ವ್ಯಾಪಾರದಲ್ಲಿ ಹೆಚ್ಚು ಲಾಭಗಳಿಸಲು ವಾಸ್ತು ಶಾಸ್ತ್ರ ಹೀಗಿದೆ

0
631

ಎಲ್ಲರು ಜೀವನವನ್ನು ನೆಡೆಸಲು ಏನಾದರೂ ಒಂದು ಕೆಲಸವನ್ನು ಮಾಡಲೇಬೇಕು ಅಂತಹ ಕೆಲಸಗಳಲ್ಲಿ ವ್ಯಾಪಾರ ಕೂಡ ಒಂದು ಇದು ಹಲವಾರು ಜನರ ಜೀವನವನ್ನು ಸುಖವಾಗಿ ನೆಡೆಸಲು ಸಹಾಯ ಮಾಡುತ್ತಿದೆ. ಆದರೆ ಯಾವುದೋ ಒಂದು ಹೊಸ ವಾಣಿಜ್ಯ ವಹಿವಾಟು ಅಥವಾ ವ್ಯಾಪಾರವನ್ನು ಪ್ರಾರಂಭಿಸಬೇಕಾದರೆ ಆದಕ್ಕೆ ಸೂಕ್ತವಾದ ಮುಹೂರ್ತವನ್ನು ನೋಡಿ ನಂತರ ವ್ಯಾಪಾರ ಪ್ರಾರಂಭಿಸುತ್ತಾರೆ ಆದರೆ ವ್ಯಾಪಾರ ಯಶಸ್ವಿಯಾಗಲು ಕೇವಲ ಮುಹೂರ್ತದ ಸಮಯ ನೋಡಿಕೊಂಡರೆ ಮಾತ್ರ ಸಾಕಾಗುವುದಿಲ್ಲ. ಬದಲಿಗೆ ವ್ಯಾಪಾರ ಸುಗಮವಾಗಿ ಹಾಗೂ ಅದೃಷ್ಟ ಖುಲಾಯಿಸಲು ಕೆಲವು ವಿಷಯಗಳನ್ನು ಪರಿಗಣಿಸಬೇಕು.

ಪ್ರತಿ ವ್ಯಾಪಾರ ಅಥವಾ ಕೆಲಸದ ಸ್ಥಳಗಳಲ್ಲಿ ವಾಸ್ತುವನ್ನು ಅನುಸರಿಸುವುದು ಅಗತ್ಯವಾಗಿದ್ದು. ಇವು ಧನಾತ್ಮಕ ಪರಿಣಾಮ ಬೀರುವ ಮೂಲಕ ವ್ಯಾಪಾರವನ್ನು ವೃದ್ಧಿಸುತ್ತವೆ. ಈ ಸುಲಭ ಕ್ರಮಗಳನ್ನು ಅನುಸರಿಸುವ ಮೂಲಕ ವಾಸ್ತುವನ್ನು ಉತ್ತಮಗೊಳಿಸುವುದು ಹೇಗೆಂದು ತಿಳಿದುಕೊಳ್ಳೋಣ. ವ್ಯಾಪಾರ ಅಥವಾ ಕೆಲಸದ ಸ್ಥಳದಲ್ಲಿ ಯಾವುದೇ ತಡೆ ಇರದಂತೆ ನೋಡಿಕೊಳ್ಳಬೇಕು ನಿಮ್ಮ ಅಂಗಡಿಯ ಸುತ್ತ ದೊಡ್ಡ ಕಲ್ಲುಗಲು ಮೊದಲಾದವು ಏನೇ ಇದ್ದರು ಕೂಡ ವ್ಯಾಪಾರ ಸ್ಥಳದೊಳಗೆ ಧನಾತ್ಮಕ ಶಕ್ತಿ ಪ್ರವೇಶವಾಗುವುದನ್ನು ತಡೆಯುತ್ತದೆ. ಇದು ವ್ಯಾಪಾರದಲ್ಲಿ ನಷ್ಟವನ್ನುಂಟು ಮಾಡುತ್ತದೆ.

ನಿಮ್ಮ ವ್ಯಾಪಾರದ ಸ್ಥಳದಲ್ಲಿ ವ್ಯಾಪಾರಕ್ಕೆ ಅಗತ್ಯವಾದ ಸೋಫಾ ಕುರ್ಚಿ ಮೇಜು ಕಪಾಟು ಪ್ರದರ್ಶನ ಕಪಾಟು ಡ್ರೆಸ್ಸಿಂಗ್ ಟೇಬಲ್ ಇತ್ಯಾದಿಗಳೆಲ್ಲಾ ನೈಋತ್ಯ ದಿಕ್ಕಿಗೆ ಮುಖ ಮಾಡುವಂತೆ ಇರಿಸಬೇಕು. ಇದರಿಂದ ಅತ್ಯಧಿಕ ಪ್ರಮಾಣದ ಧನಾತ್ಮಕ ಶಕ್ತಿ ಈ ಸ್ಥಳದಲ್ಲಿ ಅಗಮಿಸಲು ಸಾಧ್ಯವಾಗುತ್ತದೆ. ಕಚೇರಿ ಮತ್ತು ಮುಖ್ಯ ಸ್ಥಳದಲ್ಲಿ ಅಗತ್ಯವಿದ್ದಷ್ಟು ಮಾತ್ರವೇ ದಾಸ್ತಾನುಗಳನ್ನಿರಿಸಿ ಉಳಿದವನ್ನು ಗೋದಾಮಿನಲ್ಲಿ ನೈಋತ್ಯ ದಿಕ್ಕಿಗೆ ಮುಖ ಮಾಡುವಂತೆ ಇರಿಸಬೇಕು.

