ಬೆಳ್ಳಗೆ ಎದ್ದ ಮೇಲೆ ಹೀಗೆ ಮಾಡಿದ್ರೆ ದಿನ ಪೂರ್ತಿ ಉಲ್ಲಾಸದಿಂದ ಇರ್ತೀರ

0
488

ನಮ್ಮ ಜನರ ಜೀವನ ಎಂಬುದು ಕೇವಲ ಒತ್ತಡಗಳಿಂದ ಕೂಡಿದೆ ಏಕೆ ಅಂದರೆ ಬೆಳಿಗ್ಗೆ ಎದ್ದು ಕೆಲಸಕ್ಕೆ ಹೋದರೆ ಕೆಲಸದಲ್ಲಿ ಒತ್ತಡ ಮತ್ತೆ ಮನೆಗೆ ಬಂದರೆ ಸಂಸಾರದಲ್ಲಿ ಒತ್ತಡ ಒಟ್ಟಾರೆ ಎಲ್ಲಿಗೆ ಹೋದರು ಕೂಡ ಒತ್ತಡ ಎಂಬುದು ಮಾತ್ರ ನಮ್ಮನ್ನು ಬಿಟ್ಟು ಹೋಗುವುದಿಲ್ಲ. ಈ ಒತ್ತಡ ಎಂಬುದು ನಮ್ಮ ಮನಸ್ಸನ್ನು ಕೆಡಿಸುವ ಜೊತೆಗೆ ಆರೋಗ್ಯದಲ್ಲಿ ಕೂಡ ಏರು ಪೇರನ್ನು ತರುತ್ತದೆ ಒತ್ತಡ ಮಿತಿ ಮೀರಿದರೆ ಜೀವನವೇ ಜಿಗುಪ್ಸೆ ಆಗಿ ಬಿಡುತ್ತದೆ. ಹಾಗಾಗಿ ಈ ಒತ್ತಡ ಎಂಬುದನ್ನು ಕಡಿಮೆ ಮಾಡಿಕೊಳ್ಳುವ ಜವಾಬ್ದಾರಿ ನಮ್ಮ ಕೈಯಲ್ಲೇ ಇರುತ್ತದೇ ಏನೇ ಸಮಸ್ಯೆ ಬಂದರು ಕೂಡ ಅದನ್ನು ಸುಲಭವಾಗಿ ಪರಿಹಾರ ಮಾಡಿಕೊಳ್ಳಬೇಕು ಏಕೆಂದರೆ ಎಂತಹ ಸಮಸ್ಯೆ ಆದರೂ ಕೂಡ ಅದಕ್ಕೆ ಪರಿಹಾರ ಇದ್ದೆ ಇರುತ್ತದೆ ಆದರೆ ನಮ್ಮ ಹೀಗಿನ ಜನರು ತಾಳ್ಮೆಯಿಂದ ಯೋಚಿಸದೆ ಎಲ್ಲವನ್ನು ಗೊಂದಲ ಮಾಡಿಕೊಳ್ಳುತ್ತಾರೆ ಇದು ಒತ್ತಡವನ್ನು ಇನ್ನು ಹೆಚ್ಚಿಸುತ್ತದೆ.

ಹಾಗಾಗಿ ಈ ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಒಂದು ಸುಲಭ ವಿಧಾನ ಅಂದ್ರೆ ನಾವು ಬೆಳ್ಳಗೆ ಸಮಯ ಆಫೀಸಿಗೆ ಅಥವ ಇನ್ನಿತರೇ ಕೆಲಸ ಕಾರ್ಯಗಳಿಗೆ ಮುಂಚೆ ತಿನ್ನುವ ಆಹಾರದ ಕ್ರಮ. ನಿಮಗೆ ಇದನ್ನು ಓದಿ ಆಹಾರಕ್ಕೂ ಮತ್ತು ಒತ್ತಡಕ್ಕೆ ಏನು ಸಂಬಂಧ ಎಂದು ಅನಿಸುತ್ತದೆ ಆದರೆ ಒತ್ತಡ ಕಡಿಮೆ ಮಾಡುವ ಶಕ್ತಿ ಆಹಾರಕ್ಕೆ ಇದೆ ಅದನ್ನ ನಾವು ಸೂಕ್ತ ರೀತಿಯಲ್ಲಿ ತೆಗೆದುಕೊಳ್ಳಬೇಕು ಅಷ್ಟೇ. ಬೆಳಿಗ್ಗೆ ಸರಿಯಾದ ಸಮಯಕ್ಕೆ ತಿಂಡಿಯನ್ನು ತಿಂದರೆ ನಮ್ಮ ಎಷ್ಟೋ ಆರೋಗ್ಯದ ಸಮಸ್ಯೆ ದೂರ ಆಗುತ್ತದೆ ಅಲ್ಲವೇ ಹಾಗೆಯೇ ಬೆಳಗಿನ ಉಪಹಾರವನ್ನು ಸೇವಿಸುವುದರಿಂದ ಮನಸ್ಸಿನ ಒತ್ತಡ ಕೂಡ ಕಡಿಮೆ ಆಗುತ್ತದೆ. ಬೆಳಿಗ್ಗೆ ಸಮಯದಲ್ಲಿ ಒಳ್ಳೆಯ ಪೌಷ್ಟಿಕ ಅಂಶವನ್ನು ಹೊಂದಿರುವ ತಿಂಡಿಯನ್ನು ಸೇವಿಸಿದರೆ ಮಾತ್ರ ಅಷ್ಟೇ ಒತ್ತಡ ಎಂಬುದು ಸುಮಾರು 50% ಅಷ್ಟು ದೂರ ಆಗುತ್ತದೆ.

