ಉಗುರು ಕಚ್ಚುವ ಅಭ್ಯಾಸ ಇದ್ದರೆ ತಿಳಿದುಕೊಳ್ಳಿರಿ

0
766

ಕೆಲವರ ಕೆಟ್ಟ ಅಭ್ಯಾಸ ಏನೆಂದರೆ ಉಗುರು ಕಚ್ಚುವುದು ಯಾವುದೇ ಕೆಲಸವನ್ನು ಮಾಡುತ್ತಿದ್ದರು ಏನೇ ಮಾಡುತ್ತಿದ್ದರು ಉಗುರು ಕಚ್ಚುತ್ತಿದ್ದರು ಆದರೆ ಇದು ಒಂದು ಕೆಟ್ಟ ಅಭ್ಯಾಸ. ಈ ಉಗುರು ಕಚ್ಚೋಕೆ ಕಾರಣ ಅವರ ಟೆನ್ಸನ್. ಒತ್ತಡಕ್ಕಾಗಿ ಅವರು ಉಗುರು ಕಚ್ಚುತ್ತಾರೆ ಎಂದು ತಿಳಿದುಕೊಳ್ಳುತ್ತೇವೆ. ಸದಾ ಉಗುರು ಕಚ್ಚುತ್ತಿರುವುದಕ್ಕೆ ಸರಿಯಾದ ಕಾರಣ ಏನು ಅಂದರೆ ಅವರು ಎಲ್ಲರಿಗಿಂತಲೂ ಎತ್ತರದಲ್ಲಿ ಇರಬೇಕು ಎಲ್ಲವೂ ಕೂಡ ಅವರದೇ ಸರಿಯಿರಬೇಕು ಎಲ್ಲದರಲ್ಲೂ ಫರ್ಫೆಪ್ಟ್ ಆಗಿ ಇರಬೇಕು ಎಂಬ ಭಾವನೆಯಿಂದ ಇವರು ಉಗುರು ಕಚ್ಚುತ್ತಾರೆ.

ಈ ಕೆಟ್ಟಅಭ್ಯಾಸ ಟೆನ್ಷನ್ನಿಂದಾಗಿ ಬರೋದಲ್ಲ ಇದಕ್ಕೆ ಕಾರಣ ತಾನು ಎಲ್ಲಾನೂ ಪರ್ಫೆಕ್ಟ್ ಆಗಿ ಮಾಡಬೇಕು ಎನ್ನುವ ಮನೋಭಾವದಿಂದ. ಈ ರೀತಿ ಮನೋಭಾವ ಇರುವವರಿಗೆ ಯಾವುದೇ ಸಮಯದಲ್ಲೂ ಸುಮ್ಮನೆ ಕುಳಿತು ಕೊಳ್ಳಲು ಆಗುವುದಿಲ್ಲ.ಏನಾದರೂ ಕೆಲಸವನ್ನು ಮಾಡಲೇಬೇಕು ಅನ್ನಿಸುತ್ತದೆ ಆದರೆ ಯಾವ ಕೆಲಸ ಮಾಡಬೇಕು ಎಂದು ಗೊತ್ತಾಗದೆ ಉಗುರು ಕಚ್ಚುತ್ತಾರೆ. ಜೊತೆಗೆ ಕೆಲವರಿಗೆ ಅವರು ಉಗುರು ಕಚ್ಚುತ್ತಿರುವುದು ಅವರಿಗೆ ಗೊತ್ತೇ ಇರುವುದಿಲ್ಲ.

ಮನಸ್ಸಿಗೆ ತುಂಬಾ ಬೇಜಾರ್ ಆದಾಗ ಮನಸ್ಸು ಕಿರಿಕಿರಿ ಅನ್ನಿಸಿದಾಗ ಉಗುರು ಕಚ್ಚುತ್ತೇವೇ. ಕೆಲವರು ಏನು ಸಾಧಿಸಲು ಆಗದೆ ಇರುವ ಸಮಯದಲ್ಲಿ ಉಗುರು ಕಚ್ಚುತ್ತ ಕುಳಿತು ಬಿಡುತ್ತಾರೆ. ಆದರೆ ಏನೇ ಕಾರಣಗಳು ಇದ್ದರು ಕೂಡ ಉಗುರು ಕಚ್ಚುವುದು ತುಂಬಾ ಅಪಾಯ ಇದರಿಂದ ಆರೋಗ್ಯವನ್ನು ಕೆಡಿಸಿಕೊಳ್ಳುತ್ತೇವೆ. ಹಾಗದರೆ ಉಗುರು ಕಚ್ಚುವುದರಿಂದ ಆರೋಗ್ಯದ ಮೇಲೇ ಏನೆಲ್ಲ ತೊಂದರೆ ಆಗುತ್ತದೆ ಎಂದು ತಿಳಿದುಕೊಳ್ಳೋಣ ಬನ್ನಿ. ಉಗುರನ್ನು ಕಚ್ಚುವುದರಿಂದ ಉಗುರು ತುಂಬಾ ತುಂಡಾಗಿ ಅದಕ್ಕೆ ಅಂಟಿಕೊಂಡಿರುವ ಚರ್ಮವೆಲ್ಲ ನೋವು ಬರುತ್ತದೆ.

