ನಿಮ್ಮ ಕನಸಲ್ಲಿ ಈ ವಸ್ತುಗಳು ಬರುತ್ತಿದ್ದರೆ ಏನಾಗುತ್ತದೆ ಎಂದು ತಿಳಿಯಿರಿ.

0
1072

ಯಾರಿಗೆ ತಾನೇ ಕನಸು ಬರುವುದಿಲ್ಲ ಹೇಳಿ?? ಮನುಷ್ಯ ಎಂದ ಮೇಲೆ ಕನಸು ಬಂದೇ ಬರುತ್ತದೆ. ಕೆಲವರಿಗೆ ಎಲ್ಲ ಸಮಯದಲ್ಲಿ ಮಲಗಿದರು ಕೂಡ ಯಾವುದಾದರೂ ಒಂದು ಕನಸು ಬೀಳುತ್ತದೆ ಆದರೆ ಕೆಲವು ಕನಸುಗಳೆಲ್ಲ ನಿಜ ಆಗುವುದಿಲ್ಲ ಆದರೆ ಕೆಲವರಿಗೆ ತಾವು ಕನಸಲ್ಲಿ ಕಂಡ ಕನಸುಗಳು ನಿಜ ಜೀವನದಲ್ಲಿ ಆಗುತ್ತವೆ. ಆದರೆ ಕನಸುಗಳು ಕೆಲವು ಬಾರಿ ನಮಗೆ ಹೆಚ್ಚಿನ ಸಂತೋಷ ನೀಡುತ್ತದೆ. ಆದರೆ ಮತ್ತಷ್ಟು ಕನಸುಗಳು ಜೀವನದಲ್ಲಿ ನೆಮ್ಮದಿ ನಿದ್ರೆ ಇಲ್ಲದಂತೆ ಮಾಡುತ್ತದೆ.

ಕನಸಲ್ಲಿ ಒಂದಲ್ಲ ಎರಡಲ್ಲ ಹಲವಾರು ರೀತಿಯ ಕನಸುಗಳು ಬೀಳುತ್ತವೆ ಅದರಲ್ಲಿ ಕೆಲವು ಕನಸುಗಳಿಗೂ ನಮಗೆ ಸಂಬಂಧವೇ ಇರುವುದಿಲ್ಲ ಅಂತಹ ಕನಸುಗಳೆಲ್ಲವು ಬೀಳುತ್ತವೆ. ಆದರೆ ಈ ಕನಸುಗಳು ಬೀಳುವ ಸಮಯ ಕೂಡ ತುಂಬ ಮುಖ್ಯ ಏಕೆಂದರೆ ಅದರಲ್ಲಿ ಬೆಳಗ್ಗೆ ನಾಲ್ಕು ಗಂಟೆಯಿಂದ 5 ಗಂಟೆಯ ಒಳಗೆ ಬೀಳುವ ಕನಸುಗಳು ನಿಜವಾಗುತ್ತವೆ ಎಂಬ ನಂಬಿಕೆ ಸಹಜವಾಗಿದೆ. ಈ ಕನಸಿನಲ್ಲಿ ಅನೇಕ ವ್ಯಕ್ತಿಗಳು ಹಾಗೂ ವಸ್ತುಗಳು ಬಂದು ಹೋಗುತ್ತವೆ. ಆದ್ರೆ ಕನಸಿನಲ್ಲಿ ಬರೋದೆಲ್ಲಾ ಒಳ್ಳೆಯದೋ ಅಥವಾ ಕೆಟ್ಟದ್ದೋ ಅಂತ ಅನೇಕರಿಗೆ ಗೊತ್ತಿರುವುದಿಲ್ಲ. ಕೆಲವರು ಬ್ರಾಮ್ಹಿ ಮುಹೂರ್ತದಲ್ಲಿ ಬೀಳುವ ಕನಸುಗಳಿಗೆ ಹೆಚ್ಚಿನ ಬೆಲೆ ಕೊಡುತ್ತಾರೆ ಮತ್ತಷ್ಟು ಜನರು ಯಾವುದೇ ಪ್ರಾಮುಖ್ಯತೆ ನೀಡುವುದಿಲ್ಲ ಆದರೆ ಆ ಕನಸಿಗೂ ಜೀವನಕ್ಕೂ ಒಂದು ಸಂಭಂಧ ಇರೋದು ಅಂತು ನಿಜ.

