ಪ್ರತಿ ದಿನ ಈ ಸಮಯದಲ್ಲಿ ಪೂಜೆ ಮಾಡಿದರೆ ನಿಮಗೆ ಹೆಚ್ಚಿನ ಶುಭ ಫಲ

0
705

ನಮ್ಮ ಹಿಂದೂ ಸಂಪ್ರದಾಯದಲ್ಲಿ ಪ್ರತಿ ದಿನ ದೇವರಿಗೆ ಪೂಜೆ ಸಲ್ಲಿಸಬೇಕು ಹೀಗೆ ಮಾಡಿದರೆ ಮನೆಗೆ ಮನಸ್ಸಿಗೆ ಎಲ್ಲರಿಗೂ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಇದೆ. ಈ ಪೂಜೆ ಪೂಜೆಯ ವಿಧಿವಿಧಾನಗಳು ಎಲ್ಲವೂ ಕೂಡ ನಮ್ಮ ಹಿರಿಯರಿಂದ ಬಂದಿದ್ದು ಆದರೆ ಅವರು ಆಗ ಮಾಡುತ್ತಿದ್ದ ಹಾಗೆ ನಾವು ಇಂದು ಮಾಡುವುದಿಲ್ಲ ಏಕೆಂದರೆ ಏಕೆಂದರೆ ಹಿಂದಿನ ಕಾಲದವರಿಗೆ ದೇವರು ದೇವರ ಪೂಜೆ ಎಲ್ಲದರಲ್ಲೂ ಅಪಾರವಾದ ನಂಬಿಕೆ ಇತ್ತು ಜೊತೆಗೆ ಒಂದು ನಿಯಮ ಎಂಬುದು ಇತ್ತು ಆದರೆ ಇಂದು ನಂಬಿಕೆ ಎಂಬುದು ಇದ್ದರು ಕೂಡ ನಿಯಮ ಎಂಬುದು ಇಲ್ಲವಾಗಿದೆ. ನಮ್ಮ ಪೂರ್ವಜರು ಏನೇ ಮಾಡಿದರು ಅದರ ಹಿಂದೆ ಒಂದು ವೈಜ್ಞಾನಿಕ ಕಾರಣ ಎಂಬುದು ಸಹ ಇತ್ತು ಆದರೆ ಅದನ್ನು ನಮ್ಮ ಆಧುನಿಕ ಜನರಿಗೆ ಸರಿಯಾಗಿ ಅರ್ಥ ಆಗುತ್ತಿಲ್ಲ. ಈಗಂತೂ ಯುವಕ ಯುವತಿಯರಿಗೆ ದೇವರು ಎಂದರೆ ಕಿಂಚ್ಚಿತ್ತು ಭಯ ಇಲ್ಲದ ಹಾಗೇ ಆಗಿದೆ. ಎಲ್ಲದಕ್ಕೂ ನಾವು ೨೧ ನೇ ಶತಮಾನ ದಲ್ಲಿ ಇದ್ದೇವೆ ಆಧುನಿಕತೇ ಮುಂದುವರೆದಿದೆ ಹೀಗೆಲ್ಲ ಹೇಳುತ್ತಾ ಹೋಗುತ್ತಾರೆ ಆದರೆ ನಾವು ಎಷ್ಟೇ ವಿಜ್ಞಾನದಲ್ಲಿ ಮುಂದುವರೆದಿದ್ದರು ಮನುಷ್ಯ ಚಂದ್ರನ ಮೇಲೆ ಕಾಲು ಇಟ್ಟಿದ್ದರು ಸಹ ನಾವು ದೇವರನ್ನು ನಂಬಲೇ ಬೇಕು ಕೆಲವೊಮ್ಮೆ ಆತನ ಶಕ್ತಿಗೆ ತಲೆ ಬಾಗಲೇ ಬೇಕು.

ಎಲ್ಲ ಮನೆಯಲ್ಲೂ ದೇವರಿಗೆ ಪೂಜೆ ಮಾಡುತ್ತೇವೆ ಆದರೆ ಅದನ್ನು ಯಾವ ಸಮಯದಲ್ಲಿ ಮಾಡಬೇಕು ಎಂಬುದು ಗೊತ್ತೇ ಬನ್ನಿ ತಿಳಿದುಕೊಳ್ಳೋಣ ಪ್ರತಿ ದಿನ ಬೆಳಿಗ್ಗೆ 4 ರಿಂದ 6 ಗಂಟೆಯ ಒಳಗೆ ಎದ್ದು ಮನೆಯನ್ನು ಸ್ವಚ್ಛ ಮಾಡಿ ನಿತ್ಯ ಕರ್ಮಗಳನ್ನು ಮುಗಿಸಿ ಸ್ನಾನ ಮಾಡಿ ಸೂರ್ಯೋದಯ ಸಮಯಕ್ಕೆ ಸೂರ್ಯನಿಗೆ ನಮಸ್ಕರಿಸಿ ದೇವರಿಗೆ ಪುಜೆ ಸಲ್ಲಿಸಬೇಕು. ಬೆಳಿಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ದೇವರಿಗೆ ಪೂಜೆಯನ್ನು ಮಾಡುವುದರಿಂದ ದೇವರ ಅನುಗ್ರಹ ಹೆಚ್ಚು ಸಿಗುತ್ತದೇ ಏಕೆಂದರೆ ಆ ಸಮಯದಲ್ಲಿ ದೇವಾನು ದೇವತೆಗಳು ಸಂಚರಿಸುತ್ತ ಇರುತ್ತಾರೆ ಮಾತು ಮನಸ್ಸು ಹೆಚ್ಚಿನ ಏಕಾಗ್ರತೆಯಿಂದ ಕೂಡಿರುತ್ತದೆ ಎಂದು ವೇದ ಶಾಸ್ತ್ರಗಳು ಹೇಳುತ್ತವೆ ಜೊತೆಗೆ ಆ ಸಮಯದಲ್ಲಿ ದೇವನು ದೇವತೆಗಳಿಗೆ ಶಕ್ತಿ ಹೆಚ್ಚು ಇರುತ್ತದೆ ಹಾಗಾಗಿ ನಮ್ಮ ಕೋರಿಕೆಗಳು ಬೇಗನೆ ಈಡೇರುತ್ತವೆ ನಮ್ಮ ಮನೆಗೆ ಶುಭ ತರುತ್ತದೆ. ಬ್ರಾಹ್ಮಿ ಮುಹೂರ್ತದಲ್ಲಿ ಪೂಜೆ ಮಾಡುವ ಮನೆಗಳಲಿ ದುಷ್ಟ ಶಕ್ತಿಗಳ ಕಾಟ ಇರುವುದಿಲ್ಲ. ಆರೋಗ್ಯ ಅಭಿರುದ್ದಿಯಾಗುತ್ತದೆ.

