ಸ್ತ್ರೀಯರ ಆರೋಗ್ಯದ ಗುಟ್ಟು ಮಾಂಗಲ್ಯದಲ್ಲಿದೆ ಏಕೆ ಗೊತ್ತೇ

0
1360

ಮಂಗಳಸೂತ್ರ ತಾಳಿ ಕಂಠಿ ಕರಿಮಣಿ ಇತ್ಯಾದಿ ಹೆಸರುಗಳಿಂದ ಕೂಡಿರುವ ಮಾಂಗಲ್ಯವು ಮದುವೆಯಲ್ಲಿ ಗಂಡು ಹೆಣ್ಣಿಗೆ ಕಟ್ಟುವ ಪವಿತ್ರವಾದ ಸೂತ್ರ. ಇದು ಮಹಿಳೆಯರಿಗೆ ಸೌಭಾಗ್ಯಕರವಾದದ್ದು. ಈ ಮಾಂಗಲ್ಯ ಸರದಲ್ಲಿ ಮುಖ್ಯವಾಗಿ ಇರುವುದು ಕರಿಮಣಿ. ಮುತ್ತು ಹವಳ ಇರುತ್ತದೆ. ಇದು ಹೆಣ್ಣಿನ ಅಲಂಕಾರಕ್ಕೆ ಇರುವ ಸರವಲ್ಲ ಹೆಣ್ಣನ್ನು ಸಂಪೂರ್ಣವಾಗಿ ರಕ್ಷಣೆ ಮಾಡುವ ಸರ ಇದು. ಆದರೆ ನಮ್ಮ ಇತ್ತೇಚೆನ ಕೆಲವು ಹೆಂಗಸರಿಗೆ ತಾಳಿಯ ಮಹತ್ವವೇ ಗೊತ್ತಿಲ್ಲ ಅದು ಅವರಿಗೆ ಒಂದು ರೀತಿ ಫ್ಯಾಶನ್ ಆಗಿರೋದು ಅಂತೂ ಸತ್ಯ. ನಮ್ಮ ಹಿಂದೂ ಧರ್ಮದಲ್ಲಿ ಕಾರಣ ಇಲ್ಲದೇ ಯಾವ ಶಸ್ತ್ರ ಸಂಪ್ರದಾಯಗಳನ್ನು ಮಾಡಿಲ್ಲ ಎಲ್ಲದಕ್ಕೂ ಅದರದ್ದೇ ಆದ ಕಾರಣ ಇರುತ್ತದೆ ಅದನ್ನು ಹುಡುಕುತ್ತಾ ಹೋದಾಗ ಸಾಕ್ಷಿ ಸಮೇತ ವೈಜ್ಞಾನಿಕ ಕಾರಣ ತಿಳಿದು ನಾವೇ ಅಚ್ಚರಿ ಪಡುತ್ತೇವೆ.

ಈ ಮಾಂಗಲ್ಯ ಸರದಲ್ಲಿ ಮುತ್ತು ಮತ್ತು ಹವಳವನ್ನು ಏಕೆ ಹಾಕಿರುತ್ತಾರೆ ಅದರ ಮಹತ್ವ ಸಾಕಷ್ಟು ಹೆಣ್ಣು ಮಕ್ಕಳಿಗೆ ತಿಳಿದಿಲ್ಲ ಇದರಿಂದ ಎಷ್ಟೆಲ್ಲಾ ಲಾಭ ಇದೆ ಎಂದು ತಿಳಿಯೋಣ ಬನ್ನಿ. ಹವಳ ಕುಜನಿಗೆ ಪ್ರೀತಿಕಾರಕವಾದದ್ದು. ಮುತ್ತು ಚಂದ್ರನಿಗೆ ಪ್ರೀತಿಕಾರಕವಾದದ್ದು. ಇವೆರಡು ಸೂರ್ಯ ಚಂದ್ರರ ತೇಜಸ್ಸು ಸ್ತ್ರೀಯರಲ್ಲಿ ಲೀನವಾಗಿ ಇರುತ್ತವೆ. ಹವಳ ಇದು ಸ್ತ್ರೀಯರ ಶರೀರಕ್ಕೆ ಬೇಕಾದ ಉತ್ತೇಜನವನ್ನು ನೀಡುತ್ತದೆ ಜೊತೆಗೆ ನಾಡಿ ಮಂಡಲವನ್ನು ಚುರುಕಾಗಿ ಇಡುತ್ತದೆ.