ಆದರೆ ಅದರಲ್ಲಿ ಮುಖ್ಯವಾಗಿ ದೇವರ ದೇವ ಮಹಾದೇವ ಅಂದರೆ ಶಿವನಿಗೆ ಸಂಭಂದ ಪಟ್ಟ ವಸ್ತುಗಳು ಕನಸಿನಲ್ಲಿ ಬಂದ್ರೆ ನಮಗೆ ಅದೃಷ್ಟ ಎಂದು ಹೇಳುತ್ತಾರೆ ಹಾಗಾದರೆ ಶಿವನ ಯಾವ ವಸ್ತುಗಳು ಕನಸಲ್ಲಿ ಬಂದರೆ ಒಳ್ಳೆಯದು ಎಂದು ತಿಳಿಯೋಣ. ಸಾಕ್ಷಾತ್ ಶಿವನ ಪ್ರತಿರೂಪವಾದ ಶಿವಲಿಂಗ ಕನಸಲ್ಲಿ ಕಾಣಿಸಿಕೊಂಡ್ರೆ ಅದರ ಅರ್ಥ ಏನೆಂದರೆ ನಮಗೆ ಅನೇಕ ದಿನಗಳಿಂದ ಇದ್ದ ಸಮಸ್ಯೆಗಳಿಗೆ ಸದ್ಯದಲ್ಲಿಯೇ ಪರಿಹಾರ ಸಿಗುತ್ತದೆ ಎಂದರ್ಥ. ಹಾಗಾಗಿ ನಿಮ್ಮ ಕನಸಿನಲ್ಲಿ ಶಿವಲಿಂಗ ಕಾಣಿಸಿಕೊಂಡ ಮರುದಿನವೇ ಶಿವನ ದೇಗುಲಕ್ಕೆ ಹೋಗಿ ಶಿವಲಿಂಗಕ್ಕೆ ಹಾಲನ್ನು ಅರ್ಪಿಸುವುದು ಅಥವ ಮನೆಯಲ್ಲಿ ಇರುವ ಶಿವ ಲಿಂಗಕ್ಕೆ ಹಾಲಿನ ಅಭಿಷೇಕ ಮಾಡುವುದು ಸೂಕ್ತ.

ಇನ್ನು ನಮ್ಮ ಕನಸಿನಲ್ಲಿ ಶಿವನು ತಾಂಡವ ನೃತ್ಯವಾಡುತ್ತಿದ್ದಂತೆ ಕಂಡರೆ ಅದಕ್ಕೆ ಭಯಪಡಬೇಡಿ ಹೀಗೆ ಕನಸು ಬೀಳುವುದು ಕೆಲವೇ ಜನಕ್ಕೆ ಮಾತ್ರ ಇದು ನಮಗೆ ಶುಭ ಫಲದ ಸಂಕೇತ. ಸ್ವಲ್ಪ ಪ್ರಯತ್ನಪಟ್ಟರೆ ಯಶಸ್ಸು ಸಿಗುತ್ತೆ ಎಂಬುದು ಇದರ ಅರ್ಥ ಜೊತೆಗೆ ಈ ಕನಸು ಬೀಳುವುದು ಧನ ವೃದ್ಧಿಯಾಗುವುದರ ಸಂಕೇತವೂ ಕೂಡ. ಇನ್ನು ಕನಸಲ್ಲಿ ಶಿವನ ದೇವಸ್ಥಾನ ಕಂಡರೆ ನಮ್ಮನ್ನು ದೀರ್ಘ ಕಾಲದಿಂದ ಕಾಡುತ್ತಿದ್ದ ರೋಗ ರುಜಿನಗಳು ಬೇಗ ಗುಣವಾಗುತ್ತವೆ ಎಂದು ಅರ್ಥ. ಈ ಕನಸು ಬಿದ್ದ ಮರು ದಿನ ಶಿವನ ದೇಗುಲಕ್ಕೆ ಹೋಗಿ ಬಿಲ್ವ ಇಟ್ಟು ಪೂಜೆ ಸಲ್ಲಿಸಿದರೆ ಎಲ್ಲವೂ ಒಳ್ಳೆಯದಾಗುತ್ತದೆ.

