ಈ ಮನೆ ಮದ್ದು ಮಾಡಿರಿ ಅಲರ್ಜಿ ಸಮಸ್ಯೆಗಳಿಂದ ಶಾಶ್ವತ ಮುಕ್ತಿ ಪಡೆಯಿರಿ

0
1251

ಸಾಮಾನ್ಯವಾಗಿ ಎಲ್ಲರೂ ಬಯಸುವುದು ತಾವು ಅಂದವಾಗಿ ಇರಬೇಕು ಅಂದವಾಗಿ ಕಾಣಬೇಕು ಎಂದು ಆಸೆ ಪಟ್ಟು ಎಷ್ಟೆಲ್ಲ ರೀತಿಯ ಕ್ರೀಮ್. ಸೋಪುಗಳನ್ನು ಬಳಸುತ್ತಾರೆ ಎಷ್ಟೇ ದೊಡ್ಡ ಮೊತ್ತದ ಕ್ರೀಮ್ ಗಳು ಆದರೂ ಕೂಡ ಅದನ್ನು ತೆಗೆದುಕೊಂಡು ತಮ್ಮ ತ್ವಚೆಯ ಅಂದಕ್ಕೆ ಹರ ಸಾಹಸ ಪಡುತ್ತಾರೆ. ಆದರೆ ನಮ್ಮ ಈ ವಾತಾವರಣ ಹೊಗೆ ಧೂಳು ವಾಯು ಮಾಲಿನ್ಯ ಇವುಗಳಿಂದ ನಮ್ಮ ತ್ವಚೆಯಲ್ಲಿ ಅಲರ್ಜಿಗಳು ಆಗುವ ಸಾಧ್ಯತೆ ಹೆಚ್ಚು ಜೊತೆಗೆ ನಾವು ಮಾರುಕಟ್ಟೆಯಲ್ಲಿ ಸಿಗುವ ವಿಧವಿಧವಾದ ಸೋಪು ಕ್ರೀಮ್ ಗಳ ಬಳಕೆಯಿಂದ ಕೂಡ ಅಲರ್ಜಿ ಎಂಬುದು ಆಗುತ್ತದೆ. ತ್ವಚೆಯಲ್ಲಿ ಏನಾದರು ಸ್ವಲ್ಪ ಅಲರ್ಜಿ ಅದರು ಕೂಡ ಅದನ್ನು ಹೋಗಿಸಲು ಏನೆಲ್ಲ ಹಚ್ಚುತ್ತಾರೆ ಅಲ್ಲವೇ ಆದರೆ ಈ ರೀತಿಯ ತ್ವಚೆಯ ಅಲರ್ಜಿಯನ್ನು ಸುಲಭವಾಗಿ ಹೋಗಿಸಲು ಸುಲಭ ಮನೆ ಮದ್ದುಗಳು ಇವೆ ಅವುಗಳನ್ನು ಮಾಡಿಕೊಂಡರೆ ತ್ವಚೆಯ ಅಂದವನ್ನು ಕಾಪಾಡಿಕೊಳ್ಳಬಹುದು. ಹಾಗಾದರೆ ತ್ವಚೆಯ ಅಲರ್ಜಿಯನ್ನು ಹೋಗಿಸುವ ಮದ್ದುಗಳು ಯಾವುವು ಎಂದು ತಿಳಿಯೋಣ ಬನ್ನಿ.

