ನಮ್ಮ ಇಂದಿನ ಲೇಖನದಲ್ಲಿ ಶೂ ಬಗ್ಗೆ ಅತ್ಯಂತ ಉಪಯುಕ್ತ ಮಾಹಿತಿ ನೀಡಿದ್ದು ಕಡೆವರೆಗೂ ಓದಿ ತಪ್ಪದೇ ಶೇರ್ ಮಾಡಿರಿ. ಮನುಷ್ಯನ ದೇಹದಲ್ಲಿ ಇರುವ ಕೆಟ್ಟ ನೀರು ಹೊರಗೆ ಹೋಗುವುದು ಇದನ್ನು ಬೆವರು ಎನ್ನುತ್ತೇವೆ ಇದು ಹೊರ ಬಂದಾಗ ಮನುಷ್ಯನ ದೇಹದಿಂದ ಕೆಟ್ಟ ವಾಸನೆ ಬರುತ್ತದೆ ಈ ವಾಸನೆ ಕೇವಲ ಅವನಿಗೆ ಮಾತ್ರವಲ್ಲದೆ ಅಕ್ಕ ಪಕ್ಕ ಇರುವವರಿಗೆಲ್ಲ ಹೊಡೆಯುತ್ತದೆ ಆದರೆ ಈ ವಾಸನೆಯಿಂದ ತಪ್ಪಿಸಿಕೊಳ್ಳಲು ಪರ್ಫ್ಯೂಮ್ ಅನ್ನು ಕೆಲವರು ಬಳಸುತ್ತಾರೆ.
ಆದರೆ ಕಾಲಿಗೆ ಶೂ ಅನ್ನು ತುಂಬಾ ಸಮಯ ಧರಿಸಿದಾಗ ಅದು ಬೆವತು ಕಾಲುಗಳೆಲ್ಲ ಕೆಟ್ಟ ವಾಸನೆ ಬರುತ್ತದೆ ಮತ್ತೋ ಒಂದಿಷ್ಟು ಸಮಸ್ಯೆಗಳು ಸಹ ಬರುತ್ತದೆ. ಆದರೆ ಈ ಕಾಲಿನಲ್ಲಿ ಬರುವ ಕೆಟ್ಟ ವಾಸನೆಯನ್ನು ತಡೆದು ಕಾಲಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳಲು ಏನು ಮಾಡಬೇಕು ಗೊತ್ತೇ. ಕಾಲಿನ ಉಗುರುಗಳನ್ನು ವಾರಕ್ಕೆ ಒಮ್ಮೆ ಆದರೂ ಕಟ್ ಮಾಡಬೇಕು ಹಾಗೂ ಉಗುರಿನ ಒಳಕ್ಕೆ ಕೊಳೆ ತುಂಬಿಕೊಳ್ಳದ ಹಾಗೆ ನೋಡಿಕೊಳ್ಳಬೇಕು. ಕಾಲಿನ ಹಿಮ್ಮಡಿಗಳು ಒಡೆಯದ ಹಾಗೆ ನೋಡಿಕೊಳ್ಳಬೇಕು ಒಡೆದಿದ್ದರೆ ಅದನ್ನು ಮೊದಲು ಗುಣ ಪಡಿಸಿಕೊಳ್ಳಬೇಕು.

ಸ್ನಾನ ಅದ ನಂತರ ಬೆರಳುಗಳ ಸಂದಿಯನ್ನು ಮರೆಯದೆ ಒರೆಸಿಕೊಳ್ಳಬೇಕು. ಚಹಾದ ಎಲೆಗಳಿಂದ ಡಿಕಾಕ್ಷನ್ ಮಾಡಿಕೊಂಡು ಅದರ ಒಳಗೆ ತಣ್ಣೀರು ಸೇರಿಸಿ ಅದರಲ್ಲಿ 15 ನಿಮಿಷಗಳ ಕಾಲ ಕಾಲುಗಳನ್ನು ಇಟ್ಟುಕೊಂಡು ಕುಳಿತುಕೊಳ್ಳಬೇಕು. ಆಪಲ್ ಸಿಡಾರ್ ವಿನಿಗರ್ ಅನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ನೀರು ಸೇರಿಸಿಕೊಂಡು ಹತ್ತಿಗೆ ಅದನ್ನು ಹೆಜ್ಜಿಕೊಂಡು ಅದರಿಂದ ಕಾಲುಗಳನ್ನು ಒರೆಸಿಕೊಳ್ಳಬೇಕು.
