ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ರುಚಿ ರುಚಿ ಅಡುಗೆ ಮಾಡಿದ ಕರ್ನಾಟಕದ ಹುಡುಗ

0
323

ನಮ್ಮ ರಾಜ್ಯದಲ್ಲಿ ಎಷ್ಟೆಲ್ಲ ರೀತಿಯ ಪ್ರತಿಭೆಯುಳ್ಳ ವ್ಯಕ್ತಿಗಳು ಇದ್ದಾರೆ ಅಲ್ಲವೇ ಅದರಲ್ಲೂ ಕಣ್ಣು ಕಾಣದೆ ಇರುವ ಜನರು ಕಾಲು ಇಲ್ಲದೆ ಇರುವ ಜನರು ಹೀಗೆ ಎಷ್ಟೋ ರೀತಿಯ ಅಂಗವಿಕಲ ವ್ಯಕ್ತಿಗಳೆಲ್ಲ ನಾನಾ ರೀತಿಯ ಅಸಾಧ್ಯವಾದ ಸಾಧನೆಗಳನ್ನು ಮಾಡಿದ್ದಾರೆ ಎಲ್ಲವು ಸರಿ ಇದ್ದು ಸಾಧನೆ ಮಾಡಲು ಆಗದೆ ಇರೋ ವ್ಯಕ್ತಿಗಳ ಮುಂದೆ ತಮ್ಮ ಅಂಗವೈಕಲ್ಯ ಮರೆತು ಯಶಸ್ಸಿನತ್ತ ಸಾಗುತ್ತಾರೆ. ಒಬ್ಬೊಬ್ಬ ವ್ಯಕ್ತಿಯಲ್ಲಿ ಒಂದೊಂದು ರೀತಿಯ ಪ್ರತಿಭೆ ಇರುತ್ತದೆ ಒಬ್ಬ ವ್ಯಕ್ತಿ ಮಾಡುವಂತಹ ಕೆಲಸಗಳೆಲ್ಲ ಒಂದು ರೀತಿಯ ಪ್ರತಿಭೆಯೇ. ಅಂತಹ ಪ್ರತಿಭೆಯನ್ನು ಒಳಗೊಂಡಿರುವ ಇಲ್ಲೊಬ್ಬ ಕನ್ನಡದ ಹುಡುಗನ ಪ್ರತಿಭೆ ಎಂತಹದು ಎಂದು ತಿಳಿಯೋಣ ಬನ್ನಿ. ಎಲ್ಲ ಮಕ್ಕಳೂ ಸಾಮಾನ್ಯವಾಗಿ ಆಟ ಸಾಮಾನುಗಳಲ್ಲಿ ಇಲ್ಲಿ ಒಬ್ಬ ವ್ಯಕ್ತಿ ತನ್ನ 3 ನೇ ವರ್ಷದ ವಯಸ್ಸಿನಲ್ಲಿ ಆಟ ಅಡುತ್ತಿದ್ದು ತುಂಬಾ ವಿಶೇಷ ಏಕೆಂದರೆ ಈ ಹುಡುಗನ ಆಟ ಅಡುಗೆ ಸಾಮಾಗ್ರಿಗಳ ಜೊತೆ ಆಟವಾಡುವುದು. ಆದರೆ ಇವರ ತಂದೆ ತಾಯಿಯ ಆಸೆ ಮಗ ಓದಿ ಒಳ್ಳೆಯ ಹುದ್ದೆಯಲ್ಲಿ ಇರಬೇಕೆಂಬುದು