ತ್ವಚೆಯ ಅಲರ್ಜಿಯನ್ನು ಹೋಗಿಸಲು ತಣ್ಣೀರಿನಲ್ಲಿ ಸ್ನಾನ ಮಾಡಬೇಕು ಇದರಿಂದ ಅಲರ್ಜಿಯು ಗುಣವಾಗುತ್ತದೆ ಜೊತೆವೆ ಆರೋಗ್ಯಕ್ಕೂ ತುಂಬಾ ಒಳ್ಳೆಯದು. ತೆಂಗಿನ ಎಣ್ಣೆಯನ್ನು ಸ್ವಲ್ಪ ಬಿಸಿ ಮಾಡಿಕೊಂಡು ಅದನ್ನು ತ್ವಚೆಗೆ ಹಚ್ಚಿಕೊಂಡು ಹುಗುರು ಬೆಜ್ಜಾಗಿನ ನೀರಿನಲ್ಲಿ ಸ್ನಾನ ಮಾಡಿದರೆ ಅಲರ್ಜಿ ಸಮಸ್ಯೆ ಹೋಗುತ್ತದೆ. ನಿಂಬೆ ಹಣ್ಣಿನ ರಸ ಮತ್ತು ತೆಂಗಿನೆಣ್ಣೆಯನ್ನು ಮಿಶ್ರಣ ಮಾಡಿಕೊಂಡು ಅದನ್ನು ರಾತ್ರಿಯ ಸಮಯದಲ್ಲಿ ತ್ವಚೆಗೆ ಹಚ್ಚಿ ಕೊಂಡು ಬೆಳಗ್ಗೆ ಸ್ನಾನ ಮಾಡಿದರೆ ಅಲರ್ಜಿ ಸಮಸ್ಯೆ ನಿವಾರಣೆಯಾಗುವುದು. ಬೇವಿನ ಎಲೆಯನ್ನು ಅರೆದು ಪೇಸ್ಟ್ ರೀತಿ ಮಾಡಿಕೊಂಡು ಅದನ್ನು ತ್ವಚೆಗೆ ಹಚ್ಚಿಕೊಂಡು ಸ್ವಲ್ಪ ಸಮಯ ಬಿಟ್ಟು ತಣ್ಣೀರಿನಿಂದ ಸ್ನಾನ ಮಾಡಿದರೆ ಅಲರ್ಜಿ ಸಮಸ್ಯೆ ಗುಣವಾಗುತ್ತದೆ. ಅಥವಾ ಸ್ನಾನ ಮಾಡುವ ನೀರಿನ ಒಳಗಡೆ ಕೂಡ ಬೇವಿನ ಎಲೆಗಳನ್ನು ಹಾಕಿಕೊಂಡು ಸ್ನಾನ ಮಾಡಬಹುದು.

ಕೆಲವೊಮ್ಮೆ ಅಲರ್ಜಿಗಳು ಆಗಿ ಅದರಿಂದ ಗಾಯಗಳು ಆಗುತ್ತವೆ ಇಂತಹ ಗಾಯಗಳನ್ನು ಹೋಗಿಸಲು ಗಸೆಗಸೆಯನ್ನು ಅರೆದು ಅದಕ್ಕೆ ಸ್ವಲ್ಪ ನಿಂಬೆ ರಸ ಹಾಕಿ ಅದನ್ನು ಅಲರ್ಜಿಯಿಂದ ಉಂಟಾದ ಗಾಯಕ್ಕೆ ಹಚ್ಚಬೇಕು. ತ್ವಚೆಯಲ್ಲಿ ಅಲರ್ಜಿಗಳು ಆಗಿದ್ದಾಗ ವಿಭೂತಿಯನ್ನು ಹಚ್ಚಿಕೊಂಡರೆ ಅಲರ್ಜಿಗಳು ಹೋಗುತ್ತವೆ. ಅಲರ್ಜಿಗಳು ಆಗಿರುವ ಜಾಗಕ್ಕೆ ಶ್ರೀ ಗಂಧವನ್ನು ಅರೆದು ಅದನ್ನು ತ್ವಚೆಗೆ ಹಚ್ಚಿಕೊಂಡರೆ ಅಲರ್ಜಿ ಸಮಸ್ಯೆ ಹೋಗುತ್ತದೆ. ಆದಷ್ಟು ಸೋಪುಗಳ ಬಳಕೆಯನ್ನು ಕಡಿಮೆ ಮಾಡಬೇಕು ಇದರಿಂದ ಕೂಡ ಅಲರ್ಜಿಗಳು ಆಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಆದಷ್ಟು ಅಲರ್ಜಿ ಆಗುವುದನ್ನು ತಪ್ಪಿಸಿಕೊಳ್ಳಿ ಅಲರ್ಜಿ ಆದರೆ ಈ ರೀತಿಯ ಮನೆ ಮದ್ದುಗಳನ್ನು ಬಳಕೆ ಮಾಡಿ ಗುಣಪಡಿಸಿಕೊಳ್ಳಿ ಇದು ಯಾವುದೇ ರೀತಿಯ ಅಡ್ಡ ಪರಿಣಾಮಗಳನ್ನು ಉಂಟು ಮಾಡುವುದಿಲ್ಲ. ಈ ಉಪಯುಕ್ತ ಮಾಹಿತಿ ತಪ್ಪದೇ ಶೇರ್ ಮಾಡಿರಿ ನಿಮ್ಮ ಸ್ನೇಹಿತರಿಗೂ ಮತ್ತು ಇತರರಿಗೂ ಸಹಾಯ ಆಗುತ್ತೆ.

LEAVE A REPLY

Please enter your comment!
Please enter your name here