ಸಂಜೆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿದ ಈ ಕೆಲಸಗಳು ಮಾಡಲೇ ಬೇಡಿ

0
985

ಮನೆಯ ಒಳಗೆ ಯಾವುದೇ ದುಷ್ಟ ಶಕ್ತಿಗಳು ಪ್ರವೇಶ ಮಾಡಬಾರದು ಹಾಗೂ ಮನೆಯ ಒಳಗೆ ಯಾವುದೇ ಕೀಟನಾಶಕಗಳು ಬರಬಾರದು ಹಾಗೂ ಮನೆಯಲ್ಲಿ ಸದಾ ಸುಖ ಶಾಂತಿ ಮತ್ತು ನೆಮ್ಮದಿಯಿಂದ ಕೂಡಿರಬೇಕು ಎಂಬ ಕಾರಣಕ್ಕೆ ಮನೆಯಲ್ಲಿ ನಿತ್ಯ ಸಂಜೆಯ ಸಮಯದಲ್ಲಿ ದೇವರಿಗೆ ದೀಪವನ್ನು ಮತ್ತು ದೂಪವನ್ನು ಹಚ್ಚುತ್ತಾರೆ. ಆದರೆ ದೇವರಿಗೆ ದೀಪವನ್ನು ಹಚ್ಚಿದ ಮೇಲೆ ಮನೆಯಲ್ಲಿ ಯಾವ ಕೆಲಸಗಳನ್ನು ಮಾಡಬಾರದು ಎಂದು ಸಾಕಷ್ಟು ಜನಕ್ಕೆ ತಿಳಿಯದೇ ಸಂಜೆ ಸಮಯದಲ್ಲೇ ಅನೇಕ ರೀತಿಯ ತಪ್ಪುಗಳನ್ನು ಮಾಡುತ್ತಾರೆ ಹಾಗಾದ್ರೆ ಏನು ಕೆಲಸ ಮಾಡಬೇಕು ಏನು ಮಾಡಬಾರದು ತಿಳಿದುಕೊಳ್ಳೋಣ ಬನ್ನಿ.

ಮನೆಯಲ್ಲಿ ಸಂಜೆ ದೇವರಿಗೆ ದೀಪ ಹಚ್ಚಿದ ನಂತರ ಕಸ ಗುಡಿಸಬಾರದು. ಪೋರಕೆ ಮುಟ್ಟಬಾರದು. ಪೊರಕೆ ಹೊರಗಿನ ಜನರಿಗೆ ಕಾಣುವ ಹಾಗೆ ಇಡಬಾರದು. ಸಂಜೆ ಸಮಯದಲ್ಲಿ ಮನೆಯಲ್ಲಿ ದಂಪತಿಗಳು ಕಿತ್ತಾಟ ಮುನಿಸು ಕೋಪ ಬೇಸರ ಗಲಾಟೆಯನ್ನು ಮಾಡಬಾರದು ಹೀಗೆ ಮಾಡಿದರೆ ಮನೆಯಲ್ಲಿ ಸದಾ ದಾರಿದ್ರ್ಯ ಕಲಹ ಅನಾರೋಗ್ಯ ಸಮಸ್ಯೆ ಕಾಡುತ್ತದೆ.ಮನೆಯಲ್ಲಿ ಶಾಂತಿ ಎಂಬುದು ಇರುವುದಿಲ್ಲ. ಸಂಜೆಯ ಸಮಯದಲ್ಲಿ ಗುಡಿಸಿದ ಕಸವನ್ನು ಮನೆಯ ಒಳಗಿನಿಂದ ತೆಗೆದುಕೊಂಡು ಹೋಗಿ ಹೊರಗೆ ಹಾಕಬಾರದು.

