ಹೊಟ್ಟೆಯ ಎಡಭಾಗದಲ್ಲಿ ನೋವು ಬರುತ್ತಿದ್ದರೆ ಅದು ಈ ಸಮಸ್ಯೆ ಆಗಿರುತ್ತದೆ

0
798

ಮನುಷ್ಯನ ದೇಹವು ತುಂಬಾ ಪ್ರಮುಖ ಅಂಗಗಳನ್ನು ಹೊಂದಿವೆ ಅದರಲ್ಲಿ ಹೊಟ್ಟೆಯ ಭಾಗ ಕೂಡ ಒಂದು ಅದರಲ್ಲೂ ಹೊಟ್ಟೆಯ ಎಡಭಾಗದಲ್ಲಿ ಹೆಚ್ಚಿನ ಪ್ರಮುಖ ಅಂಗಾಂಗಳು ಇವೆ. ಹೀಗಾಗಿ ಹೊಟ್ಟೆಯ ಒಳಗಿನ ಯಾವುದೇ ಅಂಗಾಂಗಳಿಗೆ ಸಮಸ್ಯೆಯಾದರು ತುಂಬಾ ನೋವು ಅನುಭವಿಸುತ್ತೇವೆ. ಆದರೂ ಕೂಡ ಹೊಟ್ಟೆಯ ಯಾವುದೇ ಭಾಗದಲ್ಲಿ ನೋವು ಬಂದರು ನಿರ್ಲಕ್ಷಿಸುತ್ತೇವೆ ಆದರೆ ಹೊಟ್ಟೆಯ ಯಾವುದೇ ಭಾಗದಲ್ಲಿ ನೋವು ಬಂದರು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬಾರದು. ಏಕೆಂದರೆ ಇದು ಮನುಷ್ಯನಿಗೆ ತುಂಬಾ ಮುಖ್ಯವಾದ ಅಂಗವಾಗಿದೆ.ಈ ಹೊಟ್ಟೆಯ ಯಾವುದೇ ಭಾಗದಲ್ಲಿ ಸಮಸ್ಯೆ ಆದಾಗ ಪ್ರಾಣವನ್ನು ಕಳೆದುಕೊಳ್ಳುವ ಸಂಭವ ಕೂಡ ಬರುತ್ತದೆ. ಅದರಲ್ಲೂ ಹೊಟ್ಟೆಯ ಎಡಭಾಗದಲ್ಲಿ ನೋವು ಕಾಣಿಸಿಕೊಂಡರೆ ಅದಕ್ಕೆ ಕಾರಣ ಏನು ಎಂಬುದನ್ನು ತಿಳಿದುಕೊಳ್ಳಬೇಕು

ಪುರುಷರಗಿಂತ ಹೆಚ್ಚು ಮಹಿಳೆಯರ ಹೊಟ್ಟೆಯ ಎಡಭಾಗದಲ್ಲಿ ಅಂಗಾಂಗಗಳು ಇರುವುದು. ಇದರಲ್ಲಿ ಪ್ರಮುಖವಾಗಿ ಗರ್ಭ ಅಂಡಾಶಯಗಳು ಫಾಲೋಪಿಯನ್ ಟ್ಯೂಬ್ ಇತ್ಯಾದಿಗಳು. ಹೀಗಾಗಿ ಪುರುಷರಿಗೆ ಹೋಲಿಸಿದರೆ ಮಹಿಳೆಯರ ಹೊಟ್ಟೆಯ ಎಡಭಾಗದ ನೋವನ್ನು ಹೆಚ್ಚು ಅನುಭವಿಸುವರು. ಈ ಹೊಟ್ಟೆಯ ಎಡಭಾಗದ ನೋವಿಗೆ ಕಾರಣವೇನು? ಎಂಬುದನ್ನೂ ನೋಡುವುದಾದರೆ

ಹೊಟ್ಟೆಯ ಎಡಭಾಗದಲ್ಲಿ ಕಾಣಿಸಿಕೊಳ್ಳುವ ನೋವು ಹಸಿವಿನ ನೋವಾಗಿರಬಹುದು ಇದು ಹೆಚ್ಚಾಗಿ ಮಕ್ಕಳಲ್ಲಿ ಹೊಟ್ಟೆಯ ಎಡಭಾಗದಲ್ಲಿ ಹಸಿವಿನಿಂದಾಗಿ ನೋವು ಕಾಣಿಸಿಕೊಳ್ಳುತ್ತದೆ. ಹಸಿವಿನ ನೋವು ತುಂಬಾ ಕಡಿಮೆಯಿರುವುದು ಮತ್ತು ಹೊಟ್ಟೆಯಲ್ಲಿ ತುಂಬಾ ಕಿರಿಕಿರಿ ಉಂಟು ಮಾಡುತ್ತದೆ. ಮಲಬದ್ಧತೆಯಿಂದಾಗಿ ಹೊಟ್ಟೆಯ ಎಡಭಾಗದಲ್ಲಿ ನೋವು ಕಾಣಿಸುತ್ತದೆ.ಮಲಬದ್ಧತೆಯನ್ನು ಡಿಶ್ಚೆಜಿಯಾ ಎಂದೂ ಕರೆಯಲಾಗುತ್ತದೆ. ಮಲವಿಸರ್ಜನೆ ಮಾಡಲು ಕಷ್ಟಪಡುವ ಹಾಗೂ ಕರುಳಿನ ಚಲನೆಯು ಸರಿಯಾಗಿ ಇಲ್ಲದೆ ಇರುವಂತಹ ವ್ಯಕ್ತಿಗಳಲ್ಲಿ ಈ ನೋವು ಕಾಣಿಸಿಕೊಳ್ಳುತ್ತದೆ.

