ತೆಂಗಿನಕಾಯಿಯಲ್ಲಿದೆ ಹೃದಯ ರೋಗವನ್ನು ಗುಣಪಡಿಸುವ ಔಷಧಿ.

0
708

ತೆಂಗಿನಕಾಯಿ ಇದು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಎಲ್ಲರ ಮನೆಯಲ್ಲೂ ತೆಂಗಿನ ಕಾಯಿಯನ್ನು ಯಾವುದಾದರೂ ಒಂದು ರೂಪದಲ್ಲಿ ಬಳಕೆ ಮಾಡುತ್ತಾರೆ. ತೆಂಗಿನ ಕಾಯಿಯನ್ನು ಅಡುಗೆಯ ರುಚಿಯನ್ನು ಹೆಚ್ಚಿಸಲು ಬಳಸುತ್ತಾರೆ. ಇನ್ನು ದೇವರ ಕಳಸಕ್ಕೆ ಬಳಸುತ್ತಾರೆ. ಈ ತೆಂಗಿನ ಮರವನ್ನು ಕಲ್ಪವೃಕ್ಷ ಎಂದು ಕೂಡ ಕರೆಯುತ್ತಾರೆ ಏಕೆಂದರೆ ತೆಂಗಿನ ಮರ ಕೊಡುವ ತೆಂಗಿನ ಕಾಯಿ ಇದರ ಗರಿ ಕಾಂಡ ಎಲ್ಲವು ಕೂಡ ಉಪಯೋಗಕರವಾಗಿವೆ. ಆದರೆ ಇತ್ತೇಚೆಗೆ ಸಂಶೋಧನೆ ಪ್ರಕಾರ ಒಂದಿಷ್ಟು ಉಪಯುಕ್ತ ಮಾಹಿತಿ ವಿಜ್ಞಾನಿಗಳು ಕಂಡು ಹಿಡಿದಿದ್ದಾರೆ. ತೆಂಗಿನ ಕಾಯಿಯಲ್ಲಿ ವಿಟಮಿನ್ ಇ ವಿಟಮಿನ್ ಬಿ ಮತ್ತು ವಿಟಮಿನ್ ಸಿ ಕ್ಯಾಲ್ಸಿಯಂ ಕಬ್ಬಿಣಾಂಶ ಫಾಸ್ಪರಸ್ ಮತ್ತು ಖನಿಜಾಂಶಗಳು ಆಲ್ಕಲೈನ್ ಎಣ್ಣೆಯ ಅಂಶವು ಹೇರಳವಾಗಿದೆ. ಆದರೂ ಕೂಡ ತೆಂಗಿನ ಕಾಯಿಯನ್ನು ಸೇವಿಸುವುದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ಬರುತ್ತದೆ ದೇಹದಲ್ಲಿ ಕೊಬ್ಬು ಹೆಚ್ಚುತ್ತದೆ ಎಂದು ತೆಂಗಿನ ಕಾಯಿಯನ್ನು ಸೇವಿಸುವುದನ್ನು ಕಡಿಮೆ ಮಾಡುತ್ತಾರೆ.

ಆದರೆ ಈ ತೆಂಗಿನ ಕಾಯಿಯನ್ನು ಸೇವಿಸುವುದರಿಂದ ಏನೆಲ್ಲ ಉಪಯೋಗ ಇದೆ ಎಂದು ತಿಳಿದರೆ ಖಂಡಿತವಾಗಿ ಇದನ್ನು ಸೇವಿಸುತ್ತೇವೆ. ಕೊಬ್ಬರಿ ಎಣ್ಣೆಯಿಂದ ತಯಾರಿಸಿದ ಅಡುಗೆಯನ್ನು ಸೇವಿಸುವುದರಿಂದ ದೇಹದ ತೂಕವನ್ನ ಕಡಿಮೆ ಮಾಡಿಕೊಳ್ಳಬಹುದು. ತೆಂಗಿನ ಕಾಯಿ ಹೆಚ್ಚಿನ ಕೊಬ್ಬಿನಂಶವನ್ನು ಹೊಂದಿದ್ದರು ಕೂಡ ಹೃದಯದ ಆರೋಗ್ಯಕ್ಕೆ ತುಂಬಾ ಉತ್ತಮವಾದದ್ದು, ಹೇಗೆಂದರೆ ತೆಂಗಿನ ಕಾಯಿಯಲ್ಲಿ ಥರ್ಮೋಜೆನಿಕ್ ಗುಣವಿದ್ದು, ಇದು ದೇಹದ ಉಷ್ಣತೆ ಹೆಚ್ಚಾಗಲು ಕಾರಣವಾಗಿದೆ, ಇದು ದೇಹದ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ.

