ಎಲ್ಲರೂ ಕೂಡ ತಾವು ಅಂದವಾಗಿ ಕಾಣಬೇಕು ಎಂದು ಆಸೆ ಪಡುತ್ತಾರೆ ಅದಕ್ಕಾಗಿ ಹಲವಾರು ರೀತಿಯ ಕ್ರೀಮ್ .ಲೋಷನ್.ಸೋಪು ಗಳೆಲ್ಲವನ್ನು ಬಳಕೆ ಮಾಡುತ್ತಾರೆ ತಿಂಗಳಿಗೆ 2 ರಿಂದ 3 ಬಾರಿ ಬ್ಯುಟಿ ಪಾರ್ಲರ್ ಗೆ ಹೋಗಿ ಫೇಶಿಯಲ್ ಮಾಡಿಸಿಕೊಳ್ಳುತ್ತಾರೆ ಇದು ತಮ್ಮ ಮುಖದ ಅಂದಕ್ಕೆ ಆದರೆ ಎಷ್ಟೇ ರೀತಿಯ ಪ್ರಯತ್ನ ಪಟ್ಟರು ಕೂಡ ಮುಖದಲ್ಲಿ ಮೊಡವೆಗಳು ಕಪ್ಪು ಬಂಗುಗಳು ಕಾಣಿಸಿಕೊಳ್ಳುತ್ತವೆ ಈ ಕಪ್ಪು ಬಂಗು ಒಂದು ಬಾರಿ ಮುಖದ ಮೇಲೆ ಕಾಣಿಸಿಕೊಂಡರೆ ಅದನ್ನು ಗುಣಪಡಿಸಿಕೊಳ್ಳುವುದು ತುಂಬಾ ಕಷ್ಟ ಆ ಬಂಗನ್ನು ಹೋಗಿಸಲು ತುಂಬಾ ಸಾಹಸ ಮಾಡುತ್ತೇವೆ ಎಷ್ಟೋ ಹಣವನ್ನು ಖರ್ಚು ಮಾಡುತ್ತೆವೇ ಆದರೆ ಈ ಕಪ್ಪು ಬಂಗನ್ನು ಸುಲಭವಾಗಿ ಮನೆಯಲ್ಲಿ ಹೋಗಿಸಬಹುದು ಅದು ಹೇಗೆ ಎಂದು ತಿಳಿದುಕೊಳ್ಳೋಣ ಬನ್ನಿ.

ಮುಖದ ಮೇಲೆ ಕಾಣಿಸುವ ಕಪ್ಪು ಬಂಗುಗಳು ಕಾಣಿಸಲು ಮುಖ್ಯ ಕಾರಣ ವಿಪರೀತ ಸೂರ್ಯನ ಕಿರಣಗಳು. ಇದು ಚರ್ಮದ ಕೋಶಗಳಲ್ಲಿ ಹೆಚ್ಚು ಮೆಲನಿನ್ ಉತ್ಪಾದನೆ ಮಾಡುತ್ತದೆ ಅಷ್ಟೇ ಅಲ್ಲದೆ ದೇಹದ ಹಾರ್ಮೋನುಗಳ ಬದಲಾವಣೆ ವಿಪರೀತ ಒತ್ತಡ ಥೈರಾಯ್ಡ್ ಸಮಸ್ಯೆಗಳು ಮತ್ತು ಜನನ ನಿಯಂತ್ರಣ ಮಾತ್ರೆಗಳ ಬಳಕೆ ಮಾಡುವುದರಿಂದಲು ಸಹ ಮೆಲನಿನ್ ಹೆಚ್ಚಾಗುತ್ತದೆ ಇದರಿಂದ ಮುಖದಲ್ಲಿ ಬಂಗುಗಳು ಕಾಣಿಸುತ್ತವೆ. ಇದನ್ನು ಹೋಗಿಸುವ ಮದ್ದುಗಳು. ನಿಂಬೆ ಹಣ್ಣು ಇದರ ಸಿಪ್ಪೆಯನ್ನು ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಬೇಕು ನಂತರ ಅದನ್ನು ನುಣ್ಣಗೆ ಪುಡಿ ಮಾಡಿಕೊಳ್ಳಬೇಕು. ಈ ಪುಡಿಯನ್ನು ಸ್ವಲ್ಪ ಮೊಸರಿಗೆ ಹಾಕಿ ಅದರ ಜೊತೆಗೆ ಸ್ವಲ್ಪ ಕಡಲೆಹಿಟ್ಟು ಹಾಕಿಕೊಂಡು. ಪೇಸ್ಟ್ ರೀತಿ ಮಾಡಿಕೊಂಡು ಅದನ್ನು ಕಪ್ಪು ಬಂಗು ಆಗಿರುವ ಜಾಗಕ್ಕೆ ಹಚ್ಚಿಕೊಂಡು ಒಣಗಲು ಬಿಡಬೇಕು ಅದು ಒಣಗಿ ಸ್ವಲ್ಪ ಸೇದುವ ರೀತಿ ಆಗಿರುವಾಗ ತಣ್ಣೀರಿನಿಂದ ತೊಳೆಯಬೇಕು ಹೀಗೆ ಒಂದು ತಿಂಗಳು ಮಾಡಿದರೆ ಕಪ್ಪು ಬಂಗು ಹೋಗುತ್ತದೆ.
