ಈಗಂತೂ ಯಾರಿಗೆ ನೋಡಿದರು ದಡೂತಿ ದೇಹ ಅನವಶ್ಯಕ ಬೊಜ್ಜು ಇದಕ್ಕೆ ಮುಖ್ಯ ಕಾರಣ ನಾವು ತಿನ್ನುವ ಆಹಾರ ಕ್ರಮ ಆಗಿದೆ ಆದರೆ ಅತೀಯಾದ ಬೊಜ್ಜು ಇರುವುದು ಹಾರ್ಟ್ ಅಟ್ಯಾಕ್ ಗೆ ಆಹ್ವಾನ ನೀಡಿದಂತೆ ಎಂದು ಕೆಲವು ಜನಕ್ಕೆ ಮಾತ್ರವೇ ಗೊತ್ತು. ಹೊಟ್ಟೆಯಲ್ಲಿ ಇರುವ ಅನವಶ್ಯ ಬೊಜ್ಜು ಸಾಕಷ್ಟು ಆರೋಗ್ಯ ಸಮಸ್ಯೆ ನೀಡುತ್ತದೆ. ನಿಮಗೆ ಗೊತಿಲ್ಲದ ಹಾಗೆಯೇ ಸಾಕಷ್ಟು ಆರೋಗ್ಯ ಸಮಸ್ಯೆ ಉಂಟು ಮಾಡಲಿದೆ. ಇದಕೆಲ್ಲ ನಾವು ಇಂದು ನಿಮ್ಮ ಅಡುಗೆ ಮನೆಯಲ್ಲೇ ಸಿಗುವ ಆಹಾರ ಪದಾರ್ಥ ಬಳಕೆ ಮಾಡಿಕೊಂಡು ಸರಿ ಮಾಡುವ ವಿಧಾನ ತಿಳಿಸಿದ್ದೇನೆ ಸಂಪೂರ್ಣ ಓದಿ ತಪ್ಪದೇ ಶೇರ್ ಮಾಡಿರಿ.
ಎಲ್ಲರ ಅಡುಗೆ ಮನೆಯಲ್ಲಿ ಸಿಗುವ ಅರಿಶಿನ ಇದು ಅಡುಗೆಗೆ ಬಳಕೆ ಮಾಡುತ್ತಾರೆ ಜೊತೆಗೆ ಇದು ಎಲ್ಲ ರೋಗಕ್ಕೂ ಮದ್ದು ಇದು ಎಲ್ಲ ರೋಗಕ್ಕೂ ಆಂಟಿ ಸೆಪ್ಟಿಕ್ ಆಗಿ ಕೆಲಸವನ್ನು ನಿರ್ವಹಿಸುತ್ತದೆ. ಹಿಂದಿನ ಕಾಲದಲ್ಲಿ ಜನರು ಯಾವುದೇ ರೀತಿಯ ಗಾಯಗಳು ಆದರೂ ತಕ್ಷಣ ಆ ಗಾಯಕ್ಕೆ ಅರಿಶಿನವನ್ನು ಹಚ್ಚುತ್ತಿದ್ದರು. ಇನ್ನು ನಿಂಬೆ ಹಣ್ಣು ಇದನ್ನು ಕೂಡ ಅಡುಗೆಗೆ ಬಳಸುತ್ತಾರೆ ಜೊತೆಗೆ ಊಟದ ರುಚಿಯನ್ನು ಹೆಚ್ಚಿಸುತ್ತದೆ. ಈ ನಿಂಬೆಹಣ್ಣಿನ ರಸವನ್ನ ಬಳಸಿ ಜ್ಯುಸ್ ತಯಾರಿಸುತ್ತಾರೆ ಇದು ದೇಹಕ್ಕೆ ತುಂಬಾ ತಂಪನ್ನು ನೀಡುವ ಜೊತೆಗೆ ದೇಹಕ್ಕೆ ಶಕ್ತಿಯನ್ನು ಹೋದಗಿಸುತ್ತದೆ.

