ಪಾಕಿಸ್ತಾನದಲ್ಲಿರುವ ಅತ್ಯಂತ ಶಕ್ತಿಶಾಲಿ ದೇವಾಲಯಗಳು ಇದು

0
760

ಪಾಕಿಸ್ತಾನದಲ್ಲಿ ಕೂಡ ನಮ್ಮ ಹಿಂದೂ ದೇಗುಲಗಳು ಇವೆ ಎಂದರೆ ನಂಬಲು ಸಾಧ್ಯವಾಗುವುದಿಲ್ಲ ಅಲ್ಲವೇ ಆದರೆ ಇದು ಸತ್ಯ ಪ್ರಪಂಚದ ಕೆಲವು ಪ್ರಸಿದ್ಧ ಹಿಂದೂ ದೇವಾಲಯಗಳಿಗೆ ಪಾಕಿಸ್ತಾನವು ಕೂಡ ನೆಲೆಯಾಗಿದೆ. ಒಟ್ಟು 26 ದೇವಾಲಯಗಳು ಪಾಕಿಸ್ತಾನದಲ್ಲಿವೆ ಏಕೆಂದರೆ ಪಾಕಿಸ್ತಾನದ ಒಟ್ಟು ಹಿಂದೂ ಜನಸಂಖ್ಯೆಯು ಒಟ್ಟು ಜನಸಂಖ್ಯೆಯ ಸುಮಾರು 2% ವಿಭಜನೆಗೆ ಮುಂಚಿತವಾಗಿ ಇಡೀ ಪ್ರದೇಶವು ಸುಮಾರು 300 ದೇವಾಲಯಗಳನ್ನು ಹೊಂದಿತ್ತು ಆದರೆ ಬಾಬರಿ ಮಸೀದಿ ಜಗಳ ಹಾಗು ಇನ್ನಿತರ ಧಾರ್ಮಿಕ ಜಗಳಗಳ ತರುವಾಯ ಈ ದೇವಾಲಯಗಳಲ್ಲಿ ಹೆಚ್ಚಿನವು 23 ವರ್ಷಗಳ ಹಿಂದೆ ನೆಲ ಸಮಗೊಂಡಿವೇ ಪಾಕಿಸ್ತಾನದ ಉಳಿದ ಹಿಂದೂ ದೇವಾಲಯಗಳಲ್ಲಿ ಕೆಲವು ದೇವಾಲಯಗಳು ತುಂಬಾ ಜನಪ್ರಿಯವಾಗಿ ಇಂದು ಕೂಡ ಉಳಿದಿವೆ ಅವುಗಳನ್ನು ತಿಳಿಯೋಣ

ಬಲೂಚಿಸ್ತಾನ್ನಲ್ಲಿರುವ ಹಿಂಗ್ಲಾಜ್ ಮಾತಾ ದೇವಾಲಯ ಇದು ಅತ್ಯಂತ ಪ್ರಸಿದ್ಧ ಶಕ್ತಿ ಪೀಠಗಳಲ್ಲಿ ಒಂದಾಗಿದೆ. ಈ ಅದ್ಭುತ ಗುಹೆ ದೇವಸ್ಥಾನವು ಬಲೂಚಿಸ್ತಾನ್ ಪ್ರಾಂತ್ಯದ ಹಿಂಗೊಲ್ ನದಿಯ ತೀರದಲ್ಲಿದೆ.ಇದನ್ನು ಹಿಂದುಲಾ ದೇವಿ ಹಿಂಗ್ಲಾಜ್ ದೇವಿ, ನಾನಿ ಮಂದಿರ ಮುಂತಾದ ಅನೇಕ ಹೆಸರುಗಳಿಂದ ಹಿಂದೂಗಳು ಈ ದೇವಸ್ಥಾನವನ್ನು ಕರೆಯುತ್ತಾರೆ. ಪಂಜಾಬ್ ಪ್ರಾಂತ್ಯದ ಕಟರಾಜ್ ದೇವಸ್ಥಾನ ಶಿವನ ದೇವಾಲಯವು ಪಂಜಾಬ್ನ ಚಕ್ವಾಲ್ ಜಿಲ್ಲೆಯಲ್ಲಿದೆ,ಈ ದೇವಸ್ಥಾನವು ಮಹಾಭಾರತದ ಕಾಲದಿಂದಲೂ ಅಸ್ತಿತ್ವದಲ್ಲಿದೆ ಎಂದು ಹೇಳಲಾಗುತ್ತದೆ ಮತ್ತು 14 ವರ್ಷದ ವನವಾಸದಲ್ಲಿ ಪಾಂಡವರಿಗೆ ನಾಲ್ಕು ವರ್ಷಗಳ ಕಾಲ ನೆಲೆಯಾಗಿತ್ತು. ಕರಾಚಿಯಲ್ಲಿರುವ ಪಂಚಮುಖಿ ಹನುಮಾನ್ ಮಂದಿರ ಈ ಹನುಮಾನ್ ದೇವಾಲಯವು ಕರಾಚಿ ಸೋಲ್ಜರ್ಸ್ ಬಜಾರ್ ಬಳಿ ಇದೆ ಮತ್ತು ಸುಮಾರು 1500 ವರ್ಷಗಳ ಹಳೆಯದು. ಈ ದೇವಸ್ಥಾನದ ವಿಶಿಷ್ಟತೆ ಏನೆಂದರೆ ಇಲ್ಲಿನ ವಿಗ್ರಹವನ್ನು ನೈಸರ್ಗಿಕವಾಗಿ ರಚಿಸಲಾಗಿದೆ ಹಾಗೂ ಇದು ಬಿಳಿ ಮತ್ತು ನೀಲಿ ಬಣ್ಣದಲ್ಲಿದೆ.

