ಕ್ಯಾನ್ಸರ್ ಕಾಯಿಲೆಯನ್ನು ಬರದಂತೆ ತಡೆಯುವ ಶಕ್ತಿ ಈ ಹಣ್ಣಿಗೆ ಇದೆ

0
661

ಕ್ಯಾನ್ಸರ್ ಎಂಬ ಕಾಯಿಲೆಯು ಇಂದು ಸಾಮಾನ್ಯ ಕಾಯಿಲೆ ಏನೋ ಎನ್ನುವ ಮಟ್ಟಿಗೆ ಚಿರಪರಿಚಿತ ಆಗಿದೆ. ಕ್ಯಾನ್ಸರ್ ಎಂಬುದು ಜೀವ ಕೋಶದಲ್ಲಿ ಪ್ರಾಂಭವಾಗುವ ಒಂದು ಅಥವ ಸಂಬಂಧಿಸಿದ ಅನೇಕ ರೋಗಗಳ ಗುಂಪು. ಇದು ಬಂದರೆ ಸಾಕು ಮನುಷ್ಯನ ಜೀವನ ಮುಗಿಯಿತು ಎಂದು ಅಂದುಕೊಳ್ಳುತ್ತಾರೆ ಈ ಕ್ಯಾನ್ಸರ್ ಎಂಬ ಮಹಾಮಾರಿ ಕಾಯಿಲೆಗೆ ಸರಿಯಾಗಿ ಔಷಧಿ ಇಲ್ಲ ಇದು ಕೊನೆಯ ಹಂತಕ್ಕೆ ಬಂದರೆ ಮನುಷ್ಯನ ಸಾವು ಖಂಡಿತ ಎಂಬುದು ಎಲ್ಲರ ಅಭಿಪ್ರಾಯ. ಈ ಕ್ಯಾನ್ಸರ್ ಬರಲು ಕಾರಣ ಮನುಷ್ಯನ ಕೆಟ್ಟ ಅಭ್ಯಾಸವಾದ ತಂಬಾಕು ಮತ್ತು ಅದರಿಂದ ತಯಾರಿಸಿದ ಪದಾರ್ಥಗಳನ್ನು ಸೇವಿಸುವುದು ಮತ್ತು ಇನ್ಸ್ಟಂಟ್ ಫುಡ್ ಹೆಚ್ಚಿಗೆ ತಿನ್ನುವುದು. ಕಡಿಮೆ ಕೊಬ್ಬಿರುವ ಆಹಾರ ಹಣ್ಣು ತರಕಾರಿ ಕಾಳುಗಳನ್ನು ಹೆಚ್ಚಾಗಿ ಸೇವಿಸುವುದು. ವ್ಯಾಯಾಮ ಮಾಡದೆ ಇರುವುದು ದೇಹದ ಮೇಲೆ ಬೀಳುವ ಸೂರ್ಯನಿಂದ ಬರುವ ಅಲ್ಟ್ರಾ ವೈಲೆಟ್ ವಿಕಿರಣಗಳು ಕಾರಣವಾಗಿರುತ್ತದೆ. ಅನುವಂಶಿಯವಾಗಿ ಬರುತ್ತದೆ.

ಆದರೆ ಈ ಕ್ಯಾನ್ಸರ್ ಎಂಬ ಕಾಯಿಲೆಯನ್ನು ಸ್ವಲ್ಪ ಮಟ್ಟಿಗೆ ತಡೆಗಟ್ಟಲು ಹಲವಾರು ರೀತಿಯ ತರಕಾರಿಗಳು. ಹಣ್ಣುಗಳನ್ನು ಸೇವಿಸುತ್ತರೆ ಅಂತಹ ಹಣ್ಣುಗಳಲ್ಲಿ ಒಂದಾಗಿರುವ ನೇರಳೆ ಹಣ್ಣು. ಈ ನೇರಳೆ ಹಣ್ಣು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಅದರಲ್ಲೂ ಗ್ರಾಮೀಣ ಪ್ರದೇಶದ ಜನರಿಗೆ ತುಂಬಾ ಪರಿಚಿತವಾಗಿರುವ ಹಣ್ಣು ಇದು. ಇದು ನೋಡಲು ಕೂಡ ಚೆನ್ನಾಗಿ ಇರುತ್ತದೆ ಹಾಗೇಯೇ ಸೇವಿಸಲು ಕೂಡ ಚೆನ್ನಾಗಿರುತ್ತದೆ. ಈ ನೇರಳೆ ಹಣ್ಣಿನಲ್ಲಿ ಕ್ಯಾಲ್ಸಿಯಂ ಐರನ್ ಪೊಟ್ಯಾಶಿಯಂ ವಿಟಮಿನ್ ಸಿ ಆಂಟಿ ಆಕ್ಸಿಡೆಂಟ್ ಅತೀ ಮುಖ್ಯವಾಗಿ ಕ್ಯಾನ್ಸರ್ ವಿರುದ್ದ ಹೋರಾಡುವ ವಿಟಮಿನ್ ಬಿ 12 ಅಂಶವು ಹೆಚ್ಚಾಗಿ ಇದೆ.

