ದೇವರ ಮನೆಯಲ್ಲಿ ಯಾವ ಎಣ್ಣೆ ದೀಪ ಹಚ್ಚಿದರೆ ಶ್ರೇಷ್ಠ ತಿಳಿಯಿರಿ

0
1318

ಮನೆಯಲ್ಲಿ ನಿತ್ಯ ದೇವರಿಗೆ ದೀಪವನ್ನು ಹಚ್ಚಿ ಪೂಜೆ ಮಾಡುವುದರಿಂದ ಮನಸ್ಸಿಗೆ ಮನೆಗೆ ಶಾಂತಿ ಸಿಗುತ್ತದೆ ಎಲ್ಲವೂ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಇದೆ. ನಮ್ಮ ಹಿಂದೂ ಸಂಪ್ರದಾಯದಲ್ಲಿ ದೀಪ ಹಚ್ಚುವುದಕ್ಕೆ ವಿಶೇಷ ಮಹತ್ವ ಇದೆ. ನಮ್ಮ ಎಲ್ಲ ರೀತಿಯ ಕೋರಿಕೆಗಳನ್ನು ದೇವರ ಬಳಿ ಹೇಳಲು ದೀಪ ಒಂದು ಮಾರ್ಗ ಎಂದು ಕರೆಯುತ್ತಾರೆ. ದೇವರಿಗೆ ದೀಪವನ್ನು ಹಚ್ಚುವಾಗ ದೇವರ ದೀಪಕ್ಕೆ ಒಬ್ಬಬ್ಬರು ಒಂದೊಂದು ರೀತಿಯ ಎಣ್ಣೆಯನ್ನು ಹಾಕುತ್ತಾರೆ ಆದರೆ ಯಾವ ಎಣ್ಣೆಯನ್ನು ಹಾಕಿ ದೀಪವನ್ನು ಹಚ್ಚಿದರೆ ಒಳ್ಳೆಯದು ಎಂದು ತಿಳಿದುಕೊಳ್ಳೋಣ ಬನ್ನಿ.

ಮನೆಯಲ್ಲಿ ಎಳ್ಳೆಣ್ಣೆ ಇಂದ ದೀಪ ಹಚ್ಚಿದರೆ ಮನೆಯಲ್ಲಿನ ದಾರಿದ್ರ್ಯ ಎಂಬುದು ಸುತ್ತಿ ಕೊಳ್ಳುತ್ತದೆ ಮನಸ್ಸಿಗೆ ಶಾಂತಿ ಎಂಬುದು ಇರುವುದಿಲ್ಲ ಆರ್ಥಿಕ ಸಮಸ್ಯೆ ಎಂಬುದು ಹೆಚ್ಚುತ್ತದೆ ಮನೆಯಲ್ಲಿ ಜಗಳ ಕಿತ್ತಾಟ ಎಂಬುದು ಹೆಚ್ಚುತ್ತದೆ ಏಕೆಂದರೆ ಎಳ್ಳು ಶನಿ ಕಾರಕ ದೇವರಿಗೆ ಈ ಎಳ್ಳೆಣ್ಣೆಯನ್ನು ಹಾಕಿದರೆ ನಮ್ಮ ಜೀವನದಲ್ಲಿ ಕಷ್ಟಗಳು ಹೆಚ್ಚುತ್ತವೆ. ಮನಸ್ಸಿನಲ್ಲಿ ಕೋರಿಕೆಗಳನ್ನು ಇಟ್ಟುಕೊಂಡು ಶನಿ ದೇವರ ದೇವಸ್ಥಾನಕ್ಕೆ ಹೋಗಿ ಅಲ್ಲಿ ಎಳ್ಳೆಣ್ಣೆ ಯಿಂದ ದೀಪ ಹಚ್ಚಿದರೆ ಒಳ್ಳೆಯದು. ಶನಿಗೆ ಎಳ್ಳೆಣ್ಣೆ ಎಂದರೆ ಪ್ರಿಯ ಆತನನ್ನು ಸಂತೃಪ್ತಿಗೊಳಿಸಲು ಎಳ್ಳೆಣ್ಣೆ ಉತ್ತಮ ಮಾರ್ಗ ಎಂದು ಹೇಳಬಹುದು.

