ಈ ಗಿಡಗಳು ನಿಮ್ಮ ಮನೆ ಒಳಗೆ ಬೆಳೆಸುವುದು ಒಳ್ಳೆಯದು ಅಲ್ಲ ಏಕೆ ಗೊತ್ತೇ

0
966

ಮನೆಯ ಸುತ್ತ ಮುತ್ತ ಹಸಿರಾದ ಗಿಡ ಮರಗಳು ಇದ್ದರೆ ಮನೆಯು ಅಂದವಾಗಿ ಕಾಣುತ್ತದೆ ಜೊತೆಗೆ ಮನೆಗೆ ಒಳ್ಳೆಯ ಗಾಳಿ ಬರುತ್ತದೆ. ಆದರೆ ಮನೆಯ ಮುಂದೆ ಕೆಲವು ಜಾತಿಯ ಗಿಡ ಮರಗಳು ಇದ್ರೆ ನಮಗೆ ಹತ್ತಾರು ಲಾಭಗಳು ನಮಗೆ ಸಿಗುತ್ತೆ ಹಾಗಾದರೆ ಯಾವ ಗಿಡಗಳನ್ನು ಬೆಳೆಸಬೇಕು ಹಾಗೂ ಯಾವ ಗಿಡಗಳನ್ನು ಬೆಳೆಸಬಾರದು ಎಂದು ತಿಳಿಯೋಣ ಬನ್ನಿ. ಎಲ್ಲರಿಗೂ ಗೊತ್ತಿರುವ ಹಲಸಿನ ಮರ ಇದನ್ನು ಮನೆಯ ಬಳಿ ಬೆಳೆಸಬಾರದು ಏಕೆಂದರೆ ಹಲಸಿನ ಮರದಲ್ಲಿ ಹಾಲು ಬರುತ್ತದೆ ಜೊತೆಗೆ ಈ ಮರದಲ್ಲಿ ಅಂಟು ಕೂಡ ಬರುವುದರಿಂದ ಇದನ್ನು ಮನೆಯ ಬಳಿ ಬೆಳೆಸಬಾರದು. ಮತ್ತು ಶಾಸ್ತ್ರದ ಪ್ರಕಾರ ಹಲಸಿನ ಮರ ಮನೆ ಮುಂದೆ ಇರುವುದು ಸೂಕ್ತ ಅಲ್ಲ. ಆದ್ರೆ ಈ ಮರವನ್ನು ತೋಟದಲ್ಲಿ ಬೆಳೆಸಬಹುದು ಯಾವುದೇ ಸಮಸ್ಯೆ ಇರೋದಿಲ್ಲ.

ಗುಲಾಬಿ ಗಿಡ ಗುಲಾಬಿ ಹೂವು ಎಂದರೆ ಎಲ್ಲರಿಗೂ ಇಷ್ಟ ಏಕೆಂದರೆ ಗುಲಾಬಿ ಹೂವು ನೋಡಲು ತುಂಬಾ ಸುಂದರವಾಗಿರುತ್ತದೆ ಜೊತೆಗೆ ಈ ಗುಲಾಬಿ ಹೂವನ್ನು ಮಹಿಳೆಯರು ತಲೆಗೂ ಕೂಡ ಮೋಡಿದುಕೊಳ್ಳುತ್ತರೆ ಆದರೆ ಗುಲಾಬಿ ಗಿಡವನ್ನು ಮನೆಯ ಒಳಗೆ ಇಟ್ಕೊಂಡು ಬೆಳೆಸಬಾರದು ಏಕೆಂದರೆ ಈ ಗಿಡದಲ್ಲಿ ಮುಳ್ಳುಗಳು ಇರುತ್ತವೆ ಆದ್ದರಿಂದ ಮುಳ್ಳು ಬರುವ ಗಿಡಗಳನ್ನು ಮನೆಯಲ್ಲಿ ಬೆಳೆಸಬಾರದು ಅದು ಸಂಕಷ್ಟಗಳನ್ನು ಸೂಚಿಸುತ್ತದೆ ಆದ್ರೆ ನಿಮ್ಮ ಮನೆಗೆ ಟೆರೆಸ್ ಮತ್ತು ಹಿತ್ತಲು ಪ್ರತ್ಯೇಕ ಸ್ಥಳ ಇದ್ದರೆ ಯಾವುದೇ ಸಮಸ್ಯೆ ಇರೋದಿಲ್ಲ.