ತೆಂಗಿನ ಕಾಯಿ ಮಾತ್ರವಲ್ಲದೆ ತೆಂಗಿನ ಕಾಯಿಯ ಒಳಗೆ ಇರುವ ನೀರು ಕೂಡ ಹೆಚ್ಚಿನ ಪೌಷ್ಟಿಕಾಂಶವನ್ನು ಹೊಂದಿದೆ ಇದರಲ್ಲಿ ಪೊಟ್ಯಾಶಿಯಂ ಪ್ರಮಾಣ ಹೆಚ್ಚಿದ್ದು ಕಾರ್ಬೋಹೈಡ್ರೇಟ್ ಮತ್ತು ಸಕ್ಕರೆಯ ಪ್ರಮಾಣ ತುಂಬಾ ಕಡಿಮೆ ಇದೆ. ತೆಂಗಿನ ಕಾಯಿಯಲ್ಲಿ ಇರುವ ಎಳನೀರು ಕಿಡ್ನಿಯಲ್ಲಿರುವ ಕಲ್ಲುಗಳನ್ನ ಕರಗಿಸುವುದರ ಜೊತೆಗೆ ಮೂತ್ರನಾಳದ ಸೋಂಕನ್ನು ಕಡಿಮೆ ಮಾಡುತ್ತದೆ. ತೆಂಗಿನ ಕಾಯಿಯ ತುರಿಯನ್ನು ಮಿತವಾಗಿ ಗರ್ಭಿಣಿಯರು ಸೇವಿಸಿದರೆ ಹುಟ್ಟುವ ಮಗುವಿನ ಆರೋಗ್ಯ ಉತ್ತಮವಾಗಿ ಇರುತ್ತದೆ. ತೆಂಗಿನ ಕಾಯಿಯನ್ನು ಸೇವಿಸುವುದರಿಂದ ದೇಹದ ಮೂಳೆಗಳು ಬಲಗೊಳ್ಳುತ್ತವೆ. ಮನುಷ್ಯನ ದೇಹದಲ್ಲಿನ ರಕ್ತಹೀನತೆಗೆ ಕಬ್ಬಿಣ ಅಂಶದ ಕೊರತೆಯೇ ಮುಖ್ಯ ಕಾರಣ ಅದಕ್ಕಾಗಿ ನಿತ್ಯ ತೆಂಗಿನ ಹಾಲು ಅಥವಾ ತೆಂಗಿನ ಕಾಯಿಯನ್ನು ಬಳಸಿದರೆ ದೇಹಕ್ಕೆ ಬೇಕಾದ ಕಬ್ಬಿಣದ ಅಂಶ ಸಿಗುತ್ತದೆ. ಸಂಧಿವಾತ ಉರಿಯೂತದ ಸಮಸ್ಯೆ ಇರುವವರಿಗೆ ತೆಂಗಿನ ಹಾಲು ಅಥವಾ ತೆಂಗಿನ ಕಾಯಿ ಉತ್ತಮ ಮದ್ದು. ಹಾಗಾಗಿ ತೆಂಗಿನ ಕಾಯಿಯನ್ನು ಮಿತವಾಗಿ ಅಡುಗೆಯಲ್ಲಿ ಬಳಸುವುದನ್ನು ಅಭ್ಯಾಸ ಮಾಡಿಕೊಳ್ಳಿ ಇದರಿಂದ ಹಲವಾರು ಸಮಸ್ಯೆ ದೂರವಾಗುತ್ತದೆ. ನಮ್ಮ ವೆಬ್ಸೈಟ್ ಚಿತ್ರಗಳಿಗೆ ಮತ್ತು ಬರಹಗಳಿಗೆ ವಿಶೇಷ ಕಾಪಿ ರೈಟ್ಸ್ ಹೊಂದಿದ್ದು ಅನುಮತಿ ಇಲ್ಲದೆ ಚಿತ್ರಗಳು ಅಥವ ಬರಹಗಳು ಬರವಣಿಗೆ ನಕಲು ಮಾಡಿದ್ರೆ ಕಾನೂನು ರೀತಿಯ ಕ್ರಮ ತೆಗೆದುಕೊಳ್ಳುತ್ತೇವೆ.

LEAVE A REPLY

Please enter your comment!
Please enter your name here