ತಿರುಪತಿ ತಿಮ್ಮಪ್ಪನಿಗೆ ಮುಡಿ ಕೊಡ್ತಾ ಇದ್ರೆ ತಪ್ಪದೇ ಈ ಮಾಹಿತಿ ತಿಳಿಯಿರಿ

0
1000

ತಿರುಪತಿ ವೆಂಕಟೇಶ್ವರ ದೇವಸ್ಥಾನವು ಭಾರತದಲ್ಲೇ ಅತೀ ದೊಡ್ಡ ಹಾಗೂ ವಿಶ್ವದಲ್ಲೇ ಅತ್ಯಂತ ತುಂಬಾ ಪ್ರಾಚೀನವಾದ ದೇವಾಲಯವಾಗಿದೆ. ಈ ದೇಗುಲವು ಇಡೀ ಪ್ರಪಂಚದಲ್ಲೇ ತುಂಬಾ ವಿಶೇಷವಾದ ದೇಗುಲ. ಈ ದೇಗುಲದಲ್ಲಿ ಬೆಳಿಗ್ಗೆ ದೇವಸ್ಥಾನದ ಬಾಗಿಲನ್ನು ತೆಗೆಯುವುದರಿಂದ ಹಿಡಿದು ಪೂಜೆ ಅಭಿಷೇಕ ಮುಗಿಸಿ ಬಾಗಿಲನ್ನು ಮುಚ್ಚುವವರೆಗೂ ದೇವಸ್ಥಾನದ ವಿಧಿವಿಧಾನಗಳನ್ನು ತಪ್ಪದೆ ಪಾಲಿಸುತ್ತಾರೆ. ಜೊತೆಗೆ ಆಗಮ ಶಾಸ್ತ್ರದ ಪ್ರಕಾರವೇ ಇಲ್ಲಿ ಎಲ್ಲ ವಿಧಿವಿಧಾನಗಳು ನಡೆಯುವುದು. ತಿರುಪತಿ ತಿಮ್ಮಪ್ಪನ ದೇಗುಲದ ವಿಸ್ಮಯಗಳು ಒಂದಲ್ಲ ಎರಡಲ್ಲ ಇಲ್ಲಿ ನೆಡೆಯುವ ಪವಾಡಗಳು ತುಂಬಾ ಅಚ್ಚರಿ ಮೂಡಿಸುತ್ತವೆ. ಅಂತಹ ಎಷ್ಟೋ ಅಚ್ಚರಿಗಳಲ್ಲಿ ಒಂದಾಗಿರುವುದು ಅದು ಏನೆಂದರೆ ಇಲ್ಲಿನ ಶ್ರೀನಿವಾಸನ ಪೂರ್ತಿ ವಿಗ್ರಹ ಸಂಪೂರ್ಣವಾಗಿ ಸ್ವಯಂ ಉದ್ಭವವಾಗಿರುವ ಮೂರ್ತಿ ಈ ಮೂರ್ತಿಯನ್ನು ಯಾರೂ ಕೂಡ ಇಲ್ಲಿ ಸ್ಥಾಪನೆ ಮಾಡಿಲ್ಲ.

ಹಿಂದೆ ಶ್ರೀನಿವಾಸ ಹುತ್ತದಲ್ಲಿರುವಾಗ ಸಾಕ್ಷಾತ್ ಶಿವನೇ ಹಸುವಿನ ರೂಪದಲ್ಲಿ ಬಂದು ಹಾಲುಣಿಸುತ್ತಿರುತ್ತಾನೆ. ಇದನ್ನು ರಾಜಾ ಚೋಳನ ಅರಮನೆಯ ಹಸುಗಳನ್ನ ನೋಡಿಕೊಳ್ಳುತ್ತಿದ್ದ ದನಗಳನ್ನು ನೋಡಿಕೊಳ್ಳುವವನಿಗೆ ಹಸು ಹಾಲನ್ನು ಕೊಡದೇ ಇದ್ದುದೂ ತುಂಬಾ ಅನುಮಾನಕ್ಕೆ ಕಾರಣವಾಗಿರುತ್ತದೆ. ಅದಕ್ಕಾಗಿ ಒಂದು ದಿನ ಹಸುವನ್ನೇ ಮರೆಯಿಂದ ಹಿಂಬಾಲಿಸಿಕೊಂಡು ಹೋಗುತ್ತಾನೆ ಆಗ ಹಸು ಹುತ್ತದಲ್ಲಿದ್ದ ಶ್ರೀನಿವಾಸನಿಗೆ ಹಾಲು ಎರೆಯುತ್ತಿರುತ್ತದೆ ಇದನ್ನು ಕಂಡು ಕೋಪಗೊಂಡ ದನ ನೋಡಿಕೊಳ್ಳುವವನು ತನ್ನ ಹತ್ತಿರ ಇರುವ ಕೊಡಲಿಯಿಂದ ಹಸುವನ್ನ ಹೊಡೆಯುವುದಕ್ಕೆ ಹೋಗುತ್ತಾನೆ ಆಗ ಕೊಡಲಿಯಿಂದ ಹೊಡೆದ ಏಟು ಶ್ರೀನಿವಾಸನ ತಲೆಗೆ ಬೀಳುತ್ತದೆ.

