ಇಡೀ ದೇಶಕ್ಕೆ ಕಾಫಿ ಪರಿಚಯ ಮಾಡಿಸಿದ್ದು ನಮ್ಮ ಕರ್ನಾಟಕ ಗೊತ್ತೇ

0
633

ಕಾಫಿಯ ಇತಿಹಾಸ 800 ಇಸವಿಯಿಂದ ಇದ್ದರು ಸಹ ಕೇವಲ ಅರಬ್ ಸಂಯುಕ್ತ ರಾಷ್ಟ್ರಗಳಲ್ಲಿ ಮಾತ್ರ ಕಾಫಿಯನ್ನು ಉಪಯೋಗಿಸಲಾಗುತ್ತಿತ್ತು. ಆದರೆ ಈ ಕಾಫಿ ಭಾರತಕ್ಕೆ ಬಂದದ್ದು ಹೇಗೆ ಎಂದು ತಿಳಿಯೋಣ. 1670 ನೇ ಇಸವಿಯಲ್ಲಿ ಮೊಟ್ಟ ಮೊದಲ ಬಾರಿಗೆ ಸಂತ ಬಾಬಾ ಬುಡನ್ ರವರು ಯೆಮನ್ ನಿಂದ ಭಾರತಕ್ಕೆ ಬರುವಾಗ ಕಾಫಿ ಅನ್ನು ತಂದರು. ಪವಿತ್ರ ಮೆಕ್ಕಾದ ಹಜ್ ಯಾತ್ರೆಯಲ್ಲಿದ್ದ ಸಂತರು ಭಾರತಕ್ಕೆ ಮರಳಿ ಬರಬೇಕೆಂದರೆ ಯೆಮನ್ ಮೂಲಕ ಭಾರತಕ್ಕೆ ಬರಬೇಕಿತ್ತು ಆಗ ಮಾರ್ಗ ಮದ್ಯದಲ್ಲಿ ಅರಬ್ಬರು ಒಂದು ವಿಚಿತ್ರ ರೀತಿಯ ಪಾನೀಯವನ್ನು ಕುಡಿಯುವುದನ್ನು ಕಂಡ ಸಂತರಿಗೆ ತುಂಬಾ ಆಶ್ಚರ್ಯಯಾಯಿತು ಜೊತೆಗೆ ಇದರ ಬಗ್ಗೆ ತಿಳಿಯುವ ಕುತೂಹಲದಿಂದ ಇದರ ಬಗ್ಗೆ ಮತ್ತಷ್ಟು ತಿಳಿಯಲು ವಿಷಯವನ್ನು ಕಲೆ ಹಾಕಿದಾಗ

ತಿಳಿದು ಬಂದ ವಿಷಯವೇನೆಂದರೆ ಈ ಪಾನೀಯವನ್ನು ಯಾವುದೋ ಒಂದು ಬೀಜದಿಂದ ಮಾಡಲಾಗುತ್ತದೆ ಬೀಜಗಳು ನೆರಳಿನಲ್ಲಿ ಗುಡ್ಡಗಾಡಿನಲ್ಲಿ ಬೆಳೆಯುತ್ತದೆ ಎಂಬ ವಿಷಯ ಗೊತ್ತಾಯಿತು. ಜೊತೆಗೆ ಇದರ ಬೀಜಗಳನ್ನ ಬಿಸಿ ಬಾಣಲೆಯಲ್ಲಿ ಉರಿದು ಒಣಗಿಸಿ ಪುಡಿ ಮಾಡುತ್ತಿದ್ದದ್ದನ್ನು ಕಂಡು ಬೆರಗಾಗಿ ಇದನ್ನು ಸೇವಿಸಲೇ ಬೇಕೆಂದು ಅಂದುಕೊಂಡು ಇದರ ರುಚಿಯನ್ನು ನೋಡಿದರು ಇದರ ರುಚಿ ನೋಡಿದ ಕೂಡಲೇ ಅವರು ತುಂಬಾ ಸಂತೋಷಗೊಂಡರು.

