕರೆದು ಕಡೆಯ ವಾರ ಮಂಗಳ ದ್ರವ್ಯಗಳೊಡನೆ ದಾನವಾಗಿ ಕೊಟ್ಟು ಆಶೀರ್ವಾದ ಪಡೆದು ಶ್ರೀ ಮಹಾಲಕ್ಷ್ಮೀ ಅನುಗ್ರಹಕ್ಕೆ ಪಾತ್ರರಾಗಬೇಕು.

ಪೂಜೆಗೆ ಕುಳಿತು ಕೊಳ್ಳುವವರು ಪೂರ್ವ ಅಥವಾ ಉತ್ತಾರಾಭಿಮುಖವಾಗಿ ಕುಳಿತುಕೊಂಡು ದೇವಿಯನ್ನು ಪೂಜಿಸುವುದು ಒಳ್ಳೆಯದು. ಹರಿಶಿನ ಕುಂಕುಮ ಅಕ್ಷತೆ ಗಂಧ ಹೂವು ಗಂಧದ ಕಡ್ಡಿ ಕರ್ಪುರ ಗಂಟೆ ಮಂಗಳಾರತಿ ತಟ್ಟೆ ಗೆಜ್ಜೇವಸ್ತ್ರ ನೈವೇದ್ಯಕ್ಕಾಗಿ ಹಸುವಿನ ಶುದ್ದ ಹಸಿ ಹಾಲು ನಿಮ್ಮ ಇಷ್ಟದ ಹಣ್ಣು ಅಥವಾ ಕಲ್ಲು ಸಕ್ಕರೆ ಅಥವಾ ಬೆಲ್ಲದ ಚೂರು ಹಾಗೂ ಪಂಚಾಮೃತಕ್ಕಾಗಿ ಹಸುವಿನ ಹಸಿ ಹಾಲು ಹಸುವಿನ ಹಾಲಿನ ಮೊಸರು ಹಸುವಿನ ತುಪ್ಪ ಜೇನುತುಪ್ಪ ಕಲ್ಲುಸಕ್ಕರೆ ಬಾಳೆಹಣ್ಣು ಮಿಶ್ರಣ ಇದ್ದರೆ ಏಳೆನೀರು ಉಪಯೋಗಿಸಬಹುದು. ಪೂಜೆಗೆ ಪಂಚಾಮೃತವಿಲ್ಲದಿದ್ದರೆ ಪೂಜೆ ಮಾಡಿರುವ ಕಲಶೋಧಕವನ್ನು ದೇವಿಗೆ ಪ್ರೋಕ್ಷಿಸಬಹುದು. ನಿತ್ಯವೂ ಭಕ್ತಾದಿಗಳು ಅವರವರ ಸಮಯಾನುಕೂಲ ನೋಡಿಕೊಂಡು ಮೂರು ಬಾರಿಯಾಗಲಿ ಇಲ್ಲದೆ ಇದ್ದರೆ ಬೆಳ್ಳಗ್ಗೆ ಹಾಗೂ ಸಂಜೆ ಒಮ್ಮೆ ಆದರು ಪೂಜೆಯನ್ನು ಮಾಡಬೇಕು. ಲಕ್ಷ್ಮಿ ಕೃಪೆ ನಿಮ್ಮ ಮೇಲೆ ಬಿದ್ದು ನಿಮ್ಮ ಎಲ್ಲ ರೀತಿಯ ಕೋರಿಕೆಗಳು 48 ದಿನದಲ್ಲಿ ನಡೆಯುತ್ತದೆ. ಹೀಗೆ ಮಾಡಿದರೆ ಶ್ರೀ ಗೋರವನಹಳ್ಳಿ ಲಕ್ಷ್ಮಿಯ ಕೃಪೆ ನಮ್ಮ ಮೇಲೆ ಆಗುತ್ತದ.

LEAVE A REPLY

Please enter your comment!
Please enter your name here