ನುಗ್ಗೆ ಕಾಯಿಯ ಮರ ನುಗ್ಗೆಕಾಯಿ ಮತ್ತು ನುಗ್ಗೆ ಸೊಪ್ಪು ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಮನೆಯ ಬಳಿ ಇದನ್ನು ಬೆಳೆಸುತ್ತಾರೆ ಆದರೆ ಮನೆಯ ಬಳಿ ನುಗ್ಗೆ ಕಾಯಿಯ ಮರವನ್ನು ಬೆಳೆಸಬಾರದು ಏಕೆಂದರೆ ಈ ಮರ ಮನೆಯ ಹತ್ತಿರವೇ ಇದ್ದರೆ ತುಂಬಾ ಕೆಟ್ಟ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಜೊತೆಗೆ ಮನೆಯಲ್ಲಿರುವವರಿಗೆ ಅನೇಕ ಕಷ್ಟ ಮತ್ತು ಸಮಸ್ಯೆಗಳು ಬರುತ್ತವೆ ಹಾಗಾಗಿ ನುಗ್ಗೆ ಕಾಯಿ ಮರವನ್ನು ಮನೆಯ ಮುಂದೆ ಬೆಳೆಸಬಾರದು ಸ್ವಲ್ಪ ಬದಿಗೆ ಬೆಳೆಸಬಹುದು. ಪರಂಗಿ ಹಣ್ಣಿನ ಮರ ಪರಂಗಿ ಹಣ್ಣಿನಲ್ಲಿ ಹಲವಾರು ರೀತಿಯ ಆರೋಗ್ಯದ ಗುಣಗಳನ್ನು ಹೊಂದಿದೆ ಹಾಗಾಗಿ ಸಾಮಾನ್ಯವಾಗಿ ಪರಂಗಿ ಹಣ್ಣಿನ ಮರವನ್ನು ಮನೆಯ ಬಳಿ ಬೆಳೆಸುತ್ತಾರೆ ಆದರೆ ಪರಂಗಿ ಹಣ್ಣಿನ ಮರವನ್ನು ಕೂಡ ಮನೆಯ ಬಳಿ ಬೆಳೆಸಬಾರದು ಏಕೆಂದರೆ ಪರಂಗಿ ಹಣ್ಣಿನ ಗಿಡದಿಂದ ಹಾಲು ಬರುತ್ತದೆ ಜೊತೆಗೆ ಇದರಿಂದ ಮನೆಯಲ್ಲಿನ ಹೆಣ್ಣು ಮಕ್ಕಳಿಗೆ ಅನೇಕ ಸಮಸ್ಯೆಗಳು ಬರುತ್ತವೆ ಮನೆ ಬದಿಯಿಂದ 20 ಅಡಿ ಅಂತರ ಮಾಡಿ ಬೆಳೆಸಿದರೆ ಸಮಸ್ಯೆ ಇರೋದಿಲ್ಲ.

ಮನೆಯ ಬಳಿ ಯಾವ ಗಿಡವನ್ನು ಬೆಳೆಸಬೇಕು ಎಂದು ನೋಡೋಣ. ಬಿದಿರು ಇದನ್ನು ಕೂಡ ಮನೆಯ ಬಳಿ ಬೆಳೆಸಬೇಕು ಬಿದಿರಿನ ಒಂದು ಕೊಂಬೆಯನ್ನು ಮನೆಯ ಬಳಿ ನೆಟ್ಟು ಬೆಳೆಸಿದರೆ ಮನೆಯಲ್ಲಿರುವ ಕಷ್ಟಗಳೇಲ್ಲವು ಪರಿಹಾರ ಆಗುತ್ತವೆ ಮತ್ತು ಬಿದಿರು ಗಾಳಿ ಬೀಸಿದಾಗ ಮನೆಯ ಗೋಡೆಗೆ ಬಂದು ಬಡಿಯುತ್ತಿದ್ದರೆ ಅದು ಎಷ್ಟು ಬಡಿಯುತ್ತದೆಯೋ ಅಷ್ಟು ಒಳ್ಳೆಯದು. ಜೊತೆಗೆ ಮನೆಯವರಿಗೆ ಬೇರೆಯವರ ಕೆಟ್ಟ ಕಣ್ಣಿನ ದೃಷ್ಟಿ ಬೀಳುವುದಿಲ್ಲ. ದೃಷ್ಟಿ ಬಿದ್ದರು ಬಿದಿರು ಎಲ್ಲವನ್ನು ನಾಶಪಡಿಸುತ್ತದೆ. ಮತ್ತು ಮನೆ ಮುಂದೆ ತಪ್ಪದೇ ತುಳಸಿ ಗಿಡ ಇಟ್ಟುಕೊಳ್ಳಬೇಕು ಇದು ಮನೆಗೆ ದುಷ್ಟ ಶಕ್ತಿಗಳು ಮನೆಗೆ ಬರದಂತೆ ತಡೆಯುತ್ತದೆ. ಹಾಗಾಗಿ ಮನೆಯ ಮುಂದೆ ಯಾವುದೇ ಗಿಡಗಳನ್ನು ಬೆಳೆಸುವ ಮೊದಲು ಯೋಚಿಸಿ ನಂತರ ಬೆಳೆಸುವುದು ತುಂಬಾ ಒಳ್ಳೆಯದು.

LEAVE A REPLY

Please enter your comment!
Please enter your name here