ಅದರೆ ಈ ಹುಡುಗನಿಗೆ ವಿದ್ಯೆಗಿಂತ ಅಡುಗೆ ಮನೆಯಲ್ಲಿ ಕಾಲ ಕಳೆಯುವುದೇ ತುಂಬಾ ಖುಷಿ ನೀಡುತ್ತಿತ್ತು. ಆದರೆ ಇವರಿಗೆ ಓದುವುದು ಇಷ್ಟ ಇರಲಿಲ್ಲ ಸದಾ ಅಡುಗೆ ಮನೆಯಲ್ಲಿ ಕಾಲ ಕಳೆಯುವುದು ಜೊತೆಗೆ ಏನಾದರೂ ವಿಭಿನ್ನವಾಗಿ ಮಾಡಬೇಕು ಎಂಬುದು ಕೂಡ ಕನಸು ಇತ್ತು. ಅ ಸಂದರ್ಭದಲ್ಲಿ ಅವರಿಗೆ ಯೋಚನೆ ಬಂದಿದ್ದು ಕಣ್ಣಿಗೆ ಬಟ್ಟೆಯನ್ನು ಕಟ್ಟಿಕೊಂಡು ಅಡುಗೆ ಮಾಡುವುದು ಸಾಮಾನ್ಯವಾಗಿ ಎಷ್ಟೇ ಜಾಗೃತೆಯಿಂದ ಅಡುಗೆ ಮಾಡಿದರು ಕೂಡ ಸ್ವಲ್ಪ ಆದರೂ ವ್ಯತ್ಯಾಸ ಆಗುತ್ತದೆ. ಆದರೆ ಇವರು ಕಣ್ಣಿಗೆ ಬಟ್ಟೆಯನ್ನು ಕಟ್ಟಿಕೊಂಡು ಅಡುಗೆ ಮಾಡುತ್ತಾರೆ ಎಂದರೆ ಇವರು ಪಾಕ ಪ್ರವೀಣ ಎಂಬುದು ಅನುಮಾನವೇ ಇಲ್ಲ. ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ತರಕಾರಿ ಹಚ್ಚಿಕೊಂಸು ಅಡುಗೆಗೆ ಬೇಕಾದ ಎಲ್ಲ ರೀತಿಯ ಸಾಮಾಗ್ರಿಗಳನ್ನು ತಯಾರಿಸಿಕೊಂಡು ಅಡುಗೆ ಮಾಡುತ್ತಾರೆ.ಆ ಅಡುಗೆಯಲ್ಲಿ ಯಾವುದೇ ರೀತಿಯ ಉಪ್ಪು ಖಾರ ಹೆಚ್ಚಾಗದೆ ಉತ್ತಮವಾದ ರುಚಿಕಟ್ಟಾದ ಅಡುಗೆ ತಯಾರಿಸುತ್ತಾರೆ.

ಇವರ ಈ ಪ್ರತಿಭೆಗೆ ಹಲವಾರು ರೀತಿಯ ಪ್ರಶಸ್ತಿಗಳು ಸಿಕ್ಕಿವೆ. ಜೊತೆಗೆ ಇವರ ಇನ್ನೊಂದು ಪ್ರತಿಭೆಯೆಂದರೆ ಇವರು ಅಡುಗೆ ಮಾಡಿ ಅದರ ರುಚಿಯನ್ನು ನೊಡದೆ ಅದರ ವಾಸನೆಯಲ್ಲೇ ಅಡುಗೆಯ ರುಚಿಯನ್ನು ಹೇಳುತ್ತಾರೆ. ಇಂತಹ ಪ್ರತಿಭೆಗಳನ್ನು ನೋಡಿದರೆ ಪ್ರತಿಯೊಬ್ಬರ ಮನಸ್ಸಿನಲ್ಲೂ ಏನಾದರೂ ಸಾಧನೆ ಮಾಡಬೇಕು ಎನ್ನುವ ಉತ್ಸಾಹ ಬೆಳೆಯುತ್ತದೆ. ಅದರಲ್ಲೂ ಇಂತಹ ವ್ಯಕ್ತಿ ನಮ್ಮ ರಾಜ್ಯದವರೇ ಆಗಿರುವುದು ನಮಗೆ ಹೆಮ್ಮೆಯ ವಿಚಾರ ಆಗಿದೆ. ಈ ಹಿಂದೆ ನಾವು ತಿಳಿದಿರಬಹುದು ವಿದೇಶದಲ್ಲಿ ಈ ರೀತಿ ಕಣ್ಣಿಗೆ ಬಟ್ಟೆ ಅಡುಗೆ ಮಾಡಿದ್ದಾರೆ ಎಂದು ಆದರೆ ಅವ್ರು ಮಾಡಿರುವ ಅಡುಗೆಯಲ್ಲಿ ಯಾವುದೇ ರುಚಿ ಎಂಬುದು ಇರಲಿಲ್ಲ ಆದರೆ ಈ ಪ್ರವೀಣ ಅವರು ಮಾಡಿರುವ ಆಹಾರ ನಿಜಕ್ಕೂ ಸ್ವಾದಿಷ್ಟಕರ ಇದೀಗ ನಮ್ಮ ಕರ್ನಾಟಕದ ಈ ಯುವಕ ಈ ರೀತಿ ಸಾಧನೆ ಮಾಡಿರೋದು ಕುಶಿಯ ವಿಚಾರ. ಈ ಲೇಖನ ಇಷ್ಟ ಆದ್ರೆ ಖಂಡಿತ ಶೇರ್ ಮಾಡಿರಿ.

LEAVE A REPLY

Please enter your comment!
Please enter your name here