ಭಾರತೀಯ ಸೈನ್ಯಕ್ಕೆ ಈ ವಸ್ತು ಬಂದು ಆನೆ ಬಲ ಬಂದಿದೆ ಏಕೆ ಗೊತ್ತೇ

0
640

ನಮ್ಮ ಭಾರತೀಯ ಸೈನಿಕರು ಅಂದ್ರೆ ಸಾಮಾನ್ಯದ ಸಂಗತಿ ಅಲ್ಲವೇ ಅಲ್ಲ ಇಂದು ಭಾರತದ ಸೈನ್ಯವು ವಿಶ್ವದ ನಾಲ್ಕನೆ ಬಲಿಷ್ಠ ಸೈನ್ಯವಾಗಿ ಹೊರಹೊಮ್ಮಿದೆ ಇಂದು ನಾವು ನೀವೆಲ್ಲ ನೆಮ್ಮದಿಯಾಗಿ ನಿದ್ರೆ ಮಾಡುತ್ತೇವೆ ಖುಷಿ ಆಗಿದ್ದೇವೆ ಎಂದರೆ ಅದಕ್ಕೆಲ್ಲ ಕಾರಣ ಗಡಿ ಕಾಯುತ್ತಾ ಇರುವ ಯೋಧರು. ಇಂತಹ ಮಹಾನ್ ಯೋಧರಿಗೆ ಭಾರತ ಸರ್ಕಾರವು ಶತ್ರುಗಳ ಭೇಟೆಗಾಗಿ ಅತ್ಯಾಧುನಿಕ ರೈಫೆಲ್ ನೀಡುತಿದ್ದು ಇದು ಪ್ರತಿಯೊಬ್ಬ ಭಾರತೀಯ ಹೆಮ್ಮೆ ಪಡುವ ವಿಚಾರ ಆಗಿದೆ.

ಜಮ್ಮು ಕಾಶ್ಮೀರದ ಗಡಿ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಭಾರತೀಯ ಯೋಧರಿಗೆ ಶಕ್ತಿಯನ್ನು ತುಂಬಲು ಅತ್ಯಾಧುನಿಕ ಸ್ನೈಪರ್ ರೈಫಲ್ಸ್ ಬಳಕೆ ಮಾಡಲು ಸೇನೆಯು ಇದನ್ನು ಆರಂಭಿಸಿದೆ. ಡೆಡ್ಲಿ ಸ್ನೈಪರ್ ರೈಫಲ್ಸ್ ಎಂದೇ ಕರೆಯಲಾಗುವ ಅತ್ಯಾಧುನಿಕ ಬೆರೆಟ್ಟಾ ಸಂಸ್ಥೆಯ 0.338 ಲಪುವಾ ಮ್ಯಾಗ್ನಮ್ ಸ್ಲಾರ್ಪಿಯೋ ಟಿಜಿಟಿ ಸೂಪರ್ ಸ್ನೈಪರ್ ರೈಫಲ್ ಹಾಗೂ ಬರೆಟ್ಟ್ ಸಂಸ್ಥೆಯ 0.50 ಕ್ಯಾಲಿಬರ್ ಎ095 ಸ್ನೈಪರ್ ರೈಫಲ್‍ಗಳನ್ನ ಖರೀದಿ ಮಾಡಲಾಗಿದೆ. ಈ ರೈಫಲ್ ಗಳನ್ನು ಪಾಕಿಸ್ತಾನ ಗಡಿಯಲ್ಲಿ ಕಾರ್ಯನಿರ್ವಹಿಸುವ ಯೋಧರಿಗೆ ನೀಡಲಾಗಿದೆ. ಈ ವಿಷಯದ ಬಗ್ಗೆ ಜನರಲ್ ಆಫೀಸರ್ ಮಾಂಡಿಂಗ್ ಇನ್ ಚೀಫ್ ಲೆಫ್ಟಿನೆಂಟ್ ಜನರಲ್ ರಣಬೀರ್ ಸಿಂಗ್ ಅವರು ಮಾಹಿತಿ ನೀಡಿದ್ದು, ಎಲ್‍ಒಸಿ ಯಲ್ಲಿ ಕಾರ್ಯನಿರ್ವಹಿಸುವ ಸೈನಿಕರಿಗೆ ಪೂರೈಕೆ ಮಾಡಲಾಗಿದೆ.

