ಹಗಲು ರಾತ್ರಿ ಎಂಬುದನ್ನು ನೋಡದೆ ಎಲ್ಲರೂ ದುಡಿಯುವುದು ಹಣ ಸಂಪಾದನೆ ಮಾಡಲು ಆದರೆ ಕೆಲವರ ಮನೆಯಲ್ಲಿ ಎಷ್ಟೇ ಹಣವನ್ನು ದುಡಿದರು ಅದು ಸ್ವಲ್ಪ ಕೂಡ ಉಳಿಯದೆ ಎಲ್ಲವೂ ಖರ್ಚು ಆಗುತ್ತದೆ ಆದರೆ ಇದು ಯಾರಿಗೆ ಇಷ್ಟ ಹೇಳಿ ಎಲ್ಲರೂ ಇಷ್ಟ ಪಡುವುದು ಲಕ್ಷ್ಮಿ ಸದಾ ಮನೆಯಲ್ಲಿ ನೆಲೆಸಿರಬೇಕು ಯಾವುದೇ ಸಮಯದಲ್ಲೂ ಆರ್ಥಿಕ ಸಮಸ್ಯೆ ಎಂಬುದು ಬರಬಾರದು ಎಂದು ಆಸೆ ಪಡುತ್ತಾರೆ. ಅದಕ್ಕಾಗಿ ಮನೆಯಲ್ಲಿ ಲಕ್ಷ್ಮಿ ದೇವಿಯ ಫೋಟೋ ವಿಗ್ರಹವನ್ನು ಇಟ್ಟು ಪೂಜಿಸುತ್ತಾರೆ ಹಾಗೂ ವಿಶೇಷ ದಿನಗಳಲ್ಲಿ ವಿಶೇಷವಾಗಿ ಪೂಜೆ ಸಲ್ಲಿಸುತ್ತಾರೆ.
ಆದರೆ ಲಕ್ಷ್ಮಿ ಸದಾ ಮನೆಯಲ್ಲೇ ನೆಲೆಸಿರಬೇಕು ಎಂದರೆ ಏನು ಮಾಡಬೇಕು ಎಂದು ತಿಳಿಸುಕೊಳ್ಳೋಣ ಬನ್ನಿ. ಬೆಳ್ಳಿ ಶುದ್ಧತೆಯ ಸಂಕೇತ ಅದರಲ್ಲಿ ಅನೇಕ ಔಷದೀಯ ಗುಣಗಳಿವೆ ಮತ್ತು ಅದರ ಅಧಿಪತಿ ಶುಕ್ರ. ಶುಕ್ರ ಎಂದರೆ ಲಕ್ಷ್ಮೀ ಹಣ ಸಮೃದ್ಧಿಯ ಸಂಕೇತ. ಹಾಗಾಗಿ ಪ್ರತಿಯೊಬ್ಬ ಗೃಹಿಣಿಯು ಮತ್ತು ಮನೆಯಲ್ಲಿರುವ ಹೆಣ್ಣುಮಕ್ಕಳು ಬೆಳ್ಳಿಯನ್ನು ಧರಿಸಬೇಕು.

ಪ್ರತಿಯೊಬ್ಬ ಗೃಹಿಣಿ ಮತ್ತು ಹೆಣ್ಣು ಮಗಳು ಕೂಡ ಕಾಲಿಗೆ ಕಾಲ್ಗೆಜ್ಜೆಯನ್ನು ಅದರಲ್ಲೂ ಬೆಳ್ಳಿಯ ಕಾಲ್ಗೆಜ್ಜೆಯನ್ನು ಧರಿಸಬೇಕು ಏಕೆಂದರೆ ಹೆಣ್ಣು ಮಕ್ಕಳು ಬೆಳ್ಳಿಯ ಕಾಲ್ಗೆಜ್ಜೆಯನ್ನು ಧರಿಸಿದ ಮೇಲೆ ಅವರು ನೆಡೆದಾಡುವಾಗ ಬರುವ ಲಯಬದ್ದ ಸದ್ದು ಇಂಪಾದ ದ್ವನಿ. ಆ ಗೆಜ್ಜೆಯ ನಾದದಿಂದ ಬರುವ ಶಬ್ದವನ್ನು ಕೇಳಿಸಿಕೊಂಡು ಸಾಕ್ಷಾತ್ ಲಕ್ಷ್ಮಿಯೇ ಆ ಮನೆಯನ್ನು ಹುಡುಕಿಕೊಂಡು ಬರುತ್ತಾಳೆ ಬಂದು ಆ ಮನೆಯಲ್ಲಿ ಸದಾಕಾಲ ನೆಲೆಸುತ್ತಾಳೆ ಎಂಬುದು ನಮ್ಮ ಹಿರಿಯರ ಮಾತು.