ಮನೆಯೊಳಗೆ ಹೆಣ್ಣು ಮಕ್ಕಳು ಸೂರ್ಯ ಮುಳುಗಿದ ನಂತರ ಯಾವುದೇ ಕಾರಣಕ್ಕೂ ತಲೆ ಕೂದಲನ್ನು ಬಾಚಬಾರದು ತಲೆಯ ಕೂದಲನ್ನು ಬಿಚ್ಚಿ ಕೆದರಿಕೊಂಡು ಮನೆಯಲ್ಲಿ ಓಡಾಡಬಾರದು. ಹಾಗೇನಾದರೂ ಮಾಡಿದರೆ ಮನೆಯಲ್ಲಿ ದರಿದ್ರ ಕಲಹ ಅನಿಷ್ಟಗಳು ಬಂದು ಸೇರುತ್ತವೆ. ಜೊತೆಗೆ ಇನ್ನೊಂದು ಕಾರಣ ಏನೆಂದರೆ ರಾತ್ರಿಯ ಸಮಯದಲ್ಲಿ ಕೂದಲು ಎಲ್ಲ ಕಡೆ ಉದುರುತ್ತವೆ ನಾವು ತಿನ್ನುವ ಆಹಾರದಲ್ಲಿ ಮನೆಯೊಳಗೆ ಎಲ್ಲ ಕಡೆ ಕೂದಲು ಉದುರುವ ಸಾಧ್ಯತೆ ಹೆಚ್ಚು ಆದ್ದರಿಂದ ತಲೆ ಕೂದಲನ್ನು ಹಾಗೆಯೇ ಕಟ್ಟದೆ ಬಿಚ್ಚಿಕೊಂಡು ಓಡಾಡುವುದು ಒಳ್ಳೆಯದಲ್ಲ. ಸಂಜೆ ದೀಪ ಹಚ್ಚಿದ ನಂತರ ಮನೆಯಲ್ಲಿ ಇರುವ ಮಕ್ಕಳನ್ನು ಬೈಯಬಾರದು ಹೊಡೆಯಬಾರದು. ಸಂಜೆ ದೀಪವನ್ನು ಹಚ್ಚಿದ ನಂತರ ಮನೆಯಿಂದ ಹೊರಕ್ಕೆ ಉಪ್ಪನ್ನು ತೆಗೆದುಕೊಂಡು ಹೋಗಬೇಡಿ. ಸಂಜೆ ದೀಪವನ್ನು ಹಚ್ಚಿದ ನಂತರ ಮನೆಯನ್ನು ಸ್ವಚ್ಛ ಮಾಡಬಾರದು.

ಸಂಜೆ ದೀಪ ಹಚ್ಚಿದ ನಂತರ ಮನೆಯಿಂದ ಯಾರಿಗೂ ಕೂಡ ಹಣವನ್ನು ಕೊಡಬಾರದು. ಆದಷ್ಟು ಇದನ್ನು ಪಾಲಿಸುವುದು ಸೂಕ್ತ. ಸಂಜೆಯ ಸಮಯದಲ್ಲಿ ದೇವರಿಗೆ ದೀಪ ಹಚ್ಚಿದ ನಂತರ ಮನೆಯಲ್ಲಿ ಸದಾ ಶಾಂತಿಯಿಂದ ಕೂಡಿರಬೇಕು. ಈ ಕೆಲಸಗಳನ್ನು ಸಂಜೆಯ ಸಮಯದಲ್ಲಿ ಮಾಡದೆ ಇದ್ದರೆ ಮನೆಯಲ್ಲಿ ಸದಾ ಶಾಂತಿ ಇರುತ್ತದೆ ಎಂಬುದು ನಮ್ಮ ಪೂರ್ವಜರ ಮಾತಾಗಿದೆ ಯಾವುದೇ ರೀತಿಯ ಸಮಸ್ಯೆಗಳು ಇರುವುದಿಲ್ಲ ಹಾಗಾಗಿ ಯಾವುದೇ ಕಾರಣಕ್ಕೂ ಈ ಕೆಲಸಗಳನ್ನು ಮಾಡಬೇಡಿ. ತಪ್ಪದೇ ಶೇರ್ ಮಾಡಿ. ನಮ್ಮ ವೆಬ್ಸೈಟ್ ಎಲ್ಲ ಚಿತ್ರಗಳಿಗೂ ಮತ್ತು ಬರಹಗಳಿಗೂ ವಿಶೇಷ ಕಾಪಿ ರೈಟ್ಸ್ ಹೊಂದಿದ್ದು ಅನುಮತಿ ಇಲ್ಲದೆ ನಕಲು ಮಾಡಿದ್ರೆ ಕಾನೂನು ರೀತಿಯ ಕ್ರಮ ತೆಗೆದುಕೊಳ್ಳುತ್ತೇವೆ.

LEAVE A REPLY

Please enter your comment!
Please enter your name here