ಭಾರತದ ಏಕೈಕ ಮೂನ್ ಬೋ ಇರೋದು ಕರ್ನಾಟಕದಲ್ಲಿ ಮಾತ್ರ

0
940

ಮೂನ್ ಬೊ ಅಂದರೆ ಚಂದ್ರನ ಮಳೆಬಿಲ್ಲು ಇದು ಪ್ರಪಂಚದ ಒಂದು ತುಂಬಾ ಅಪರೂಪದ ನೈಸರ್ಗಿಕ ವಾತಾವರಣದ ವಿದ್ಯಮಾನವಾಗಿದೆ. ಈ ಮೂನ್ ಬೊ ಯಾವಾಗ ಸಂಭವಿಸುತ್ತದೆ ಎಂದರೆ ಚಂದ್ರನ ಬೆಳಕು ಪ್ರತಿಫಲಿಸಿ ನೀರಿನ ಹನಿಗಳನ್ನು ವಕ್ರೀಭವನಗೊಳಿಸಿದಾಗ ಉಂಟಾಗುತ್ತದೆ. ಸಾಮಾನ್ಯವಾಗಿ ಕಾಮನಬಿಲ್ಲು ಸೂರ್ಯನ ಪ್ರತಿಫಲನದಿಂದ ಉಂಟಾದರೆ ಮೂನ್ ಬೊ ಚಂದ್ರನ ಬೆಳಕಿನಿಂದ ಉಂಟಾಗುವ ಅಪರೂಪದ ವಿದ್ಯಮಾನವಾಗಿದೆ. ಇದು ಕೇವಲ ರಾತ್ರಿಯ ಸಮಯದಲ್ಲಿ ಚಂದ್ರನ ಬೆಳಕಿನಲ್ಲಿ ಮಾತ್ರ ಕಾಣುವಂತಹದು. ಇಂತಹ ಅದ್ಬುತ ಚಂದ್ರನ ಮಳೆಬಿಲ್ಲು ಕಾಣಸಿಗುವುದು ಜಗತ್ತಿನಲ್ಲಿ ಕೇವಲ ಐದು ದೇಶಗಳಲ್ಲಿ ಮಾತ್ರ ಆ ಐದು ದೇಶಗಳಲ್ಲಿ ಭಾರತ ಕೂಡ ಸೇರಿಕೊಳ್ಳುತ್ತದೆ. ಭಾರತದಲ್ಲಿ ಎಲ್ಲಿ ಕಂಡು ಬರುತ್ತದೆ ಎಂದರೆ ಕನಾ೯ಟಕದ ಉತ್ತರ ಕನ್ನಡ ಜಿಲ್ಲೆಯ ಉಂಚಳ್ಳಿ ಜಲಪಾತದಲ್ಲಿ. ಇನ್ನೊಂದು ವಿಶೇಷ ಏನೆಂದರೆ ಏಷ್ಯಾ ಖಂಡದಲ್ಲಿ ಬೇರೆ ಯಾವ ದೇಶದಲ್ಲಿಯೂ ಮೂನ್ ಬೊ ಕಾಣಸಿಗುವುದಿಲ್ಲ.

ಮೂನ್ ಬೊ ಸಾಮಾನ್ಯವಾಗಿ ಜಲಪಾತಗಳಲ್ಲಿ ಉಂಟಾಗುತ್ತದೆ. ಮೂನ್ ಬೊ ಉಂಟಾಗುವ ಜಗತ್ತಿನ ಐದು ಜಲಪಾತಗಳೆಂದರೆ ಯೊಸೆಮೈಟ್ ಫಾಲ್ಸ್ ಯುಎಸ್ಎ ಉತ್ತರ ಅಮೆರಿಕ. ವೈಮೆಯಾ ಫಾಲ್ಸ್, ಯುಎಸ್ಎ ಉತ್ತರ ಅಮೆರಿಕ. ಸ್ಕೋಗಾಫಾಸ್ ಫಾಲ್ಸ್, ಐಸ್ಲ್ಯಾಂಡ್ ಯುರೋಪ್. ವಿಕ್ಟೋರಿಯಾ ಫಾಲ್ಸ್, ಜಿಂಬಾಬ್ವೆ ಆಫ್ರಿಕಾ ಉಂಚಳ್ಳಿ ಫಾಲ್ಸ್ ಭಾರತ ಏಷ್ಯಾ ಹಲವಾರು ಜಲಪಾತಗಳು ನದಿಗಳು ಅಳಿವಿನಂಚಿನಲ್ಲಿರುವ ಪ್ರಾಣಿಗಳು ಮತ್ತು ನಿತ್ಯಹರಿದ್ವರ್ಣದ ದಟ್ಟವಾದ ಕಾಡು ಇರುವ ಉತ್ತರ ಕನ್ನಡ ಜಿಲ್ಲೆಯೂ ಸಹ ಏಷ್ಯಾದ ಏಕೈಕ ಚಂದ್ರನ ಮಳೆಬಿಲ್ಲು ಕಾಣುವ ತಾಣವಾಗಿದೆ. ಇದು ಎಲ್ಲಿ ಬರುತ್ತದೆ ಎಂದರೆ ಸಿರ್ಸಿ ನಗರದಿಂದ ಸುಮಾರು 34 ಕಿ.ಮೀ ದೂರದಲ್ಲಿ ಅಘನಾಶಿನಿ ನದಿಯಿಂದ ಉಂಚಳ್ಳಿ ಜಲಪಾತ ಸೃಷ್ಟಿಯಾಗಿದ್ದು ದಿನನಿತ್ಯ ಸಾವಿರಾರು ಪ್ರವಾಸಿಗರು ಇಲ್ಲಿಗೆ ಬರುತ್ತಾರೆ ಇಲ್ಲಿನ ಸೌಂದರ್ಯವನ್ನು ಅನುಭವಿಸುತ್ತಾರೆ.