ಮನೆಯು ಸದಾ ಸ್ವಚ್ಛತೆ ಇಂದ ಇರಬೇಕು. ಸಂಜೆ ನಂತರ ಯಾವುದೇ ಕಾರಣಕ್ಕೂ ಕಸ ಗುಡಿಸಿ ಬಿಸಾಡಬಾರದು. ಮನೆಯ ಅಗ್ನಿ ಮೂಲೆಯಲ್ಲಿ ಯಾವುದೇ ಕಾರಣಕ್ಕೂ ಕಸ ಸ್ವಲ್ಪವು ಇರಬಾರದು ಆ ಸ್ಥಳ ಹೆಚ್ಚು ಶುಬ್ರತೆಯಿಂದ ಇಟ್ಟುಕೊಳ್ಳುವುದು ಸೂಕ್ತ. ಮನೆಯು ಸದಾ ಶಾಂತವಾಗಿ ಇರಬೇಕು ಹೆಚ್ಚು ಗಲಿ ಬಿಲಿ ಇರಬಾರದು. ನಿತ್ಯ ಲಕ್ಷ್ಮಿ ದೇವಿಯ ಪ್ರಾರ್ಥನೆ ಜಪ ತಾಪ ಪೂಜೆಗಳು ನೆಡೆಯಬೇಕು. ಪಾಪ ಅಧರ್ಮ ಅಧರ್ಮ ಸ್ವಾರ್ಥ ತುಂಬಿರುವ ಮನೆಗೆ ಲಕ್ಷ್ಮಿ ಕಾಲಿಡುವುದಿಲ್ಲ ಗುರು ತಂದೆ ತಾಯಿ ಹಿರಿಯರಿಗೆ ಗೌರವವಿಲ್ಲದ ಮನೆಯಲ್ಲಿ ನಾನಿರುವುದಿಲ್ಲ ಎಂದಿದ್ದಾಳೆ ಲಕ್ಷ್ಮಿ ಕಮಲದ ಮೇಲೆ ಕುಳಿತಿರುವ ಲಕ್ಷ್ಮಿ ಅಥವಾ ಭಗವಾನ್ ವಿಷ್ಣು ಹಾಗು ವಿಷ್ಣು ವಾಹನ ಗರುಡನ ಜೊತೆಗಿರುವ ಲಕ್ಷ್ಮಿ ಫೋಟೋವನ್ನು ಪೂಜಿಸಿದ್ರೆ ಲಕ್ಷ್ಮಿ ಬಹು ಬೇಗ ಹೋಲಿಯುತ್ತಾಳೆ. ಅಧರ್ಮ ದುರ್ಗುಣ ಕೆಟ್ಟ ಕೆಲಸ ಮಾಡುವವರ ಮನೆಯಲ್ಲಿ ಲಕ್ಷ್ಮಿ ಇರುವುದಿಲ್ಲ. ಮನೆಯಲ್ಲಿ ಒಂದು ಚೊಂಬಿಗೆ ನೀರು ತುಂಬಿ ಅದಕ್ಕೆ ಎಲೆ ಹಾಕಿ ತೆಂಗಿನ ಕಾಯಿಯನ್ನು ಇಟ್ಟು ಪೂಜಿಸಬೇಕು ಹೀಗೆ ಮಾಡಿದರು ಲಕ್ಷ್ಮಿ ಸದಾ ಮನೆಯಲ್ಲಿ ನೆಲೆಸಿರುತ್ತಾಳೆ. ಮಾಹಿತಿ ಶೇರ್ ಮಾಡಿ ಲಕ್ಷ್ಮಿ ಕೃಪೆಗೆ ಪಾತ್ರರಾಗಿರಿ.