ನೀಲಗಿರಿ ಎಣ್ಣೆಯನ್ನು ತೆಗೆದುಕೊಂಡು ಅದರಿಂದ ಕಾಲನ್ನು ಚೆನ್ನಾಗಿ ಮಸಾಜ್ ಮಾಡಿಕೊಳ್ಳಬೇಕು ಹೀಗೆ ಮಾಡುವುದರಿಂದ ಕಾಲಿನ ವಾಸನೆ ಹೋಗುತ್ತದೆ. ಮತ್ತು ಕಾಲಿಗೆ ಹೆಚ್ಚು ಸಮಯ ಶೂ ಧರಿಸಿದ್ದರು ಯಾವುದೇ ಸಮಸ್ಯೆ ಬರೋದಿಲ್ಲ. ಕಾಲಿಗೆ ಹಾಕಿಕೊಳ್ಳುವ ಸಾಕ್ಸ್ ಅನ್ನು ತೊಳೆಯುವಾಗ ಸಾಕ್ಸ್ ಅನ್ನು ಉಲ್ಟಾ ಮಾಡಿ ತೊಳೆಯಬೇಕು. ಕಾಲಿಗೆ ಹಾಕಿಕೊಳ್ಳುವ ಸಾಕ್ಸ್ ಅನ್ನು ಆದಷ್ಟು ಕಾಟನ್ ಸಾಕ್ಸ್ ಅನ್ನು ಧರಿಸುವುದು ಒಳ್ಳೆಯದು. ಮನೆಯ ಒಳಗೆ ಓಡಾಡುವಾಗ ಬರಿ ಕಾಲಿನಲ್ಲಿ ಓಡಾಡಬೇಕು. ಕಾಲುಗಳು ಹೆಚ್ಚು ಬೆವರುತ್ತಿದ್ದರೆ ಕಾಲಿಗೆ ಟಾಲ್ಕಂ ಪೌಡರ್ ಅನ್ನು ಹಾಕಿಕೊಳ್ಳಿ.
ಕಾಲಿನಲ್ಲಿ ಯಾವುದೇ ರೀತಿಯ ಗಾಯಗಳು ಆಗಿದ್ದರು ಬೇಗ ಗುಣಪಡಿಸಿಕೊಳ್ಳಿ. ತಿಂಗಳಿಗೆ ಒಮ್ಮೆ ಆದರೂ ಸ್ವಲ್ಪ ನೀರಿಗೆ ಡೇಟಾಲ್ ಹಾಕಿ ಆ ನೀರಿನಿಂದ ಚಪ್ಪಲಿ. ಶೂ ಗಳನ್ನು ತೊಳೆಯಬೇಕು. ಮೂರು ದಿನಕ್ಕೆ ಒಮ್ಮೆ ಸಾಕ್ಸ್ ಬದಲಾವಣೆ ಮಾಡಬೇಕು. ರಾತ್ರಿ ಮಲಗುವಾಗ ಕಾಲಿಗೆ ಸ್ವಲ್ಪ ಕೊಬ್ಬರಿ ಎಣ್ಣೆಯನ್ನು ಹಚ್ಚಿಕೊಂಡು ಮಲಗಬೇಕು. ಶೂ ಧರಿಸಿ ಬಿಚ್ಚಿದ ನಂತರ ಕಾಲಗಳನ್ನು ಅಕ್ಕಿ ತೊಳೆದ ನೀರಿನಿಂದ ತೊಳೆದರೆ ವಾಸನೆ ಬರುವುದಿಲ್ಲ.ಹೀಗೆ ಮಾಡುವುದರಿಂದ ಕಾಲಿನಿಂದ ಬರುವ ಕೆಟ್ಟ ವಾಸನೆ ಬರುವುದನ್ನು ತಡೆಯಬಹುದು ಮತ್ತು ನಿಮ್ಮ ಕಾಲಿಗೆ ಹೆಚ್ಚು ಸಮಯ ಶೂ ಧರಿಸುವುದರಿಂದ ಆಗುವ ಸಮಸ್ಯೆಗಳನ್ನು ತಡೆಯುತ್ತದೆ. ಈ ಉಪಯುಕ್ತ ಮಾಹಿತಿ ತಪ್ಪದೇ ಶೇರ್ ಮಾಡಿರಿ ಎಲ್ಲರಿಗು ಸಹಾಯ ಆಗುತ್ತೆ