ಕಳೆದ ಒಂದು ತಿಂಗಳ ಹಿಂದೆ ಅಧುನಿಕ ರೈಫಲ್ಸ್ ಸೈನ್ಯಕ್ಕೆ ಪೂರೈಕೆ ಮಾಡುವ ಬಗ್ಗೆ ಮಾತನಾಡಿದ್ದ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಜನವರಿ 10ರೊಳಗೆ ನೂತನ ಸ್ನೈಫರ್ ರೈಫಲ್ಸ್ ಗಳನ್ನು ರಕ್ಷಣಾ ಪಡೆಯ ಉತ್ತರ ಕಮಾಂಡ್ ಪಡೆ ಹೊಂದಿರಲಿದೆ ಎಂದು ತಿಳಿಸಿದ್ದರು. ಸ್ನೈಪರ್ ರೈಫಲ್ ವಿಶೇಷತೆ ಏನು ಎಂಬುದನ್ನು ನೋಡುವುದಾದರೆ ನಮ್ಮ ದೇಶದ ಗಡಿಯಲ್ಲಿ ನಿಂತು ರಕ್ಷಣೆ ಮಾಡುವ ಯೋಧರು ಹಾಗೂ ಪೊಲೀಸ್ ಪಡೆಗಳು ದೂರದ ಸ್ಥಳದಿಂದ ಕಾವಲು ಕಾಯುವ ವೇಳೆ ಈ ಸ್ನೈಪರ್ ರೈಫಲ್ ಬಳಸಲಾಗುತ್ತದೆ. ಈ ರೈಫಲ್ ಗಳಿಂದ ಸಿಡಿಯುವ ಗುಂಡುಗಳು ನಿಖರವಾಗಿ ಗುರಿ ಭೇದಿಸುವ ಸಾಮಥ್ರ್ಯ ಹೊಂದಿದ್ದು, ಸದ್ಯ ಸೈನ್ಯಕ್ಕೆ ನೀಡಲಾಗಿರುವ ರೈಫಲ್ಸ್ ಗಳಿಂದ ಸುಮಾರು 1,800 ಮೀಟರ್ ದೂರ ಗುರಿ ಇಟ್ಟು ದಾಳಿ ನಡೆಸಬಹುದಾಗಿದೆ. ಇದಕ್ಕೆ ಟೆಲಿಸ್ಕೋಪಿಕ್ ಸೈಟ್ ಅಳವಡಿಸಿ ರಾತ್ರಿ ವೇಳೆಯೂ ಕೂಡ ನಿಖರವಾಗಿ ದಾಳಿ ಮಾಡಬಹುದಾಗಿದೆ.

ಸೇನೆಗೆ ಯವುದೇ ರೀತಿಯ ತೊಂದರೆ ಆಗದೆ ಇರಲಿ ಎಂಬ ಉದ್ದೇಶದಿಂದ ಸೇನೆಯನ್ನು ಭದ್ರಗೊಳಿಸುವ ಉದ್ದೇಶದಿಂದ ಆಧುನಿಕ ರೈಫಲ್ಸ್ ಅನ್ನು ತರಿಸಿಕೊಳ್ಳಲಾಗಿದೆ. ಭಾರತ ಸೈನ್ಯ ಸ್ನೈಫರ್ ರೈಫಲ್ಸ್ ಹೊಂದುತ್ತಿರುವ ಬಗ್ಗೆ ಪಾಕಿಸ್ತಾನ ಕೆಲ ಮಾಧ್ಯಗಳು ಕೂಡ ವರದಿ ಮಾಡಿದೆ. ಈ ಹಿಂದೆ ಭಾರತ ಮೇಲೆ ದಾಳಿ ನಡೆಸುವ ಭಯೋತ್ಪಾದಕರು ಹಾಗೂ ಪಾಕ್ ಸೈನಿಕರು ಇಂತಹ ಸ್ನೈಪರ್ ರೈಪಲ್ಸ್ ಬಳಕೆ ಮಾಡುತ್ತಿದ್ದರು. ಅಲ್ಲದೇ ಭಯೋತ್ಪಾದಕರು ಆಧುನಿಕ ಶಾಸ್ತ್ರಗಳನ್ನು ಹೊಂದಿರುವುದು ಸೈನ್ಯಕ್ಕೆ ದೊಡ್ಡ ಸಮಸ್ಯೆಯಾಗಿತ್ತು. ಇದು ನಮ್ಮನ್ನು ರಕ್ಷಣೆ ಮಾಡುತ್ತಿರುವ ಯೋಧರಿಗೆ ರಕ್ಷಣೆ ಕೊಡುವ ಉದ್ದೇಶದಿಂದ ಮಾಡಲಾಗಿದೆ. ನಮ್ಮ ಸೈನಿಕರ ಮೇಲೆ ಅಭಿಮಾನ ಇದ್ದವರು ಶೇರ್ ಮಾಡಿ ಹೆಮ್ಮೆ ಪಡಿ.

LEAVE A REPLY

Please enter your comment!
Please enter your name here