ಇಡೀ ವಿಶ್ವವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ ಮಂಡ್ಯದ ಹುಡುಗ

0
768

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ನೆಟ್ಕಲ್ ಗ್ರಾಮದ ನಿವಾಸಿಯಾಗಿರುವ ಕೇವಲ 22 ವಯಸ್ಸಿನ ಪ್ರತಾಪ್ ರವರ ಸಾಧನೆ ಇಡೀ ಭಾರತ ದೇಶಕ್ಕೆ ಒಂದು ಹೆಮ್ಮೆಯ ವಿಷಯವಾಗಿದೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಕಾರ್ಯಕ್ರಮದಲ್ಲಿ ತನ್ನ ತಾಯಿಯ ಮಾಂಗಲ್ಯದ ಸರವನ್ನು ಅಡವಿಟ್ಟು ತುಂಬಾ ಕಷ್ಟಪಟ್ಟು ಡ್ರೋನ್ ಯಂತ್ರವನ್ನು ಕಂಡು ಹಿಡಿದಿರುವ ಯುವ ವಿಜ್ಞಾನಿ ಪ್ರತಾಪ್ ರವರ ಸಾಧನೆಯನ್ನು ಒಂದು ನಾಟಕದ ರೂಪದಲ್ಲಿ ಡ್ರಾಮ ಜುನಿಯರ್ಸ್ ಸ್ಪರ್ಧಿಗಳು ಅಭಿನಯಿಸಿ ತೋರಿಸಿದ್ದಾರೆ.

ಈ ಡ್ರೋನ್ ಯಂತ್ರವನ್ನು ಕಂಡು ಹಿಡಿಯಲು ಕಾರಣ ಆದರೂ ಏನು ಗೊತ್ತೇ. ಈ ಹುಡುಗನಿಗೆ ಚಿಕ್ಕ ವಯಸ್ಸಿನಿಂದಲೂ ಏನಾದರೂ ಸಾಧಿಸಬೇಕು ನಮ್ಮ ದೇಶಕ್ಕೆ ಏನಾದರೂ ಉಪಯೋಗ ಆಗಬೇಕು ಎಂಬುದು ಇವರ ಕನಸು. ಪ್ರತಾಪ್ ರವರಿಗೆ ಈ ಯೋಚನೆ ಬಂದಿದ್ದು ಹೇಗೆಂದರೆ ಒಂದು ದಿನ ಶಾಲೆಗೇ ಹೋಗುವ ಸಮಯದಲ್ಲಿ ಆಕಾಶದಲ್ಲಿ ಹಾರಾಡುತ್ತಿರುವ ಹದ್ದನ್ನು ನೋಡುತ್ತಾನೆ. ಆ ಸಂದರ್ಭದಲ್ಲಿ ಪ್ರತಾಪ್ ರವರಿಗೆ ಈ ಯೋಚನೆ ಬರುತ್ತದೆ. ನಂತರ ನಾನು ಕೂಡ ಹದ್ದಿನ ರೀತಿ ಆಕಾಶದಲ್ಲಿ ಹಾರಾಡುವ ಒಂದು ಡ್ರೋನ್ ಅನ್ನು ಕಂಡು ಹಿಡಿಯಬೇಕು ಎಂಬ ಯೋಚನೆ ಬರುತ್ತದೆ.

