ಈ ಸಣ್ಣ ಮನೆ ಮದ್ದು ಮಾಡಿದ್ರೆ ನಿಮ್ಮ ಬಾಯಿ ಸುಪರ್ ಆಗಿರುತ್ತದೆ

0
573

ಪ್ರತಿಯೊಬ್ಬರು ಆಹಾರವನ್ನು ಸೇವಿಸುವಾಗ ಹಲ್ಲಿನಲ್ಲಿ ಜಗಿದು ಜಗಿದು ಸೇವಿಸುತ್ತೇವೆ ಅಗೆ ಜಗಿದ ಆಹಾರದಲ್ಲಿ ಅಲ್ಪ ಸ್ವಲ್ಪ ನಮ್ಮ ಹಲ್ಲುಗಳ ಸಂದಿಗೆ ಹೋಗಿ ಸೇರಿಕೊಂಡಿರುತ್ತದೆ ಆದರೆ ನಾವು ಯಾವುದೇ ಆಹಾರವನ್ನು ಸೇವಿಸಿದ ತಕ್ಷಣ ಬಾಯಿಯ ಒಳಗೆ ನೀರು ಹಾಕಿಕೊಂಡು ಬಾಯಿಯನ್ನು ಸ್ವಚ್ಛ ಮಾಡಿಕೊಳ್ಳುವುದಿಲ್ಲ ಇದರಿಂದ ಹಲ್ಲಿನ ಸಂದಿಯಲ್ಲಿ ಸಿಕ್ಕಿಕೊಂಡಿರುವ ಆಹಾರಗಳಲ್ಲಿ ಸೂಕ್ಷ್ಮಾಣು ಜೀವಿಗಳು ಸೇರಿಕೊಂಡು ಹಲ್ಲುಗಳನ್ನು ಹಾಳು ಮಾಡುತ್ತವೆ ಜೊತೆಗೆ ಬಾಯಿಯಲ್ಲಿ ಕೆಟ್ಟ ವಾಸನೆಯನ್ನು ತರುತ್ತವೆ.

ಈ ಬಾಯಿಯಲ್ಲಿ ಬರುವ ಕೆಟ್ಟ ವಾಸನೆ ಯಾವಾಗಲು ಬರುತ್ತಾ ಇದ್ರೆ ನಮ್ಮ ಬಳಿ ಬರುವ ಜನಕ್ಕೂ ಅದು ಕಷ್ಟ ಆಗಬಹುದು ಮತ್ತು ನಮಗೆ ಎಲ್ಲರೊಂದಿಗೆ ಮಾತನಾಡಲು ಸಹ ಮುಜುಗರ ಅನುಭವಿಸಬಹುದು. ನಾವು ಬಾಯಿಯ ವಾಸನೆ ತಡೆಯಲು ಸಾಕಷ್ಟು ರೀತಿಯ ಕೆಮಿಕಲ್ ಮಿಶ್ರಿತ ಮೌತ್ ವಾಶ್ ಬಳಕೆ ಮಾಡ್ತೇವೆ ಆದ್ರೆ ಆ ಮೌತ್ ವಾಶ್ ಗಳು ಧೀರ್ಘ ಕಾಲ ಉಪಯೋಗ ಮಾಡಿದ್ರೆ ಕ್ಯಾನ್ಸರ್ ನಂತಹ ಭಯಾನಕ ಖಾಯಿಲೆಗಳು ಸಹ ಬರುವ ಸಾಧ್ಯತೆ ಇರುತ್ತದೆ ಎಂಬುದನ್ನು ನಾವು ತಿಳಿಯಬೇಕು ನೈಸರ್ಗಿಕವಾಗಿ ಬಾಯಿಯ ವಾಸನೆ ತಡೆಯಲು ಸುಲಭ ಉಪಾಯ ಏನು ಎಂದು ತಿಳಿದುಕೊಳ್ಳೋಣ ಬನ್ನಿ