ಮಾರಿ ಇಂಡಸ್ನ ಪುರಾತನ ದೇವಾಲಯ ಸಿಂಧೂ ನದಿಯ ದಂಡೆಯ ಮೇಲಿರುವ ಈ ದೇವಾಲಯವು ಪಾಕಿಸ್ತಾನದ ಮಾರಿ ಇಂಡಸ್ ಪ್ರಾಂತ್ಯದ ಐತಿಹಾಸಿಕ ಪಟ್ಟಣದಲ್ಲಿದೆ. ಸಿಯಾಲ್ಕೋಟ್ನಲ್ಲಿ ಜಗನ್ನಾಥ ಮಂದಿರ ಸುಮಾರು 8 ವರ್ಷಗಳ ಹಿಂದೆ ಜೀರ್ಣೋದ್ಧಾರಗೊಂಡ ಸಿಯಾಲ್ಕೋಟ್ನ ಪಾರಿಸ್ ರಸ್ತೆ ಬಳಿ ಈ ದೇವಾಲಯ ನಿರ್ಮಿಸಲಾಗಿದೆ. ಮನೋರದಲ್ಲಿರುವ ಶ್ರೀ ವರುಣ ದೇವ ಮಂದಿರ ಈ ದೇವಾಲಯವು ಸಮುದ್ರದ ನೋಟವನ್ನು ಆನಂದಿಸಲು ಬಯಸುವವರಿಗೆ ಒಂದು ಸುಂದರ ಸ್ಥಳವಾಗಿದೆ. ಇದು ಮನೋರಾ ಕ್ಯಾಂಟ್ನಲ್ಲಿದೆ ದೇವಸ್ಥಾನ ಸುಮಾರು 160 ವರ್ಷ ಹಳೆಯದು ಮತ್ತು ಸಾಗರ ದೇವ ವರುಣನಿಗೆ ಮೀಸಲಾದ ದೇವಾಲಯವಿದು. ಪೆಶಾವರ್ನಲ್ಲಿರುವ ಗೋರಖ್ನಾಥ ದೇವಸ್ಥಾನ ಈ ದೇವಾಲಯವು ಪಾಕಿಸ್ತಾನದ ಪೆಶಾವರ ನಗರದಲ್ಲಿದೆ. ಪಾಕಿಸ್ತಾನ ಆಕ್ರಮಿತ ಕಶ್ಮೀರದಲ್ಲಿರುವ ಶಾರದಾ ದೇವಿ ದೇವಾಲಯವು ಸುಂದರವಾದ ನೀಲಂ ಕಣಿವೆಯಲ್ಲಿ ಇದೆ ಈ ದೇವಸ್ಥಾನದಲ್ಲಿ ದೇವತೆ ಸರಸ್ವತಿ ದೇವಿ ನೆಲೆಸಿದ್ದಾಳೆ. ಸಿಂಧ್ನಲ್ಲಿರುವ ಕಲ್ಕಾ ದೇವಿ ಗುಹೆ ಸಿಂಧ್ನಲ್ಲಿರುವ ಈ ದೇವಾಲಯವು ಬಲೂಚಿಸ್ತಾನ್ ಪ್ರಾಂತ್ಯದಲ್ಲಿದೆ ಹಿಂಗ್ಲಾಜ್ಗೆ ಪ್ರಯಾಣಿಸುತ್ತಿದ್ದಾಗ ಕಾಳಿಯು ಕಾಣಿಸಿಕೊಂಡ ಸ್ಥಳ ಎಂಬ ಪ್ರತೀತಿ ಇದೆ. ಈ ಎಲ್ಲ ದೇಗುಲಗಳು ಇಂದು ಕೂಡ ನಾಶವಾಗದೆ ಪಾಕಿಸ್ತಾನದಲ್ಲಿ ಉಳಿದಿವೆ.

LEAVE A REPLY

Please enter your comment!
Please enter your name here