ಸೂಪರ್ ಟೇಸ್ಟಿ ಎಗ್ ಹಲ್ವ ಮತ್ತು ಎಗ್ ರೋಲ್ ಮನೆಯಲ್ಲೇ ಮಾಡಬಹುದು

0
693

ಸಂಜೆಯ ಸಲ ಟೀ ಕಾಫಿಯ ಜೊತೆಗೆ ಏನಾದರೂ ಸ್ನಾಕ್ಸ್ ಇದ್ದರೆ ತುಂಬಾ ಚೆನ್ನಾಗಿ ಇರುತ್ತದೆ ಜೊತೆಗೆ ಕೆಲವರಿಗೆ ಟೀ ಕಾಫಿ ಜೊತೆಗೆ ಏನಾದರೂ ಸ್ನಾಕ್ಸ್ ಇಲ್ಲ ಎಂದರೆ ಟೀ ಕಾಫಿ ಕುಡಿಯಲು ಆಗುವುದಿಲ್ಲ ಹಾಗಾಗಿ ಸ್ನಾಕ್ಸ್ ತಿನ್ನುವ ಸಲುವಾಗಿ ಅಂಗಡಿಯಲ್ಲಿ ಕುರುಕಲು ತಿಂಡಿಗಳನ್ನು ತಂದು ತಿಂದು ಆರೋಗ್ಯವನ್ನು ಕೆಡಿಸಿಕೊಳ್ಳುತ್ತೇವೆ ಅದಕ್ಕಾಗಿ ವಿಧವಿಧವಾದ ಸ್ನಾಕ್ಸ್ ಳನ್ನು ಮನೆಯಲ್ಲೇ ಮಾಡಿಕೊಂಡು ತಿನ್ನುವುದರಿಂದ ಆರೋಗ್ಯವು ಚೆನ್ನಾಗಿರುತ್ತದೆ ಜೊತೆಗೆ ಸಂಜೆಯ ಸ್ನಾಕ್ಸ್ ಕೂಡ ಆಗುತ್ತದೆ ಮತ್ತು ದುಬಾರಿ ಹಣವು ಉಳಿಯುತ್ತದೆ. ಸುಲಭವಾಗಿ ಮಾಡಬಹುದಾದ ಅಂತಹ ಸ್ನಾಕ್ಸ್ ಅಂದರೆ ಅದು ಎಗ್ ರೋಲ್

ಹಾಗಾದರೆ ಎಗ್ ರೋಲ್ ತಯಾರಿಸುವ ವಿಧಾನವನ್ನು ನೋಡೋಣ ಬನ್ನಿ. ಎಗ್ ರೋಲ್ ಮಾಡಲು ಬೇಕಾಗುವ ಸಾಮಗ್ರಿಗಳು: ಮೊಟ್ಟೆ ಕ್ಯಾರೆಟ್ ಈರುಳ್ಳಿ ಉಪ್ಪು ಮೆಣಸಿನ ಪುಡಿ ಎಣ್ಣೆ. ಒಂದು ಚಿಕ್ಕದಾದ ಪಾತ್ರೆಯಲ್ಲಿ ಮೊಟ್ಟೆಯನ್ನು ಹಾಕಿ ಅದಕ್ಕೆ ಹಾಲು ಹಾಗೂ ಉಪ್ಪಿನ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು ನಂತರ ಅದನ್ನು ಸೋಸಿಕೊಂಡು ಅದಕ್ಕೆ ಸಣ್ಣಗೆ ಹಚ್ಚಿದ ಈರುಳ್ಳಿ ಕ್ಯಾರೆಟ್ ಮೆಣಸಿನ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಂಡು ನಂತರ ಒಂದು ಕಾವಲಿಗೆ ಎಣ್ಣೆ ಸವರಿ ಮೊಟ್ಟೆಯ ಮಿಶ್ರಣವನ್ನು ಅದಕ್ಕೆ ಹಾಕಬೇಕು ಅದನ್ನು ಚೆನ್ನಾಗಿ ಮಾಡಚುತ್ತ ಬೆಂದ ಮೇಲೆ ಉಳಿದ ಮಿಶ್ರಣವನ್ನು ಸೇರಿಸುತ್ತಾ ಮಡಚುತ್ತಾ ಹೋಗಿ. ನಂತರ ಅದನ್ನು ಕಾವಲಿಯಿಂದ ತೆಗೆದು ಅದು ತಣ್ಣಗಾದ ನಂತರ ಕಟ್ ಮಾಡಿಕೊಂಡರೆ ಒಳ್ಳೆಯ ಸ್ನಾಕ್ಸ್ ರೆಡಿ ಆಗುತ್ತದೆ.