ಹಾಗೆಯೇ ಈ ಅರಿಶಿಣ ಹಾಗೂ ನಿಂಬೆರಸ ಇವುಗಳೆರಡನ್ನು ಉಪಯೋಗಿಸಿ ನಮ್ಮ ದೇಹದ ಸುತ್ತ ಇರುವ ಕೊಬ್ಬನ್ನು ಕಡಿಮೆ ಮಾಡಿ ಕೊಳ್ಳಬಹುದು. ಆದರೆ ಈ ಎರಡನ್ನೂ ಯಾವ ರೀತಿಯಲ್ಲಿ ಬಳಕೆ ಮಾಡಬೇಕು ಎಂಬುದನ್ನು ತಿಳಿಯೋಣ. ಮೊದಲು ಸ್ವಲ್ಪ ಹಾಲನ್ನು ಚೆನ್ನಾಗಿ ಬಿಸಿ ಮಾಡಿಕೊಳ್ಳಬೇಕು.ನಂತರ ಅದಕ್ಕೆ ಸ್ವಲ್ಪ ಸ್ವಲ್ಪ ನಿಂಬೆರಸ ಸ್ವಲ್ಲ ಜೇನುತುಪ್ಪವನ್ನು ಮಿಕ್ಸ್ ಮಾಡಿಕೊಳ್ಳಬೇಕು. ಇದರ ಜೊತೆಗೆ ವೆನೀಲಾ ಎಕ್ಸ್ಟ್ರಾಕ್ಟನ್ನು ಅನ್ನು ಬೆರೆಸಬೇಕು. ಆ ಬಳಿಕ ಆ ಮಿಶ್ರಣಕ್ಕೆ ಅರ್ಧ ಟೀಸ್ಫೂನ್ ಅರಿಶಿಣ ಹಾಕಿ ಸಣ್ಣ ಉರಿಯಲ್ಲಿ ಬಿಸಿ ಮಾಡಬೇಕು. ನಂತರ ಸ್ಟವ್ ಮೇಲಿಂದ ಕೆಳಗಿಳಿಸಿ ಅದನ್ನು ಸೋಸಿಕೊಳ್ಳಬೇಕು. ನಂತರ ಅದನ್ನು ಸ್ವಲ್ಪ ಬಿಸಿ ಮಾಡಿ ಕುಡಿಯಬೇಕು.
ಇದನ್ನು ಸತತವಾಗಿ ಒಂದು ವಾರದಿಂದ ಎರಡು ವಾರ ಕುಡಿದರೆ ಬೊಜ್ಜು ಕಡಿಮೆ ಆಗುತ್ತದೆ. ಒಂದು ನಿಂಬೆಹಣ್ಣನ್ನು ತೆಗೆದುಕೊಂಡು ಅದರ ರಸವನ್ನು ಚೆನ್ನಾಗಿ ಹಿಂಡಿ ಆ ರಸಕ್ಕೆ ಸ್ವಲ್ಪ ಅರಿಶಿಣ ಸ್ವಲ್ಪ ಮೆಣಸಿನ ಪುಡಿ. ಸ್ವಲ್ಪ ಆಲೀವ್ ಆಯಿಲ್ ಅನ್ನು ಮಿಕ್ಸ್ ಮಾಡಿಕೊಳ್ಳಬೇಕು ಇದನ್ನು ಬೆಳಿಗ್ಗೆ ಹಾಗೂ ರಾತ್ರಿ ಊಟ ಅದ ನಂತರ ತೆಗೆದುಕೊಳ್ಳಬೇಕು. ಹೀಗೆ ತೆಗೆದುಕೊಳ್ಳುವುದರಿಂದ ದೇಹದ ಸುತ್ತ ಇರುವ ಕೊಬ್ಬು ಕರಗುತ್ತದೆ. ಒಂದು ಗ್ಲಾಸ್ ಬೆಚ್ಚಗಿನ ನೀರಿಗೆ ನಿಂಬೆ ರಸ ಹಾಗೂ ಸ್ವಲ್ಪ ಅರಿಶಿಣವನ್ನು ಸ್ವಲ್ಪ ಜೇನುತುಪ್ಪವನ್ನು ಹಾಕಿಕೊಳ್ಳಬೇಕು ಈ ನೀರು ಉಗುರು ಬೆಚ್ಚಗೆ ಇದ್ದಾಗಲೇ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಹೊಟ್ಟೆಯ ಸುತ್ತ ಇರುವ ಬೊಜ್ಜು ಕಡಿಮೆ ಆಗುತ್ತದೆ. ಹೀಗೆ ಪ್ರತಿದಿನ ನಿಮ್ಮ ಆಹಾರದ ಜೊತೆಯಲ್ಲಿ ಅರಿಶಿನ ಮತ್ತು ನಿಂಬೆಹಣ್ಣಿನ ರಸವನ್ನು ಸೇವಿಸುವುದರಿಂದ ಹೊಟ್ಟೆಯ ಸುತ್ತ ಇರುವ ಬೊಜ್ಜು ಕಡಿಮೆ ಆಗುತ್ತದೆ.