ಕೊಲ್ಲೂರು ಮೂಕಾಂಬಿಕಾ ತಾಯಿಯು ಪವಾಡಗಳು

0
805

ಅತ್ಯಂತ ಪ್ರಾಚೀನ ಕ್ಷೇತ್ರಗಳಲ್ಲಿ ಶ್ರೀ ಕೊಲ್ಲೂರು ಮೂಕಾಂಬಿಕೆ ದೇವಿಯ ದೇಗುಲ ಕೂಡ ಒಂದು ಈ ಶ್ರೀ ಕ್ಷೇತ್ರವು ಕರ್ನಾಟಕದ ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ 17 ನೇ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿದೆ ಹಾಗೂ ಇದರ ಸಮೀಪದಲ್ಲಿ ಕೊಡಚಾದ್ರಿ ಬೆಟ್ಟಗಳಿಂದ ಸುತ್ತುವರೆದಿದೆ. ಶ್ರೀ ಕ್ಷೇತ್ರದ ಉತ್ತರ ಭಾಗದಲ್ಲಿ ಸೌಪರ್ಣಿಕಾ ಎಂಬ ನದಿ ಕೂಡ ಇದೆ ಈ ನದಿಯ ದಡದಲ್ಲಿ ಸುವರ್ಣ ಎಂಬ ಗರುಡ ಪಕ್ಷಿಯು ತಪ್ಪಸ್ಸು ಮಾಡಿ ಮೋಕ್ಷ ಪಡೆದ್ದಿದ್ದರಿಂದ ಈ ನದಿಗೆ ಸೌಪರ್ಣಿಕಾ ಎಂದು ಹೆಸರು ಬಂದಿದೆ. ಈ ನದಿಯಲ್ಲಿ ತುಂಬಾ ಔಷಧೀಯ ಗುಣಗಳು ಇದೆ ಈ ನದಿಯಲ್ಲಿ ಸ್ನಾನ ಮಾಡಿದರೆ ಅನೇಕ ರೋಗಗಳು ಗುಣವಾಗುತ್ತವೆ ಎಂಬ ನಂಬಿಕೆ ಇದೆ. ದೇವಿಗೆ ಮೂಕಾಂಬಿಕೆ ಎನ್ನುವ ಹೆಸರು ಹೇಗೆ ಬಂತು ಎಂದರೆ ಕಾಮಾಸುರನು ಋಷಿಗಳನ್ನು ದೇವತೆಗಳನ್ನು ತುಂಬಾ ಹಿಂಸೆ ಮಾಡುತ್ತಿದ್ದನು ಅದಕ್ಕಾಗಿ ದೇವಿಯು ಇವರನ್ನು ಶುಕ್ಲ ಪಕ್ಷ ಅಷ್ಟಮಿಯ ದಿನ ಕೊಡಚಾದ್ರಿ ಬೆಟ್ಟದ ಮೇಲೆ ಸಂಹಾರ ಮಾಡಿದಳು. ಈ ದೇವಿಯು ಮೂಕಸುರನನ್ನು ಸಂಹಾರ ಮಾಡಿದ್ದಕ್ಕಾಗಿ ಮೂಕಾಂಬಿಕೆ ದೇವಿ ಎನ್ನುವ ಹೆಸರು ಬಂತು.