ಬೆಳ್ಳಗೆ ತಿಂಡಿ ಸಮಯದಲ್ಲೂ ಎಗ್ ರೋಲ್ ತಿನ್ನಬಹುದು ನಿಮ್ಮ ದೇಹಕ್ಕೆ ರಾತ್ರಿವರೆಗೂ ಬೇಕಾಗಿರೋ ಎಲ್ಲ ರೀತಿಯ ಪೌಷ್ಟಿಕಾಂಶ ನೀಡುತ್ತದೆ. ಮೊಟ್ಟೆಯಲ್ಲಿ ಹದಿನಾಲ್ಕು ರೀತಿಯ ಸತ್ವಗಳು ಇದ್ದು ನಮ್ಮ ದೇಹಕ್ಕೆ ಬೇಕಾಗಿರುವ ಎಲ್ಲ ರೀತಿಯ ಶಕ್ತಿ ಒದಗಿಸುತ್ತದೆ ಮತ್ತೇಕೆ ತಡ ಎಗ್ ರೋಲ್ ಮಾಡಿಕೊಂಡು ತಿನ್ನಿರಿ. ಹಾಗೆಯೇ ಎಗ್ ಹಲ್ವಾ ಮಾಡುವುದು ಹೇಗೆ ಎಂದು ನೋಡೋಣ ಬನ್ನಿ. ಎಗ್ ಹಲ್ವಾ ಮಾಡಲು ಬೇಕಾಗುವ ಸಾಮಗ್ರಿಗಳು: ಮೊಟ್ಟೆ ಮೈದಾ ಹಿಟ್ಟು ತುಪ್ಪ ಸಕ್ಕರೆ ಒಣ ಹಣ್ಣುಗಳು ಏಲಕ್ಕಿ ಹಾಲು ಎಗ್ ಹಲ್ವಾ ತಯಾರಿಸುವ ವಿಧಾನ: ಮೊಟ್ಟೆ ಮೈದಾ ಹಿಟ್ಟು ಸಕ್ಕರೆ ಹಾಗೂ ಹಾಲನ್ನು ಹಾಕಿ ಸಕ್ಕರೆ ಕರಗುವ ವರೆಗೆ ಮಿಶ್ರಣ ಮಾಡಿಕೊಳ್ಳಬೇಕು ನಂತರ ಒಂದು ದಪ್ಪ ತಳವಿರುವ ಬಾಣಲೆಯನ್ನು ತೆಗೆದುಕೊಂಡು ಅದಕ್ಕೆ ತುಪ್ಪ ಹಾಕಿ ಬಿಸಿ ಮಾಡಿಕೊಂಡು ಅದಕ್ಕೆ ಮೊಟ್ಟೆಯ ಮಿಶ್ರಣವನ್ನು ಸೇರಿಸಿ ಬೇಯಿಸಬೇಕು ಆ ಮಿಶ್ರಣವು ಬಾಣಲೆಯಿಂದ ಬಿಡಿಸಿಕೊಳ್ಳುವ ತನಕ ಆಡಿಸಿ ನಂತರ ಒಲೆಯಿಂದ ಕೆಳಗಿಳಿಸಿ ಅದಕ್ಕೆ ಸಣ್ಣದಾಗಿ ತುಂಡರಿಸಿದ ಒಣ ಹಣ್ಣುಗಳನ್ನು ಹಾಗೂ ಏಲಕ್ಕಿಯನ್ನು ಮಿಶ್ರಣ ಮಾಡಬೇಕು. ನೋಡಿದರಲ್ಲ ಸ್ನಾಕ್ಸ್ ಗಾಗಿ ಎಗ್ ರೋಲ್ ಮತ್ತು ಸಿಹಿ ತಿಂಡಿಗೆ ಎಗ್ ಹಲ್ವಾ ಮಾಡುವುದು ಎಷ್ಟು ಸುಲಭ ಎಂದು ನೀವು ಒಮ್ಮೆ ಪ್ರಯತ್ನಿಸಿ.

LEAVE A REPLY

Please enter your comment!
Please enter your name here