ಶಿವನ ಕತ್ತನ್ನು ಸುತ್ತಿಕೊಂಡಿರುವ ಹಾವು ಕನಸಲ್ಲಿ ಕಾಣಿಸಿಕೊಂಡರೆ ಧನ ಲಾಭವಾಗುತ್ತದೆ ಎಂದರ್ಥ. ಇದೆ ಹಾವು ನಮ್ಮ ಹಿಂದೆ ಇರುವಂತೆ ಕಂಡ್ರೆ ನಮಗೆ ನಾಗದೇವತೆಯ ಕೃಪೆ ಸಿಕ್ಕಿದೆ ಎಂದು ಅರ್ಥ. ಹೀಗೆ ಶಿವನ ಯಾವುದೇ ವಸ್ತುಗಳು ನಿಮ್ಮ ಕನಸಲ್ಲಿ ಬಂದರು ಭಯ ಪಡುವ ಅವಶ್ಯಕತೆ ಇಲ್ಲ ಇದು ಒಳ್ಳೆಯ ಮುನ್ಸೂಚನೆ ಹಾಗಾಗಿ ಕನಸು ಬಿದ್ದ ಮರುದಿನ ತಪ್ಪದೆ ಶಿವನ ದೇಗುಲಕ್ಕೆ ಹೋಗಿ ಶಿವನಿಗೆ ಪೂಜೆ ಸಲ್ಲಿಸಿ. ಮತ್ತಷ್ಟು ಜನಕ್ಕೆ ಹಾವಿನ ಕನಸುಗಳು ಪದೇ ಪದೇ ಬೀಳುತ್ತಾ ಇರುತ್ತದೆ ಈ ರೀತಿಯ ಕನಸು ನಿಜಕ್ಕೂ ಶುಭ ಸೂಚಕ ಅಲ್ಲವೇ ಅಲ್ಲ ನಿಮ್ಮ ಜೀವನದಲ್ಲಿ ಮುಂದಕ್ಕೆ ಮಾನ ಹಾನಿ ಧನ ವ್ಯಯ ಆರೋಗ್ಯ ಸಮಸ್ಯೆ ಕಾಡುತ್ತದೆ ಎಂಬುದು ಈಗಲೇ ನಿಮಗೆ ಸೂಚನೆ ನೀಡುತ್ತದೆ. ಅದಕ್ಕಾಗಿ ನಾಗ ದೇವರಿಗೆ ಹೆಚ್ಚಿನ ಮಹತ್ವ ನೀಡಬೇಕು ಪ್ರಾರ್ಥನೆ ಮಾಡಬೇಕು. ನಿಮ್ಮ ಸಮಸ್ಯೆಗಳಿಗೆ ಒಮ್ಮೆ ಕರೆ ಮಾಡಿ ಒಂಬತ್ತು ಐದು ಮೂರು ಐದು ಒಂದು ಐದು ಆರು ನಾಲ್ಕು ಒಂಬತ್ತು ಸೊನ್ನೆ

LEAVE A REPLY

Please enter your comment!
Please enter your name here