ಗೋವಿನ ಮೂತ್ರ ಇದರಲ್ಲಿ ತುಂಬಾ ಆರೋಗ್ಯಾದಾಯಕ ಅಂಶಗಳು ಇವೆ ಇದನ್ನು ಮುಖಕ್ಕೆ ಹಚ್ಚಿ ಸ್ವಲ್ಪ ಸಮಯ ಬಿಟ್ಟು ಅದಕ್ಕೆ ಕದಲೆಹಿಟ್ಟಿನ ಮಿಶ್ರಣವನ್ನು ಹಚ್ಚಿಕೊಂಡು ಸ್ವಲ್ಪ ಸಮಯ ಬಿಟ್ಟು ತೊಳೆಯಬೇಕು. ಅಲೋ ವೆರಾ ಜೆಲ್ ಇದರಲ್ಲಿ ಅಳ್ಳೆವಿಯೆಟ್ ಪಾಲಿಸ್ಯಾಕರೈಡ್ಗಳು ಹೈಪರ್ಪಿಗ್ಮೆಂಟೇಶನ್ ಅನ್ನು ಕಡಿಮೆ ಮಾಡುತ್ತದೇ ಹಾಗೂ ಸತ್ತ ಚರ್ಮದ ಕೋಶಗಳನ್ನು ತೆಗೆದು ಹಾಕಿ ಹೊಸ ಚರ್ಮ ಜೀವಕೋಶಗಳನ್ನು ಪುನಃ ಉತ್ಪಾದಿಸಲು ಸಹಾಯ ಮಾಡುತ್ತದೇ ಇದರಿಂದ ಕಪ್ಪು ಬಂಗು ಹೋಗುತ್ತದೆ.
ಅಡುಗೆ ಸೋಡಾ ಇದು ಕೇವಲ ಅಡುಗೆಗೆ ಮಾತ್ರ ಉಪಯೋಗವಾಗದೆ ಮುಖದ ಕಾಂತಿಗೂ ಒಳ್ಳೆಯದು ಅಡುಗೆ ಸೋದವನ್ನು ನೀರಲ್ಲಿ ಪೇಸ್ಟ್ ರೀತಿ ಮಾಡಿಕೊಂಡು ಕಪ್ಪು ಬಂಗು ಆಗಿರುವ ಜಾಗಕ್ಕೆ ಹಚ್ಚಿ ಸ್ವಲ್ಪ ಸಮಯ ಬಿಟ್ಟು ತಣ್ಣೀರಿನಲ್ಲಿ ತೊಳೆಯಬೇಕು. ಬೇವಿನ ಎಣ್ಣೆಯನ್ನು ರಾತ್ರಿಯ ಸಮಯದಲ್ಲಿ ಮುಖಕ್ಕೆ ಹಚ್ಚಿಕೊಂಡು ಬೆಳಿಗ್ಗೆ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಬೇಕು ಹೀಗೆ ಒಂದು ತಿಂಗಳು ಮಾಡಿದರೆ ಕಪ್ಪು ಬಂಗು ಮಾಯವಾಗುತ್ತದೆ. ಕೊಬ್ಬರಿ ಎಣ್ಣೆಗೆ ಸ್ವಲ್ಪ ಅಡುಗೆ ಸೋಡಾ ಹಾಕಿ ಪೇಸ್ಟ್ ಮಾಡಿಕೊಂಡು ಅದನ್ನು ಕಪ್ಪು ಬಂಗು ಆಗಿರುವ ಜಾಗಕ್ಕೆ ಹಚ್ಚಿದರೆ ಕಪ್ಪು ಬಂಗು ಹೋಗುತ್ತದೆ. ಈ ಮೇಲಿನ ಮನೆ ಮದ್ದುಗಳನ್ನು ತಪ್ಪದೆ ಒಂದು ತಿಂಗಳು ಮಾಡಿದರೆ ಕಪ್ಪು ಬಂಗು ಎಂಬುದು ಗುಣವಾಗುತ್ತದೆ.