ಈ ದೇಗುಲವನ್ನು ಕೇರಳದ ವಾಸ್ತು ಶೈಲಿಯಲ್ಲಿ ನಿರ್ಮಿಣ ಮಾಡಲಾಗಿದೆ ಈ ದೇಗುಲದ ಒಳಗಡೆ ಪ್ರವೇಶ ಮಾಡಿದರೆ 20 ಅಡಿಗಳಷ್ಟು ಎತ್ತರವಿರುವ ದ್ವಜಸ್ತಂಭವು ಆಕರ್ಷಿಸುತ್ತದೆ ಅದರ ಪಕ್ಕದಲ್ಲಿಯೇ ಅದಕ್ಕಿಂತ ಚಿಕ್ಕದಾದ ದ್ವಜ ಸ್ತಂಬವು ಚಿನ್ನದ ವದಿಕೆಯಿಂದ ಕಂಗೊಳಿಸುತ್ತದೆ. ಮೂಕಾಂಬಿಕಾ ದೇವಿಯು ಪದ್ಮಾಸನದ ಭಂಗಿಯಲ್ಲಿ ಕುಳಿತು ನಮಗೆ ದರ್ಶನ ಕೊಡುತ್ತಾಳೆ. ತುಂಬಾ ಶಾಂತರೂಪಳಾಗಿ ಕಾಣಿಸುತ್ತಾಳೆ ನಾಲ್ಕು ಕೈಗಳು ಇರುವ ದೇವಿಗೆ ಮೊದಲ ಎರಡು ಕೈಯಲ್ಲಿ ಒಂದು ಕೈಯಲ್ಲಿ ಶಂಖ ಇನ್ನೊಂದು ಕೈಯಲ್ಲಿ ಚಕ್ರ ಹಿಡಿದಿರುತ್ತಾಳೆ ಉಳಿದ ಇನ್ನೆರಡು ಕೈಗಳಲ್ಲಿ ಒಂದು ಅಭಯ ಮುದ್ರೆಯಲ್ಲಿ ಇನ್ನೊಂದು ವರದ ಮುದ್ರೆಯಲ್ಲಿ ಇರುತ್ತವೆ.

ಈ ದೇವಿಯ ಪ್ರತಿಷ್ಠಾಪನೆ ಜಗದ್ಗುರು ಆದಿ ಶಂಕಾರಾಚಾರ್ಯರಿಂದ ಆಗಿದೆ ಈಗ ಇರುವ ದೇವಿಯ ವಿಗ್ರಹವನ್ನು ಪಂಚಲೋಹದಿಂದ ತಯಾರಿಸಿದವರು, ಪ್ರತಿಷ್ಠಾಪಿಸಿದರು ಶ್ರೀ ಜಗದ್ಗುರು ಆದಿ ಶಂಕರಾಚಾರ್ಯರು. ದೇವಸ್ಥಾನದ ಪಶ್ಚಿಮ ದಿಕ್ಕಿನಲ್ಲಿ ಶ್ರೀ ಆದಿ ಶಂಕರಾಚಾರ್ಯರ ಪೀಠ ಕೂಡ ಇದೆ. ಶ್ರೀ ಶಂಕರಾಚಾರ್ಯರು ಬಾಲ್ಯದಲ್ಲಿ ಕಾಲ್ನಡಿಗೆಯಲ್ಲಿ ಈ ಪ್ರದೇಶಕ್ಕೆ ಬಂದಾಗ ಆಕೆಯ ಉಗ್ರ ರೂಪ ನೋಡಿ ಭಯ ಭೀತರಾಗಿದ್ದರು. ಆದ್ದರಿಂದ ನಿರಂತರವಾಗಿ ಪೂಜಿಸಿ ತಪ್ಪಸ್ಸನ್ನು ಆಚರಿಸಿ ದೇವಿಯನ್ನು ಶಾಂತ ರೂಪಳನ್ನಾಗಿ ಮಾಡಿ ಶಾಂತವಾಗಿಸಿದವರು ಶಂಕರಾಚಾರ್ಯರು. ಮೂಕಾಂಬಿಕೆಯ ದೇವಿಯ ವಿಗ್ರಹದ ಮುಂದೆ ಆಕೆಯ ಸ್ವಯಂಭು ಲಿಂಗವಿದೆ ಈ ಲಿಂಗದಲ್ಲಿ ಎರಡು ಗೆರೆಗಳು ಇದ್ದು ಲಿಂಗವು ಎರಡು ಭಾಗಗಳು ಆಗಿರುವಂತೆ ಕಾಣಿಸುತ್ತದೆ. ಅದರಲ್ಲಿನ ಚಿಕ್ಕ ಭಾಗವು ಬ್ರಹ್ಮ ವಿಷ್ಣು ಸ್ಥಳಗಳೆಂದು ದೊಡ್ಡ ಸ್ಥಳವು ಸರಸ್ವತಿ ಮಹಾಲಕ್ಷ್ಮೀ ಮಹಾಕಾಳಿ ಸ್ಥಳವೆಂದು ಇಲ್ಲಿಯೇ ಜ್ಞಾನ ಶಕ್ತಿ,ಕ್ರಿಯಾ ಶಕ್ತಿ ಇಚ್ಛಾ ಶಕ್ತಿ ಇರುತ್ತವೆ ಎಂದು ಹೇಳಲಾಗುತ್ತದೆ.