ಆದರೆ ಈ ಹುಡುಗ ಒಂದು ಸಣ್ಣ ರೈತರ ಕುಟುಂಬದಲ್ಲಿ ವಾಸ ಮಾಡುತ್ತಿರುವುದರಿಂದ ಹಣದ ತೊಂದರೆ ತುಂಬಾ ಇದೆ ಇನ್ನು ಈ ಡ್ರೋನ್ ಯಂತ್ರಕ್ಕೆಲ್ಲ ತುಂಬಾ ಹಣ ಬೇಕಾಗುತ್ತದೆ ಇದಕ್ಕೆಲ್ಲ ಏನು ಮಾಡುವುದು ಎಂದು ಯೋಚಿಸಿ ತನ್ನ ಸಾಧನೆಗಾಗಿ ತನಗೆ ಜನ್ಮ ಕೊಟ್ಟ ತಾಯಿಯ ಮಾಂಗಲ್ಯವನ್ನು ಅಡವಿಟ್ಟು ನಾನು ಹುಟ್ಟಿದ ದೇಶಕ್ಕೆ ನನ್ನ ಕಡೆಯಿಂದ ಏನಾದರು ಮಾಡಲೇಬೇಕು ಎಂಬ ಹಠ ತೊಟ್ಟನು. ಇವರ ಈ ಯೋಚನೆಯನ್ನು ಮುಂದುವರಿಸಿದರು ಆದರೆ ಆರಂಭದಲ್ಲಿ ಸಾಕಷ್ಟು ಡ್ರೋನ್​ಗಳು ಕ್ರ್ಯಾಶ್​ ಆದವು ಆದರು ಕೂಡ ತಮ್ಮ ಹಠ ಬಿಡದೆ ಮತ್ತೆ ಮತ್ತೆ ಪ್ರಯತ್ನಿಸಿದನು ಈಗೆ ಪ್ರಯತ್ನ ಮಾಡುತ್ತ ಇದ್ದಾಗ ಜಪಾನ್​​ನಲ್ಲಿ ನಡೆಯುವ ಇಂಟರ್ ನ್ಯಾಷನಲ್ ರೊಬೋಟಿಕ್ಸ್ ಎಕ್ಷಿಬಿಶನ್ ಕಾಂಪಿಟೇಷನ್​​ ಬಗ್ಗೆ ಐಐಟಿ ಪ್ರೊಫೆಸರ್​ ಒಬ್ಬರು ಪ್ರತಾಪ್ ಗೆ ಹೇಳಿದರು.

ನಂತರ ಇವನು ಆ ಕಾಂಪಿಟೇಷನ್​​ ಗೆ ಸೆಲೆಕ್ಟ್ ಆದನು ಆದರೆ ಈ ಕಾಂಪಿಟೇಷನ್​​ ಗೆ ಹೋಗಲು ಚೆನ್ನೈನ ಪ್ರೊಫೆಸರ್ ಒಬ್ಬರಿಂದ ಸಹಿ ಬೇಕಾಗಿತ್ತು ಅದಕ್ಕಾಗಿ ಪ್ರತಾಪ್ ಚೆನ್ನೈಗೆ ಹೋದನು ಆದರೆ ಆ ಪ್ರೊಫೆಸರ್ ರವರ ಕಡೆಯಿಂದ ಅಷ್ಟು ಸುಲಭವಾಗಿ ಸಹಿ ಸಿಗಲಿಲ್ಲ ಹೀಗಾಗಿ ಕೆಲವೊಂದು ದಿನಗಳನ್ನು ಚೆನ್ನೈ ಪ್ಲಾಟ್​ಫಾರ್ಮ್​​ನಲ್ಲೇ ಪ್ರತಾಪ್ ಸಮಯ ಕಳೆದರು ಆ ಸಮಯದಲ್ಲಿ ಪ್ರತಾಪ್ ತುಂಬಾ ಕಷ್ಟ ಪಟ್ಟನು ಕೊನೆಗೂ ಪ್ರತಾಪ್ ಗೆ ಆ ಪ್ರೊಫೆಸರ್ ಕಡೆಯಿಂದ ಸಹಿ ಸಿಕ್ಕಿತು. ನಂತರ ಪ್ರತಾಪ್ ಜಪಾನಿಗೆ ಹೋಗಲು ಸುತ್ತೂರು ಮಠದ ಸ್ವಾಮಿಗಳು ಸಹಾಯ ಮಾಡಿ ಜಪಾನಿಗೆ ಹೊರಟರು ಅಲ್ಲಿ ಕೂಡ ಕಾಂಪಿಟೇಷನ್​​ ನಡೆಯುವ ಜಾಗಕ್ಕೆ ಹೋಗಲು ಬೇಕಾದ ಹಣ ಇಲ್ಲದೆ ಕಣ್ಣಿರು ಹಾಕಿದ್ದೇ ಎಂದು ಪ್ರತಾಪ್ ರವರೆ ಹೇಳಿದ್ದಾರೆ.