ಈ ನೇರಳೆ ಹಣ್ಣನ್ನು ಸೇವಿಸುವುದರಿಂದ ಕ್ಯಾನ್ಸರ್ ಎಂಬ ಕಾಯಿಲೆ ಬರದ ಹಾಗೆ ನೋಡಿಕೊಳ್ಳಬಹುದು. ನೇರಳೆ ಹಣ್ಣಿನ ಜ್ಯೂಸ್‌ನಲ್ಲಿ ಬಯೋಆಕ್ಟೀವ್‌ ಫಿಟೋಕೆಮಿಕಲ್‌ ಲಿವರ್‌ ಸಮಸ್ಯೆ ಮತ್ತು ಕ್ಯಾನ್ಸರ್‌ ಸಮಸ್ಯೆಯನ್ನು ದೂರ ಮಾಡುತ್ತದೆ. ನೇರಳೆ ಹಣ್ಣಿನ ರಸವನ್ನು ಕುಡಿಯುವುದರಿಂದ ಕೆಮ್ಮು ಮತ್ತು ಉಬ್ಬಸ ಕಡಿಮೆ ಆಗುತ್ತದೆ. ನೇರಳೆ ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಹಾಗೂ ಹೃದಯಕ್ಕೆ ಸಂಬಂಧಪಟ್ಟ ಯಾವುದೇ ರೀತಿಯ ಸಮಸ್ಯೆಗಳು ಬರುವುದಿಲ್ಲ. ಜೊತೆಗೆ ಮಧುಮೇಹ ಸಮಸ್ಯೆ ಬರುವುದಿಲ್ಲ. ಹಾಗೂ ದೇಹದ ಉಷ್ಣಾಂಶವನ್ನು ಕಡಿಮೆ ಮಾಡುತ್ತದೆ. ನೇರಳೆ ಹಣ್ಣಿನ ನಿಯಮಿತ ಸೇವನೆಯಿಂದ ಹಿಮೋಗ್ಲೋಬಿನ್ ಪ್ರಮಾಣ ಹೆಚ್ಚುತ್ತದೆ. ನೇರಳೆ ಹಣ್ಣುಗಳನ್ನು ಸೇವಿಸಿದರೆ ದೇಹದ ಉಷ್ಣತೆ

ಕಡಿಮೆಯಾಗುತ್ತದೆ ನೇರಳೆಯಲ್ಲಿ ಕಬ್ಬಿಣಾಂಶ ಹೆಚ್ಚಾಗಿರುವುದರಿಂದ ದೇಹದ ರಕ್ತವನ್ನು ಶುದ್ಧ ಮಾಡುತ್ತದೆ. ನೇರಳೆ ಹಣ್ಣನ್ನು ತಿನ್ನುವುದರಿಂದ ಅಜೀರ್ಣ ಸಮಸ್ಯೆಗಳು ದೂರವಾಗುತ್ತವೆ. ಹಾಗಾಗಿ ನಿಯಮಿತವಾಗಿ ನೇರಳೆ ಹಣ್ಣುಗಳನ್ನು ಸೇವಿಸಿದರೆ ಕ್ಯಾನ್ಸರ್ ಎಂಬ ಭಯಾನಕ ಕಾಯಿಲೆಯನ್ನು ದೂರ ಮಾಡಬಹುದು. ನಮ್ಮಲ್ಲಿ ಕೆಲವು ಜನಕ್ಕೆ ನೇರಳೆ ಹಣ್ಣು ಅಂದ್ರೆ ಅಲರ್ಜಿ ಇದ್ದ ಹಾಗೇ ಅದನ್ನು ಇಷ್ಟ ಪಡುವುದೇ ಇಲ್ಲ. ವೈದ್ಯರ ವರಧಿ ಪ್ರಕಾರ ಕ್ಯಾನ್ಸರ್ ತಡೆಯುವ ಶಕ್ತಿ ಬೇರೆ ಹಣ್ಣಿಗಿಂತ ನೆರಳೆಯಲ್ಲಿ ಹೇರಳವಾಗಿದೆ ಎನ್ನುತ್ತಾರೆ. ಇನ್ನಾದರೂ ಕಾಲಕ್ಕೆ ತಕ್ಕ ಹಾಗೇ ಹಣ್ಣುಗಳ ಸೇವನೆ ಮಾಡಿರಿ ದೇಹ ಆರೋಗ್ಯವಾಗಿ ಇಟ್ಟುಕೊಳ್ಳಿ. ಈ ಉಪಯುಕ್ತ ಮಾಹಿತಿ ತಪ್ಪದೇ ಶೇರ್ ಮಾಡಿರಿ ನಿಮ್ಮ ಸ್ನೇಹಿತರಿಗೂ ಹಾಗು ಎಲ್ಲರಿಗು ಖಂಡಿತ ಈ ಮಾಹಿತಿ ಸಹಾಯ ಆಗಲಿದೆ.

LEAVE A REPLY

Please enter your comment!
Please enter your name here