ಮುತ್ತು ಇದು ಶರೀರದ ಅತಿಯಾದ ತಾಪಮಾನವನ್ನು ಕಡಿಮೆ ಮಾಡುತ್ತದೆ. ಹಾಗೂ ಮನಸ್ಸಿಗೆ ಪ್ರಶಾಂತತೆ ಮತ್ತು ಸಹನೆಯನ್ನು ನೀಡುತ್ತದೆ. ಜೊತೆಗೆ ದೇಹ ಸುಖ ಸೌಂದರ್ಯ ಅನಂದಕ್ಕೆ ಅನ್ಯೂನ್ಯ ದಾಂಪತ್ಯ ಜೀವನಕ್ಕೆ ಕಾರಣವಾಗಿ ಶಾರೀರಿಕವಾಗಿ ಕಣ್ಣುಗಳು ದೇಹದ ಕೊಬ್ಬು ಗ್ರಂಥಿಗಳು ಸ್ತ್ರೀಯರ ನರ ನಾಡಿಗಳು ಇಂದ್ರಿಯಗಳು ಗರ್ಭಧಾರಣೆ ಮತ್ತು ಪ್ರಸವಕ್ಕೆ ಕಾರಣವಾದದ್ದು. ಇನ್ನೂ ಮೂರ್ಖತನ ಅತಿಯಾದ ಕೋಪ ಕಲಹ ಸೋಮಾರಿತನ ರೋಗ ರುಜಿನಗಳು ಸಾಲಭಾದೆ ರಕ್ತಸ್ರಾವ ಮತ್ತು ಋತುಚಕ್ರದ ದೋಷಕ್ಕೆ ಈ ಗ್ರಹವೆ ಕಾರಣ ಆದುದರಿಂದ ಚಂದ್ರ ಮತ್ತು ಕುಜ ಗ್ರಹ ಸ್ತ್ರೀಯರ ಜೀವನದಲ್ಲಿ ತುಂಬಾ ಪ್ರಭಾವ ಬೀರುತ್ತವೆ.

ಮಾಂಗಲ್ಯ ಸರದಲ್ಲಿ ಹವಳ ಧರಿಸುವುದರ ಹಿಂದೆ ನಮ್ಮ ಋಷಿಮುನಿಗಳು ವಿಶೇಷವಾದ ರಹಸ್ಯ ಅಡಗಿದೆ ಎಂದು ಹೇಳಿದ್ದಾರೆ. ಆ ರಹಸ್ಯ ಏನೆಂದರೆ ಮುತ್ತನ್ನು, ಹವಳವನ್ನು ಧರಿಸಿದ್ದರಿಂದಲೇ ಹಳೇ ಕಾಲದ ಸ್ತ್ರೀಯರಿಗೆ ಶಸ್ತ್ರಚಿಕಿತ್ಸೆಗೆ ಒಳಪಟ್ಟಿರುವುದು ಬಹಳ ವಿರಳ. ಆದರೆ ಈಗ ಶಸ್ತ್ರಚಿಕಿತ್ಸೆ ಇಲ್ಲದೇ ಪ್ರಸವವು ನೆಡೆಯುವುದೇ ಇಲ್ಲ ಎಂಬಂತೆ ಆಗಿ ಹೋಗಿದೆ. ಮಾಂಗಲ್ಯದಲ್ಲಿ ಮುತ್ತು ಮತ್ತು ಹವಳ ಧರಿಸುವುದು ಸ್ತ್ರೀಯರ ಜೀವನದಲ್ಲಿ ಒಳ್ಳೆಯ ಫಲಿತಾಂಶ ನೀಡುತ್ತದೆ.

ಸ್ತ್ರೀಯರು ಧರಿಸುವ ಮಾಂಗಲ್ಯ ಸರದಲ್ಲಿ ಮುತ್ತು,ಹವಳ ಕೇವಲ ಸಂಪ್ರದಾಯ ಮಾತ್ರವಲ್ಲ ,ಸ್ತ್ರೀಯರ ಆರೋಗ್ಯದ ದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ನಮ್ಮ ಪೂರ್ವಜರು ಇದನ್ನು ಮಾಡಿದ್ದಾರೆ. ಈ ಮಾಂಗಲ್ಯ ಸೂತ್ರ ಎಂಬುದು ಮಹಿಳೆಯರನ್ನು ಎಲ್ಲ ರೀತಿಯಲ್ಲೂ ಕೂಡ ರಕ್ಷಣೆ ಮಾಡುತ್ತದೆ. ದೈಹಿಕವಾಗಿ ಮಾನಸಿಕವಾಗಿ ಮಹಿಳೆಯರನ್ನು ರಕ್ಷಣೆ ಮಾಡುತ್ತದೆ. ಮಹಿಳೆಯರ ಮಾಂಗಲ್ಯ ಸೂತ್ರವು ಮಹಿಳೆಯ ಹೃದಯದ ಬಡಿತವನ್ನು ನಿಯಂತ್ರಣ ಮಾಡುತ್ತದೆ. ಕರಿ ಮಣಿ ದೇಹದ ರಕ್ತದ ಒತ್ತಡ ನಿಯಂತ್ರಣದಲ್ಲಿ ಇಡುತ್ತದೆ. ಆದರೆ ಫ್ಯಾಷನ್ ಗೋಸ್ಕರ ಧರಿಸುವ ನಕಲಿ ಮುತ್ತು ಹವಳ ನಕಲಿ ಕರಿಮಣಿ ಯಾವುದೇ ರೀತಿ ಪ್ರಯೋಜನ ಇಲ್ಲ. ಅಸಲಿ ಧಾರಣೆ ಮಾಡಿಕೊಂಡು ಜೀವನ ಸುಖವಾಗಿ ಇಟ್ಟುಕೊಳ್ಳುವುದು ಜೊತೆಗೆ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ. ಮಾಹಿತಿ ಶೇರ್ ಮಾಡೀರಿ ಎಲ್ಲರಿಗು ತಾಳಿಯ ಮಹತ್ವ ತಿಳಿಯಲಿ.

LEAVE A REPLY

Please enter your comment!
Please enter your name here