ಮನೆ ಬಾಗಿಲಿಗೆ ಕುದುರೆ ಲಾಳ ಹಾಕಿ ಅದೃಷ್ಟ ಬದಲಾಗುತ್ತೆ

0
1395

ಸಾಮಾನ್ಯವಾಗಿ ಸಮಸ್ಯೆಗಳು ಎಂಬುದು ಬಂದ ತಕ್ಷಣ ಮನುಷ್ಯ ಆ ಸಮಸ್ಯೆಗಳಿಂದ ಹೇಗೆ ದೂರವಾಗುವುದು ಆ ಸಮಸ್ಯೆಗಳನ್ನು ಹೇಗೆ ಪರಿಹರಿಸಿಕೊಳ್ಳುವುದು ಎಂದು ಯೋಚಿಸಿ ಸಮಸ್ಯೆಗಳಿಗೆ ಹಲವಾರು ರೀತಿಯ ಪರಿಹಾರಗಳನ್ನು ಹುಡುಕಿಕೊಳ್ಳುತ್ತಾರೆ. ಕೆಲವು ಸಮಯದಲ್ಲಿ ನಾವು ಎಷ್ಟೇ ದೇವರು ಪ್ರಾರ್ಥನೆ ಹೋಮ ಹವಾನ ಹೀಗೆ ಮಾಡಿದರು ನಮ್ಮ ಸಮಸ್ಯೆಗಳು ಸರಿ ಹೋಗೋದಿಲ್ಲ. ಕೆಲವು ಅದ್ಯಾತ್ಮದಲ್ಲಿ ಹೆಚ್ಚಿನ ಕಾಳಜಿ ತೋರಿಸಿದರೆ ನಮ್ಮ ಸಮಸ್ಯೆಗಳು ಪರಿಹಾರ ಆಗುತ್ತದೆ ಎಂಬ ಕಲ್ಪನೆಯಲ್ಲೂ ಇರುತ್ತಾರೆ. ಸಮಸ್ಯೆ ಎಂಬುದು ಮನುಷ್ಯನನ್ನು ಸಾಯುವ ತನಕ ಬಿಡುವುದಿಲ್ಲ ಶ್ರೀಮಂತನಿಗೂ ಒಂದು ಕಷ್ಟ ಎಂಬುದು ಇದ್ದೇ ಇರುತ್ತದೆ ನಾವು ನಿಮ್ಮ ಎಲ್ಲ ಸಮಸ್ಯೆಗಳಿಗೂ ಒಂದು ಪರಿಹಾರ ಸೂಚಿಸುತ್ತೇವೆ ಇದನ್ನು ನಂಬುವುದು ಬಿಡುವುದು ನಿಮ್ಮ ನಿಮ್ಮ ಮನಸಿಗೆ ಬಿಟ್ಟಿದ್ದು. ಮನೆಗೆ ಯವುದೇ ರೀತಿಯ ಸಮಸ್ಯೆ ಬರದೆ ಇರಲಿ ಎಲ್ಲವೂ ನೆಮ್ಮದಿಯಿಂದ ಸಾಗಲಿ ಎಂಬ ಉದ್ದೇಶದಿಂದ ಹಲವಾರು ಪರಿಹಾರಗಳನ್ನು ಮಾಡುತ್ತಾರೆ ಅದರಲ್ಲಿ ಒಂದಾಗಿರುವುದು ಕುದುರೆ ಲಾಳ.