ಈ ದೇವಸ್ಥಾನದ ದಕ್ಷಿಣದಲ್ಲಿ 10 ಕೈಗಳು ಉಳ್ಳ ದಶಮುಖ ಬಲಮುರಿ ಗಣಪತಿ ದೇವಸ್ಥಾನವಿದೆ. ದೇವಸ್ಥಾನದ ಆವರಣದಲ್ಲಿ ಸರಸ್ವತಿ ದೇವಿಯ ದೇವಸ್ಥಾನ ಕೂಡ ಇದೆ. ಈ ದೇಗುಲದಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸವನ್ನು ಮಾಡಿಸುತ್ತಾರೆ. ಜೊತೆಗೆ ಕೊಲ್ಲೂರಿಗೂ ಹನುಮಂತನಿಗೂ ಸಂಬಂಧವಿದೆ ಅದು ಏನೆಂದರೆ ಹಿಮಾಲಯದಿಂದ ಸಂಜೀವಿನಿ ಪರ್ವತವನ್ನು ಲಂಕೆಗೆ ಕೊಂಡೊಯ್ಯುವಾಗ ಕೊಡಚಾದ್ರಿ ಬೆಟ್ಟಗಳ ತಪ್ಪಲಿನಲ್ಲಿ ಸಂಜೀವಿನಿ ಪರ್ವತ ಬಿದ್ದಿರುವುದರಿಂದ ಸಾಕಷ್ಟು ಗಿಡಮೂಲಿಕೆಗಳು ಸಹ ಇಲ್ಲಿ ದೊರೆಯುತ್ತವೆ ಎಂದು ಹೇಳುತ್ತಾರೆ ಈ ಮೂಕಾಂಬಿಕಾ ದೇವಿಯ ಬಳಿ ಬಂದು ತಮ್ಮ ಕಷ್ಟಗಳನ್ನು ಹೇಳಿಕೊಂಡರೆ ಎಲ್ಲ ರೀತಿಯ ಸಮಸ್ಯೆಗಳನ್ನು ಇವಳು ಪರಿಹರಿಸುತ್ತಾಳೆ. ಈ ದೇಗುಲಕ್ಕೆ ಹೋಗುವ ಮಾರ್ಗ ಬೆಂಗಳೂರಿನಿಂದ 422 ಕಿಲೋಮೀಟರ್ ಮತ್ತು ಮಂಗಳೂರಿನಿಂದ 120 ಕಿಲೋಮೀಟರ್ ದೂರ ಇದೆ. ಬಸ್ ಗಳ ವ್ಯವಸ್ಥೆ ಉತ್ತಮವಾಗಿದೆ. ದೇವಿಯ ಮಹತ್ವ ತಪ್ಪದೇ ಶೇರ್ ಮಾಡಿರಿ ನಿಮಗೂ ಮತ್ತು ನಿಮ್ಮ ಕುಟುಂಬದ ಜನಕ್ಕೆ ಖಂಡಿತ ಒಳ್ಳೆಯದೇ ಆಗುತ್ತದೆ.

LEAVE A REPLY

Please enter your comment!
Please enter your name here