ಹೊಟ್ಟೆ ನೋವು ಗಂಟಲು ನೋವು ಮೂತ್ರ ಪಿಂಡದ ಸಮಸ್ಯೆ ಇನ್ನು ಹತ್ತಾರು ರೋಗಗಳಿಗೆ ಮನೆಯಲ್ಲೇ ಮದ್ದು

0
829

ಎಲ್ಲರೂ ಪರಂಗಿ ಹಣ್ಣನ್ನು ಇಷ್ಟಪಟ್ಟು ತಿನ್ನುತ್ತಾರೆ. ಮತ್ತು ಆರೋಗ್ಯದ ದೃಷ್ಟಿಯಿಂದ ಕೂಡ ಇದನ್ನು ತಿನ್ನುವುದು ಒಳ್ಳೆಯದು. ವೈದ್ಯರು ಕೂಡ ಪರಂಗಿ ಹಣ್ಣನ್ನು ತಿನ್ನಲು ಸಲಹೆಗಳನ್ನು ನೀಡುತ್ತಾರೆ. ಡೆಂಗ್ಯೂ ಜ್ವರ ಬಂದರೆ ಪರಂಗಿ ಹಣ್ಣು ಬಹಳ ಉಪಯೋಗಕಾರಿ. ಏಕೆಂದರೆ ಪರಂಗಿ ಹಣ್ಣನ್ನು ತಿನ್ನುವುದರಿಂದ ಪ್ಲೇಟ್ಲೆಟ್ಸ್ ಜಾಸ್ತಿ ಆಗುತ್ತದೆ. ಇಷ್ಟೇ ಅಲ್ಲದೆ ಪರಂಗಿಹಣ್ಣನ್ನು ಸೌಂದರ್ಯವರ್ಧಕಗಳನ್ನು ತಯಾರಿಸಲು ಉಪಯೋಗಿಸುತ್ತಾರೆ ಹಾಗೂ ಮುಖದ ಕಾಂತಿಯನ್ನು ಹೆಚ್ಚಿಸಿ ಕೊಳ್ಳಲು ಫೇಶಿಯಲ್ ರೀತಿಯಲ್ಲಿ ಕೂಡ ಇದನ್ನು ಬಳಸುತ್ತಾರೆ. ಇಷ್ಟೆಲ್ಲಾ ಉಪಯೋಗವಿರುವ ಪರಂಗಿ ಹಣ್ಣಿನ ಬೀಜಗಳನ್ನು ಎಲ್ಲರೂ ಬಿಸಾಡಿ ಬಿಡುತ್ತಾರೆ. ಯಾರು ಉಪಯೋಗಿಸುವುದಿಲ್ಲ ಆದರೆ ಪರಂಗಿ ಹಣ್ಣಿನ ಬೀಜಗಳ ಉಪಯೋಗಗಳ ಬಗ್ಗೆ ನೀವು ತಿಳಿದರೆ ಅದನ್ನು ನೀವು ಬಿಸಾಡುವುದಿಲ್ಲ.

ಹಾಗಾದರೆ ಪರಂಗಿ ಹಣ್ಣಿನ ಬೀಜಗಳ ಉಪಯೋಗಗಳ ಬಗ್ಗೆ ತಿಳಿಯೋಣ ಬನ್ನಿ. ಪರಂಗಿ ಹಣ್ಣಿನ ಬೀಜಗಳನ್ನು ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ ನಂತರ ಕುಟ್ಟಿ ಪುಡಿ ಮಾಡಿ ಇಟ್ಟುಕೊಳ್ಳಿ. ಪ್ರತಿನಿತ್ಯ ಮುಂಜಾನೆ ಕಾದು ಆರಿಸಿದ ನೀರಿಗೆ ಕುಟ್ಟಿ ಪುಡಿ ಮಾಡಿಟ್ಟುಕೊಂಡಿರುವ ಪರಂಗಿ ಹಣ್ಣಿನ ಬೀಜಗಳ ಪುಡಿಯನ್ನು ಮಿಶ್ರಣ ಮಾಡಿ ನಂತರ ಕುಡಿಯುವುದರಿಂದ ಮೂತ್ರಪಿಂಡದ ಕಾಯಿಲೆ ಸಮಸ್ಯೆಯಿಂದ ಬಳಲುತ್ತಿರುವವರು ಹಾಗೂ ಮೂತ್ರಪಿಂಡದ ಸಮಸ್ಯೆಯ ಸಂಬಂಧಿ ಕಾಯಿಲೆಗಳನ್ನು ತಡೆಯಬಹುದು. ಪರಂಗಿ ಹಣ್ಣಿನ ಬೀಜದ ಪುಡಿಯನ್ನು ನೀರಿನಲ್ಲಿ ಮಿಶ್ರಣ ಮಾಡಿ ಕುಡಿಯುವುದರಿಂದ ಸಂಧಿವಾತ ಜಾಯಿಂಟ್ ಪೈನ್ ಊತ ನೋವು ಊತದಿಂದ ಚರ್ಮ ಕೆಂಪಾಗುವುದು ಇಂತಹ ರೋಗಗಳನ್ನು ತಡೆಗಟ್ಟಬಹುದು.