ಆದರೆ ಈ ಕಾಫಿ ಬೀಜಗಳನ್ನು ಅರಬ್ ದೇಶದಿಂದ ಹೊರಗಡೆ ತೆಗೆದುಕೊಂಡು ಹೋಗುವುದನ್ನು ಸಂಪೂರ್ಣ ನಿಷೇಧಿಸಲಾಗಿತ್ತು ಆದರೆ ಉರಿದ ಬೀಜಗಳನ್ನು ತೆಗೆದು ಕೊಂಡು ಹೋಗಲು ಅವಕಾಶವಿತ್ತು. ಆದರೂ ಕೂಡ ಬಾಬಾ ಬುಡನ್ ರವರು ಸ್ವಲ್ಪ ಬೀಜಗಳನ್ನು ಯಾರಿಗೂ ಕಾಣದಂತೆ ಕದ್ದು ತಮ್ಮ ಸೊಂಟದ ಪಟ್ಟಿಗೆ ಕಟ್ಟಿಕೊಂಡರು. ನಂತರ ಅವರು ಮೋಕಾ ಬಂದರಿನ ಮೂಲಕ ಯೆಮನ್ ನಿಂದ ಹೊರಟು ಬಂದರು ನಂತರ ಅಲ್ಲಿಂದ ಮೈಸೂರು ರಾಜ್ಯದ ಚಿಕ್ಕ ಮಗಳೂರು ಜಿಲ್ಲೆಯ ಚಂದ್ರಗಿರಿ ಬೆಟ್ಟದ ಮೇಲೆ ಕಾಫಿ ಗಿಡಗಳನ್ನು ನೆಟ್ಟರು ಕೆಲ ವರ್ಷಗಳ ನಂತರ ಈ ಬೆಟ್ಟಕ್ಕೆ ಬಾಬಾ ಬುಡನ್ ಗಿರಿ ಎಂಬ ಹೆಸರು ಬಂದಿತು. ಕೆಲವೇ ಗಿಡಗಳಿಂದ ಆರಂಭವಾದ ಕಾಫಿ ಕೃಷಿ ಮುಂದೆ ದೊಡ್ಡ ದೊಡ್ಡ ಎಸ್ಟೇಟ್ಗಳಾದವು ಸರ್ಕಾರವು ಕಾಫಿ ಬೋರ್ಡ್ಅನ್ನು ಸಹ ಸ್ಥಾಪಿಸಿತು. ಮೊದಲು ಕರ್ನಾಟಕದ ಗುಡ್ಡಗಾಡು ಪ್ರದೇಶಗಳಲ್ಲಿ ಬೆಳೆಯುತ್ತಿದ್ದ ಕಾಫಿ ಕಾಲಕ್ರಮೇಣ ಕೇರಳದ ವಾಯ್ನಾಡ್ ತಮಿಳು ನಾಡಿನ ನೀಲಗಿರಿ ಪ್ರದೇಶಗಳಿಗೂ ಹರಡಿಕೊಂಡಿತ್ತು.

ಆದರೆ ಇಂದು ಕರ್ನಾಟಕ ರಾಜ್ಯ ಭಾರತದ ಕಾಫಿ ಉತ್ಪಾದನೆಯಲ್ಲಿ ಮೊದಲನೇ ಸ್ಥಾನದಲ್ಲಿದ್ದು 2 ಕಾಫಿ ಜಿ ಇ ಟ್ಯಾಗ್ ಗಳನ್ನು ಹೊಂದಿದೆ ಕಾಫಿ ಉತ್ಪಾದನೆಯ ಸಿಂಹ ಪಾಲು ಚಿಕ್ಕಮಗಳೂರು ಜಿಲ್ಲೆಯದ್ದು. ಹೀಗೆ ಚಿಕ್ಕ ಮಗಳೂರಿಗೆ ಕಾಫಿ ಬಂದು ಸೇರಿಕೊಂಡಿತು ಜೊತೆಗೆ ಇದು ತುಂಬಾ ಲಾಭದಾಯಕ ಆದಾಯವನ್ನು ಕೊಡುತ್ತದೆ. ಇಂದು ನಮ್ಮ ರಾಜ್ಯದಲ್ಲಿ ಬೆಳೆದ ಕಾಫಿ ದೇಶ ವಿದೇಶದಲ್ಲೂ ಜನರನ್ನು ಆಕರ್ಷಣೆ ಮಾಡುತ್ತಿದೆ ಅದರಲ್ಲೂ ಮಲೆನಾಡಿನ ಕಾಫಿ ಅಂದ್ರೆ ಹಲವು ವಿದೇಶದಲ್ಲಿ ಅಚ್ಚು ಮೆಚ್ಚು. ಭಾರತದ ಮೊದಲ ಕಾಫಿ ನಮ್ಮ ಕನ್ನಡ ನಾಡಿನದು ಎಂಬ ಹೆಮ್ಮೆ ಪ್ರತಿ ಒಬ್ಬ ಕನ್ನಡಿಗನಿಗೆ ಇರುತ್ತದೆ. ಈ ವಿಶೇಷ ಮಾಹಿತಿ ಹೆಮ್ಮೆಯಿಂದ ಶೇರ್ ಮಾಡಿರಿ ಈ ಕಾಫಿಯ ಇತಿಹಸ ಎಲ್ಲರಿಗು ತಿಳಿಯಲಿ.

LEAVE A REPLY

Please enter your comment!
Please enter your name here