ಚಹಾ ಮಾರಿ ಸ್ಲಂ ಮಕ್ಕಳಿಗೆ ಶಿಕ್ಷಣ ನೀಡುತ್ತಿರುವ ವ್ಯಕ್ತಿ ಇವರು

0
576

ನಮ್ಮಲ್ಲಿ ಸಾಮಾನ್ಯವಾಗಿ ಸಾಕಷ್ಟು ಜನರು ಬಯಸುವುದು ಒಂದೇ ಅದು ಏನು ಅಂದ್ರೆ ಮೊದಲು ನಾವು ಉದ್ದಾರ ಆಗಬೇಕು ತಮಗೆ ತೃಪ್ತಿ ಆಗಬೇಕು ನಂತರ ಬೇರೆಯವರ ಬಗ್ಗೆ ಯೋಚಿಸುವುದು ಎಂದು. ಆದರೆ 100 ಕ್ಕೆ ಎಲ್ಲೋ 10 ರಷ್ಟು ಜನರು ತಮಗೆ ಎಷ್ಟೇ ಕಷ್ಟಗಳು ಇದ್ದರು ಅದನ್ನು ಪಕ್ಕಕ್ಕೆ ಇಟ್ಟು ಅನಾಥ ಮಕ್ಕಳ ಬಗ್ಗೆ ಮುತುವರ್ಜಿ ವಹಿಸುತ್ತಾರೆ ಅವರಿಗಾಗಿ ಅನಾಥ ಆಶ್ರಮಗಳು. ಟ್ರಾಸ್ಟ್ ಗಳನ್ನು ಸ್ಥಾಪಿಸಿ ಬಡ ಮಕ್ಕಳನ್ನು ನೋಡಿಕೊಳ್ಳುವುದಕ್ಕೆ ಕಷ್ಟ ಪಡುತ್ತಾರೆ. ಅಂತಹ ಸಂಸ್ಥೆಗಳ ಬಗ್ಗೆ ನಿಮಗೆ ತಿಳಿದಿರುತ್ತದೆ ಸಹಜ ಆದ್ರೆ ಇಂದು ಒಬ್ಬ ವಿಶೇಷ ವ್ಯಕ್ತಿ ಬಗ್ಗೆ ತಿಳಿಯೋಣ ಬನ್ನಿ. 65 ವರ್ಷ ಪ್ರಾಯದ ಚಹಾ ಮಾರುವ ವ್ಯಕ್ತಿಯೊಬ್ಬರು ತಮಗೆ ಅಷ್ಟು ವಯಸ್ಸಾದರು ಕೂಡ ಚಹಾ ಮಾರುತ್ತ ಅದರಿಂದ ಬಂದ ಹಣದಿಂದ ಸ್ಲಮ್ ಮಕ್ಕಳನ್ನು ನೋಡಿಕೊಂಡು ಅವರಿಗೆ ಶಿಕ್ಷಣ ನೋಡುತ್ತಿದ್ದರೆ.