ನಂತರ ಇದನ್ನು ಕಂಡ ಶ್ರೀನಿವಾಸನ ಪರಮ ಭಕ್ತೆಯಾದ ನೀಲಾದೇವಿ ಅವರು ತಮ್ಮ ಕೂದಲನ್ನೇ ಕತ್ತರಿಸಿ ಶ್ರೀನಿವಾಸನಿಗೆ ಜೋಡಿಸುತ್ತಾಳೆ ಆಗ ಶ್ರೀನಿವಾಸ ನೀಲಾದೇವಿಗೆ ಒಂದು ವರವನ್ನು ನೀಡುತ್ತಾನೆ ಅದು ಏನೆಂದರೆ ಕಲಿಯುಗದಲ್ಲಿ ಭಕ್ತರು ನನ್ನ ಕ್ಷೇತ್ರಕ್ಕೆ ಬಂದು ಕೊಡುವ ತಲೆ ಕೂದಲ ಮುಡಿ ನಿನ್ನ ಮೂಲಕವೇ ನನಗೆ ಅರ್ಪಣೆಯಾಗಲಿ ಎಂದು ವರ ನೀಡುತ್ತಾನೆ. ಅದಕ್ಕಾಗಿ ಈಗ ತಿರುಪತಿಯಲ್ಲಿ ಭಕ್ತರು ಕೊಡುವ ತಲೆಮುಡಿಯು ನೀಲಾದೇವಿಯ ಮೂಲಕವೇ ಪರಮಾತ್ಮನಿಗೆ ಅರ್ಪಣೆ ಆಗುತ್ತದೆ. ಆದರೆ ನೀಲಾದೇವಿ ಆಗ ಜೋಡಿಸಿದ ತಲೆಕೂದಲೇ ಇಂದು ಕೂಡ ಪರಮಾತ್ಮನ ಹಿಂಭಾಗದ ತಲೆಯಲ್ಲಿದೆ ದೇವಸ್ಥಾನದ ಪ್ರಾರಂಭದಲ್ಲಿ ಮಹಾದ್ವಾರದ ಬಲಗಡೆ ಶ್ರೀ ವೆಂಕಟೇಶ್ವರ ಸ್ವಾಮಿಯ ತಲೆಯ ಮೇಲೆ ಹೊಡೆದ ಗಾಯ ಈಗಲೂ ಕೂಡ ಅಲ್ಲೇ ಇದೆ. ಈ ಕಾರಣದಿಂದಲೇ ಈ ಸ್ವಾಮಿಯ ತಲೆಗೆ ಗಂಧವನ್ನು ಹಚ್ಚುವ ಸಂಪ್ರದಾಯ ಕೂಡಾ ನಡೆದುಕೊಂಡು ಬಂದಿದೆ.ಹೀಗಾಗಿ ತಿರುಪತಿ ಸ್ವಾಮಿಯ ದರ್ಶನಕ್ಕೆ ಬರುವ ಭಕ್ತರು ತಮ್ಮ ಇಷ್ಟಾರ್ಥಗಳೆಲ್ಲ ನೆರವೇರಲಿ ಎಂದು ಹರಕೆಗಳನ್ನು ಮಾಡಿಕೊಂಡು ಪುರುಷರು ಮಹಿಳೆಯರು ಮಕ್ಕಳು ಎಲ್ಲರೂ ಕೂಡ ಸ್ವಾಮಿಗೆ ಮೂಡಿ ಕೊಟ್ಟು ಹೋಗುತ್ತಾರೆ. ಈ ಲೇಖನ ಇಷ್ಟ ಆದರೆ ತಪ್ಪದೇ ಶೇರ್ ಮಾಡಿರಿ ನಿಮ್ಮ ಸ್ನೇಹಿತರಿಗೂ ವೆಂಕಟೇಶ್ವರನ ಪವಾಡ ತಿಳಿಯಲಿ ಆತನ ಕೃಪೆ ನಿಮಗೆ ಸಿಗಲಿ.

LEAVE A REPLY

Please enter your comment!
Please enter your name here