ವ್ಯಾಪಾರ ಸ್ಥಳದಲ್ಲಿ ಗಲ್ಲಾ ಪೆಟ್ಟಿಗೆಯ ಬಳಿ ಎಲ್ಲರೂ ದೇವರ ಫೋಟೋ ಅಥವಾ ಪುಟ್ಟ ವಿಗ್ರಹವನ್ನು ಇರಿಸಿ ಪೂಜೆ ಸಲ್ಲಿಸುತ್ತಾರೆ. ಈ ಫೋಟೋ ಅಥವಾ ವಿಗ್ರಹಗಳು ಉತ್ತರ ಅಥವಾ ಪೂರ್ವಾಭಿಮುಖವಾಗಿರುವಂತೆ ಇರಬೇಕು. ವಾಣಿಜ್ಯ ವಹಿವಾಟುಗಳನ್ನು ನಿರ್ವಹಿಸುವ ವ್ಯವಸ್ಥಾಪಕರ ಕೋಣೆಯಲ್ಲಿ ಖುರ್ಚಿಯನ್ನು ಪಶ್ಚಿಮಾಭಿಮುಖವಾಗಿ ಇರಬೇಕು. ಇದರಿಂದ ವ್ಯಾಪಾರ ಸ್ಥಳದಲ್ಲಿ ಧನಾತ್ಮಕ ಶಕ್ತಿ ಹೆಚ್ಚುವ ಮೂಲಕ ವಹಿವಾಟು ಸಹ ಉತ್ತಮಗೊಳ್ಳುತ್ತದೆ. ಹಣವನ್ನಿರಿಸಲು ತಿಜೋರಿಯನ್ನು ಬಳಸುವುದಾದರೆ. ಈ ಸ್ಥಳದಲ್ಲಿ ಪ್ರಖರ ಬೆಳಕಿನ ಮೂಲ ಇರಬಾರದು. ಏಕೆಂದರೆ ಈ ಪ್ರಖರ ಬೆಳಕು ವ್ಯಾಪಾರದ ಮೇಲೆ ವ್ಯತಿರಿಕ್ತ ಪರಿಣಾಮವನ್ನುಂಟು ಬೀರುತ್ತದೆ. ಗ್ರಾಹಕರೊಂದಿಗೆ ವ್ಯವಹರಿಸುವಾಗ ಪೂರ್ವಾಭಿಮುಖವಾಗಿ ಕುಳಿತು ಅಥವಾ ನಿಂತುಕೊಂಡಿದ್ದರೆ ವ್ಯಾಪಾರದಲ್ಲಿ ನಿಮಗೆ ಸಮೃದ್ಧಿ ಹೆಚ್ಚುತ್ತದೆ.

ಪಶ್ಚಿಮಾಭಿಮುಖವಾಗಿ ಕುಳಿತು ಗ್ರಾಹಕರನ್ನು ಎದುರುಗೊಳ್ಳುವುದನ್ನು ಸಾಧ್ಯವಾದಷ್ಟು ತಪ್ಪಿಸಿ. ಇದರಿಂದ ವ್ಯಾಪಾರಕ್ಕೂ ದಕ್ಕೆಯುಂಟಾಗುತ್ತದೆ ಹಾಗೂ ವ್ಯಾಪಾರಿಗೆ ಭಾರಿ ನಷ್ಟ ಉಂಟಾಗುತ್ತದೆ. ಇವುಗಳನ್ನು ಪಾಲಿಸಿದರೆ ವ್ಯಾಪಾರಕ್ಕೆ ಯಾವುದೇ ಸಮಸ್ಯೆ ಬರದೆ ಉತ್ತಮವಾಗಿ ವ್ಯಾಪಾರ ನೆಡೆಯುತ್ತದೆ ಮಿಕ್ಕಿದೆಲ್ಲವೂ ದೇವರು ನೋಡಿಕೊಳ್ಳುತ್ತಾರೆ ನಮ್ಮ ಪ್ರಯತ್ನ ಮಾಡುವುದು ಮಾಡೋಣ. ಈ ಉಪಯುಕ್ತ ಮಾಹಿತಿ ತಪ್ಪದೇ ಶೇರ್ ಮಾಡಿರಿ ಎಲ್ಲರಿಗು ಸಹಾಯ ಆಗುತ್ತೆ.

LEAVE A REPLY

Please enter your comment!
Please enter your name here