ಮನೆಯಲ್ಲಿ ಸದಾ ಶಾಂತಿ ಎಂಬುದು ನೆಲೆಸಿ ದಾಂಪತ್ಯ ಜೀವನ ಎಂಬುದು ಸುಗಮವಾಗಿ ಸಾಗಲು ನಿತ್ಯ ಮನೆಯ ದೇವರಿಗೆ ಎರಡು ಇಂಚಿನ ದೀಪವನ್ನು ಹಚ್ಚಿ ಜೊತೆಗೆ ಮನೆಯ ದೇವರಿಗೆ ಕಲಶವನ್ನು ಸ್ಥಾಪಿಸಬೇಕು ಎರಡು ಇಂಚಿನ ದೀಪಕ್ಕೆ ತುಪ್ಪವನ್ನು ಹಾಕಿ ದೀಪ ಹಚ್ಚಬೇಕು ಹೀಗೆ ಮಾಡಿದರೆ ಮನೆಯಲ್ಲಿ ಯಾವುದೇ ರೀತಿಯ ತೊಂದರೆ ಕಿತ್ತಾಟ ಎಂಬುದು ಇರುವುದಿಲ್ಲ. ನಿತ್ಯ ಸಂಧ್ಯಾ ಕಾಲದಲ್ಲಿ ದೇವರಿಗೆ ತುಪ್ಪದ ದೀಪ ಹಚ್ಚಿ ನೈವೇದ್ಯವನ್ನು ಮಾಡಬೇಕು ನೈವೇದ್ಯಕ್ಕೆ ಸಿಹಿ ಪದಾರ್ಥವನ್ನು ಮಾಡಬೇಕು ನಂತರ ಪೂಜೆ ಎಲ್ಲ ಮುಗಿದ ನಂತರ ಗಂಡನಿಗೆ ಪ್ರಸಾದವಾಗಿ ನೈವೇದ್ಯವನ್ನು ಕೊಟ್ಟು ಹೆಂಡತಿಯು ಸಹ ಸೇವಿಸಬೇಕು ಹೀಗೆ 48 ದಿನ ಸತತವಾಗಿ ಮಾಡಿದರೆ ಮನೆಯಲ್ಲಿ ಸದಾ ಶಾಂತಿ ನೆಮ್ಮದಿ ಎಂಬುದು ಇರುತ್ತದೆ.

ಕಂಕಣ ಭಾಗ್ಯ ಕೂಡಿ ಬಂದಿಲ್ಲ ಎನ್ನುವ ಜನರು ಮನೆಯಲ್ಲಿ ಬೆಳ್ಳಗೆ ಸಮಯ ಎಳ್ಳೆಣ್ಣೆ ಬಳಕೆ ಮಾಡಿಕೊಂಡು ದೀಪ ಹಚ್ಚಬೇಕು ಆದರೆ ಅಂಗಡಿಯಿಂದ ತಂದ ಎಳ್ಳೆಣ್ಣೆ ನೇರವಾಗಿ ಬಳಕೆ ಮಾಡುವುದು ಅಲ್ಲ ಅದನ್ನು ದೀಪ ಹಚ್ಚುವ ಮುಂಚೆ ಬಿಳಿ ಎಕ್ಕದ ಎಲೆ ನಾಲ್ಕು ಎಣ್ಣೆಯಲ್ಲಿ ಕಾಯಿಸಿ ನಂತರ ಎಳ್ಳೆಣ್ಣೆ ದೀಪ ಹಚ್ಚುವುದು ಸೂಕ್ತ. ಈ ರೀತಿ ನೀವು ನಲವತ್ತು ಎಂಟು ದಿನ ಮಾಡಿದ್ರೆ ಕಂಕಣ ಭಾಗ್ಯ ಕೂಡಿ ಬರುವುದು ನಿಶ್ಚಿತ. ನಿತ್ಯ ದೇವರಿಗೆ ದೀಪವನ್ನು ಹಚ್ಚುವಾಗ ದೀಪಗಳನ್ನು ಶುದ್ದಿ ಮಾಡಬೇಕು ದೇವರ ಮನೆಯನ್ನು ನಿತ್ಯ ಸ್ವಚ್ಛ ಮಾಡಬೇಕು ದೇವರಿಗೆ ದೀಪ ಹಚ್ಚುವಾಗ ಮನಸ್ಸಿನಲ್ಲಿ ಯಾವುದೇ ರೀತಿಯ ಕೆಟ್ಟ ಯೋಚನೆಗಳು ಎಂಬುದು ಇರಬಾರದು ಹೀಗೆ ಇದ್ದರೆ ಮನೆಯಲ್ಲಿ ಸದಾ ನೆಮ್ಮದಿ ಇರುತ್ತದೆ ದಾಂಪತ್ಯ ಜೀವನ ಸುಖವಾಗಿ ಇರುತ್ತದೆ. ನಮ್ಮ ವೆಬ್ಸೈಟ್ ಚಿತ್ರಗಳಿಗೆ ಮತ್ತು ಬರಹಗಳಿಗೆ ಕಾಪಿ ರೈಟ್ಸ್ ಹೊಂದಿದ್ದು ಅನುಮತಿ ಇಲ್ಲದೆ ನಕಲು ಮಾಡಿದ್ರೆ ಕಾನೂನು ರೀತಿಯ ಕ್ರಮ ತೆಗೆದುಕೊಳ್ಳುತ್ತೇವೆ.

LEAVE A REPLY

Please enter your comment!
Please enter your name here