ನಮ್ಮ ದೇಶದಲ್ಲಿ ನೀರಿನ ಸಮಸ್ಯೆ ಎಷ್ಟಿದೆ ಎಂದು ಗೊತ್ತು ಅದರಲ್ಲೂ ಒಂದೊಂದು ಪ್ರದೇಶದಲ್ಲಿ ಕುಡಿಯುವ ನೀರಿಗಾಗಿ ಎಷ್ಟೋ ಕಿಲೋ ಮೀಟರ್ ನೆಡೆದುಹೋಗಿ ನೀರನ್ನು ತರುತ್ತಿದ್ದರು ಈಗಲೂ ಕೂಡ ಅಂತಹ ಪ್ರದೇಶಗಳು ಇವೆ. ಅವರು ಒಂದು ಹನಿ ನೀರಿಗಾಗು ಎಷ್ಟೆಲ್ಲ ಕಷ್ಟ ಪಡುತ್ತಾರೆ ಆ ಒಂದು ನೀರಿನ ಹನಿಯ ಬೆಲೆ ಕೂಡ ಅವರಿಗೆ ತಿಳಿದಿದೇ. ನೀರು ಪ್ರತಿಯೊಂದು ಜೀವಿಗೂ ತುಂಬಾ ಅಮೂಲ್ಯವಾದ ವಸ್ತು ಅದಕ್ಕಾಗಿಯೇ ಆದಷ್ಟು ನೀರನ್ನು ಮಿತವಾಗಿ ಬಳಸಿ ಎಂದು ಹೇಳುವುದು. ನಮ್ಮ ದೇಶದಲ್ಲಿ ಕೆಲವು ಕಡೆ ನೀರಾವರಿ ಜಮೀನು ಇದ್ದರೆ ಮತ್ತಷ್ಟು ಕಡೆ ಕುಡಿಯಲು ಹನಿ ಹನಿ ನೀರಿಗೂ ಹಾಹಾಕಾರ ಪಡಬೇಕು ಅಷ್ಟರ ಮಟ್ಟಿಗೆ ಸಮಸ್ಯೆ ಇದೆ ಈಗಂತೂ ಅಂತರ್ಜಲ ಕುಸಿದು ಸಾವಿರ ಅಡಿ ಬೋರು ಕೊರೆಸಿದರು ನೀರು ಬರುವುದಿಲ್ಲ.
ಹಾಗೆಯೇ ಬಾಹುಬಲಿ ಸಿನೆಮಾದಲ್ಲಿ ಕೂಡ ಶಿವನ ಜಲಾಭಿಷೇಕಕ್ಕೆ ತನ್ನ ತಾಯಿ ದೂರದಿಂದ ನೀರು ತರುತ್ತಿರುವುದನ್ನು ನೋಡಿದ ಬಾಹುಬಲಿ ಶಿವಲಿಂಗವನ್ನೇ ಹೊತ್ತು ನೀರಿನ ಬಳಿ ತಂದು ಇಟ್ಟದ್ದನ್ನು ನೀವು ನೋಡಿರಬಹುದು. ಇದು ತಾಯಿಯ ಮೇಲಿನ ಪ್ರೀತಿಗೆ ಒಂದು ಸಣ್ಣ ಉದಾಹರಣೆ ರೀತಿಯಲ್ಲಿ ಸಿನಿಮಾ ತೋರಿಸಿರಬಹುದು. ಹಾಗೆಯೇ ಛತ್ತೀಸ್ ಗಡ ಜಿಲ್ಲೆಯಲ್ಲಿ ಕೂಡ ನಿರೀನ ವಿಷಯಕ್ಕೆ ಒಂದು ಘಟನೆ ನೆಡೆದಿದೆ. ಅದು ಏನು ಎಂದು ತಿಳಿಯೋಣ ಬನ್ನಿ. ಛತ್ತೀಸ್ ಗಡ್ ನ ಇಬ್ಬರು ಬಾಲಕಿಯರೂ ತಮ್ಮ ತಾಯಿಯ ಕಷ್ಟವನ್ನು ನೋಡಲಾಗದೆ ನೀರಿಗಾಗಿ ಎಂತಹ ಕೆಲಸವನ್ನು ಮಾಡಿದ್ದಾರೆ ಎಂಬುದನ್ನು ನೋಡಿದರೆ ತುಂಬಾ ಅಚ್ಚರಿ ಆಗುತ್ತದೆ.