ಏಕೆಂದರೆ ರಾತ್ರಿ ಊಟ ಅದ ನಂತರ ನಾವು ಸುಮಾರು 10 ರಿಂದ 11 ಗಂಟೆಗಳ ಕಾಲ ಯಾವುದೇ ರೀತಿಯ ಆಹಾರವನ್ನು ಸೇವಿಸಿರುವುದಿಲ್ಲ ಇದರ ಜೊತೆಗೆ ಬೆಳಿಗ್ಗೆ ಕೂಡ ತಿಂಡಿ ಸೇವಿಸದೇ ಇದ್ದರೆ ದೇಹಕ್ಕೆ ಶಕ್ತಿ ಕೂಡ ಇರುವುದಿಲ್ಲ ಜೊತೆಗೆ ಯಾವುದೇ ವಿಷಯದ ಬಗ್ಗೆ ಯೋಚಿಸುವ ಸಾಮರ್ಥ್ಯ ಮೆದುಳಿಗೆ ಇರುವುದಿಲ್ಲ ಜೊತೆಗೆ ಯಾವುದೇ ವಿಷಯದ ಬಗ್ಗೆ ಸರಿಯಾದ ನಿರ್ಧಾರ ಮಾಡಲು ಆಗುವುದಿಲ್ಲ ಹಾಗಾಗಿ ಏನೇ ಸಮಸ್ಯೆ ಇದ್ದರು ಪರಿಹಾರ ಮಾಡಿಕೊಳ್ಳಲು ಹಾಗಾದೆ ಒತ್ತಡವನ್ನು ತಂದುಕೊಳ್ಳುತ್ತೇವೆ. ಬೆಳ್ಳಗೆ ಎದ್ದ ಕೊಡಲೇ ಖಾಲಿ ಹೊಟ್ಟೆಯಲ್ಲಿ ಒಂದು ಲೀಟರ್ ನೀರು ಕುಡಿಯಿರಿ ನಂತರ ನೀರಲ್ಲಿ ನೆನೆ ಹಾಕಿದ ನಾಲ್ಕು ಬಾದಾಮಿ ಬೀಜ ಎರಡು ಒಣ ಖರ್ಜೂರ ಮತ್ತು ನಾಲ್ಕು ಒಣ ದ್ರಾಕ್ಷಿ ತಿನ್ನಿರಿ. ನಂತರ ತಿಂಡಿ ಸಮಯಕ್ಕೆ ಪೌಷ್ಟಿಕ ಮೊಟ್ಟೆ ಮಿಶ್ರಿತ ಆಹಾರ ಸೇವನೆ ಅಥವ ರಾಗಿಯಲ್ಲಿ ಮಾಡಿದ ಆಹಾರ ಸೇವನೆ ಮಾಡುವುದು ಸೂಕ್ತ. ನೀವು ಸಮಯ ಸಿಕಿಲ್ಲ ಎಂದು ಇನ್ಸ್ಟಂಟ್ ಫುಡ್ ತಿನ್ನುತ್ತಾ ಇದ್ದರೆ ಆರೋಗ್ಯ ಹಾಳಾಗುವುದರ ಜತೆಗೆ ಅನೇಕ ರೀತಿಯ ಸಮಸ್ಯೆಗಳು ಬರುತ್ತದೆ.

ಆದರೆ ಬೆಳಿಗ್ಗೆ ಸರಿಯಾದ ಸಮಯಕ್ಕೆ ತಿಂಡಿಯನ್ನು ಸೇವಿಸಿದರೆ ದೇಹಕ್ಕೂ ಶಕ್ತಿ ಸಿಗುತ್ತದೆ ಹಾಗೆಯೇ ನಮ್ಮ ಮೆದುಳು ಕೂಡ ಎಲ್ಲ ವಿಷಯವನ್ನು ಗ್ರಹಿಸಿ ಅದಕ್ಕೆ ಪರಿಹಾರವನ್ನು ಒದಗಿಸುವ ಸಾಮರ್ಥ್ಯ ಇರುತ್ತದೆ ಹಾಗಾಗಿ ಯಾವುದೇ ಸಮಸ್ಯೆ ಬಂದರು ಅದಕ್ಕೆ ಪರಿಹಾರ ಹುಡುಕಿ ಸಮಸ್ಯೆಯನ್ನು ಪರಿಹರಿಸಿಕೊಳ್ಳುತ್ತೇವೆ ಇದು ಮನಸ್ಸಿಗೆ ಒತ್ತಡ ತರುವುದಿಲ್ಲ. ಹಾಗಾಗಿ ಯಾವುದೇ ಕಾರಣಕ್ಕೂ ಬೆಳಗ್ಗಿನ ಸಮಯದಲ್ಲಿ ಪೌಷ್ಟಿಕ ಆಹಾರ ಸೇವಿಸಬೇಕು ಒತ್ತಡವನ್ನು ಕಡಿಮೆ ಮಾಡಿಕೊಳ್ಳಬೇಕು.

LEAVE A REPLY

Please enter your comment!
Please enter your name here