ಉಗುರಿನ ಸುತ್ತಲು ಇರುವ ಚರ್ಮವು ಕೆಂಪಾಗಿ ಚರ್ಮದಲ್ಲಿ ಚಿಕ್ಕ ಚಿಕ್ಕ ಗುಳ್ಳೆಗಳು ಆಗುತ್ತವೆ. ಉಗುರಿನ ಸುತ್ತ ಇರುವ ಚರ್ಮಕ್ಕೆ ಇನ್ಫೆಕ್ಶನ್ ಆಗಿ ರಕ್ತ ಸುರಿಯುತ್ತದೆ. ಉಗುರು ಕಚ್ಚುವಾಗ ಉಗುರಿನಲ್ಲಿ ಇರುವ ಬ್ಯಾಕ್ಟೀರಿಯಾ, ವೈರಸ್, ಉಗುರಿನಿಂದ ಬಾಯಿಗೆ ಬಂದು ಇನ್ಫೆಕ್ಷನ್ ಆಗಿ ಹಲವಾರು ರೋಗಗಳು ಉತ್ಪತ್ತಿ ಆಗುತ್ತವೇ. ಹಲ್ಲಿನಲ್ಲಿ ಇರುವ ಎನಾಮಲ್ ಹೊರಟು ಹೋಗುತ್ತದೆ. ಸದಾ ಉಗುರು ಕಚ್ಚುವುದರಿಂದ ಹಲ್ಲುಗಳ ಶೇಪ್ ಬದಲಾಗುತ್ತದೆ. ಉಗುರು ಕಚ್ಚುವಾಗ ಸಣ್ಣ ಸಣ್ಣ ಉಗುರು ಹೊಟ್ಟೆಯ ಒಳಗೆ ಹೋಗಿ ಅದು ಹೊಟ್ಟೆಗೆ ಅಪಾಯವನ್ನು ತರುತ್ತದೆ.

ಹಾಗಾಗಿ ಯಾವುದೇ ಕಾರಣಕ್ಕೂ ಉಗುರು ಕಚ್ಚುವ ಕೆಟ್ಟ ಅಭ್ಯಾಸವನ್ನು ರೂಢಿಸಿಕೊಳ್ಳಬಾರದು ಜೊತೆಗೆ ಈ ಕೆಟ್ಟ ಅಭ್ಯಾಸ ಇರುವವರನ್ನು ನೋಡಿದರೆ ಬೇರೆಯವರಿಗೆ ಕೀಳು ಭಾವನೆ ಉಂಟಾಗುತ್ತದೆ. ಹಾಗಾಗಿ ಈ ಅಭ್ಯಾಸ ಇರುವವರು ಆದಷ್ಟು ಬೇಗ ಈ ಅಭ್ಯಾಸವನ್ನು ಬಿಟ್ಟುಬಿಡಿ ಆಗ ಆರೋಗ್ಯಕ್ಕೂ ಕೂಡ ಒಳ್ಳೆಯದು. ನಮ್ಮ ವೆಬ್ಸೈಟ್ ಎಲ್ಲ ಚಿತ್ರ ಮತ್ತು ಬರಹಗಳಿಗೆ ವಿಶೇಷ ಕಾಪಿ ರೈಟ್ಸ್ ಹೊಂದಿದ್ದು ನಮ್ಮ ಅನುಮತಿ ಇಲ್ಲದೆ ಚಿತ್ರಗಳು ಅಥವ ಬರಹಗಳು ನಕಲು ಮಾಡಿದ್ರೆ ಕಾನೂನು ರೀತಿಯ ಕ್ರಮ ತೆಗೆದುಕೊಳ್ಳುತ್ತೇವೆ.

LEAVE A REPLY

Please enter your comment!
Please enter your name here