ಅದು ಏನು ಗೊತ್ತೇ ತಮ್ಮ ತಾಯಿ ನೀರಿಗಾಗಿ ನಿತ್ಯ 2 ರಿಂದ 3 ಕಿಲೋ ಮೀಟರ್ ಹೋಗಿ ನೀರು ಹೊತ್ತು ಕೊಂಡು ಬರುತ್ತಿದ್ದರು ಆ ತಾಯಿಗೆ ಸಾಕಷ್ಟು ಆರೋಗ್ಯ ಸಮಸ್ಯೆಗಳು ಇದ್ದವು ಆದರು ಅವರ ದಿನ ನಿತ್ಯದ ಬಳಕೆಗೆ ನೀರು ಬೇಕೇ ಬೇಕು. ಇದನೆಲ್ಲ ನೋಡಲಾಗದೆ ಅವರ ಮಕ್ಕಳು ಮನೆಯ ಹತ್ತಿರವೇ ಬಾವಿಯನ್ನೇ ಅಗೆದಿದ್ದಾರೆ. ಜೊತೆಗೆ ಕೆಲವೊಮ್ಮೆ ಕೆಲವೊಂದು ಜಾಗದಲ್ಲಿ ಎಷ್ಟೇ ಅಗೆದರು ನೀರು ಬರುವುದಿಲ್ಲ ಆದರೆ ಇವರ ಅದೃಷ್ಟಕ್ಕೆ ಕೇವಲ 25 ಅಡಿ ಅಗೆದಕ್ಕೆ ನೀರು ಬಂದಿದೆ ನಿಜಕ್ಕೂ ಇದು ಅಚ್ಚರಿ ಮೂಡಿಸುತ್ತದೆ.
ಇವರು ವಾಸ ಮಾಡುವ ಪ್ರದೇಶದ ಹೆಸರು ಕಸಿಯಾಪುರ ಎಂಬ ಸಣ್ಣ ಕುಗ್ರಾಮ ಎಂದು ಹಾಗೂ ಅಲ್ಲಿ ಕೇವಲ 15 ರಿಂದ 20 ಕುಟುಂಬಗಳು ಮಾತ್ರ ವಾಸ ಮಾಡುತ್ತಿರುವುದು. ಆ ಒಂದು ಪ್ರದೇಶಕ್ಕೆ 3 ಹ್ಯಾಂಡ್ ಪಂಪುಗಳಿವೆ ಅದರಲ್ಲಿ 2 ಪಂಪು ಕೆಟ್ಟು ಹೋಗಿವೆ ಜೊತೆಗೆ ಉಳಿದ 1 ಪಂಪು ಅಲ್ಲಿ ವಿಷಪೂರಿತ ಹಾಗು ಕಲುಷಿತ ನೀರು ಬರುತ್ತದೇ. ಹಾಗಾಗಿ ಇವರ ತಾಯಿ ಪಕ್ಕದೂರಿನಿಂದ 2 ರಿಂದ 3 ಕಿ .ಮೀ ದೂರದಿಂದ ನೀರು ತರುತ್ತಿದ್ದರು ಆಗಾಗಿ ಪ್ರತಿದಿನ ನೀರು ತರಲು ತುಂಬಾನೇ ಕಷ್ಟವಾಗುತ್ತದೆ ಅನ್ನೋ ಕಾರಣಕ್ಕೆ ಬಾವಿಯನ್ನು ಅಗೆಯಲು ಮುಂದಾದರು.
ಆದರೆ ಅಲ್ಲಿನ ಸ್ಥಳೀಯರು ಇವರನ್ನು ನೋಡಿ ನಗುತ್ತಾರೆ ಹಾಗು ಅಪಹಾಸ್ಯ ಮಾಡುತ್ತಾರೆ ಎಂಬುದು ಇದ್ದರು ಕೂಡ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಬಾವಿಯನ್ನು ಅಗೆಯಲು ನಿರ್ಧರಿಸುತ್ತಾರೆ. ಜೊತೆಗೆ ಇವರ ನಿರ್ಧಾರಕ್ಕೆ ಮನೆಯವರು ಕೂಡ ಸಹಾಯ ಮಾಡುತ್ತಾರೆ. ಇವರೆಲ್ಲರ ನೀರಿನ ಸಮಸ್ಯೆ ಬಗೆಹರಿಯುವುದರ ಜೊತೆಗೆ ಉರಿನಲ್ಲಿ ಸಾಕಷ್ಟು ಜನರು ಅನುಭವಿಸುತ್ತಾ ಇದ್ದ ಕಷ್ಟಕ್ಕೆ ಕೊನೆ ಆಗುತ್ತದೆ. ಇದೀಗ ಇವರ ಕಾರ್ಯಕ್ಕೆ ಸ್ಥಳೀಯ ಪಾಲಿಕೆ ಮೆಚ್ಚಿಕೊಂಡಿದೆ. ನಿಜಕ್ಕೂ ತಾಯಿ ಮೇಲೆ ಪ್ರೀತಿ ಇದ್ದರೆ ಏನು ಬೇಕಾದರು ಸಾಧಿಸಬಹುದು ಎಂಬುದಕ್ಕೆ ಇದು ಒಂದು ಸಣ್ಣ ಉದಾಹರಣೆ ಅಷ್ಟೇ. ಈ ಲೇಖನ ಇಷ್ಟ ಆಗಿದಲ್ಲಿ ತಪ್ಪದೇ ಶೇರ್ ಮಾಡಿರಿ ಮತ್ತು ನಮ್ಮ ಫೇಸ್ಬುಕ್ ಪೇಜ್ ಲೈಕ್ ಮಾಡಿರಿ.