ವಾಯು ಬಂಧನದಿಂದ ಕೂಡ ಹೊಟ್ಟೆಯ ಎಡಭಾಗದಲ್ಲಿ ನೋವು ಕಾಣಿಸುತ್ತದೆ. ಇದು ಹೊಟ್ಟೆಯ ಎಡಭಾಗದಲ್ಲಿ ಹಿಡಿದಿಟ್ಟಂತಹ ನೋವು ಕಾಣಿಸುತ್ತದೆ. ಕಿಡ್ನಿಯಲ್ಲಿ ಕಲ್ಲು ಇದ್ದರು ಕೂಡ ಹೊಟ್ಟೆಯ ಎಡ ಭಾಗದಲ್ಲಿ ನೋವು ಕಾಣಿಸುತ್ತದೆ. ಅಪಸ್ಥಾನೀಯ ಗರ್ಭಧಾರಣೆಯಿಂದಲೂ ಹೊಟ್ಟೆಯ ಎಡಭಾಗದಲ್ಲಿ ನೋವು ಕಾಣಿಸುತ್ತದೆ ಅಂಡಾಣುವು ಗರ್ಭಕೋಶದ ಹೊರಗಡೆ ಸ್ಥಾನ ಪಡೆದರೆ ಆಗ ಇದರಿಂದ ಅಪಸ್ಥಾನೀಯ ಗರ್ಭಧಾರಣೆ ನೋವು ಕಾಣಿಸುತ್ತದೆ. ಡೈವರ್ಟಿಕ್ಯುಲಮ್ ಕೂಡ ಹೊಟ್ಟೆಯ ಎಡಭಾಗದ ನೋವಿಗೆ ಕಾರಣವಾಗಿರಬಹುದು ಒಂದು ಅಥವಾ ಅದಕ್ಕಿಂತ ಹೆಚ್ಚಿನ ಡೈವರ್ಟಿಕ್ಯುಲಮ್ನ ಉರಿಯೂತ ಇದಕ್ಕೆ ಕಾರಣವಾಗಿದೇ.

ಅಂಡಾಶಯದ ಚೀಲದಿಂದಲೂ ಹೊಟ್ಟೆಯ ಎಡಭಾಗದ ನೋವು ಕಾಣಿಸುತ್ತದೆ ದ್ರವ ತುಂಬಿರುವಂತಹ ಚೀಲವಿರುವ ಅಂಡಾಶಯದ ಮೇಲ್ಮೈ ಅಥವಾ ಒಳಗಿನ ಭಾಗವನ್ನು ಅಂಡಾಶಯದ ಚೀಲವೆಂದು ಕರೆಯಲಾಗುತ್ತದೆ. ಇದರಿಂದ ಹೊಟ್ಟೆಯ ಎಡಭಾಗದಲ್ಲಿ ನೋವು ಕಾಣಿಸುತ್ತದೆ. ಹಾಗಾಗಿ ಹೊಟ್ಟೆಯ ನೋವು ಅಥವಾ ಹೊಟ್ಟೆಯ ಎಡ ಭಾಗದಲ್ಲಿ ನೋವು ಬಂದರೆ ತಕ್ಷಣ ವೈದ್ಯರ ಬಳಿ ಹೋಗಿ ಚಿಕಿತ್ಸೆ ಪಡೆಯಿರಿ ಇದರಲ್ಲಿ ಯಾವುದೇ ಲಕ್ಷಣ ಇದ್ದು ಅದು ಕೊನೆಯ ಹಂತಕ್ಕೆ ತಲುಪಿದರೆ ಪ್ರಾಣಕ್ಕೆ ಆಪತ್ತು ಬರುತ್ತದೆ. ಈ ಆರೋಗ್ಯ ಮಾಹಿತಿ ತಪ್ಪದೇ ಶೇರ್ ಮಾಡಿರಿ ಎಲ್ಲರಿಗು ಸಹಾಯ ಆಗುತ್ತೆ.

LEAVE A REPLY

Please enter your comment!
Please enter your name here