ಎದೆ ಉರಿ ಅಥವ ಹುಳಿ ತೇಗು ಅಥವ ತಲೆ ನೋವು ಹೊಟ್ಟೆ ನೋವು ಏನೇ ಸಮಸ್ಯೆ ಇದ್ದರು ಮನೆ ಮದ್ದು ಮಾಡಿ

0
1847

ಗ್ಯಾಸ್ಟ್ರಿಕ್ ಸಮಸ್ಯೆ ಎಂಬುದು ಇತ್ತೀಚಿನ ದಿನಗಳಲ್ಲಿ ಸರ್ವೇ ಸಾಮಾನ್ಯವಾದ ವಿಷಯವಾಗಿದೆ. ಈ ಗ್ಯಾಸ್ಟ್ರಿಕ್ ಸಮಸ್ಯೆ ಬಂದರೆ ಎದೆಹುರಿ ತೇಗು ತಲೆನೋವು ಹೊಟ್ಟೆ ಉರಿ ಮತ್ತಷ್ಟು ಹೆಚ್ಚಾಯಿತು ಅಂದ್ರೆ ಎದೆ ನೋವು ಸಹ ಬರುತ್ತದೆ ಇದು ನಮ್ಮನ್ನು ಹೆಚ್ಚಿನ ರೀತಿಯಲ್ಲಿ ಕಾಡುತ್ತದೆ. ಆದರೆ ಈ ಗ್ಯಾಸ್ಟ್ರಿಕ್ ಸಮಸ್ಯೆ ಬಂದರೆ ಸಾಮಾನ್ಯವಾಗಿ ಎಲ್ಲರೂ ಮಾಡುವುದು ಗ್ಯಾಸ್ಟ್ರಿಕ್ ಮಾತ್ರೆಗಳನ್ನು ಸೇವಿಸುತ್ತಾರೆ ಅಥವ ಇನೋ ನೀರಿಗೆ ಕಲಿಸಿ ಕುಡಿಯುವುದು ಆದರೆ ಅದು ತಕ್ಷಣಕ್ಕೆ ಪರಿಹಾರ ಆಗುತ್ತದೆ ಆದರೆ ಮತ್ತೆ ಅದು ಬರುತ್ತದೆ. ಆದರೆ ಗ್ಯಾಸ್ಟ್ರಿಕ್ ಸಮಸ್ಯೆ ಬಂದಾಗಲೆಲ್ಲ ಮಾತ್ರೆಗಳನ್ನು ಸೇವಿಸಿದರೆ ಮತ್ತೊಂದು ಕಾಯಿಲೆಗೆ ಗುರಿಯಾಗಬೇಕು ನಿಮ್ಮ ಅಮೂಲ್ಯವಾದ ಕಿಡ್ನಿಗೆ ನೀವೇ ಸಮಸ್ಯೆ ಮಾಡಿಕೊಂಡ ಹಾಗೇ ಆಗುತ್ತದೆ.

ಹಾಗಾಗಿ ಈ ಗ್ಯಾಸ್ಟ್ರಿಕ್ ಸಮಸ್ಯೆಗೆ ಶಾಶ್ವತ ಪರಿಹಾರ ಎಂದರೆ ಅದು ಕರಿಬೇವಿನ ಪುಡಿಯಿಂದ ಸಾಧ್ಯ ಹಾಗಾದರೆ ಅದನ್ನು ಹೇಗೆ ತೆಗೆದುಕೊಳ್ಳುವುದು ಎಂಬುದನ್ನು ತಿಳಿಯೋಣ ಬನ್ನಿ. ಪ್ರತಿಯೊಬ್ಬರು ಅಡುಗೆಗೆ ಕರಿಬೇವು ಅನ್ನು ಬಳಸುತ್ತಾರೆ ಆದರೆ ಅಡುಗೆಗೆ ಎಂದು ಹಾಕಿ ಅದನ್ನು ಸೇವಿಸುವಾಗ ಕರಿಬೇವನ್ನು ಪಕ್ಕಕ್ಕೆ ಹಾಕುತ್ತಾರೆ ಒಟ್ಟಾರೆ ಅದನ್ನು ಆಹಾರದ ಜೊತೆಯಲ್ಲೂ ಸೇವಿಸುವುದಿಲ್ಲ. ಹಾಗಾಗಿ ಈ ಕರಿಬೇವನ್ನು ಪುಡಿ ಮಾಡಿ ಅದನ್ನು ಮನೆ ಮದ್ದಾಗಿ ಬಳಸಬೇಕು ಕರಿಬೇವನ್ನೂ ಪುಡಿ ಮಾಡುವುದು ಹೇಗೆ ಎಂದು ತಿಳಿಯೋಣ.