ಎಲ್ಲರೂ ಕೂಡ ಕುದುರೆಗೆ ಹಾಕುವ ಲಾಳವನ್ನು ನೋಡಿರಬಹುದು ಆ ಲಾಳವನ್ನು ಕುದುರೆಗೆ ಹಾಕುವುದು ಏಕೆಂದರೆ ಕುದುರೆಯು ತಮ್ಮ ಚಲನೆಯಲ್ಲಿ ಮಿತಿಯಿರುತ್ತದೆ ಯಾವುದೇ ರೀತಿಯ ಅಪಾಯಗಳು ಆಗುವುದಿಲ್ಲ ಜೊತೆಗೆ ಕುದುರೆಗಳು ತಮ್ಮ ಮಿತಿಯನ್ನು ಕಳೆದುಕೊಳ್ಳುವುದಿಲ್ಲ ಎಂಬ ಕಾರಣಕ್ಕೆ ಕುದುರೆಗೆ ಲಾಳವನ್ನು ಹಾಕುತ್ತಾರೆ ಅದೇ ಲಾಳವನ್ನು ಮನೆಯ ಬಾಗಿಲಿಗೆ ಹಾಕಿದರೆ ಮನೆಗೆ ಶ್ರೇಯಸ್ಸು ಎಂಬುದು ಶಾಸ್ತ್ರಗಳ ನಂಬಿಕೆ. ನಿಮಗೆ ಗೊತ್ತಿರಬಹುದು ಕೆಲವರ ಮನೆಯಲ್ಲಿ ಕುದುರೆ ಲಾಳ ಹಾಕಿರುತ್ತಾರೆ ಆದರೆ ಅದರ ಬಗ್ಗೆ ಅವರ ಬಳಿ ಮಾಹಿತಿ ಕೇಳಿದರೆ ಏನು ಸಹ ಹೇಳುವುದಿಲ್ಲ.

ಜೊತೆಗೆ ತುಂಬಾ ಸದೃಢವಾದ ಅಂಗ ರಚನೆಯಲ್ಲೂ ತುಂಬಾ ಸಂಪನ್ನವಾದ ಆರೋಗ್ಯ ಅವಿರತವಾದ ಶಕ್ತಿಮೂಲ ಇತ್ಯಾದಿಗಳನ್ನು ಪ್ರತಿನಿಧಿಸುವ ಪ್ರಾಣಿ ಎಂದರೆ ಕುದುರೆ. ಈ ಕುದುರೆಗೆ ಲಾಳ ಹಾಕುವುದು ಏಕೆಂದರೆ ಓಡುವಾಗ ಯಾವುದೇ ರೀತಿಯ ಚೂಪಾದ ಮುಳ್ಳು ಕಲ್ಲುಗಳನ್ನು ಎದುರಿಸುವ ಹಾಗೆ ರಕ್ಷಣೆಗಾಗಿ ಕುದುರೆಯ ಸರದಾರರು ಲಾಳವನ್ನು ಬಡಿಸಿರುತ್ತಾರೆ. ಲಾಳ ಇಂಗ್ಲೀಷ್‌ ಭಾಷೆಯ ಯು ಎಂಬ ಅಕ್ಷರ ತಲೆ ಕೆಳಗಾಗಿದ್ದರೆ ಹೇಗಿರುತ್ತದೆಯೋ ಆ ಆಕಾರದಲ್ಲಿ ರೂಪುಗೊಂಡಿದ್ದು ಇದನ್ನು ಕಬ್ಬಿಣದಲ್ಲಿ ಮಾಡಿದ್ದಿರುತ್ತದೆ. ಈ ಕಬ್ಬಿಣವು ರಕ್ಷಣೆ ಮತ್ತು ಅದೃಷ್ಟದ ಸಂಕೇತವಾಗಿದೆ.