ಈ ಉಂಚಳ್ಳಿ ಜಲಪಾತದಲ್ಲಿ ಚಂದ್ರನ ಬಿಲ್ಲನ್ನು ಕಂಡು ಹಿಡಿದದ್ದು ಯಾರು ಗೊತ್ತೇ ಅವರು ಛಾಯಾಗ್ರಾಹಕ ಮತ್ತು ಸಾಕ್ಷ್ಯಚಿತ್ರ ನಿರ್ಮಾಪಕ ಶ್ರೀ ಹರ್ಷ ಗಾಂಜಾಮ್ ಇವರು ಅಘನಾಶಿನಿ ಜಲಪಾತದಲ್ಲಿ ಉಂಟಾಗುವ ಚಂದ್ರನ ಬಿಲ್ಲು ಕಂಡುಹಿಡಿದರು. ಮೂರು ವರ್ಷಗಳ ಹಿಂದೆ ಅವರು ಅಘನಾಶಿಣಿ ನದಿಯ ಮೇಲೆ ಸಾಕ್ಷ್ಯ ಚಿತ್ರವನ್ನು ತಯಾರಿಸಲು ಬಂದಾಗ, ಅವರು ಉಂಚಳ್ಳಿ ಜಲಪಾತ ಚಂದ್ರನ ಬಿಂದುವಿನ ಸ್ಥಳವೆಂದು ಶಂಕಿಸಿದರು ಮತ್ತು ಅವರು ಸತತವಾಗಿ ಮೂರು ವರ್ಷಗಳ ಕಾಲ ಇಲ್ಲಿಗೆ ಭೇಟಿ ನೀಡಳು ಆರಂಭಿಸಿದರು. ಆ ಸಮಯದಲ್ಲಿ ಈ ವಿಚಾರ ಅವರಿಗೆ ತಿಳಿಯಿತು.

ಚಂದ್ರನ ಬಿಲ್ಲು ಕೂಡ ಮಳೆಬಿಲ್ಲಂತೆಯೇ ಆದರೆ ಸ್ವಲ್ಪ ಮಟ್ಟಿನ ವ್ಯತ್ಯಾಸ ಏನೆಂದರೆ ಸೂರ್ಯನ ಬೆಳಕಿನ ಬದಲಾಗಿ ಚಂದ್ರನ ಪ್ರಕಾಶಮಾನವಾದ ಹುಣ್ಣಿಮೆ ದಿನಗಳಲ್ಲಿ ಚಂದ್ರನ ಬೆಳಕಿನಲ್ಲಿ ನೀರಿನ ಹನಿಗಳು ಹೊಳೆಯುತ್ತದೆ. ಚಂದ್ರನ ಉಬ್ಬರವಿಳಿತದ ಸಮಯದಲ್ಲಿ ಮುಂಜಾನೆ ಅಥವಾ ಒಂದೆರಡು ದಿನಗಳಲ್ಲಿ ಇದು ನಡೆಯುತ್ತದೆ. ಆದರೆ ವಿಶೇಷವೆಂದರೆ ಎಲ್ಲ ಜಲಪಾತಗಳಲ್ಲಿಯೂ ಇದು ಕಂಡುಬರುವುದಿಲ್ಲ. ಹಾಗಾಗಿ ಒಮ್ಮೆ ಆದರೂ ಈ ಸ್ಥಳಕ್ಕೆ ಭೇಟಿ ನೀಡಿ ಈ ಸೌಂದರ್ಯವನ್ನು ಅನುಭವಿಸಬೇಕು. ಈ ಲೇಖನ ತಪ್ಪದೇ ಶೇರ್ ಮಾಡಿರಿ ಎಲ್ಲರಿಗೂ ಮಾಹಿತಿ ದೊರೆಯುತ್ತದೆ.

LEAVE A REPLY

Please enter your comment!
Please enter your name here