ಕರಿಬೇವಿನ ಪುಡಿಯನ್ನು ತಯಾರಿಸಲು ಬೇಕಾಗುವ ಪದಾರ್ಥಗಳು. ಕರಿಬೇವು ಮೆಣಸಿನಕಾಳು ಜೀರಿಗೆ ಉಪ್ಪು ಇದನ್ನು ತಯಾರಿಸುವುದು ಹೇಗೆ ಎಂದು ತಿಳಿಯೋಣ. ಒಂದು ಬಟ್ಟಲು ಕರಿಬೇವನ್ನು ತಗೆದುಕೊಂಡು ಅದನ್ನು ನೀರಿನಲ್ಲಿ ಚೆನ್ನಾಗಿ ತೊಳೆದು ಬಿಸಿಲಿನಲ್ಲಿ ಒಣಗಿಸಬೇಕು ಇದು ಪೂರ್ತಿಯಾಗಿ ಒಣಗಿದ ನಂತರ ಇದರ ಜೊತೆಗೆ ಜೀರಿಗೆ ಕಾಳುಮೆಣಸು ಉಪ್ಪು ಇವುಗಳನ್ನು ಸೇರಿಸಿ ಮಿಕ್ಸಿಯಲ್ಲಿ ಹಾಕಿ ನುಣ್ಣಗೆ ಪುಡಿ ಮಾಡಿಕೊಳ್ಳಬೇಕು. ಹೀಗೆ ಮಿಶ್ರಣ ಮಾಡಿದ ಕರಿಬೇವಿನ ಪುಡಿಯನ್ನು ಊಟದ ಜೊತೆಯಲ್ಲಿ ಸೇವಿಸಬೇಕು ಇಲ್ಲವಾದರೆ ಬಿಸಿ ಬಿಸಿ ಅನ್ನದ ಜೊತೆಗೆ ಸ್ವಲ್ಪ ತುಪ್ಪವನ್ನು ಹಾಕಿಕೊಂಡು ಕೂಡ ಸೇವಿಸಬಹುದು. ಹೀಗೆ ಸುಮಾರು ಸತತವಾಗಿ ಒಂದು ತಿಂಗಳು ತೆಗೆದುಕೊಂಡರೆ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಹತೋಟಿಗೆ ತರಬಹುದು. ಜೊತೆಗೆ ಎದೆಯೂರಿ. ಹೊಟ್ಟೆಯ ಉರಿ ತೇಗು ಇವೆಲ್ಲವೂ ಕೂಡ ಕಡಿಮೆ ಆಗುತ್ತದೆ.

ಹಾಗಾಗಿ ಮನೆಯಲ್ಲಿ ಈ ಕರಿಬೇವಿನ ಪುಡಿಯನ್ನು ತಯಾರಿಸಿಕೊಂಡು ಒಂದು ಗ್ಲಾಸಿನ ಡಬ್ಬಿಗೆ ಶೇಕರಿಸಿಟ್ಟುಕೊಂಡು ನಿತ್ಯ ಆಹಾರದಲ್ಲಿ ಸೇವಿಸಿ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ದೂರವಾಗಿ. ನಿಮಗೆ ಗ್ಯಾಸ್ ನಿಂದ ಬರುವ ಸಾಮಾನ್ಯ ತಲೆ ನೋವು ಹುಳಿ ತೇಗು ಎದೆ ಉರಿ ಇನ್ನು ಹತ್ತಾರು ಸಣ್ಣ ಸಣ್ಣ ಸಮಸ್ಯೆಗಳು ನಿಮ್ಮ ಬಳಿ ಸುಳಿಯುವುದಿಲ್ಲ. ಓದಿದರಲ್ಲ ಈ ಕರಿ ಬೇವಿನ ಮನೆ ಮದ್ದು ಮಾಡೋದು ಹೇಗೆ ಅಂತ ತಪ್ಪದೇ ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿರಿ ಎಲ್ಲರಿಗು ಈ ಮಾಹಿತಿ ಸಹಾಯ ಆಗುತ್ತೆ. ನಮ್ಮ ವೆಬ್ಸೈಟ್ ಎಲ್ಲ ಚಿತ್ರಗಳಿಗೆ ಮತ್ತು ಬರಹಗಳಿಗೆ ವಿಶೇಷ ಕಾಪಿ ರೈಟ್ಸ್ ಹೊಂದಿದ್ದು ಅನುಮತಿ ಇಲ್ಲದೆ ನಕಲು ಮಾಡಿದ್ರೆ ಕಾನೂನು ರೀತಿಯ ಕ್ರಮ ತೆಗೆದುಕೊಳ್ಳುತ್ತೇವೆ.

LEAVE A REPLY

Please enter your comment!
Please enter your name here