ಇವರು ಒರಿಸ್ಸಾದ ಕಟಕ್‌ನ ಬಕ್ಷಿ ಬಜಾರ್‌ನಲ್ಲಿ ಚಹಾ ಅಂಗಡಿ ಇಟ್ಟುಕೊಂಡು ಅಲ್ಲಿ ಬೆಳಿಗ್ಗೆ 4 ಗಂಟೆಯಿಂದ 11 ಗಂಟೆವರೆಗೆ ಚಹಾ ಮಾರಿ ಅದರಿಂದ ಬಂದ ಆದಾಯದಲ್ಲಿ 50% ಆದಾಯವನ್ನು ಸ್ಲಮ್ ಮಕ್ಕಳ ಶಿಕ್ಷಣಕ್ಕೆ ನೀಡುತ್ತಿದ್ದಾರೆ. ಜೊತೆಗೆ ಆಶಾ ಆಶ್ವಾಸನ್ ಎಂಬ ಶಾಲೆಯನ್ನು ನಿರ್ಮಾಣ ಮಾಡಿ 3ನೇ ತರಗತಿ ವರೆಗೆ ಶಿಕ್ಷಣ ನೀಡುತ್ತಿದ್ದಾರೆ. ನಂತರ ಆ ಮಕ್ಕಳನ್ನು ಬೇರೆ ಸ್ಕೂಲ್‌ಗೆ ದಾಖಲಿಸುತ್ತಾರೆ. ಅಷ್ಟೇ ಅಲ್ಲದೇ ಬೀದಿ ಬದಿಯಲ್ಲಿ ಇರುವ ಮಕ್ಕಳಿಗೆ ಹಾಲು ಬಿಸ್ಕತ್ ಗಳನ್ನು ಹಂಚಿ ಅವರ ಹಸಿವನ್ನು ನೀಗಿಸುತ್ತಾರೆ ಇವರ ಈ ಕೆಲಸವನ್ನು ನೋಡಿ ಮೋದಿಜಿ ಅವರು ತಮ್ಮ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಇವರ ಬಗ್ಗೆ ಒಳ್ಳೆಯ ಮಾತುಗಳನ್ನು ಹೇಳಿದ್ದಾರೆ.

ನಮ್ಮ ತಂದೆಯ ಅನಾರೋಗ್ಯ ಪೀಡಿತ ಆದ ಕಾರಣ ನನಗೆ ಶಿಕ್ಷಣ ಪಡೆಯಲು ಸಾಧ್ಯವಾಗಲಿಲ್ಲ ಅಗಾಗಿ ನಮ್ಮ ಅಪ್ಪನ ಅಂಗಡಿಯಲ್ಲಿ ಚಹಾ ಮಾರಬೇಕಾಯಿತು ಆದರೆ ಈ ಮಕ್ಕಳು ಕೂಡ ಹಾಗೆ ಆಗಬಾರದು ಇವರು ಕಲಿತು ದೊಡ್ಡವರಾಗಬೇಕು ನನಗೆ ಹಸಿವಿನ ಬೆಲೆ ಗೊತ್ತು ಎಂಬುದು ರಾವ್ ಅವರ ಆಸೆ ಈ ಮಕ್ಕಳು ಓದು ಕ್ರೀಡೆ ಹೀಗೆ ಎಲ್ಲಾದರಲ್ಲೂ ಒಳ್ಳೆಯ ಅಭಿವೃದ್ಧಿ ಕಾಣಬೇಕು ಎಂಬುದು ರಾವ್ ಅವರ ಕನಸು. ರಾವ್ ಅವರ ಸಾಧನೆಯನ್ನು ನೋಡಿ ಅವರಿಗೆ ಜನವರಿ 25 ರಂದು ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಲ್ಲೊಂದಾದ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದರು.ನಿಜಕ್ಕೂ ನಾವು ಇಂತಹ ಮಹಾನ್ ವ್ಯಕ್ತಿಗಳು ನಮಗೆ ಸ್ಫೂರ್ತಿ ಆಗುತ್ತಾರೆ. ಎಷ್ಟೇ ಹಣ ಇದ್ದರೂ ಮತ್ತಷ್ಟು ಬೇಕು ಎನ್ನುವ ಸ್ವಾರ್ಥ ಜನರ ಮದ್ಯೆ ಇಂತಹ ಮಹಾನ್ ವ್ಯಕ್ತಿಗಳು ಬೆರಳೆಣಿಕೆಯಷ್ಟು ಮಾತ್ರ ಇದ್ದಾರೆ ತಪ್ಪದೇ ಶೇರ್ ಮಾಡಿ. ನಮ್ಮ ಈ ಲೇಖನ ಇಷ್ಟ ಆದ್ರೆ ನಕಲು ಮಾಡದೇ ಶೇರ್ ಮಾಡಿರಿ ಎಲ್ಲರಿಗು ರಾವ್ ಅವರ ಪರಿಚಯ ಆಗಲಿ.

LEAVE A REPLY

Please enter your comment!
Please enter your name here