ದಾಲ್ಚಿನಿಯಲ್ಲಿ ಇದರಲ್ಲಿ ಬ್ಯಾಕ್ಟೀರಿಯ ನಿರೋಧಕ ಗುಣ ಇದೆ ಹಾಗಾಗಿ ಇದು ಬಾಯಿಯ ಉಸಿರಿನ ವಾಸನೆಯನ್ನು ತಡೆಯುತ್ತದೆ ಹಾಗಾಗಿ ದಾಲ್ಚಿನ್ನಿಯನ್ನು ಸೇವಿಸಿ ಇಲ್ಲ ಚಹಾದಲ್ಲಿ ಹಾಕಿ ಕುಡಿಯಿರಿ ಇಲ್ಲವಾದರೆ ಬಿಸಿ ನೀರಿಗೆ ಹಾಕಿಕೊಂಡು ಸೇವಿಸಿ. ಗ್ರೀನ್ ಟೀ ಇದು ಕೇವಲ ದೇಹದ ತೂಕವನ್ನು ಕಡಿಮೆ ಮಾಡುವುದಲ್ಲದೆ ನಮ್ಮ ಉಸಿರನ್ನು ಸ್ವಚ್ಛವಾಗಿಟ್ಟುಕೊಳ್ಳಲು ಸಹಾಯ ಮಾಡುತ್ತದೆ ಹಾಗಾಗಿ ಪ್ರತಿದಿನ ಗ್ರೀನ್ ಟೀ ಕುಡಿಯಲು ಅಭ್ಯಾಸ ಮಾಡಿಕೊಳ್ಳಿ. ದೇಹಕ್ಕೆ ನೀರು ತುಂಬಾ ಮುಖ್ಯ ಹಾಗಾಗಿ ಹೆಚ್ಚು ಹೆಚ್ಚು ನೀರನ್ನು ನಾವು ಪದೇ ಪದೇ ಕುಡಿಯುವುದರಿಂದ ಬಾಯಿಯ ವಾಸನೆಯನ್ನು ದೂರ ಮಾಡಬಹುದು.

ಸೋಂಪು ಇದು ನಾವು ಸೇವಿಸಿದ ಆಹಾರವನ್ನು ಉತ್ತಮವಾಗಿ ಜೀರ್ಣ ಮಾಡಲು ಸಹಾಯ ಮಾಡುತ್ತದೆ ಇದರ ಜೊತೆಗೆ ಬಾಯಿಯಿಂದ ಹೊರ ಬರುವ ಕೆಟ್ಟ ಉಸಿರಿಗೆ ಕಾರಣವಾಗುವ ಬ್ಯಾಕ್ಟೀರಿಯಗಳನ್ನು ಸಾಯಿಸುತ್ತದೆ. ಪುದೀನಾ ಸೊಪ್ಪು ಇದು ಮೌತ್ ಪ್ರೆಶನರ್ ಗಳಲ್ಲಿ ಒಂದು ಜೊತೆಗೆ ಇದು ದೇಹಕ್ಕೆ ಒಂದು ತಂಪಾದ ಅನುಭವವನ್ನು ನೀಡುತ್ತದೆ ಇದರಿಂದ ಚಹಾವನ್ನು ಮಾಡಿಕೊಂಡು ಕುಡಿಯುವುದರಿಂದ ಅಥವಾ ಹಾಗೇ ಪುದಿನಾವನ್ನು ತಿನ್ನುವುದರಿಂದ ಬಾಯಿಯಿಂದ ಬರುವ ಕೆಟ್ಟ ವಾಸನೆ ಹೋಗುತ್ತದೆ. ಏಲಕ್ಕಿ ಇದು ಒಂದು ತುಂಬಾ ಸುಗಂಧ ಬರಿತವಾದದ್ದು ಎಲಕ್ಕಿಯ ಕಾಳುಗಳನ್ನು ಬಾಯಲ್ಲಿ ಹಾಕಿ ಜಗಿಯುವುದರಿಂದ ಬಾಯಿಯ ಕೆಟ್ಟ ವಾಸನೆ ಹೋಗುತ್ತದೆ ಇಲ್ಲವಾದರೆ ಊಟ ಅದ ನಂತರ ಏಲಕ್ಕಿಯ ಚಹಾವನ್ನು ಕುಡಿಯುವುದರಿಂದ ಬಾಯಿಯ ವಾಸನೆ ಹೋಗುತ್ತದೆ.

ಸ್ವಲ್ಪ ಸಾಸಿವೆ ಎಣ್ಣೆಯನ್ನು ಸ್ವಲ್ಲ ಸಮಯ ಬಾಯಲ್ಲಿ ಇಟ್ಟುಕೊಂಡು ನಂತರ ಉಗಿಯುವುದರಿಂದ ಕೂಡ ಬಾಯಿಯ ವಾಸನೆ ಕಡಿಮೆಯಾಗುತ್ತದೆ. ಹಾಗಾಗಿ ಯಾರ ಬಾಯಿಯಿಂದ ಆದರೂ ಕೆಟ್ಟ ವಾಸನೆ ಬಂದು ಮುಜುಗರಕ್ಕೆ ಒಳಗಾಗಿದ್ದಾರೆ ಈ ಸುಲಭ ಟಿಪ್ಸ್ ಅನ್ನು ಅನುಸರಿಸಿ ಬಾಯಿಯ ವಾಸನೆ ಹೋಗಿಸಿ ಜೊತೆಗೆ ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಈ ಉಪಯುಕ್ತ ಮಾಹಿತಿ ತಪ್ಪದೇ ಎಲ್ಲರೊಂದಿಗೂ ಶೇರ್ ಮಾಡಿರಿ.

LEAVE A REPLY

Please enter your comment!
Please enter your name here