ಹಾಗಾಗಿ ಮನೆಯ ಬಾಗಿಲು ಪೂರ್ವ ದಿಕ್ಕಿನಲ್ಲಿ ಇರುವವರು ಬಿಟ್ಟು ಉಳಿದ ದಿಕ್ಕಿನವರು ಕುದುರೆ ಲಾಳವನ್ನು ಮನೆ ಬಾಗಿಲ ಮುಂದೆ ನೇತುಹಾಕಿದರೆ ತುಂಬಾ ಒಳ್ಳೆಯದು. ಪೂರ್ವದಿಕ್ಕಿನ ಕಡೆಗೆ ಬಾಗಿಲು ಇರುವವರು ಯಾಕೆ ಲಾಳವನ್ನು ನೇತುಹಾಕಬಾರದು ಎಂದರೆ ಪೂರ್ವ ದಿಕ್ಕಿಗೆ ಸೂರ್ಯನ ಕಾಂತಿಯು ನೇರವಾಗಿ ಬೀಳುವದರಿಂದ ಯಾವುದೇ ದುಷ್ಟ ಶಕ್ತಿಗಳು ಮನೆಯ ಒಳಗೆ ಪ್ರವೇಶ ಮಾಡುವುದಿಲ್ಲ ಹಾಗಾಗಿ ಪೂರ್ವ ದಿಕ್ಕಿನ ಕಡೆಗೆ ಬಾಗಿಲು ಇರುವವರು ಕುದುರೆ ಲಾಳವನ್ನು ನೇತುಹಾಕುವ ಅವಶ್ಯಕತೆ ಇಲ್ಲ.ಇನ್ನು ಉಳಿದ ಎಲ್ಲ ದಿಕ್ಕಿನ ಕಡೆಗೆ ಬಾಗಿಲು ಇರುವವರು ದುಷ್ಟ ಶಕ್ತಿಗಳು ಬಾರದಂತೆ ಕುದುರೆ ಲಾಳವನ್ನು ಹಾಕುತ್ತಾರೆ. ಯಾರ ಮನೆಯಲ್ಲಿ ತಾನೇ ಸಮಸ್ಯೆಗಳು ಆರ್ಥಿಕ ಸಮಸ್ಯೆ ಎಂಬುದು ಇರುವುದು ಇಲ್ಲ ಹೇಳಿ ಎಲ್ಲರ ಮನೆಯಲ್ಲಿ ಆರ್ಥಿಕ ಸಮಸ್ಯೆ ಸಾಲ ಭಾದೆಗಳು ಇರುತ್ತವೆ ಇವರು ಏನು ಮಾಡಬೇಕು ಎಂದರೆ ಒಂದು ಶುದ್ಧವಾದ ಬಿಳಿ ಬಟ್ಟೆಯಲ್ಲಿ ಒಂದು ಕುದುರೆ ಲಾಳವನ್ನು ಇಟ್ಟು ಬಟ್ಟೆಯನ್ನು ಕಟ್ಟಿ ಅದನ್ನು ನೀವು ಮನೆಯಲ್ಲಿ ಹಣ ಇಡುವ ಬೀರು ಅಥವಾ ಕಬೋರ್ಡ್ ನಂತಹ ಸ್ಥಳದಲ್ಲಿ ಇಟ್ಟರೆ ಆರ್ಥಿಕ ಸಮಸ್ಯೆ ದೂರವಾಗುತ್ತದೆ.

ಬಾಗಿಲಿಗೆ ಕುದುರೆ ಲಾಳ ಹಾಕಿದರೆ ಮನೆಯಲ್ಲಿ ಖುಷಿ ಇರುತ್ತದೆ. ಹಾಗೆಯೇ ಸಕರಾತ್ಮಕತೆ ತುಂಬಿಕೊಳ್ಳುತ್ತದೆ. ಜೊತೆಗೆ ಮನೆಯಲ್ಲಿ ಸಂತೋಷವೂ ವೃದ್ಧಿಯಾಗುತ್ತದೆ. ಮನೆಯ ಮುಂದಿನ ಬಾಗಿಲಿನ ಮೇಲೆ ತೂಗು ಹಾಕಿದರೆ ಅದರಿಂದ ಪೊಸಿಟಿವ್‌ ಎನರ್ಜಿ ಮನೆ ತುಂಬಾ ಹರಡುತ್ತದೆ. ಮನೆಯಲ್ಲಿ ಭಾಗ್ಯ ವೃದ್ಧಿಯಾಗುತ್ತದೆ ಹಾಗೂ ಸಕರಾತ್ಮಕತೆ ತುಂಬಿಕೊಳ್ಳುತ್ತದೆ. ಜೊತೆಗೆ ಮನೆಯಲ್ಲಿ ಸಂತೋಷವೂ ವೃದ್ಧಿಯಾಗುತ್ತದೆ. ಹಾಗಾಗಿ ನಿಮ್ಮ ಮನೆಗೂ ಕುದುರೆ ಲಾಳ ಹಾಕಿ ಅದರ ಲಾಭ ಪಡೆದುಕೊಳ್ಳಿ. ಈ ಒಂದು ಸಲಹೆ ಮಾಡಿ ನೋಡಿದರೆ ತಪ್ಪೇನು ಇಲ್ಲ ಇದಕ್ಕೆ ಯಾವುದೇ ಹಣದ ಕರ್ಚು ಸಹ ಇಲ್ಲ ಅಲ್ಲವೇ. ಒಮ್ಮೆ ಪ್ರಯತ್ನ ಮಾಡಿ ನೋಡಿ ಫಲ ಖಂಡಿತ ಸಿಗುತ್ತದೆ ನಂಬಿಕೆ ಮುಖ್ಯ.

LEAVE A REPLY

Please enter your comment!
Please enter your name here