ಗಂಟಲು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದರೆ ಬೆಚ್ಚಗಿನ ನೀರಿನಲ್ಲಿ ಕುಟ್ಟಿ ಪುಡಿ ಮಾಡಿಟ್ಟುಕೊಂಡಿರುವ ಪರಂಗಿ ಹಣ್ಣಿನ ಬೀಜದ ಪುಡಿಯನ್ನು ಮಿಶ್ರಣ ಮಾಡಿ ಕುಡಿಯಿರಿ. ದಿನಕ್ಕೆ ಮೂರು ಬಾರಿ ಈ ರೀತಿ ಮಾಡುವುದರಿಂದ 2 ಅಥವಾ 3 ದಿನದಲ್ಲಿ ನಿಮ್ಮ ಗಂಟಲು ನೋವು ಸಂಪೂರ್ಣ ಮಾಯವಾಗುವುದು. ಹೊಟ್ಟೆ ನೋವಿನ ಸಮಸ್ಯೆಯಿಂದ ಬಳಲುತ್ತಿದ್ದರೆ 1 ಚಮಚ ಕುಟ್ಟಿ ಪುಡಿ ಮಾಡಿಟ್ಟುಕೊಂಡಿರುವ ಪಪ್ಪಾಯಿ ಹಣ್ಣಿನ ಬೀಜದ ಪುಡಿಯನ್ನು ನೀರು ಮತ್ತು ಜೇನುತುಪ್ಪದ ಜೊತೆ ಮಿಶ್ರಣ ಮಾಡಿ ದಿನಕ್ಕೆ ಮೂರು ಬಾರಿಯಂತೆ ಕುಡಿಯಿರಿ. ಈ ರೀತಿ ಮಾಡುವುದರಿಂದ ನಿಮ್ಮ ಹೊಟ್ಟೆ ನೋವಿನ ಸಮಸ್ಯೆ ಗುಣವಾಗುವುದು.

ವೈರಲ್ ಸೋಂಕುಗಳನ್ನು ತಡೆಗಟ್ಟುವಲ್ಲಿ ಪಪ್ಪಾಯಿ ಹಣ್ಣಿನ ಬೀಜಗಳು ಬಹಳ ಪರಿಣಾಮಕಾರಿ. ಪಪ್ಪಾಯಿ ಹಣ್ಣಿನ ಬೀಜಗಳನ್ನು ಸೇವಿಸುವುದರಿಂದ ನಮಗೆ ಯಾವುದೇ ರೀತಿಯ ವೈರಲ್ ಸೋಂಕುಗಳು ಬರುವುದಿಲ್ಲ ಮತ್ತು ಇವು ನಮ್ಮ ದೇಹದಲ್ಲಿ ಆಂಟಿ ಬ್ಯಾಕ್ಟೀರಿಯಾ ರೀತಿ ಕೆಲಸ ಮಾಡುತ್ತದೆ. ಮತ್ತು ಪಪ್ಪಾಯಿ ಹಣ್ಣಿನ ಬೀಜಗಳನ್ನು ಪ್ರತಿನಿತ್ಯ ಸೇವಿಸುವುದರಿಂದ ಇದು ನಮ್ಮ ಯಕೃತ್ ಅನ್ನು ಶುಭ್ರಗೊಳಿಸುತ್ತದೆ. ಇಷ್ಟ ಎಲ್ಲ ಉಪಯೋಗವಿರುವ ಪರಂಗಿ ಹಣ್ಣಿನ ಬೀಜಗಳನ್ನು ಎಸೆಯಬೇಡಿ. ನಾವು ಪ್ರತಿ ನಿತ್ಯ ಪರಂಗಿ ಹಣ್ಣು ಬಳಕೆ ಮಾಡಿದ್ರು ಅದರ ಬೀಜವನ್ನು ಬಿಸಾಕುತ್ತೇವೆ ಇನ್ನಾದರೂ ತಿಲಿಯಿತು ಅಲ್ಲವೇ ಈ ಲೇಖನ ತಪ್ಪದೇ ಶೇರ್ ಮಾಡಿರಿ ನಿಮ್ಮ ಸ್ನೇಹಿತರಿಗೂ ಮತ್ತು ಎಲ್ಲರಿಗು ಸಹಾಯ ಆಗುತ್ತೆ.

LEAVE A REPLY

Please enter your comment!
Please enter your name here