ಜೊತೆಗೆ ದೇವರಿಗೆ ಬ್ರಾಹ್ಮಿ ಮುಹೂರ್ತದಲ್ಲಿ ಪೂಜೆ ಸಲ್ಲಿಸುವಾಗ ಖಾಲಿ ಹೊಟ್ಟೆಯಲ್ಲಿ ಇದ್ದು ಪೂಜೆ ಮಾಡಬೇಕು ಏಕೆಂದರೆ ಭಗವಂತನಿಗೆ ಪೂಜೆ ಧ್ಯಾನವನ್ನು ಮಾಡಬೇಕೆಂದರೆ ಏಕಾಗ್ರತೆ ಎಂಬುದು ತುಂಬಾ ಮುಖ್ಯ ಹಾಗಾಗಿ ಖಾಲಿ ಹೊಟ್ಟೆಯಲ್ಲಿ ಪೂಜೆ ಮಾಡುವಾಗ ನಮ್ಮ ದೇಹದಲ್ಲಿರುವ ಶಕ್ತಿಯ ಮೊತ್ತವೆಲ್ಲ ನಮ್ಮ ಮೆದುಳಿಗೆ ಸೇರಿ ಪೂಜೆ ಮಾಡುವಾಗ ಏಕಾಗ್ರತೆ ಹೆಚ್ಚಾಗುವಂತೆ ಸಹಾಯ ಮಾಡುತ್ತದೆ. ಜೊತೆಗೆ ದೇವರಿಗೆ ಪೂಜೆ ಮಾಡುವ ಸಮಯದಲ್ಲಿ ಹೆಚ್ಚು ಶಬ್ದ ಗದ್ದಲ ಎಂಬುದು ಇರದೇ ಮನೆ ಶಾಂತಿಯಿಂದ ಕೂಡಿರಬೇಕು ಹಾಗೂ ನಮ್ಮ ಮನಸ್ಸು ಕೂಡ ಶಾಂತವಾಗಿ ಇರಬೇಕು ಯಾವುದೇ ರೀತಿಯ ಬೇರೆ ಕೆಟ್ಟ ಯೋಚನೆಗಳು ನಮ್ಮ ಮನಸ್ಸಿನಲ್ಲಿ ಇರಬಾರದು. ಬೆಳ್ಳಗೆ ಮಾಡುವ ದೇವರ ಪೂಜೆಯಲ್ಲಿ ಎಳ್ಳೆಣ್ಣೆ ಬಳಕೆ ಮಾಡಿ ದೀಪ ಹಚ್ಚುವುದೂ ರೂಡಿ ಮಾಡಿಕೊಳ್ಳಿರಿ.

ದೇವರಿಗೆ ಇಂತಹದೆ ಪುಷ್ಪ ಬೇಕು ಎಂಬುದು ಯಾವುದೇ ನಿಯಮ ಇರೋದಿಲ ಉದಾಹರಣೆಗೆ ಶಿವನಿಗೆ ಬಿಲ್ವ ಪತ್ರೆ ನೀಡಿದರೆ ಸಂತೃಪ್ತಿ ಹೊಂದುತ್ತಾನೆ ಗಣಪನಿಗೆ ಗರಿಕೆ ಅರ್ಪಣೆ ಮಾಡಿದರೆ ಸಾಕು ಹೆಚ್ಚಿನ ಫಲ ನೀಡುತ್ತಾನೆ. ಮನಸು ಶುದ್ದತೆ ಅತೀ ಮುಖ್ಯ. ಹೀಗೆ ಇದ್ದರೆ ನಾವು ದೇವರಿಗೆ ಮಾಡುವ ಪೂಜೆಗೆ ಫಲ ಸಿಗುತ್ತದೆ ಹಾಗೂ ದೇವರ ಅನುಗ್ರಹ ಕೂಡ ಸಿಗುತ್ತದೆ. ಹಾಗಾಗಿ ಇನ್ನು ಮುಂದೆ ಆದರೂ ಬೆಳಿಗ್ಗೆ ಬೇಗ ಎದ್ದು. ಬ್ರಾಹ್ಮಿ ಮುಹೂರ್ತದಲ್ಲಿ ಪೂಜೆ ಮಾಡುವುದನ್ನು ರೂಢಿಸಿಕೊಂಡು ದೇವರ ಅನುಗ್ರಹ ಪಡೆಯಿರಿ. ಈ ಲೇಖನ ತಪ್ಪದೇ ಶೇರ್ ಮಾಡಿರಿ.

LEAVE A REPLY

Please enter your comment!
Please enter your name here