ಆದರೆ ತಕ್ಷಣ ಅವರ ಕಣ್ಣ ಮುಂದೆ ಅವರ ತಂದೆ ತಾಯಿ ಮತ್ತು ಹುಟ್ಟಿದ ದೇಶ ಬಂದು ಅವರು ನಾನು ಇಲ್ಲಿಂದ ಸಾಧನೆ ಮಾಡಿಯೇ ಹೋಗಬೇಕು ಎಂಬ ಛಲದಿಂದ ಮುನ್ನುಗ್ಗಿದ್ದಾರು ಹೀಗೆ ತನ್ನ ದಾರಿಗೆ ಎಷ್ಟೇ ಕಷ್ಟ ಬಂದರು ಕೂಡ ಎಲ್ಲವನ್ನು ದಾಟಿ ಕಾಂಪಿಟೇಷನ್​​ನಲ್ಲಿ ಭಾಗವಹಿಸಿದರು. ಆ ಕಂಪಿಟೇಶನ್ ಅಲ್ಲಿ ಪ್ರತಾಪ್ ಚಿನ್ನದ ಪದಕ ಗೆದ್ದನು ನಂತರ ಭಾರತಕ್ಕೆ ವಾಪಸ್ ಬರಬೇಕಾದ ಸಂಧರ್ಭದಲ್ಲಿ ವಿಮಾನ ನಿಲ್ದಾಣದಲ್ಲಿ ಅವರು ಚಿನ್ನದ ಪದಕ ಗೆದ್ದಿರುವ ಬಗ್ಗೆ ಹಾಕಿರುವ ಫೋಟೋ ನೋಡಿ ತುಂಬಾ ಸಂತೋಷಗೊಂಡರು ಆದರೆ ಇಷ್ಟೆಲ್ಲಾ ಕಷ್ಟಪಟ್ಟು ಸಾಧನೆ ಮಾಡಿ ಬೆಂಗಳೂರಿಗೆ ಬಂದಾಗ ಜಪಾನ್ ನಲ್ಲಿ ಸಿಕ್ಕ ಗೌರವ ಇಲ್ಲಿ ಸಿಗಲಿಲ್ಲ ಯಾವುದೇ ಮಾಧ್ಯಮದವರು ನನ್ನನ್ನು ಗುರುತಿಸಲಿಲ್ಲ ಎಂದು ಬಹಳ ನೋವು ಕೂಡ ಪಟ್ಟನು. ಜಪಾನಿನಲ್ಲಿ ನಡೆದ ರೊಬೊಟಿಕ್ಸ್‌ ಕಾಂಪಿಟೇಷನ್ ಪ್ರದರ್ಶನದಲ್ಲಿ ಮಂಡ್ಯದ ಹಳ್ಳಿ ಹುಡುಗ ಪ್ರತಾಪ್ ರವರು ಚಿನ್ನ ಮತ್ತು ಬೆಳ್ಳಿ ಪದಕಗಳ ಜತೆಗೆ 10000 ಅಮೆರಿಕನ್‌ ಡಾಲರ್‌ ಬಹುಮಾನವನ್ನು ಗೆದ್ದನು ಅಷ್ಟೇ ಅಲ್ಲದೇ ನಮ್ಮ ಭಾರತ ದೇಶಕ್ಕೆ ಕೀರ್ತಿ ತಂದು

LEAVE A REPLY

Please enter your comment!
Please enter your name here